ಚಿನ್ನ ಇವತ್ತು ಬಹು ಆಯಾಮಗಳಲ್ಲಿ ಬಳಕೆ ಆಗುವ ಅಮೂಲ್ಯ ವಸ್ತು. ಅಂದವಾಗಿ ಕಾಣಲು ಮೈಮೇಲೆ ಒಡವೆ ಧರಿಸಲು ಚಿನ್ನ (Gold) ಬೇಕು; ಭವಿಷ್ಯದ ಭದ್ರತೆಗಾಗಿ ಹೂಡಿಕೆ ಮಾಡಲು (Investment option) ಚಿನ್ನ ಬಹಳ ಸೂಕ್ತ; ಕಡಿಮೆ ಬಡ್ಡಿಗೆ ಸಾಲ ಪಡೆಯಲು ಚಿನ್ನ ಬೆಸ್ಟ್. ಆಪತ್ಕಾಲದಲ್ಲಿ ನಮಗೆ ಬಹಳ ಆಸರೆಯಾಗುತ್ತದೆ ಈ ಚಿನ್ನ. ನೀವು ಒಡವೆ ರೂಪದಲ್ಲಾದರೂ ಸರಿ, ಕಾಯಿನ್, ಗಟ್ಟಿ ಇತ್ಯಾದಿ ಶುದ್ಧ ರೂಪದಲ್ಲಾದರೂ ಸರಿ ಚಿನ್ನ ಖರೀದಿಸುವುದು ಯಾವತ್ತೂ ನಷ್ಟ ತರುವುದಿಲ್ಲ. ಈಗ ನಮಗೆ ತುರ್ತಾಗಿ ಸಾಲ ಬೇಕೆಂದರೆ ಮೊದಲು ಹುಡುವುದೇ ಚಿನ್ನಕ್ಕಾಗಿ. ಚಿನ್ನದ ಮೇಲೆ ಸಾಲ ಪಡೆಯುವ ಮುನ್ನ ಕೆಲವಾರು ವಿಚಾರಗಳು ಗಮನದಲ್ಲಿರುವುದು ಸೂಕ್ತ. ಗೋಲ್ಡ್ ಲೋನ್ನಿಂದ (Gold Loan) ಆಗುವ ಲಾಭಗಳೇನು, ಅದರ ಸಾಧಕ ಬಾಧಕಗಳೇನು ಎಂಬುದು ತಿಳಿದಿರಲಿ.
ಬಹಳ ಜನರು ಈಗಲೂ ಒಡವೆ ಗಿರವಿ ಅಂಗಡಿಗಳಲ್ಲಿ (Bankers) ಅಡವಿಟ್ಟು ಸಾಲ ಪಡೆಯುತ್ತಾರೆ. ಮನೆಯ ಬಳಿಯೇ ಗಿರವಿ ಅಂಗಡಿಗಳಿರುವುದು, ಒಡವೆ ಅಂಗಡಿಯವರ ಪರಿಚಿತನಿರುವುದು ಮತ್ತು ಬಹಳ ಕ್ಷಿಪ್ರವಾಗಿ ಸಾಲ ಸಿಗುವುದು ಇದಕ್ಕೆ ಪ್ರಮುಖ ಕಾರಣ. ಆದರೆ, ಬಡ್ಡಿ ದರ ಶೇ. 18ರಿಂದ ಶೇ. 36ರವರೆಗೂ ಇರುತ್ತದೆ.
ಇದನ್ನೂ ಓದಿ: CheQ: ಬಿಲ್ ಕಟ್ಟಿದರೆ ಶೇ. 1.5ರಷ್ಟು ರಿಟರ್ನ್; ಬೆಂಗಳೂರಿನ ಸ್ಟಾರ್ಟಪ್ ಆಫರ್; ಕ್ರೆಡ್ಗಿಂತ ಇದು ಭಿನ್ನವಾ?
ಇದರ ಬದಲು ಬ್ಯಾಂಕುಗಳಲ್ಲಿ ಒಡವೆ ಸಾಲ ಪಡೆಯುವುದು ಬಹಳ ಉಪಯುಕ್ತ. ಇದರ ಪ್ರಕ್ರಿಯೆ ಕೂಡ ಬಹಳ ಸರಳ ಹಾಗು ಕ್ಷಿಪ್ರ. ಬಡ್ಡಿ ದರವೂ ಬಹಳ ಕಡಿಮೆ. ನಿಮ್ಮ ಒಡವೆಯ ಕಳ್ಳತನ ಆಗುವ ಭಯ ಇರುವುದಿಲ್ಲ. ಕೋಆಪರೇಟಿವ್ ಬ್ಯಾಂಕ್ಗಳಲ್ಲೂ ನೀವು ಈ ಸಾಲ ಪಡೆಯಬಹುದು. ಮುತ್ತೂಟ್ ಫೈನಾನ್ಸ್ ಇತ್ಯಾದಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳೂ ಕಡಿಮೆ ಬಡ್ಡಿ ದರಕ್ಕೆ ಒಡವೆ ಸಾಲ ನೀಡುತ್ತವೆ.
ಇದನ್ನೂ ಓದಿ: Inspiring: ಟಿಸಿಎಸ್ನಲ್ಲಿ ಇಂಟರ್ನ್ ಆಗಿದ್ದ ರೈತನ ಮಗನ ಸಂಬಳ ಈಗ 109 ಕೋಟಿ; ದಂಗುಬಡಿಸುತ್ತದೆ ಚಂದ್ರಶೇಖರನ್ ವೃತ್ತಿಜೀವನ
ಗೋಲ್ಡ್ ಲೋನ್ನಿಂದ ಪ್ರಯೋಜನ ಇಲ್ಲ ಎನ್ನುವುದಾದರೆ ಅದು ತೆರಿಗೆ ವಿಚಾರದಲ್ಲಿ ಮಾತ್ರ. ಒಡವೆ ಅಡವಿಟ್ಟು ಪಡೆಯುವ ಸಾಲವನ್ನು ಐಟಿ ರಿಟರ್ನ್ಸ್ನಲ್ಲಿ ತೋರಿಸಲು ಆಗುವುದಿಲ್ಲ. ಗೃಹ ಸಾಲಗಳಿಗೆ ಕೆಲ ತೆರಿಗೆ ರಿಯಾಯಿತಿಗಳು ಇರುವಂತೆ ಚಿನ್ನದ ಸಾಲಕ್ಕೆ ಇರುವುದಿಲ್ಲ. ನಿಮ್ಮ ಪ್ಯಾನ್ ಡೇಟಾಬೇಸ್ನಲ್ಲಿ ಒಡವೆ ಸಾಲ ದಾಖಲಾಗುವುದೇ ಇಲ್ಲ. ಇದು ಬಿಟ್ಟರೆ ಚಿನ್ನದ ಮೇಲಿನ ಸಾಲ ಯಾರಿಗೇ ಆದರೂ ಆಪತ್ಕಾಲದ ನಿಧಿ.
Published On - 3:55 pm, Mon, 13 March 23