ಶೇ. 10 ಕ್ಯಾಷ್ಬ್ಯಾಕ್, ರಿವಾರ್ಡ್ಸ್, ಉಚಿತ ವೆಲ್ನೆಸ್ ಸೆಂಟರ್… ಪತಂಜಲಿ ಕ್ರೆಡಿಟ್ ಕಾರ್ಡ್ಗಳಿಂದ ಹಲವು ಲಾಭ
Patanjali's co-branded credit cards: ವಿವಿಧ ಬ್ಯಾಂಕ್ಗಳ ಸಹಯೋಗದಲ್ಲಿ ಪತಂಜಲಿ ಸಂಸ್ಥೆ ಕೂಡ ಕೋ ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸುತ್ತಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಹಲವು ಅನುಕೂಲಗಳನ್ನು ಪತಂಜಲಿ ಸಂಸ್ಥೆ ನೀಡುತ್ತಿದೆ. ಭರ್ಜರಿ ಕ್ಯಾಷ್ಬ್ಯಾಕ್ಗಳು, ವೆಲ್ನೆಸ್ ಸೆಂಟರ್ಗಳಲ್ಲಿ ಉಚಿತ ಸೇವೆ, ರಿವಾರ್ಡ್ ಪಾಯಿಂಟ್ಸ್, ಇನ್ಷೂರೆನ್ಸ್ ಇತ್ಯಾದಿ ಬೆನಿಫಿಟ್ಸ್ ನೀಡುತ್ತದೆ. ಆರ್‌ಬಿಎಲ್ ಮತ್ತು ಪಿಎನ್ಬಿ ಬ್ಯಾಂಕ್ಗಳೊಂದಿಗೆ ಪತಂಜಲಿ ಒಪ್ಪಂದ ಮಾಡಿಕೊಂಡು ತನ್ನ ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದೆ.

ಪತಂಜಲಿ ಸಂಸ್ಥೆ ಆಯುರ್ವೇದ ಉತ್ಪನ್ನಗಳ ಮಾರಾಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಸಹ ನೀಡುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತು RBL ಬ್ಯಾಂಕ್ಗಳ ಸಹಯೋಗದೊಂದಿಗೆ, ಗ್ರಾಹಕರಿಗೆ ವಿಶೇಷ ರಿಯಾಯಿತಿಗಳು, ಕ್ಯಾಶ್‌ಬ್ಯಾಕ್ ಮತ್ತು ಬಹುಮಾನಗಳನ್ನು ನೀಡುವ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳನ್ನು ಪತಂಜಲಿ (Patanjali co-branded credit cards) ಪರಿಚಯಿಸಿದೆ. ಈ ಕಾರ್ಡ್‌ಗಳು ಗ್ರಾಹಕರಿಗೆ ಪ್ರತಿ ಖರೀದಿಯಲ್ಲೂ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುವ ಮತ್ತು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿವೆ.
RBL ಬ್ಯಾಂಕ್ನಿಂದ ಪತಂಜಲಿ ಕ್ರೆಡಿಟ್ ಕಾರ್ಡ್‌ಗಳು
ಆರ್‌ಬಿಎಲ್ ಬ್ಯಾಂಕ್ ಎರಡು ರೀತಿಯ ಪತಂಜಲಿ ಕಾರ್ಡ್‌ಗಳನ್ನು ನೀಡುತ್ತದೆ: ಗೋಲ್ಡ್ ಮತ್ತು ಪ್ಲಾಟಿನಂ. ಪತಂಜಲಿ ಮಳಿಗೆಗಳಲ್ಲಿ ಶಾಪಿಂಗ್ ಮಾಡುವವರಿಗೆ ಎರಡೂ ಕಾರ್ಡ್‌ಗಳು ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತವೆ. ಪತಂಜಲಿ ಗೋಲ್ಡ್ ಕ್ರೆಡಿಟ್ ಕಾರ್ಡ್ ಬಳಸಿ ಪತಂಜಲಿ ಉತ್ಪನ್ನಗಳನ್ನು ಖರೀದಿಸಿದರೆ ಶೇ. 10ರಷ್ಟು ಕ್ಯಾಷ್ಬ್ಯಾಕ್ ನೀಡುತ್ತದೆ. ಒಂದು ತಿಂಗಳಲ್ಲಿ ಈ ರೀತಿ ಗರಿಷ್ಠ 750 ರೂಗಳಷ್ಟು ಕ್ಯಾಷ್ಬ್ಯಾಕ್ ಪಡೆಯಬಹುದು.
ಈ ಪತಂಜಲಿ ಸ್ವರ್ಣ ಕ್ರೆಡಿಟ್ ಕಾರ್ಡ್ ಪಡೆದು 30 ದಿನದೊಳಗೆ ಮಾಡುವ ಮೊದಲ ಒಂದು ಸಾವಿರ ರೂ ವಹಿವಾಟಿಗೆ 6,000 ವೆಲ್ಕಮ್ ರಿವಾರ್ಡ್ಗಳನ್ನು ನೀಡಲಾಗುತ್ತದೆ. ವರ್ಷಕ್ಕೆ 3 ಲಕ್ಷ ರೂ ವೆಚ್ಚ ಮಾಡಿದರೆ 1,500 ರೂ ವೋಚರ್ ನೀಡಲಾಗುತ್ತದೆ.
ವರ್ಷಕ್ಕೆ ಐದು ಲಕ್ಷ ರೂ ವ್ಯಯಿಸಿದರೆ ಪತಂಜಲಿ ವೆಲ್ನೆಸ್ ಸೆಂಟರ್ನಲ್ಲಿ 4-5 ದಿನ ಉಳಿದುಕೊಳ್ಳುವ ಅವಕಾಶ ಕೊಡಲಾಗುತ್ತದೆ. ಬುಕ್ಮೈಶೋ ಮೂವೀ ಟಿಕೆಟ್ ಮೇಲೆ 1+1 ಡಿಸ್ಕೌಂಟ್ ಕೊಡಲಾಗುತ್ತದೆ.
ಇದನ್ನೂ ಓದಿ: ಕಳೆದ ಬಾರಿ ವಿಳಂಬವಾಗಿದ್ದ ಪಿಎಂ ಕಿಸಾನ್ ಹಣ ಈ ಬಾರಿ ಬೇಗ ಸಿಗುವ ನಿರೀಕ್ಷೆ; ಇಲ್ಲಿದೆ 21ನೇ ಕಂತಿನ ಬಿಡುಗಡೆ ದಿನಾಂಕ
ಆರ್ಬಿಎಲ್ನ ಪತಂಜಲಿ ಪ್ಲಾಟಿನಂ ಅಥವಾ ವಿಶಿಷ್ಟ ಕ್ರೆಡಿಟ್ ಕಾರ್ಡ್ನ ಪ್ರಯೋಜನಗಳು
ಈ ಕ್ರೆಡಿಟ್ ಕಾರ್ಡ್ ಬಳಸಿ ಪತಂಜಲಿ ಉತ್ಪನ್ನಗಳನ್ನು ಖರೀದಿಸಿದರೆ ಶೇ. 10 ಕ್ಯಾಷ್ಬ್ಯಾಕ್ ಸಿಗುತ್ತದೆ. ಒಂದು ತಿಂಗಳಲ್ಲಿ 500 ರೂವರೆಗೆ ಕ್ಯಾಷ್ಬ್ಯಾಕ್ ಪಡೆಯಲು ಅವಕಾಶ ಇದೆ.
ವರ್ಷಕ್ಕೆ ಒಂದೂವರೆ ಲಕ್ಷ ರೂ ವ್ಯಯಿಸಿದರೆ 499 ರೂಗಳ ಆರಂಭಿಕ ಶುಲ್ಕ ಹಾಗೂ ವಾರ್ಷಿಕ ಶುಲ್ಕಗಳನ್ನು ಮನ್ನಾ ಮಾಡಲಾಗುತ್ತದೆ.
4 ಲಕ್ಷ ರೂ ವಾರ್ಷಿಕ ವೆಚ್ಚ ಮಾಡಿದಲ್ಲಿ ಪತಂಜಲಿ ವೆಲ್ನೆಸ್ ಸೆಂಟರ್ನಲ್ಲಿ 2-3 ದಿನ ಉಳಿಯಲು ಅವಕಾಶ ಇರುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ (PNB) ಪತಂಜಲಿ ಕ್ರೆಡಿಟ್ ಕಾರ್ಡ್‌ಗಳು
ಆರ್‌ಬಿಎಲ್ ಜೊತೆ ಮಾಡಿಕೊಂಡಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆಗೂ ಪತಂಜಲಿ ಒಪ್ಪಂದ ಮಾಡಿಕೊಂಡು ಕ್ರೆಡಿಟ್ ಕಾರ್ಡ್ ನೀಡುತ್ತಿದೆ. ಪಿಎನ್ಬಿ ಪತಂಜಲಿ ರುಪೇ ಪ್ಲಾಟಿನಂ ಕಾರ್ಡ್ ಮತ್ತು ಪಿಎನ್ಬಿ ಪತಂಜಲಿ ರುಪೇ ಸೆಲೆಕ್ಟ್ ಕಾರ್ಡ್ ಇವನ್ನು ಸದ್ಯಕ್ಕೆ ನೀಡಲಾಗುತ್ತಿದೆ. ಈ ಕಾರ್ಡ್‌ಗಳು ಪತಂಜಲಿ ಮಳಿಗೆಗಳಲ್ಲಿ ಮಾತ್ರವಲ್ಲ, ಇತರ ಕಡೆಗಳಲ್ಲೂ ಬೆನಿಫಿಟ್ಸ್ ಕೊಡುತ್ತವೆ. ಪ್ಲಾಟಿನಂ ಕಾರ್ಡ್ ಅನ್ನು ಆ್ಯಕ್ಟಿವೇಟ್ ಮಾಡಿದ ಬಳಿಕ 300 ರಿವಾರ್ಡ್ ಪಾಯಿಂಟ್ಸ್ ಸಿಗುತ್ತದೆ. ಇದರ ಬಳಕೆ ಮಾಡಿದಂತೆ ಕ್ಯಾಷ್ಬ್ಯಾಕ್, ರಿವಾರ್ಡ್ ಪಾಯಿಂಟ್ಸ್, ಇನ್ಷೂರೆನ್ಸ್ ಇತ್ಯಾದಿ ಸೌಲಭ್ಯ ಸಿಗುತ್ತದೆ.
ಪಿಎನ್ಬಿ ಪತಂಜಲಿ ರುಪೇ ಸೆಲೆಕ್ಟ್ ಕಾರ್ಡ್ ಅನುಕೂಲಗಳು
ಈ ಕ್ರೆಡಿಟ್ ಕಾರ್ಡ್ಗೆ ಸೇರ್ಪಡೆ ಶುಲ್ಕ ಇರುವುದಿಲ್ಲ. ಪ್ರತೀ ಕ್ವಾರ್ಟರ್ಗೆ ಒಮ್ಮೆಯಾದರೂ ಈ ಕಾರ್ಡ್ ಬಳಸಿಕೊಂಡು ಹೋದಲ್ಲಿ ವಾರ್ಷಿಕ ಶುಲ್ಕವೂ ಇರುವುದಿಲ್ಲ.
ಇದನ್ನೂ ಓದಿ: ತಿಂಗಳಿಗೆ 21,000-26,000 ರೂ ಹೂಡಿಕೆ; 10 ವರ್ಷದಲ್ಲಿ 50 ಲಕ್ಷ ರೂ ಗಳಿಕೆ
ಪತಂಜಲಿ ಸ್ಟೋರ್ಗಳಲ್ಲಿ ಈ ಕಾರ್ಡ್ ಬಳಸಿ 2,500 ರೂಗಿಂತ ಹೆಚ್ಚು ಖರೀದಿ ಮಾಡಿದರೆ ಶೇ. 2 ಕ್ಯಾಷ್ಬ್ಯಾಕ್ ಸಿಗುತ್ತದೆ. ಪ್ರತೀ ಟ್ರಾನ್ಸಾಕ್ಷನ್ಗೆ ಗರಿಷ್ಠ 50 ರೂ ಕ್ಯಾಷ್ಬ್ಯಾಕ್ ಮಿತಿ ಇರುತ್ತದೆ.
ಇನ್ಷೂರೆನ್ಸ್ ಕವರೇಜ್, ಏರ್ಪೋರ್ಟ್ ಲೋಂಜ್ ಸೇವ್, ರಿವಾರ್ಡ್ ಪಾಯಿಂಟ್ಸ್ ಇತ್ಯಾದಿ ಇನ್ನೂ ಅನೇಕ ಅನುಕೂಲಗಳನ್ನು ಪಿಎನ್ಬಿ ಪತಂಜಲಿ ರುಪೇ ಸೆಲೆಕ್ಟ್ ಕಾರ್ಡ್ ನೀಡುತ್ತದೆ.
ಸ್ವದೇಶಿ ಸಮೃದ್ಧಿ ಕಾರ್ಡ್‌ದಾರರಿಗೆ ಪ್ರಯೋಜನಗಳು
ಪತಂಜಲಿಯ ಸ್ವದೇಶಿ ಸಮೃದ್ಧಿ ಕಾರ್ಡ್ ಬಳಸುವ ಗ್ರಾಹಕರು PNB-ಪತಂಜಲಿ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ರೀಚಾರ್ಜ್‌ಗಳು ಅಥವಾ ವಹಿವಾಟುಗಳ ಮೇಲೆ ಹೆಚ್ಚುವರಿ 5-7% ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಈ ಫೀಚರ್ ಅನ್ನು ರೆಗ್ಯುಲರ್ ಪತಂಜಲಿ ಗ್ರಾಹಕರಿಗಾಗಿ ನೀಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




