Paytm: ಪೇಟಿಎಂ ಮೂಲಕ ವಿದ್ಯುತ್​ ಬಿಲ್ ಪಾವತಿಸಿ 10,000 ತನಕ ಕ್ಯಾಶ್‌ಬ್ಯಾಕ್ ಪಾಯಿಂಟ್‌ ಗೆಲ್ಲುವ ಅವಕಾಶ

| Updated By: Srinivas Mata

Updated on: Aug 19, 2021 | 5:54 PM

ಪೇಟಿಎಂ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಿದರೆ 10000 ತನಕ ಕ್ಯಾಶ್​ಬ್ಯಾಕ್ ಪಾಯಿಂಟ್​ ದೊರೆಯುತ್ತದೆ. ಅದು ಯಾವ ರಾಜ್ಯದವರಿಗೆ ಎಂಬ ಮಾಹಿತಿ ಇಲ್ಲಿದೆ.

Paytm: ಪೇಟಿಎಂ ಮೂಲಕ ವಿದ್ಯುತ್​ ಬಿಲ್ ಪಾವತಿಸಿ 10,000 ತನಕ ಕ್ಯಾಶ್‌ಬ್ಯಾಕ್ ಪಾಯಿಂಟ್‌ ಗೆಲ್ಲುವ ಅವಕಾಶ
ಸಾಂದರ್ಭಿಕ ಚಿತ್ರ
Follow us on

ಈಗ, ನೀವು ಪೇಟಿಎಂ (Paytm) ಮೂಲಕ ವಿದ್ಯುತ್ ಬಿಲ್ ಪಾವತಿಸಿ 10,000 ತನಕ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಗೆಲ್ಲಬಹುದು. ಈ ಕೊಡುಗೆಯನ್ನು ಕೇರಳ, ಉತ್ತರಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಮತ್ತು ಆಂಧ್ರಪ್ರದೇಶದ ಬಳಕೆದಾರರು ಪಡೆಯಬಹುದು. ಪೇಟಿಎಂನಲ್ಲಿ ತಮ್ಮ ವಿದ್ಯುತ್ ಬಿಲ್ ಅನ್ನು ಮೊದಲ ಬಾರಿಗೆ ಪಾವತಿ ಮಾಡುತ್ತಿದ್ದಲ್ಲಿ ಅದರ ಮೇಲೆ ಬಳಕೆದಾರರು 50 ರೂಪಾಯಿವರೆಗಿನ ಖಾತ್ರಿ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ ಎಂದು ಕಂಪೆನಿ ಗುರುವಾರ ಹೇಳಿದೆ. “ಈ ಮಧ್ಯೆ, ಈಗಾಗಲೇ ಇರುವ ಬಳಕೆದಾರರು ಪ್ರತಿ ಬಿಲ್ ಪಾವತಿ ಮೇಲೆ ಖಚಿತವಾದ ಬಹುಮಾನ ಮತ್ತು 10,000 ತನಕ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಪಡೆಯುತ್ತಾರೆ. ಇದನ್ನು ಅದ್ಭುತ ಡೀಲ್‌ಗಳು ಮತ್ತು ಉನ್ನತ ಬ್ರ್ಯಾಂಡ್‌ಗಳಿಂದ ಉಡುಗೊರೆ ವೋಚರ್‌ಗಳಿಗಾಗಿ ಪಡೆದುಕೊಳ್ಳಬಹುದು.”

ಪೇಟಿಎಂ ಆ್ಯಪ್ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಲು, ಬಳಕೆದಾರರು ತಮ್ಮ ರಾಜ್ಯ ಮತ್ತು ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಅವರ ಬಿಲ್ ಸಂಖ್ಯೆ ಅಥವಾ ಗ್ರಾಹಕರ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ ಆ ಪಾವತಿಯನ್ನು ಮಾಡಿ. ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಪೇಟಿಎಂ ತನ್ನ ಬಳಕೆದಾರರಿಗೆ ಪೇಟಿಎಂ ಯುಪಿಐ, ಪೇಟಿಎಂ ವ್ಯಾಲೆಟ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಅಥವಾ ನೆಟ್ ಬ್ಯಾಂಕಿಂಗ್‌ನಿಂದ ಹೀಗೆ ತಮ್ಮ ಆದ್ಯತೆಯ ಪಾವತಿ ಮೋಡ್ ಅನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡುತ್ತದೆ. ಪಾವತಿ ತುಂಬ ವೇಗವಾಗಿ ಆಗುತ್ತದೆ ಮತ್ತು ಬಳಕೆದಾರರು ಬಿಲ್ ಪಾವತಿ ಪೂರ್ಣಗೊಂಡ ನಂತರ ರಶೀದಿಯನ್ನು ಪಡೆಯುತ್ತಾರೆ. ಪೇಟಿಎಂ ಎಸ್‌ಎಂಎಸ್ ಮತ್ತು ಅಪ್ಲಿಕೇಶನ್‌ನಲ್ಲಿನ ನೋಟಿಫಿಕೇಷನ್​ಗಳ ಮೂಲಕ ಪಾವತಿ ಮಾಡಲು ಅಂತಿಮ ದಿನಾಂಕವನ್ನು ನೆನಪಿಸುತ್ತದೆ,” ಎಂದು ಕಂಪೆನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪೆನಿಯ ವಕ್ತಾರರು ತಿಳಿಸಿರುವಂತೆ, “ದೇಶದ ಬಹುತೇಕ ಪ್ರತಿಯೊಂದು ಮನೆಗೂ ವಿದ್ಯುತ್ ಬಿಲ್ ಗಣನೀಯ ಮತ್ತು ಪ್ರಮುಖ ಮಾಸಿಕ ವೆಚ್ಚ ಆಗಿದೆ. ಪೇಟಿಎಂ ಆ್ಯಪ್ ಅನ್ನು ಬಹಳ ಸುಲಭವಾಗಿ ಬಳಸಬಹುದು ಹಾಗೂ ಸುಲಭವಾಗಿ ವಿದ್ಯುತ್ ಬಿಲ್ ಪಾವತಿಸುವ ಮೂಲಕ ಖಾತ್ರಿಯಾದ ಕ್ಯಾಶ್‌ಬ್ಯಾಕ್​ ದೊರೆಯುತ್ತದೆ. ಈ ಮೂಲಕ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಲು ಸಣ್ಣ ನಗರಗಳು ಮತ್ತು ಪಟ್ಟಣಗಳಿಂದ ಬಳಕೆದಾರರನ್ನು ಉತ್ತೇಜಿಸುತ್ತದೆ ಎಂದು ನಾವು ನಂಬಿದ್ದೇವೆ,” ಎಂದಿದ್ದಾರೆ.

ಇದನ್ನೂ ಓದಿ: Paytm Postpaid Mini: ಪೋಸ್ಟ್​ಪೇಯ್ಡ್​ ಮಿನಿ ಆರಂಭಿಸಿದ ಪೇಟಿಎಂ; ರೂ. 1000 ತನಕ ಸಾಲ ನೀಡುವ ಹೊಸ ಯೋಜನೆ

Paytm: ಇಂಡಸ್​ಇಂಡ್ ಬ್ಯಾಂಕ್ ಎಫ್​ಡಿಯ ಮೂಲಕವೂ ಪೇಟಿಎಂ ಬಳಕೆದಾರರು ತಕ್ಷಣ ಪಾವತಿ ಮಾಡಬಹುದು

(Paytm Announced Up to 10000 Cashback Points On Electricity Bill Payment Through Its App)