ಕ್ರೆಡಿಟ್ ಕಾರ್ಡ್​​ಗೆ ಲೇಟ್ ಫೀ, ಓವರ್ ಲಿಮಿಟ್ ಚಾರ್ಜ್, ಜಿಎಸ್​​ಟಿ ಇತ್ಯಾದಿ ಶುಲ್ಕಗಳ ಬಗ್ಗೆ ತಿಳಿದಿರಿ

Credit card various charges: ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸರಿಯಾದ ಸಮಯಕ್ಕೆ ಪಾವತಿಸದೇ ಹೋದಾಗ ಹಲವು ಶುಲ್ಕ ಮತ್ತು ದಂಡಗಳನ್ನು ಹೆಚ್ಚುವರಿಯಾಗಿ ಕಟ್ಟಬೇಕಾಗುತ್ತದೆ. ತಡವಾಗಿ ಪೇಮೆಂಟ್ ಮಾಡಿದಾಗ ಲೇಟ್ ಫೀ ಕಟ್ಟಬೇಕು. ಮಿನಿಮಮ್ ಪೇಮೆಂಟ್ ಅನ್ನಾದರೂ ಮಾಡಲೇಬೇಕು. ನಿಮ್ಮ ಕಾರ್ಡ್​ನ ಕ್ರೆಡಿಟ್ ಲಿಮಿಟ್ ಮೀರಿ ಖರ್ಚು ಮಾಡಿದಾಗ ಓವರ್​ಲಿಮಿಟ್ ಫೀ ಕಟ್ಟಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್​​ಗೆ ಲೇಟ್ ಫೀ, ಓವರ್ ಲಿಮಿಟ್ ಚಾರ್ಜ್, ಜಿಎಸ್​​ಟಿ ಇತ್ಯಾದಿ ಶುಲ್ಕಗಳ ಬಗ್ಗೆ ತಿಳಿದಿರಿ
ಕ್ರೆಡಿಟ್ ಕಾರ್ಡ್

Updated on: Jul 10, 2025 | 11:23 AM

ಯುಪಿಐ ಬಂದ ಮೇಲೂ ಕ್ರೆಡಿಟ್ ಕಾರ್ಡ್ ಬಳಕೆ ಸಾಕಷ್ಟು ಆಗುತ್ತಿದೆ. ಅದಕ್ಕೆ ಕಾರಣ ಕ್ರೆಡಿಟ್ ಕಾರ್ಡ್​ಗಳು (credit card) ನೀಡುವ ಕ್ಯಾಷ್​ಬ್ಯಾಕ್, ರಿವಾರ್ಡ್ ಪಾಯಿಂಟ್ಸ್, ಕ್ರೆಡಿಟ್ ಸೌಲಭ್ಯ ಇತ್ಯಾದಿ ಕಾರಣಕ್ಕೆ ಎಂಬುದು ನಮಗೆ ತಿಳಿದಿರುವ ಸಂಗತಿ. ಹಣಕಾಸು ಶಿಸ್ತು ಇದ್ದವರಿಗೆ ಕ್ರೆಡಿಟ್ ಕಾರ್ಡ್ ಅದ್ಭುತ ಸಾಧನ. ಆದರೆ, ಹಣಕಾಸು ಶಿಸ್ತು ಮರೆತರೆ ಸಾಲದ ಶೂಲಕ್ಕೆ ಸಿಲುಕಿಸುವ ಬಲೆಯೇ ಆಗಬಹುದು. ಕ್ರೆಡಿಟ್ ಕಾರ್ಡ್ ಕಂಪನಿಗಳಿಗೆ ನೀವು ತಪ್ಪೆಸಗುವುದೇ ಬಂಡವಾಳ ಆಗುತ್ತದೆ. ನಾನಾ ತರಹದ ಶುಲ್ಕ, ದಂಡ ಇತ್ಯಾದಿಗಳನ್ನು ನಿಮಗೆ ಹೇರಬಹುದು. ಕ್ರೆಡಿಟ್ ಕಾರ್ಡ್ ಸಂಬಂಧಿಕ ಇಂಥ ಕೆಲ ಶುಲ್ಕಗಳ ಮಾಹಿತಿ ಇಲ್ಲಿದೆ.

ಕ್ರೆಡಿಟ್ ಕಾರ್ಡ್ ಲೇಟ್ ಪೇಮೆಂಟ್ ಫೀಸ್

ನೀವು ಕ್ರೆಡಿಟ್ ಕಾರ್ಡ್ ಬಳಸಿದಾಗ ಬರುವ ಬಿಲ್ ಅನ್ನು ಕಟ್ಟಲು ಡೆಡ್​ಲೈನ್ ಇರುತ್ತದೆ. ಅಷ್ಟರೊಳಗೆ ನೀವು ಪೂರ್ತಿ ಬಿಲ್ ಪಾವತಿಸಬಹುದು. ಅಥವಾ ಕನಿಷ್ಠ ಹಣ ಅನ್ನಾದರೂ ಪಾವತಿಸಬಹುದು. ನೀವು ಮಿನಿಮಮ್ ಪೇಮೆಂಟ್ ಅನ್ನಾದರೂ ಡೆಡ್​ಲೈನ್​ನೊಳಗೆ ಪಾವತಿಸದೇ ಹೋದರೆ ಆಗ ಲೇಟ್ ಪೇಮೆಂಟ್ ಫೀ ವಿಧಿಸಲಾಗುತ್ತದೆ. ಸಾಮಾನ್ಯವಾಗಿ ಇದು 300 ರೂನಿಂದ 1,000 ರೂವರೆಗೂ ಶುಲ್ಕ ಇರುತ್ತದೆ.

ಇದನ್ನೂ ಓದಿ: ಗೃಹಸಾಲ, ಬಹಳ ಕಡಿಮೆ ಆಗಿದೆ ಬಡ್ಡಿದರ; ಶೇ. 7.35ರಿಂದ ಇಂಟರೆಸ್ಟ್ ರೇಟ್ ಶುರು

ಇದನ್ನೂ ಓದಿ
ಸಂಬಳದಾರರಿಗೆ ಸೂಕ್ತವಾಗುವ ಎಲ್​ಐಸಿ ಪ್ಲಾನ್​ಗಳು
ಜೂನ್ ತಿಂಗಳಲ್ಲಿ 62 ಲಕ್ಷ ಹೊಸ ಎಸ್​​ಐಪಿ ಶುರು
ಇನ್ಷೂರೆನ್ಸ್ ಟಿಪ್ಸ್; ಅಪಘಾತವಾದಾಗ ಏನೇನು ಮಾಡಬೇಕು?
ಸಿಐಐ 376ಕ್ಕೆ ಏರಿಕೆ; ತಗ್ಗಲಿದೆ ಟ್ಯಾಕ್ಸ್ ಹೊರೆ

ಕ್ರೆಡಿಟ್ ಕಾರ್ಡ್ ಓವರ್​ಲಿಮಿಟ್ ಚಾರ್ಜ್

ಪ್ರತಿಯೊಂದು ಕ್ರೆಡಿಟ್ ಕಾರ್ಡ್​ಗೂ ನಿರ್ದಿಷ್ಟ ಕ್ರೆಡಿಟ್ ಲಿಮಿಟ್ ನೀಡಲಾಗಿರುತ್ತದೆ. ಅಂದರೆ, ನಿಗದಿತ ಮಿತಿಯೊಳಗೆ ನೀವು ಕಾರ್ಡ್ ಬಳಸಲು ಅನುಮತಿ ಇರುತ್ತದೆ. ಉದಾಹರಣೆಗೆ, ನಿಮ್ಮ ಕ್ರೆಡಿಟ್ ಕಾರ್ಡ್​​ಗೆ 50,000 ರೂ ಕ್ರೆಡಿಟ್ ಮಿತಿ ಇದ್ದಲ್ಲಿ ನೀವು ಕಾರ್ಡ್ ಬಳಸಿ 50,000 ರೂಗಿಂತ ಹೆಚ್ಚು ವೆಚ್ಚ ಮಾಡುವಂತಿಲ್ಲ. ಅದಕ್ಕಿಂತ ಹೆಚ್ಚು ಬಳಸಲು ಸಾಧ್ಯವಿದೆಯಾದರೂ ಓವರ್ ಲಿಮಿಟ್ ಶುಲ್ಕ ಅನ್ವಯ ಆಗುತ್ತದೆ. ಈ ಶುಲ್ಕವು 500 ರೂನಿಂದ 750 ರೂ ಆಗಿರಬಹುದು.

ಕ್ರೆಡಿಟ್ ಕಾರ್ಡ್ ಜಿಎಸ್​ಟಿ ದರ ಹೇಗೆ ಅನ್ವಯ?

ಕ್ರೆಡಿಟ್ ಕಾರ್ಡ್​ನಲ್ಲಿ ನೀವು ಜಿಎಸ್​​ಟಿ ತೆರಿಗೆ ವಿಧಿಸುವುದನ್ನು ನೋಡಿರಬಹುದು. ಇದು ನೀವು ಕಾರ್ಡ್​ನಲ್ಲಿ ಬಳಸುವ ಹಣಕ್ಕೆ ವಿಧಿಸುವ ತೆರಿಗೆಯಲ್ಲ. ಬದಲಾಗಿ ಲೇಟ್ ಪೇಮೆಂಟ್ ಫೀ, ಓವರ್ ಲಿಮಿಟ್ ಫೀ, ಆ್ಯನುಯಲ್ ಫೀ, ಪ್ರೋಸಸಿಂಗ್ ಫೀ ಇತ್ಯಾದಿಗಳಿಗೆ ಶೇ. 18ರಷ್ಟು ಜಿಎಸ್​​ಟಿ ಅನ್ವಯ ಆಗುತ್ತದೆ.

ಇದನ್ನೂ ಓದಿ: ಮ್ಯುಚುವಲ್ ಫಂಡ್ ಉದ್ಯಮದಲ್ಲಿ 74 ಲಕ್ಷ ಕೋಟಿ ರೂ; 8 ಕೋಟಿ ಎಸ್​​ಐಪಿ ಅಕೌಂಟ್; ಗೋಲ್ಡ್ ಇಟಿಎಫ್​ಗಳಿಗೆ ಬೇಡಿಕೆ

ಉದಾಹರಣೆಗೆ, ಲೇಟ್ ಪೇಮೆಂಟ್ ಫೀ ಆಗಿ 600 ರೂ ಇದ್ದಲ್ಲಿ ಅದಕ್ಕೆ ಶೇ. 18 ಜಿಎಸ್​​ಟಿ ಎಂದರೆ 108 ರೂ ಆಗುತ್ತದೆ. 600 ರೂ ಜೊತೆಗೆ 108 ರೂ ಸೇರಿಸಿ 708 ರೂ ಲೇಟ್ ಪೇಮೆಂಟ್ ಫೀ ಕಟ್ಟಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಬಾಕಿ ಹಣಕ್ಕೆ ಬಡ್ಡಿ

ಇವುಗಳ ಜೊತೆಗೆ, ಹಲವು ಕ್ರೆಡಿಟ್ ಕಾರ್ಡ್​ಗಳಲ್ಲಿ ನಿಗದಿತ ವಾರ್ಷಿಕ ಶುಲ್ಕವೂ ಇರುತ್ತದೆ. ಕನಿಷ್ಠ ಬಾಕಿ ಮಾತ್ರವೇ ಪಾವತಿಸಿದರೆ, ಉಳಿದ ಹಣಕ್ಕೆ ಮುಂದಿನ ಬಿಲ್​​ನಲ್ಲಿ ಬಡ್ಡಿ ಹೇರಲಾಗುತ್ತದೆ. ತಡವಾಗಿ ಪೇಮೆಂಟ್ ಮಾಡಿದಾಗಲೂ ಇಡೀ ಮೊತ್ತಕ್ಕೆ ಬಡ್ಡಿ ಹಾಕಲಾಗುತ್ತದೆ.

ಹಾಗೆಯೇ, ನೀವು ಸರಿಯಾದ ಸಮಯಕ್ಕೆ ಬಿಲ್ ಪಾವತಿಸದೇ ಹೋದರೆ, ಅಥವಾ ಅಶಿಸ್ತು ತೋರಿದರೆ ಈ ಮೇಲಿನ ಶುಲ್ಕಗಳ ಜೊತೆಗೆ ನಿಮ್ಮ ಕ್ರೆಡಿಟ್ ಸ್ಕೋರ್​ಗೆ ಧಕ್ಕೆಯಾಗುತ್ತದೆ. ಇದೂ ಕೂಡ ಬಹಳ ಮುಖ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ