ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ಹೋಗಿ ಪೇಟಿಎಂ ಸಿಇಒ ಯಡವಟ್ಟು; ಡಿಲೀಟ್ ಆದ ಪೋಸ್ಟ್​ನಲ್ಲಿ ಶರ್ಮಾ ಬರೆದದ್ದೇನು?

Paytm CEO Vijay Shekhar Sharma deletes post on Ratan Tata: ಅಕ್ಟೋಬರ್ 9ರಂದು ನಿಧನರಾದ ರತನ್ ಟಾಟಾ ಅವರಿಗೆ ಗೌರವ ಸೂಚಿಸುವ ಭರದಲ್ಲಿ ತಪ್ಪಾದ ಪದಬಳಕೆ ಮಾಡಿ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಯಡವಟ್ಟು ಮಾಡಿಕೊಂಡಿದ್ದಾರೆ. ತಮ್ಮ ಪೋಸ್ಟ್​ನಲ್ಲಿ ರತನ್ ಟಾಟಾಗೆ ನಮನ ಸಲ್ಲಿಸಿದ ಶರ್ಮಾ, ಕೊನೆಯಲ್ಲಿ ಓಕೆ ಟಾಟಾ ಬೈ ಬೈ ಎಂದು ಉಡಾಫೆ ರೀತಿಯಲ್ಲಿ ಬರೆದಿದ್ದರು. ಇಂಟರ್ನೆಟ್​ನಲ್ಲಿ ತೀಕ್ಷ್ಣ ಟೀಕೆ ಬಂದ ಬಳಿಕ ಪೋಸ್ಟ್ ಡಿಲೀಟ್ ಮಾಡಿದ್ದಾರೆ ಅವರು.

ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ಹೋಗಿ ಪೇಟಿಎಂ ಸಿಇಒ ಯಡವಟ್ಟು; ಡಿಲೀಟ್ ಆದ ಪೋಸ್ಟ್​ನಲ್ಲಿ ಶರ್ಮಾ ಬರೆದದ್ದೇನು?
ರತನ್ ಟಾಟಾ, ವಿಜಯ್ ಶೇಖರ್ ಶರ್ಮಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 11, 2024 | 4:05 PM

ಮುಂಬೈ, ಅಕ್ಟೋಬರ್ 11: ರತನ್ ಟಾಟಾ ಮೊನ್ನೆ ನಿಧನರಾಗಿದ್ದಕ್ಕೆ ದೇಶ ವಿದೇಶಗಳಿಂದ ಸಂತಾಪ, ದುಃಖ, ನೋವು ವ್ಯಕ್ತವಾಗಿದ್ದವು. ಇಡೀ ಉದ್ಯಮ ವಲಯ ಕಂಬನಿ ಮಿಡಿದಿತ್ತು. ಭಾರತದ ಕೈಗಾರಿಕೋದ್ಯಮದ ಇತಿಹಾಸದಲ್ಲೇ ರತನ್ ಟಾಟಾ ಮೇರು ವ್ಯಕ್ತಿತ್ವದವರಾಗಿದ್ದರು. ಬಹಳಷ್ಟು ಉದ್ಯಮಿಗಳು ಮತ್ತು ಆಂಟ್ರನ್ಯೂರ್​ಗಳು ರತನ್ ಟಾಟಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದರು. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ, ಓಲಾ ಸಿಇಒ ಭವೀಶ್ ಅಗರ್ವಾಲ್, ಪೀಪಲ್ ಗ್ರೂಪ್ ಸಿಇಒ ಅನುಪಮ್ ಮಿಟ್ಟಲ್ ಹಾಗೂ ಮನುಕುಮಾರ್ ಜೈನ್, ಅಶ್ನೀರ್ ಗ್ರೋವರ್ ಮೊದಲಾದ ಹಲವು ಉದ್ಯಮಿಗಳೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದರು. ಈ ವೇಳೆ, ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಕೂಡ ಸಂತಾಪ ವ್ಯಕ್ತಪಡಿಸಿದರಾದರೂ ತಪ್ಪಾದ ಭಾವ ವ್ಯಕ್ತಪಡಿಸುವ ಪದಬಳಕೆ ಮಾಡಿ ಯಡವಟ್ಟು ಮಾಡಿಕೊಂಡರು. ನೆಟ್ಟಿಗರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಶರ್ಮಾ ಅವರು ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಓಕೆ ಟಾಟಾ ಬೈ ಬೈ…

ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ರತನ್ ಟಾಟಾ ಬಗ್ಗೆ ಗೌರವ ಸೂಚಿಸಿ ಬರೆದಿದ್ದರಾದರೂ ಕೊನೆಯ ಬಳಸಿದ ಪದ ಉಡಾಫೆಯ ರೀತಿ ತೋರುತ್ತಿತ್ತು. ಅದು ಹೀಗಿದೆ ಓದಿ:

‘ಈ ಒಬ್ಬ ಶ್ರೇಷ್ಠ ವ್ಯಕ್ತಿ ಪ್ರತಿ ತಲೆಮಾರಿಗೂ ಸ್ಫೂರ್ತಿಯಾಗಿದ್ದಾರೆ. ಮುಂದಿನ ತಲೆಮಾರಿನ ಉದ್ಯಮಿಗಳಿಗೆ ಭಾರತದ ಅತ್ಯಂತ ಸರಳ ಉದ್ಯಮಿಯೊಂದಿಗೆ ಸಂವಾದ ನಡೆಸುವ ಅವಕಾಶ ಸಿಗುವುದಿಲ್ಲ. ನಿಮಗೆ ನಮನಗಳು ಸರ್. ಓಕೆ ಟಾಟಾ ಬೈ ಬೈ’ ಎಂದು ಪೇಟಿಎಂ ಸಿಇಒ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದರು.

ಇದನ್ನೂ ಓದಿ: ಟಾಟಾ ಗ್ರೂಪ್​ಗೆ ಮುಂದಿನ ವಾರಸುದಾರ ನೋಯಲ್ ಟಾಟಾ; ಟ್ರಸ್ಟ್​ಗಳ ಮಂಡಳಿಗೆ ಛೇರ್ಮನ್ ಆಗಿ ನೇಮಕ

ಇಲ್ಲಿ ಕೊನೆಯಲ್ಲಿ ಅವರು ಬರೆದ ‘ಓಕೆ ಟಾಟಾ ಬೈ ಬೈ’ ಪದ ಬಳಕೆ ಬಹಳಷ್ಟು ನೆಟ್ಟಿಗರಿಗೆ ಅಪಥ್ಯವಾಗಿತ್ತು. ಅಂತೆಯೇ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಇದರಿಂದ ಅವರು ತಮ್ಮ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಆ ನಂತರ ಅವರು ಮತ್ತೊಂದು ಪೋಸ್ಟ್ ಹಾಕಿದ್ದು, ಓಕೆ ಟಾಟಾ ಬೈ ಬೈ ಪದಬಳಕೆ ಬದಲು ‘ನಮ್ಮ ಹೃದಯದಲ್ಲಿ ನೀವು ಸದಾ ಇರುವಿರಿ’ ಎಂದು ಬರೆದು ತಪ್ಪು ಸರಿ ಮಾಡಿಕೊಂಡಿದ್ದಾರೆ.

1937ರ ಡಿಸೆಂಬರ್ 28ರಂದು ಮುಂಬೈನಲ್ಲಿ ಜನಿಸಿದ ರತನ್ ಟಾಟಾ 1991ರಿಂದ 2012ರವರೆಗೆ ಟಾಟಾ ಗ್ರೂಪ್ ಮಾಲಕ ಸಂಸ್ಥೆ ಟಾಟಾ ಸನ್ಸ್​ನ ಚೇರ್ಮನ್ ಆಗಿ ಕಾರ್ಯನಿರ್ವಹಿಸಿದ್ದರು. ಅವರ ನಾಯಕತ್ವದಲ್ಲಿ ಟಾಟಾ ಗ್ರೂಪ್​ನ ಹಲವಾರು ಕಂಪನಿಗಳು ಶ್ರೇಷ್ಠ ಮಟ್ಟ ತಲುಪಿವೆ. ಇವತ್ತು ಟಾಟಾ ಗ್ರೂಪ್​ನ ಲಿಸ್ಟೆಡ್ ಷೇರುಗಳ ಒಟ್ಟಾರೆ ಮಾರುಕಟ್ಟೆ ಸಂಪತ್ತು 31 ಲಕ್ಷ ಕೋಟಿ ರೂ ದಾಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ