Fixed Deposit: ಎಫ್​ಡಿ ಖಾತೆ ತೆರೆಯಲು ಉದ್ದೇಶಿಸಿದ್ದೀರಾ? ಇಲ್ಲಿದೆ ಎಸ್​ಬಿಐ, ಐಸಿಐಸಿಐ, ಎಚ್​ಡಿಎಫ್​ಸಿ ಬ್ಯಾಂಕ್ ಬಡ್ಡಿ ವಿವರ

| Updated By: ಗಣಪತಿ ಶರ್ಮ

Updated on: Oct 22, 2022 | 1:35 PM

ಒಂದು, ಎರಡು, ಮೂರು, ಐದು ಹಾಗೂ 10 ವರ್ಷಗಳ ಅವಧಿಗೆ ಎಫ್​ಡಿಗೆ ಎಸ್​ಬಿಐ, ಐಸಿಐಸಿಐ, ಎಚ್​ಡಿಎಫ್​ಸಿ ಬ್ಯಾಂಕ್​ಗಳು ಎಷ್ಟು ಬಡ್ಡಿ ನೀಡುತ್ತವೆ ಎಂಬ ವಿವರ ಇಲ್ಲಿ ನೀಡಲಾಗಿದೆ.

Fixed Deposit: ಎಫ್​ಡಿ ಖಾತೆ ತೆರೆಯಲು ಉದ್ದೇಶಿಸಿದ್ದೀರಾ? ಇಲ್ಲಿದೆ ಎಸ್​ಬಿಐ, ಐಸಿಐಸಿಐ, ಎಚ್​ಡಿಎಫ್​ಸಿ ಬ್ಯಾಂಕ್ ಬಡ್ಡಿ ವಿವರ
ಸಾಂದರ್ಭಿಕ ಚಿತ್ರ
Follow us on

ಧನ್​ತೇರಸ್ ಅಥವಾ ದೀಪಾವಳಿ (Dhanteras and Diwali) ಹಬ್ಬವು ಚಿನ್ನ, ಆಸ್ತಿಯಂಥ ಮೌಲ್ಯಯುತ ಸ್ವತ್ತುಗಳ ಹೂಡಿಕೆಗೆ ಶುಭ ಸಮಯವೆಂದು ಜನ ಭಾವಿಸಿದ್ದಾರೆ. ಇತ್ತೀಚೆಗೆ ವಿವಿಧ ಬ್ಯಾಂಕ್​ಗಳು ಸ್ಥಿರ ಠೇವಣಿಯ ಬಡ್ಡಿ ದರ (Fixed Deposit) ಹೆಚ್ಚಿಸಿವೆ. ಹೀಗಾಗಿ ಎಫ್​ಡಿ ಮೂಲಕ ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದಾಗಿದೆ. ಆರ್​ಬಿಐ ಮಾರ್ಗಸೂಚಿ ಪ್ರಕಾರ, 5 ಲಕ್ಷ ರೂಪಾಯಿ ವರೆಗಿನ ಸ್ಥಿರ ಠೇವಣಿ ಅಥವಾ ಎಫ್​ಡಿಗೆ ಠೇವಣಿ ವಿಮೆ ಖಾತರಿ ಸೌಲಭ್ಯವೂ ದೊರೆಯಲಿದೆ.

ಒಂದು, ಎರಡು, ಮೂರು, ಐದು ಹಾಗೂ 10 ವರ್ಷಗಳ ಅವಧಿಗೆ ಎಫ್​ಡಿಗೆ ಎಸ್​ಬಿಐ, ಐಸಿಐಸಿಐ, ಎಚ್​ಡಿಎಫ್​ಸಿ ಬ್ಯಾಂಕ್​ಗಳು ಎಷ್ಟು ಬಡ್ಡಿ ನೀಡುತ್ತವೆ ಎಂಬ ವಿವರ ಇಲ್ಲಿ ನೀಡಲಾಗಿದೆ.

ಎಸ್​ಬಿಐ ಎಫ್​ಡಿ ಬಡ್ಡಿ ದರ

ಇದನ್ನೂ ಓದಿ
SBI FD Rates: ಎಸ್​ಬಿಐಯಿಂದ ದೀಪಾವಳಿ ಕೊಡುಗೆ, ಎಫ್​ಡಿ ಬಡ್ಡಿ ದರ ಹೆಚ್ಚಳ
Petrol Price on October 22: ದೀಪಾವಳಿ ಹಬ್ಬದ ವೇಳೆ ಏರಿಕೆಯಾಗುತ್ತಾ ಪೆಟ್ರೋಲ್ ಬೆಲೆ?; ಇಂದಿನ ಡೀಸೆಲ್ ದರ ಹೀಗಿದೆ
Gold Price Today: ಬೆಳ್ಳಿ ದರ ಸ್ಥಿರ, ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ನೋಡಿ
EPFO Clarification: ವೇತನ ರಹಿತ ರಜೆಯಲ್ಲಿದ್ದಾಗ ಮೃತಪಟ್ಟರೂ ಡೆತ್ ಬೆನಿಫಿಟ್​ ಪಡೆಯಬಹುದು; ಇಪಿಎಫ್​ಒ

ಅಕ್ಟೋಬರ್ 22ರಿಂದ ಜಾರಿಗೆ ಬರುವಂತೆ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿ ಬಡ್ಡಿ ದರವನ್ನು ಗರಿಷ್ಠ 80 ಮೂಲಾಂಶಗಳ ವರೆಗೆ ಹೆಚ್ಚಿಸಿದೆ. ಪ್ರಸ್ತುತ ಎಸ್​ಬಿಐ 1 ವರ್ಷದ ಅವಧಿಯ ಎಫ್​ಡಿಗೆ ಶೇಕಡಾ 5.5ರ ಬಡ್ಡಿ ದರ ನಿಗದಿಪಡಿಸಿದೆ. 2 ಮತ್ತು 3 ವರ್ಷ ಅವಧಿಯ ಎಫ್​ಡಿಗೆ ಶೇಕಡಾ 6.1 ಹಾಗೂ ಶೇಕಡಾ 6.25ರ ಬಡ್ಡಿ ದರ ನಿಗದಿಪಡಿಸಿದೆ. 5 ಹಾಗೂ 10 ವರ್ಷಗಳ ಅವಧಿಯ ಎಫ್​ಡಿಗೆ ಶೇಕಡಾ 6.1ರ ಬಡ್ಡಿ ದರ ನಿಗದಿಪಡಿಸಿದೆ. ಹಿರಿಯ ನಾಗರಿಕರ ಎಫ್​ಡಿಗಳಿಗೆ ಹೆಚ್ಚುವರಿಯಾಗಿ ಶೇಕಡಾ 0.5ರ ಬಡ್ಡಿಯನ್ನು ಬ್ಯಾಂಕ್ ನೀಡುತ್ತಿದೆ.

ಎಚ್​ಡಿಎಫ್​ಸಿ ಬ್ಯಾಂಕ್​ ಎಫ್​ಡಿ ಬಡ್ಡಿ ದರ

ಎಚ್​ಡಿಎಫ್​ಸಿ ಬ್ಯಾಂಕ್​ ಎಫ್​ಡಿ ಬಡ್ಡಿ ದರವನ್ನು ಅಕ್ಟೋಬರ್ 11ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿದೆ. 1 ಮತ್ತು 2 ವರ್ಷ ಅವಧಿಯ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್​ಡಿಗೆ ಶೇಕಡಾ 5.7ರ ಬಡ್ಡಿ ದರ ನಿಗದಿಯಾಗಿದೆ. 3 ವರ್ಷಗಳ ಎಫ್​ಡಿಗೆ ಶೇಕಡಾ 5.8 ಮತ್ತು ಐದು ವರ್ಷಗಳ ಅವಧಿಯ ಎಫ್​ಡಿಗೆ ಶೇಕಡಾ 6.1ರ ಬಡ್ಡಿಯನ್ನು ಬ್ಯಾಂಕ್ ನೀಡುತ್ತಿದೆ. 10 ವರ್ಷಗಳ ಅವಧಿಯ ಎಫ್​ಡಿಗೆ ಶೇಕಡಾ 6ರ ಬಡ್ಡಿ ನೀಡುತ್ತಿದೆ. ಎಚ್​ಡಿಎಫ್​ಸಿ ಬ್ಯಾಂಕ್ ಸಹ ಹಿರಿಯ ನಾಗರಿಕರ ಎಫ್​ಡಿಗಳಿಗೆ ಹೆಚ್ಚುವರಿಯಾಗಿ ಶೇಕಡಾ 0.5ರ ಬಡ್ಡಿಯನ್ನು ನೀಡುತ್ತಿದೆ.

ಐಸಿಐಸಿಐ ಎಫ್​ಡಿ ಬಡ್ಡಿ ದರ

ಐಸಿಐಸಿಐ ಬ್ಯಾಂಕ್​ ಎಫ್​ಡಿ ಬಡ್ಡಿ ದರವನ್ನು ಅಕ್ಟೋಬರ್ 18ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿದೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ 1 ವರ್ಷದ ಅವಧಿಗೆ ಶೇಕಡಾ 5ರ ಬಡ್ಡಿ ನೀಡಲಾಗುತ್ತಿದೆ. 2 ವರ್ಷ ಅವಧಿಯ ಸ್ಥಿರ ಠೇವಣಿಗಳಿಗೆ ಶೇಕಡಾ 5.8ರ ಬಡ್ಡಿ ನೀಡಲಾಗುತ್ತಿದೆ. ಮೂರು ವರ್ಷದ ಎಫ್​ಡಿಗೆ ಶೇಕಡಾ 6 ಹಾಗೂ 5 ವರ್ಷಗಳ ಎಫ್​ಡಿಗೆ ಶೇಕಡಾ 6.2ರ ಬಡ್ಡಿ ದರವನ್ನು ಬ್ಯಾಂಕ್ ನಿಗದಿಪಡಿಸಿದೆ.

10 ವರ್ಷಗಳ ಎಫ್​ಡಿಗೆ ಐಸಿಐಸಿಐ ಬ್ಯಾಂಕ್ ಶೇಕಡಾ 6.1ರ ಬಡ್ಡಿ ನಿಗದಿಪಡಿಸಿದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇಕಡಾ 0.5ರ ಬಡ್ಡಿ ಸಿಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:35 pm, Sat, 22 October 22