ಆನ್‌ಲೈನ್ ವಹಿವಾಟುಗಳಲ್ಲಿ ಯಾವುದೇ ಸಮಸ್ಯೆ ಆಗದು; ಇಡಿ ನೋಟಿಸ್​ಗೆ ಪೇಟಿಎಂ ಪ್ರತಿಕ್ರಿಯೆ

2015ರಿಂದ 2019ರವರೆಗಿನ 2 ಅಂಗಸಂಸ್ಥೆಗಳಾದ ಲಿಟಲ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ ಮತ್ತು ನಿಯರ್‌ಬೈ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸ್ವಾಧೀನಕ್ಕೆ ಸಂಬಂಧಿಸಿದ ಉಲ್ಲಂಘನೆಗಳಿಗೆ ಶೋಕಾಸ್ ನೋಟಿಸ್ ಸಂಬಂಧಿಸಿದೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. ತನ್ನ ಗ್ರಾಹಕರು ಮತ್ತು ಪಾಲುದಾರರಿಗೆ ನಿರಂತರ ಸೇವೆಗಳನ್ನು ಖಚಿತಪಡಿಸಿಕೊಳ್ಳುವುದು ಪೇಟಿಎಂ ಕಂಪನಿಯ ಆದ್ಯತೆಯಾಗಿದೆ.

ಆನ್‌ಲೈನ್ ವಹಿವಾಟುಗಳಲ್ಲಿ ಯಾವುದೇ ಸಮಸ್ಯೆ ಆಗದು; ಇಡಿ ನೋಟಿಸ್​ಗೆ ಪೇಟಿಎಂ ಪ್ರತಿಕ್ರಿಯೆ
Paytm

Updated on: Mar 01, 2025 | 10:05 PM

ನವದೆಹಲಿ (ಮಾರ್ಚ್ 1): ಭಾರತದ ಪ್ರಮುಖ ಡಿಜಿಟಲ್ ಪಾವತಿಗಳು ಮತ್ತು ಹಣಕಾಸು ಸೇವೆಗಳ ಕಂಪನಿಯಾದ ಪೇಟಿಎಂ ಫೆಬ್ರವರಿ 28ರಂದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 (FEMA) ಉಲ್ಲಂಘನೆ ಆರೋಪಕ್ಕಾಗಿ ಜಾರಿ ನಿರ್ದೇಶನಾಲಯದಿಂದ (ಇಡಿ) ಶೋಕಾಸ್ ನೋಟಿಸ್ (SCN) ಅನ್ನು ಪಡೆದುಕೊಂಡಿದೆ. ಈ ಆರೋಪಗಳು ಪೇಟಿಎಂನ ಪೋಷಕ ಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್ (OCL) ಸ್ವಾಧೀನಪಡಿಸಿಕೊಂಡಿರುವ 2 ಅಂಗಸಂಸ್ಥೆಗಳಾದ ಲಿಟಲ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ (LIPL) ಮತ್ತು ನಿಯರ್‌ಬಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ (NIPL)ಗೆ ಸಂಬಂಧಿಸಿವೆ. ಕಂಪನಿಯ ಪ್ರಕಾರ, ಈ ಆಪಾದಿತ ಉಲ್ಲಂಘನೆಗಳು ಮುಖ್ಯವಾಗಿ 2015 ಮತ್ತು 2019ರ ನಡುವಿನ ವಹಿವಾಟುಗಳಿಗೆ ಸಂಬಂಧಿಸಿವೆ.

ಭಾರತ ದೇಶದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಇಡಿಯಿಂದ ಇಂದು ಶೋಕಾಸ್ ನೋಟಿಸ್ ಸ್ವೀಕರಿಸಲಾಗಿದೆ ಎಂದು ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವೆಗಳ ಪ್ರಮುಖ ಪೇಟಿಎಂ ಖಚಿತಪಡಿಸಿದೆ. ಪೇಟಿಎಂ ಬ್ರ್ಯಾಂಡ್ ಹೊಂದಿರುವ ಒನ್97 ಕಮ್ಯುನಿಕೇಷನ್ಸ್ (ಒಸಿಎಲ್) ಫೆಬ್ರವರಿ 28ರಂದು ಜಾರಿ ನಿರ್ದೇಶನಾಲಯದಿಂದ ತನ್ನ ಅಂಗಸಂಸ್ಥೆಗಳಾದ ಲಿಟಲ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ ಮತ್ತು ನಿಯರ್‌ಬೈ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗಳಿಗೆ ಫೆಮಾ ಉಲ್ಲಂಘನೆ ನೋಟಿಸ್ ಸ್ವೀಕರಿಸಲಾಗಿದೆ ಎಂದು ಬಿಎಸ್‌ಇಗೆ ತಿಳಿಸಿತ್ತು.

ಇದನ್ನೂ ಓದಿ: ಹೊಸ ಯುಪಿಐ ಬಳಕೆದಾರರನ್ನು ಹೊಂದಲು ಪೇಟಿಎಂಗೆ ಎನ್​ಪಿಸಿಐ ಅನುಮತಿ; ಷರತ್ತುಗಳು ಅನ್ವಯ

2015ರಿಂದ 2019ರವರೆಗಿನ 2 ಅಂಗಸಂಸ್ಥೆಗಳಾದ ಲಿಟಲ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ ಮತ್ತು ನಿಯರ್‌ಬೈ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಉಲ್ಲಂಘನೆಗಳಿಗೆ ಈ ನೋಟಿಸ್ ಸಂಬಂಧಿಸಿದೆ ಎಂದು ಕಂಪನಿ ತಿಳಿಸಿದೆ. ಈ ವಹಿವಾಟುಗಳಿಗೆ ಸಂಬಂಧಿಸಿದಂತೆ ಪೇಟಿಎಂ ಜಾರಿ ನಿರ್ದೇಶನಾಲಯದಿಂದ (ಇಡಿ) ಶೋಕಾಸ್ ನೋಟಿಸ್ ಸ್ವೀಕರಿಸಿತ್ತು.

ಪೇಟಿಎಂನ ಪ್ರತಿಕ್ರಿಯೆ:

ಪೇಟಿಎಂ ಕಾನೂನು ಸಲಹೆಯನ್ನು ತೆಗೆದುಕೊಳ್ಳುತ್ತಿದೆ. ಈ ವಿಷಯವನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದೆ. ಈ ತನಿಖೆಯು ತನ್ನ ದೈನಂದಿನ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಂಪನಿ ತನ್ನ ಬಳಕೆದಾರರು, ವ್ಯಾಪಾರಿ ಪಾರ್ಟನರ್ ಮತ್ತು ಹೂಡಿಕೆದಾರರಿಗೆ ಭರವಸೆ ನೀಡಿದೆ. ಪೇಟಿಎಂ ಅಪ್ಲಿಕೇಶನ್‌ನಲ್ಲಿನ ಎಲ್ಲಾ ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಸುರಕ್ಷಿತವಾಗಿರುತ್ತವೆ ಎಂದು ಪೇಟಿಎಂ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಪೇಟಿಎಂ ಷೇರಿನ ಟಾರ್ಗೆಟ್ ಪ್ರೈಸ್ 325 ರೂನಿಂದ 730 ರೂಗೆ ಹೆಚ್ಚಿಸಿದ ಮೆಕಾರೀ; ಸವಾಲುಗಳ ಮಧ್ಯೆಯೂ ಕಂಪನಿಯಿಂದ ಉತ್ತಮ ಸಾಧನೆ ಎಂದು ಪ್ರಶಂಸೆ

ನಿಯಂತ್ರಕ ಅವಶ್ಯಕತೆಗಳಿಗೆ ಅನುಗುಣವಾಗಿ ಈ ವಿಷಯವನ್ನು ಪರಿಹರಿಸುವತ್ತ ಗಮನಹರಿಸಲಾಗಿದೆ ಎಂದು ಪೇಟಿಎಂ ಹೇಳಿದೆ. ಕಂಪನಿಯ ಈ ನಿಲುವು ಭಾರತದ ಹಣಕಾಸು ಮತ್ತು ಡಿಜಿಟಲ್ ಪಾವತಿ ವಲಯದಲ್ಲಿ ಅದರ ಜವಾಬ್ದಾರಿ ಮತ್ತು ಪಾರದರ್ಶಕತೆಯನ್ನು ಪ್ರತಿಬಿಂಬಿಸುತ್ತದೆ. ಪೇಟಿಎಂ ಮೂಲಕ ಡಿಜಿಟಲ್ ಪಾವತಿ ಮಾಡಲು ಯಾವುದೇ ಸಮಸ್ಯೆಯಿಲ್ಲ ಎಂದು ಪೇಟಿಎಂ ಖಚಿತಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:04 pm, Sat, 1 March 25