Tesla Car Model S: ಟೆಸ್ಲಾ ಮಾಡೆಲ್ S ಜನಪ್ರಿಯ ಕಾರಿನ ಬೆಲೆ ಅಮೆರಿಕಾಗೂ ಇಸ್ರೇಲಿಗೂ ಭೂಮ್ಯಾಕಾಶದ ಅಂತರ
ಟೆಸ್ಲಾ ಕಾರಲ್ಲಿ ಮಾಡೆಲ್ S ಬಹಳ ಜನಪ್ರಿಯ. ಈ ಕಾರು ಅಮೆರಿಕದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ. ಇನ್ನು ಅತಿ ಹೆಚ್ಚು ಬೆಲೆ ಇಸ್ರೇಲ್ನಲ್ಲಿ. ಎಷ್ಟು ವ್ಯತ್ಯಾಸ ಎಂಬುದನ್ನು ತಿಳಿಯಿರಿ.
ಟೆಸ್ಲಾ ಕಾರುಗಳು (Tesla Cars) ಇತರ ಕಾರುಗಳಿಗೆ ಹೋಲಿಸಿದರೆ ದುಬಾರಿ. ಇನ್ನು ಎಲೆಕ್ಟ್ರಿಕ್ ಕಾರುಗಳೆಂದರೆ ಗ್ರಾಹಕರಿಗೆ ಬೇಕಾದಂತೆ ಎಕ್ಸ್ಕ್ಲೂಸಿವ್ ಆದ ಕೆಲವು ಫೀಚರ್ಗಳನ್ನು ಒಳಗೊಂಡಿರುತ್ತದೆ. ಅಂದಹಾಗೆ ಟೆಸ್ಲಾದಿಂದ ಭಾರತಕ್ಕೆ ಪ್ರವೇಶಿಸಲು ಟೆಸ್ಲಾ ಸಿದ್ಧತೆ ನಡೆಸಿದ್ದು, ಎಲೆಕ್ಟ್ರಿಕಲ್ ಕಾರುಗಳ ಆಮದು ಸುಂಕವು ಹೆಚ್ಚಿರುವುದರಿಂದ ಆ ಕಂಪೆನಿ ಕಾರುಗಳನ್ನು ಮತ್ತೂ ದುಬಾರಿ ಆಗುವಂತೆ ಮಾಡಿದೆ. ಆದರೂ ಕೆಲವು ಸ್ಥಳಗಳಲ್ಲಿ ಟೆಸ್ಲಾ ಎಲೆಕ್ಟ್ರಿಕಲ್ ಕಂಪೆನಿಗಳ ಬೆಲೆ ತುಂಬ ಕಮ್ಮಿಯಾಗಿದೆ. ರೀಸರ್ಚ್ ಭಾಗವಾಗಿ, CarInsurance.aeಯಿಂದ ಹಲವು ವಿಲಾಸಿ ಕಾರುಗಳ ದರಗಳ ಪಟ್ಟಿ ಮಾಡಲಾಗಿದೆ. ಅದರೊಳಗೆ ಟೆಸ್ಲಾ ಮಾಡೆಲ್ S ಕೂಡ ಒಳಗೊಂಡಿದೆ.
ಟೆಸ್ಲಾ ಮಾಡೆಲ್ S ಕಾರು ಬೆಲೆ ಎಲ್ಲಿ ಕಡಿಮೆ ಎಂಬ ವಿವರ ಹೀಗಿದೆ: * ಲಕ್ಸೆಂಬರ್ಗ್ 1,05,149 ಯುಎಸ್ಡಿ * ಪೋಲೆಂಡ್ 1,04,656 ಯುಎಸ್ಡಿ * ಜರ್ಮನಿ 1,03,954 ಯುಎಸ್ಡಿ * ದಕ್ಷಿಣ ಕೊರಿಯಾ 1,01,624 ಯುಎಸ್ಡಿ * ಮೆಕ್ಸಿಕೋ 99,879 ಯುಎಸ್ಡಿ * ನಾರ್ವೆ 97,544 ಯುಎಸ್ಡಿ * ಜಪಾನ್ 97,512 ಯುಎಸ್ಡಿ * ಕೆನಡಾ 93,553 ಯುಎಸ್ಡಿ * ಎಸ್ಟೋನಿಯಾ 90,665 ಯುಎಸ್ಡಿ * ಅಮೆರಿಕ 79,990 ಯುಎಸ್ಡಿ
ಈ ಸಂಶೋಧನೆಯಲ್ಲಿ ಟೆಸ್ಲಾ ಮಾಡೆಲ್ S ಎಲ್ಲಿ ದುಬಾರಿ ಎಂಬುದರ ಮಾಹಿತಿಯನ್ನು ಕೂಡ ಕಲೆಹಾಕಲಾಗಿದೆ. ಇಲ್ಲಿ ಇನ್ನೊಂದು ಪಟ್ಟಿ ನೀಡಲಾಗುತ್ತಿದೆ, ಅದರಲ್ಲಿ ಟೆಸ್ಲಾ ಮಾಡೆಲ್ S ಯಾವ ದೇಶಗಳಲ್ಲಿ ದುಬಾರಿ ಎಂಬ ವಿವರ ಇಲ್ಲಿದೆ.
* ಪೋರ್ಚುಗಲ್ 1,08,734 ಯುಎಸ್ಡಿ * ಐರ್ಲೆಂಡ್ 1,11,124 ಯುಎಸ್ಡಿ * ಆಸ್ಟ್ರೇಲಿಯಾ 1,12,292 ಯುಎಸ್ಡಿ * ನ್ಯೂಜಿಲ್ಯಾಂಡ್ 1,14,416 ಯುಎಸ್ಡಿ * ಜೆಕ್ ರಿಪಬ್ಲಿಕ್ 1,15,079 ಯುಎಸ್ಡಿ * ಸ್ವೀಡನ್ 1,15,216 ಯುಎಸ್ಡಿ * ಯುನೈಟೆಡ್ ಕಿಂಗ್ಡಮ್ 1,16,896 ಯುಎಸ್ಡಿ * ಹಂಗೇರಿ 1,20,441 ಯುಎಸ್ಡಿ * ಡೆನ್ಮಾರ್ಕ್ 1,32,374 ಯುಎಸ್ಡಿ * ಇಸ್ರೇಲ್ 1,47,689 ಯುಎಸ್ಡಿ
ಟೆಸ್ಲಾದ ಈ ನಿರ್ದಿಷ್ಟ ಮಾಡೆಲ್ಗೆ ಇರುವ ಗರಿಷ್ಠ ಬೆಲೆ ಹಾಗೂ ಕನಿಷ್ಠ ಬೆಲೆ ಮಧ್ಯದ ಅಂತರ 67,699 ಅಮೆರಿಕನ್ ಡಾಲರ್ ಇದೆ. ಕನಿಷ್ಠ ಮಟ್ಟದಲ್ಲಿ ಇರುವ ಅಮೆರಿಕದಲ್ಲಿನ ಕಾರಿನ ಬೆಲೆಯನ್ನು ಹೋಲಿಸಿದರೆ ಗರಿಷ್ಠ ಬೆಲೆ ಇಸ್ರೇಲ್ನಲ್ಲಿ ಶೇ 85ರಷ್ಟು ಹೆಚ್ಚಿದೆ.
ಇದನ್ನೂ ಓದಿ: Elon Musk: ಭಾರತದಲ್ಲಿ ಟೆಸ್ಲಾ ಕಾರು ಯಾವಾಗ ಬಿಡುಗಡೆ ಎಂದಿದ್ದಕ್ಕೆ ಎಲಾನ್ ಮಸ್ಕ್ ನೀಡಿದ ಉತ್ತರ ಏನು ಗೊತ್ತಾ?
(Where Tesla Electrical Car Model S Price Costly And Where Cheaper Here Is The Details)
Published On - 10:19 pm, Thu, 19 August 21