ಬೆಂಗಳೂರು: ಕ್ರೆಡ್ ಆ್ಯಪ್ ಮಾದರಿಯಲ್ಲಿ ಬೆಂಗಳೂರಿನಲ್ಲಿ ಚೆಕ್ (CheQ) ಎನ್ನುವ ಹೊಸ ಸ್ಟಾರ್ಟಪ್ ಆರಂಭಗೊಂಡಿದ್ದು, ಇದು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳಿಗೆ ಅಮೋಘ ರಿಟರ್ನ್ಸ್ ಆಫರ್ ಮಾಡುತ್ತಿದೆ. ಪ್ರತೀ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಿದರು ಆ ಬಿಲ್ ಮೊತ್ತದ ಶೇ. 1ರಷ್ಟು ಹಣ ಗ್ರಾಹಕರಿಗೆ ವಾಪಸ್ ಸಂದಾಯವಾಗುತ್ತದೆ. ಇದೀಗ ಆ್ಯಕ್ಸಿಸ್ ಬ್ಯಾಂಕ್ ಜೊತೆ CheQ ಹೊಂದಾಣಿಕೆ ಮಾಡಿಕೊಂಡಿದ್ದು, ಆ್ಯಕ್ಸಿಸ್ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಿದರೆ ಶೇ. 1.5ರಷ್ಟು ಹಣ ರಿಟರ್ನ್ ಸಿಗುತ್ತದೆ.
ಇಲ್ಲಿ ಬಿಲ್ ಕಟ್ಟಿದಾಗ ನೇರವಾಗಿ ಹಣ ರಿಟರ್ನ್ ಆಗುವುದಿಲ್ಲ. ಅಂದರೆ ನೇರ ಕ್ಯಾಷ್ ಬ್ಯಾಕ್ ಸಿಗುವುದಿಲ್ಲ. ಚೆಕ್ ಚಿಪ್ಸ್ (CheQ Chips) ಅಥವಾ ಅಂಕಗಳ ಪಟ್ಟಿಗೆ ಇದು ಸೇರುತ್ತಾ ಹೋಗುತ್ತದೆ. ಅದನ್ನು ನೀವು ಯಾವಾಗ ಬೇಕಾದರೂ ಕ್ಯಾಷ್ ಆಗಿ ಪರಿವರ್ತಿಸಿಕೊಳ್ಳಬಹುದು. ಅಥವಾ ವೋಚರ್ ರೂಪದಲ್ಲಿ ನಿರ್ದಿಷ್ಟ ಶಾಪಿಂಗ್ಗೆ ಇದನ್ನು ಬಳಸಿಕೊಳ್ಳಬಹುದು.
ಇದನ್ನೂ ಓದಿ: Bank Crisis: ಬ್ಯಾಂಕುಗಳಿಗೆ ವೈರಲ್ ಫೀವರ್; ಸಿಗ್ನೇಚರ್ ದಿವಾಳಿ; ಅಮೆರಿಕದಲ್ಲಿ ಮಕಾಡೆ ಮಲಗಿದ 3ನೇ ಬ್ಯಾಂಕ್
CheQ ಆ್ಯಪ್ ಮೂಲಕ ನಾವು ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಪಾವತಿಸಬಹುದು. ಲೋನ್ ಇಎಂಐಗಳನ್ನೂ ಕಟ್ಟಬಹುದು. ಆ ಎಲ್ಲಾ ಪಾವತಿಗೂ ಶೇ. 1ರಷ್ಟು ಹಣ ರಿಟರ್ನ್ ಬರುತ್ತದೆ.
Cred ವರ್ಸಸ್ CheQ
ಕ್ರೆಡ್ ಆ್ಯಪ್ ನೀವು ಬಳಸುತ್ತಿರಬಹುದು. ಇದೂ ಕೂಡ ಆರಂಭದಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ಗಳ ಪಾವತಿಗೆ ಒಂದು ಪ್ಲಾಟ್ಫಾರ್ಮ್ ಆಗಿ ಸೇವೆ ಆರಂಭಿಸಿತು. ಬಳಿಕ ಕ್ರೆಡ್ ಬೇರೆ ಬೇರೆ ಸೇವೆಗಳನ್ನೂ ಆರಂಭಿಸಿದೆ. ಕ್ರೆಡ್ ಕೂಡ ತನ್ನ ಕ್ಯಾಷ್ಬ್ಯಾಕ್ ಆಫರ್ಗಳಿಂದ ಹಲವಾರು ಗ್ರಾಹಕರನ್ನು ಸೆಳೆದಿತ್ತು. ಈಗ ಕ್ರೆಡ್ ಹಾದಿಯಲ್ಲಿ CheQ ಸಾಗುತ್ತಿದೆ. ಕ್ರೆಡ್ ಆ್ಯಪ್ಗಿಂತಲೂ CheQನ ವಿನ್ಯಾಸ ಸರಳವಾಗಿದೆ. ಇದರ ರಿವಾರ್ಡಿಂಗ್ ಪಾಯಿಂಟ್ ಇತ್ಯಾದಿ ವ್ಯವಸ್ಥೆ ಕ್ರೆಡ್ಗಿಂತ ಪಾರದರ್ಶಕವಾಗಿದೆ ಎಂಬುದು ಸಾಮಾನ್ಯರ ಅನಿಸಿಕೆ.
ಇದನ್ನೂ ಓದಿ: PhonePe: ಫೋನ್ಪೇ ವಾರ್ಷಿಕ ಟಿಪಿವಿ 84 ಕೋಟಿ; ಆರ್ಬಿಐನಿಂದ ಸಿಕ್ಕಿತು ಪಿಎ ಲೈಸೆನ್ಸ್
CheQ ಆ್ಯಪ್ನಲ್ಲಿ ಖಾತೆ ತೆರೆಯುವುದು ಬಹಳ ಸರಳ. ಪಾನ್ ನಂಬರ್, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸ ಇದ್ದರೆ ಸಾಕು. ಕ್ರೆಡ್ನಲ್ಲೂ ಈ ಮೂರೇ ದಾಖಲೆ ಸಾಕಾದರೂ ಕ್ರೆಡಿಟ್ ಸ್ಕೋರ್ 750ಕ್ಕಿಂತ ಉತ್ತಮವಾಗಿರಬೇಕು. ಇಲ್ಲದಿದ್ದರೆ ಕ್ರೆಡ್ ಆ್ಯಪ್ ಖಾತೆ ತೆರೆಯುವುದೇ ಅಸಾಧ್ಯ.
Published On - 11:52 am, Mon, 13 March 23