Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಡ್ ಇಲ್ಲದೇ ಎಟಿಎಂನಲ್ಲಿ ಹಣ ವಿತ್​ಡ್ರಾ ಹೇಗೆ ಮಾಡುವುದು? ಇಲ್ಲಿದೆ ಮಾರ್ಗೋಪಾಯ

Cardless cash withdrawal at ATM: ದೇಶದಲ್ಲಿ ಹೆಚ್ಚಿನ ಹಣದ ವಹಿವಾಟು ಯುಪಿಐ ಮುಖಾಂತರ ನಡೆಯುತ್ತಿದೆ. ಕ್ಯಾಷ್ ಪಡೆಯಲು ಎಟಿಎಂಗಳನ್ನೇ ಹೆಚ್ಚು ಬಳಕೆ ಮಾಡಲಾಗುತ್ತಿದೆ. ಈಗ ಯುಪಿಐ ಮತ್ತು ಎಟಿಎಂ ಹೈಬ್ರಿಡ್ ಆದ ವಿತ್​ಡ್ರಾಯಲ್ ಸಿಸ್ಟಂಗಳು ಬಂದಿವೆ. ಹಲವು ಎಟಿಎಂಗಳು ಯುಪಿಐ ಎನೇಬಲ್ ಆಗಿವೆ. ಈ ಎಟಿಎಂಗಳಲ್ಲಿ ಯುಪಿಐ ಆ್ಯಪ್ ಮುಖಾಂತರ ಕ್ಯುಆರ್ ಕೋಡ್ ಸ್ಕ್ಯಾನ್ ಹಣ ವಿತ್​ಡ್ರಾ ಮಾಡಬಹುದು.

ಕಾರ್ಡ್ ಇಲ್ಲದೇ ಎಟಿಎಂನಲ್ಲಿ ಹಣ ವಿತ್​ಡ್ರಾ ಹೇಗೆ ಮಾಡುವುದು? ಇಲ್ಲಿದೆ ಮಾರ್ಗೋಪಾಯ
ಯುಪಿಐ ಎಟಿಎಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 01, 2024 | 3:01 PM

ಬ್ಯಾಂಕಿಂಗ್ ವ್ಯವಸ್ಥೆ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಸುಧಾರಣೆಗೊಳ್ಳುತ್ತಿದೆ. ಹೊಸ ಹೊಸ ತಂತ್ರಜ್ಞಾನಗಳು ಬ್ಯಾಂಕಿಂಗ್ ಪ್ರಕ್ರಿಯೆ ಸ್ವರೂಪವನ್ನೇ ಬದಲಿಸುತ್ತಿವೆ. ಸಾಂಪ್ರದಾಯಿಕವಾಗಿ ಬ್ಯಾಂಕ್ ಕಚೇರಿಗೆ ಹೋಗಿ ಹಣದ ವಹಿವಾಟು ನಡೆಸುವ ಪ್ರಮೇಯ ಈಗ ಬಹಳ ಕಡಿಮೆ. ನೆಟ್ ಬ್ಯಾಂಕಿಂಗ್, ಎಟಿಎಂ, ಕ್ರೆಡಿಟ್ ಕಾರ್ಡ್ ಮತ್ತು ಇತ್ತೀಚೆಗೆ ಯುಪಿಐ ಬಂದ ಬಳಿಕ ಜನಸಾಮಾನ್ಯರಿಗೆ ಬ್ಯಾಂಕಿಂಗ್ ಕೆಲಸ ಬಹಳ ಸಲೀಸಾಗಿದೆ. ಈಗ ಕಾರ್ಡ್ ಇಲ್ಲದೆಯೂ ಎಟಿಎಂಗಳಲ್ಲಿ ಹಣ ವಿತ್​ಡ್ರಾ ಮಾಡಲು ಸಾಧ್ಯವಾಗಿದೆ. ಯುಪಿಐ ಫೀಚರ್ ಇರುವ ಎಟಿಎಂಗಳಿಗೆ ಹೋಗಿ ಹಣ ಪಡೆಯಬಹುದು.

ಯುಪಿಐ ಎಟಿಎಂಗಳಲ್ಲಿ ಹಣ ಪಡೆಯುವ ಕ್ರಮಗಳು ಹೀಗಿವೆ…

ಕೆಲ ಆಯ್ದ ಎಟಿಎಂಗಳಲ್ಲಿ ಯುಪಿಐ ಫೀಚರ್ ಅನ್ನು ಅಳವಡಿಸಲಾಗಿರುತ್ತದೆ. ಸಾಮಾನ್ಯವಾಗಿ ಯಾವುದೇ ಬ್ಯಾಂಕ್​ನ ಶಾಖಾ ಕಚೇರಿ ಬಳಿ ಇರುವ ಎಟಿಎಂಗಳಲ್ಲಿ ಯುಪಿಐ ಫೀಚರ್ ಇರುತ್ತದೆ.

  • ಇಂಥ ಎಟಿಎಂನ ಪರದೆಯಲ್ಲಿ ‘ಯುಪಿಐ ಕಾರ್ಡ್​ಲೆಸ್ ಕ್ಯಾಷ್’ ಎಂಬ ಆಯ್ಕೆಯನ್ನು ನೋಡಬಹುದು.
  • ಅಲ್ಲಿ ನಿಮಗೆ ಅಗತ್ಯ ಇರುವ ಹಣದ ಮೊತ್ತವನ್ನು ನಮೂದಿಸಬೇಕು.
  • ಆಗ ಕ್ಯುಆರ್ ಕೋಡ್ ಜನರೇಟ್ ಆಗುತ್ತದೆ.
  • ಯುಪಿಐ ಆ್ಯಪ್ ತೆರೆದು ಆ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಬೇಕು.
  • ಇದೆಲ್ಲಾ ಆದ ಬಳಿಕ ಆ ಎಟಿಎಂನಿಂದ ನೀವು ನಮೂದಿಸಿದ ಕ್ಯಾಷ್ ಹಣ ಬರುತ್ತದೆ.
  • ಇಲ್ಲಿ ಯಾವುದೇ ಯುಪಿಐ ಆ್ಯಪ್ ಮುಖಾಂತರ ಮಾಡಬಹುದು.

ಇದನ್ನೂ ಓದಿ: ಮ್ಯಾಟರ್ನಿಟಿ ಕವರೇಜ್​ಗೆಂದು ಇನ್ಷೂರೆನ್ಸ್ ಪಡೆಯುವ ಮುನ್ನ ಈ ವಿಷಯ ತಿಳಿದಿರಿ…

ಎಸ್​ಬಿಐ ಯೋನೋ ಆ್ಯಪ್​ನಲ್ಲಿ ಕಾರ್ಡ್​ಲೆಸ್ ಕ್ಯಾಷ್ ಪಡೆಯುವ ಕ್ರಮ…

ಎಸ್​ಬಿಐನಲ್ಲಿ ಇನ್ನೊಂದು ರೀತಿಯ ಸ್ಪೆಷಲ್ ಫೀಚರ್ ಇದೆ. ಎಸ್​ಬಿಐನ ಯೋನೋ ಆ್ಯಪ್ ಮೂಲಕ ಎಟಿಎಂನಲ್ಲಿ ಹಣ ವಿತ್​ಡ್ರಾ ಮಾಡಬಹುದು.

  • ಮೊದಲಿಗೆ ಯೋನೋ ಆ್ಯಪ್ ತೆರೆದು ಲಾಗಿನ್ ಆಗಿ
  • ಅಲ್ಲಿ ಯೋನೋ ಕ್ಯಾಷ್ ಅನ್ನು ಆಯ್ಕೆ ಮಾಡಿ.
  • ರಿಕ್ವೆಸ್ಟ್ ನ್ಯೂ ಅನ್ನೋ ಟ್ಯಾಬ್​ನಲ್ಲಿರುವ ಯೋನೋ ಕ್ಯಾಷ್ ಕೆಳಗೆ ಎಟಿಎಂ ಎಂಬುದನ್ನು ಕ್ಲಿಕ್ ಮಾಡಿ.
  • ಇಲ್ಲಿ ನಿಮಗೆ ಬೇಕಾದ ಹಣದ ಮೊತ್ತವನ್ನು ನಮೂದಿಸಿ.
  • ನಂತರ ಆರು ಅಂಕಿಗಳ ಸಂಖ್ಯೆ ಇರುವ ಪಿನ್ ಅನ್ನು ನೀವೇ ನಮೂದಿಸಿ.
  • ಇದಾದ ಬಳಿಕ ಯೋನೋ ಕ್ಯಾಷ್ ಅನ್ನು ಎನೇಬಲ್ ಮಾಡಲಾಗಿರುವ ಎಸ್​ಬಿಐನ ಎಟಿಎಂಗೆ ಹೋಗಿ ಅಲ್ಲಿ ಯೋನೋ ಕ್ಯಾಷ್ ಅನ್ನು ಒತ್ತಿರಿ.
  • ಈಗ ನಿಮ್ಮ ಮೊಬೈಲ್ ನಂಬರ್​ಗೆ ಟ್ರಾನ್ಸಾಕ್ಷನ್ ರೆಫರೆನ್ಸ್ ನಂಬರ್ ಬಂದಿರುತ್ತದೆ. ಆ ಸಂಖ್ಯೆಯನ್ನು ಅಲ್ಲಿ ನಮೂದಿಸಿ.
  • ಎಷ್ಟು ಹಣ ವಿತ್​​ಡ್ರಾ ಮಾಡಬೇಕು ನಮೂದಿಸಿ.
  • ಬಳಿಕ ನಿಮ್ಮ ಎಸ್​ಬಿಐ ಯೋನೋ ಆ್ಯಪ್​ನಲ್ಲಿ ನೀವು ನಮೂದಿಸಿದ್ದ ಆರಂಕಿಗಳ ಪಿನ್ ಅನ್ನು ಹಾಕಿರಿ.

ಈ ರೀತಿ ಎಸ್​ಬಿಐ ಯೋನೋ ಕ್ಯಾಷ್ ಮುಖಾಂತರ ಒಂದು ದಿನದಲ್ಲಿ 500 ರೂನಿಂದ 20,000 ರೂವರೆಗೆ ಹಣವನ್ನು ಎಟಿಎಂನಿಂದ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ