ಅಕ್ಷಯ ತೃತೀಯ: ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ. 25 ಏರಿಕೆ; 5 ವರ್ಷದಲ್ಲಿ ಬೆಲೆ ಹೆಚ್ಚಳ ಎಷ್ಟು?

Akshaya Tritiya, last 1 year gold rate comparison: 2024ರಲ್ಲಿ ಅಕ್ಷಯ ತೃತೀಯ ದಿನ ಇದ್ದ ಮೇ 10ರಂದು 22 ಕ್ಯಾರಟ್ ಚಿನ್ನದ ಬೆಲೆ 6,755 ರೂ ಇತ್ತು. 2025ರಲ್ಲಿ ಅಕ್ಷಯ ತೃತೀಯ ಇರುವ ಏಪ್ರಿಲ್ 30ರಂದು ಆಭರಣ ಚಿನ್ನದ ಬಲೆ 8,975 ರೂ ಇದೆ. ಒಂದು ವರ್ಷದಲ್ಲಿ ಶೇ. 24.7ರಷ್ಟು ಬೆಲೆ ಏರಿಕೆ ಆಗಿದೆ. ಕಳೆದ ಐದು ವರ್ಷದಲ್ಲಿ ಚಿನ್ನದ ಬೆಲೆ ಎರಡು ಪಟ್ಟು ಹೆಚ್ಚಾಗಿದೆ.

ಅಕ್ಷಯ ತೃತೀಯ: ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ. 25 ಏರಿಕೆ; 5 ವರ್ಷದಲ್ಲಿ ಬೆಲೆ ಹೆಚ್ಚಳ ಎಷ್ಟು?
ಚಿನ್ನ

Updated on: Apr 30, 2025 | 2:36 PM

ಬೆಂಗಳೂರು, ಏಪ್ರಿಲ್ 30: ಇವತ್ತು ಅಕ್ಷಯ ತೃತೀಯ (Akshaya Tritiya) ದಿನ. ಚಿನ್ನ ಖರೀದಿಸಿದರೆ ಬದುಕಿನಲ್ಲಿ ಸಮೃದ್ಧತೆ ತುಂಬಬಹುದು ಎನ್ನುವ ನಂಬಿಕೆ ಇದೆ. ಆದರೆ, ಬೆಲೆ ಮಾತ್ರ ಕ್ಷಿಪ್ರವಾಗಿ ಗಗನಕ್ಕೇರುತ್ತಿದೆ. ಕಳೆದ ವರ್ಷ (2024) ಅಕ್ಷಯ ತೃತೀಯ ದಿನವು ಮೇ 10ರಂದು ಇತ್ತು. ಆಗ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (Gold rate) 6,755 ರೂ ಇತ್ತು. 24 ಕ್ಯಾರಟ್ ಚಿನ್ನದ ಬೆಲೆ 7,369 ರೂ ಇತ್ತು. 2025ರ ಅಕ್ಷಯ ತೃತೀಯ ದಿನವು ಇವತ್ತು ಇದೆ. ಇಂದು ಬುಧವಾರ 22 ಕ್ಯಾರಟ್ ಚಿನ್ನದ ಬೆಲೆ 8,975 ರೂ ಇದ್ದರೆ, ಅಪರಂಜಿ ಚಿನ್ನದ ಬೆಲೆ 9,791 ರೂ ಇದೆ.

ಆಭರಣ ಚಿನ್ನದ ಬೆಲೆ 2024ರ ಅಕ್ಷಯ ತೃತೀಯಕ್ಕೂ ಈ ವರ್ಷದ ಅಕ್ಷಯ ತೃತೀಯಕ್ಕೂ ಎಷ್ಟು ಬದಲಾವಣೆ ಆಗಿದೆ ನೋಡಿ. 6,755 ರೂ ಇದ್ದ ಬೆಲೆ 8,975 ರೂಗೆ ಏರಿದೆ. ಒಂದೇ ವರ್ಷದ ಅಂತರದಲ್ಲಿ ಶೇ. 24.7ರಷ್ಟು ಬೆಲೆ ಏರಿಕೆ ಆಗಿದೆ ಎಂಬುದು ಸೋಜಿಗದ ಸಂಗತಿ. ನೀವು ಚಿನ್ನದ ಮೇಲೆ ಹೂಡಿಕೆ ಮಾಡಿ, ಇದೇ ದರದಲ್ಲಿ ಚಿನ್ನದ ಬೆಲೆ ಹೆಚ್ಚಳ ಆಗುತ್ತಾ ಹೋದರೆ ಮೂರು ವರ್ಷಕ್ಕೆ ಹಣ ಡಬಲ್ ಆಗಿ ಹೋಗುತ್ತದೆ. ಉದಾಹರಣೆಗೆ, ನೀವು ಒಂದು ಲಕ್ಷ ರೂ ಹಣವನ್ನು ಚಿನ್ನದ ಬೆಲೆ ಹೂಡಿಕೆ ಮಾಡಿದರೆ 35 ತಿಂಗಳಲ್ಲಿ ಎರಡು ಲಕ್ಷ ರೂ ಆಗಬಹುದು. ಆದರೆ, ಬೆಲೆ ಹೆಚ್ಚಳ ಒಂದೇ ರೀತಿಯಲ್ಲಿ ಇರುವುದಿಲ್ಲ ಎನ್ನುವುದನ್ನು ಗಮನಲ್ಲಿಟ್ಟುಕೊಳ್ಳಬಹುದು.

ಕಳೆದ 5 ವರ್ಷದಲ್ಲಿ ಚಿನ್ನದ ಬೆಲೆ ಏರಿಕೆ ಆಗಿದ್ದು ಎಷ್ಟು?

ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ. 24ರಷ್ಟು ಹೆಚ್ಚಿರುವುದು ಹೌದು. ಆದರೆ, ಹಿಂದಿನ ಕೆಲ ವರ್ಷಗಳಲ್ಲಿ ತುಸು ಕಡಿಮೆ ಪ್ರಮಾಣದಲ್ಲಿ ಬೆಲೆ ಹೆಚ್ಚಳ ಆಗಿದೆ. ಕೆದಿಯಾ ಅಡ್ವೈಸರ್ಸ್ ಸಂಸ್ಥೆ ಪ್ರಕಾರ, ಐದು ವರ್ಷದ ಹಿಂದಿನ ಬೆಲೆಗೆ ಹೋಲಿಸಿದರೆ ಈಗ ಶೇ. 100ಕ್ಕೂ ಹೆಚ್ಚು ಬೆಲೆ ಏರಿದೆ. ಐದು ವರ್ಷದಲ್ಲಿ ಚಿನ್ನದ ಬೆಲೆ ಶೇ. 14.85 ಸಿಎಜಿಆರ್​​​ನಲ್ಲಿ ಏರಿಕೆ ಆಗಿದೆ. 2023ರಲ್ಲಿ ಶೇ. 13ರಷ್ಟು ಮಾತ್ರ ಬೆಲೆ ಏರಿಕೆ ಆಗಿತ್ತು.

ಇದನ್ನೂ ಓದಿ
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
ಚಿನ್ನದ ಬೆಲೆ ಇಳಿಕೆ ಯಾವಾಗ?

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆ ಎರಡೂ ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ

ಈ ವರ್ಷ ತಗ್ಗುತ್ತದಾ ಚಿನ್ನದ ಬೆಲೆ ಏರಿಕೆ?

ಜಾಗತಿಕ ವಿದ್ಯಮಾನಗಳ ಕಾರಣದಿಂದ ಈ ವರ್ಷ ಚಿನ್ನದ ಬೆಲೆ ಅಸಹಜ ರೀತಿಯಲ್ಲಿ ಹೆಚ್ಚಳ ಆಗಿದೆ. ಇದು ಹೀಗೇ ಮುಂದುವರಿಯುತ್ತದೆ ಎನ್ನಲಾಗುವುದಿಲ್ಲ. ಹೂಡಿಕೆ ತಜ್ಞ ವಿಜಯ್ ಕೆದಿಯಾ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಶಾಂತಗೊಳ್ಳಬಹುದು. ಶೇ. 6-7ರಷ್ಟು ಮಾತ್ರ ಚಿನ್ನದ ಬೆಲೆ ಹೆಚ್ಚಳ ನಿರೀಕ್ಷಿಸಬಹುದಂತೆ. ಹೂಡಿಕೆಗೆ ಚಿನ್ನ ಖರೀದಿಸುತ್ತಿದ್ದರೆ ಈಗ ಬೇಡ. ಆಭರಣಕ್ಕಾಗಿ ಕೊಳ್ಳುವುದಿದ್ದರೆ ಈಗ ಒಳ್ಳೆಯ ಕಾಲ ಎಂಬುದು ಅವರ ಸಲಹೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ