ಆಧಾರ್ ಕಾರ್ಡ್ ಇವತ್ತಿನ ದಿನಗಳಲ್ಲಿ ಬಹಳ ಮುಖ್ಯವಾದ ಸರ್ಕಾರಿ ದಾಖಲೆಯಾಗಿದೆ. ಹಲವು ಯೋಜನೆಗಳಿಗೆ ಇದು ಲಿಂಕ್ ಆಗಿರಬಹುದು. ಇದು ಗುರುತಿನ ದಾಖಲೆಯಷ್ಟೇ ಅಲ್ಲದೇ ವಿಳಾಸದ ದಾಖಲೆಯೂ (address proof) ಆಗಿದೆ. ಸರ್ಕಾರದ ವಿವಿಧ ಸಬ್ಸಿಡಿಗಳಿಗೆ ಆಧಾರವೂ ಆಗಿರುತ್ತದೆ. ಆಧಾರ್ ಕಾರ್ಡ್ನಲ್ಲಿ (Aadhaar card) ವ್ಯಕ್ತಿಯ ಫೋಟೋ, ವಿಳಾಸ ಇತ್ಯಾದಿ ವಿವರದ ಜೊತೆಗೆ ಬಯೋಮೆಟ್ರಿಕ್ ಡಾಟಾ ಕೂಡ ಇರುತ್ತದೆ. ಆಧಾರ್ ಕಾರ್ಡ್ಗೆ ಮೊಬೈಲ್ ಲಿಂಕ್ ಮಾಡುವುದು ಕಡ್ಡಾಯವಲ್ಲ. ಆದರೆ, ಮೊಬೈಲ್ ಸಂಖ್ಯೆ ಜೋಡಿಸಿದ್ದರೆ ಬಹಳ ಉಪಯೋಗಕ್ಕೆ ಬರುತ್ತದೆ. ಆನ್ಲೈನ್ನಲ್ಲಿ ಆಧಾರ್ ವೆರಿಫಿಕೇಶನ್ಗೆ ಮೊಬೈಲ್ ನಂಬರ್ ಬೇಕಾಗುತ್ತದೆ. ಹಾಗೆಯೇ, ಆಧಾರ್ ಕಾರ್ಡ್ಗೆ ಲಿಂಕ್ ಮಾಡಲಾದ ಮೊಬೈಲ್ ನಂಬರ್ ಅನ್ನು ಬದಲಿಸಬಹುದು.
ನಿಮಗೆ ಸಮೀಪ ಇರುವ ಯಾವುದಾದರೂ ಆಧಾರ್ ಎನ್ರೋಲ್ಮೆಂಟ್ ಸೆಂಟರ್ಗೆ ಹೋಗಬೇಕು. ಅಲ್ಲಿರುವ ಸಿಬ್ಬಂದಿ ಬಳಿ ಸಂಬಂಧಪಟ್ಟ ಫಾರ್ಮ್ ಪಡೆದು ಭರ್ತಿ ಮಾಡಿ ಕೊಡಬೇಕು. ಬಳಿಕ ನಿಮ್ಮ ಕೈಬೆರಳ ಬಯೋಮೆಟ್ರಿಕ್ ಪಡೆದು ಡಾಟಾಬೇಸ್ಗೆ ಲಾಗಿನ್ ಮಾಡಲಾಗುತ್ತದೆ. ಈಗ ನಿಮ್ಮ ಆಧಾರ್ ಡಾಟಾಬೇಸ್ಗೆ ಮೊಬೈಲ್ ನಂಬರ್ ಅನ್ನು ಸೇರಿಸಲಾಗುತ್ತದೆ. ಇದಕ್ಕೆ 50 ರೂ ಶುಲ್ಕ ಇರುತ್ತದೆ.
ಇದನ್ನೂ ಓದಿ: ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳು: ಏಪ್ರಿಲ್ ನಂತರದ ಕ್ವಾರ್ಟರ್ನಲ್ಲಿ ಬಡ್ಡಿದರ ವಿವರ
ಆಧಾರ್ ಎನ್ರೋಲ್ಮೆಂಟ್ಗೆ ಹೋಗಿ ಸಂಬಂಧಿಸಿದ ಫಾರ್ಮ್ ಪಡೆದು ಭರ್ತಿ ಮಾಡಿಕೊಡಬೇಕು. ನಿಮ್ಮ ಬಯೋಮೆಟ್ರಿಕ್ ಮೂಲಕ ಆಧಾರ್ಗೆ ಲಾಗಿನ್ ಮಾಡಲಾಗುತ್ತದೆ. ಈಗ ನಿಮ್ಮ ಹೊಸ ಮೊಬೈಲ್ ನಂಬರ್ ಅನ್ನು ಇದಕ್ಕೆ ಸೇರಿಸಬಹುದು. 30 ದಿನದೊಳಗೆ ಆಧಾರ್ ಡಾಟಾಬೇಸ್ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಆಗಿರುತ್ತದೆ. ಈ ಸೇವೆಗೂ 50 ರೂ ಶುಲ್ಕ ನಿಗದಿಯಾಗಿರುತ್ತದೆ.
ಆನ್ಲೈನ್ನಲ್ಲಿ ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಬದಲಿಸುವ ಅವಕಾಶವನ್ನು ಈಗ ನಿಲ್ಲಿಸಲಾಗಿದೆ. ಆಧಾರ್ ಕೇಂದ್ರಕ್ಕೆ ಹೋಗದೆಯೇ ಆಧಾರ್ ಸೇವೆ ಪಡೆಯುವ ದಾರಿಯೊಂದು ಇದೆ. ಅದು ಇಂಡಿಯ ಪೋಸ್ಟ್ ಸರ್ವಿಸ್ನ ವೆಬ್ಸೈಟ್ ಮೂಲಕ ಸಾಧ್ಯ. ಅದರ ಲಿಂಕ್ ಇಲ್ಲಿದೆ: ccc.cept.gov.in/ServiceRequest/request.aspx
ಇದನ್ನೂ ಓದಿ: ಒಳ್ಳೆಯ ಕ್ರೆಡಿಟ್ ಸ್ಕೋರ್ ಗಳಿಸಲು ಎಷ್ಟು ಕ್ರೆಡಿಟ್ ಕಾರ್ಡ್ ಇದ್ದರೆ ಉತ್ತಮ? ತಜ್ಞರ ಸಲಹೆ ಇದು
ಇದರಲ್ಲಿ ಹೆಸರು, ವಿಳಾಸ, ಇಮೇಲ್ ವಿಳಾಸ, ಮೊಬೈಲ್ ನಂಬರ್ ಇತ್ಯಾದಿ ವಿವರ ತುಂಬಿರಿ.
ಸರ್ವಿಸ್ ಡ್ರಾಪ್ಡೌನ್ನಲ್ಲಿ ಐಐಪಿಬಿ ಆಧಾರ್ ಸರ್ವಿಸಸ್ ಆಯ್ಕೆ ಮಾಡಿ
ಇಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಆಧಾರ್ ಎನ್ರೋಲ್ಮೆಂಟ್ ಹಾಗೂ ಆಧಾರ್ಗೆ ಮೊಬೈಲ್ ಲಿಂಕಿಂಗ್, ಹೀಗೆ ಎರಡು ಆಯ್ಕೆಗಳಿರುತ್ತದೆ. ಮೊಬೈಲ್ ಲಿಂಕಿಂಗ್ ಅಪ್ಡೇಟ್ ಎಂಬ ಆಯ್ಕೆ ಆರಿಸಿ. ಮೊಬೈಲ್ಗೆ ಬರುವ ಒಟಿಪಿಯನ್ನು ನಮೂದಿಸಿ ಸಲ್ಲಿಸಿ.
ನಿಮಗೆ ಸಮೀಪದ ಅಂಚೆ ಕಚೇರಿಗೆ ಮನವಿ ಹೋಗುತ್ತದೆ. ಒಬ್ಬ ಅಧಿಕಾರಿ ನೀವಿರುವ ಸ್ಥಳಕ್ಕೆ ಬಂದು ವೆರಿಫಿಕೇಶನ್ ಮಾಡುತ್ತಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ