AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆ. 22ರಿಂದ ಇನ್ಷೂರೆನ್ಸ್​ಗೆ ಜಿಎಸ್​ಟಿಯೇ ಇಲ್ಲ; ಅಲ್ಲೀವರೆಗೂ ಪ್ರೀಮಿಯಮ್ ಕಟ್ಟೋದು ನಿಲ್ಲಿಸಬೇಕಾ?

Can an insurance policyholder wait till Sep 22nd to pay premium?: ಕೇಂದ್ರ ಸರ್ಕಾರವು ವೈಯಕ್ತಿಕ ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್​ಗಳಿಗೆ ಜಿಎಸ್​ಟಿಯಿಂದ ವಿನಾಯಿತಿ ನೀಡಿದೆ. ಸೆಪ್ಟೆಂಬರ್ 22ರಿಂದ ಈ ಹೊಸ ಜಿಎಸ್​ಟಿ ದರ ಜಾರಿಗೆ ಬರುತ್ತದೆ. ನಿಮ್ಮ ಇನ್ಷೂರೆನ್ಸ್ ಪ್ರೀಮಿಯಮ್​ಗೆ ಡ್ಯೂ ಡೇಟ್ ಸೆಪ್ಟೆಂಬರ್ 22ಕ್ಕೆ ಮುಂಚೆ ಇದ್ದರೆ ಏನು ಮಾಡಬೇಕು?

ಸೆ. 22ರಿಂದ ಇನ್ಷೂರೆನ್ಸ್​ಗೆ ಜಿಎಸ್​ಟಿಯೇ ಇಲ್ಲ; ಅಲ್ಲೀವರೆಗೂ ಪ್ರೀಮಿಯಮ್ ಕಟ್ಟೋದು ನಿಲ್ಲಿಸಬೇಕಾ?
ಇನ್ಷೂರೆನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 04, 2025 | 12:58 PM

Share

ನವದೆಹಲಿ, ಸೆಪ್ಟೆಂಬರ್ 4: ಸರ್ಕಾರ ಪ್ರಕಟಿಸಿದ ಜಿಎಸ್​ಟಿ ಸರಳೀಕರಣ ಕ್ರಮದಲ್ಲಿ ಬಹಳ ಗಮನ ಸೆಳೆದಿರುವ ನಿರ್ಧಾರಗಳಲ್ಲಿ ಇನ್ಷೂರೆನ್ಸ್ ಪ್ರೀಮಿಯಮ್ (Insurance) ಮೇಲಿನ ಜಿಎಸ್​ಟಿ ರದ್ದು ಮಾಡಿದ್ದು ಒಂದು. ವೈಯಕ್ತಿಕ ಹೆಲ್ತ್ ಮತ್ತು ಲೈಫ್ ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್​ಗಳ ಮೇಲೆ ಶೇ. 18ರಷ್ಟಿದ್ದ ಜಿಎಸ್​ಟಿಯನ್ನು ಸೊನ್ನೆಗೆ ಇಳಿಸಲಾಗಿದೆ. ಇದು 2025ರ ಸೆಪ್ಟೆಂಬರ್ 22ರಿಂದ ಜಾರಿಗೆ ಬರುತ್ತದೆ. ಇದರೊಂದಿಗೆ ಇನ್ಷೂರೆನ್ಸ್ ಪ್ರೀಮಿಯಮ್​ಗಳ ಬೆಲೆಯಲ್ಲಿ ಶೇ. 15ರಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ.

ಸೆ. 22ಕ್ಕೆ ಮುನ್ನ ಪ್ರೀಮಿಯಮ್ ಕಟ್ಟಿದರೆ ಶೇ. 18 ಜಿಎಸ್​ಟಿ; ಏನು ಮಾಡಬೇಕು?

ಸರ್ಕಾರದ ನೂತನ ಜಿಎಸ್​ಟಿ ದರಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರುತ್ತವೆ. ಸೆಪ್ಟೆಂಬರ್ 21ರವರೆಗೂ ನೀವು ಪಾವತಿಸುವ ಇನ್ಷೂರೆನ್ಸ್ ಪ್ರೀಮಿಯಮ್ ಮೇಲೆ ಶೇ. 18 ಜಿಎಸ್​ಟಿ ಅನ್ವಯ ಆಗುತ್ತದೆ. ಹಾಗಾದರೆ, ಪ್ರೀಮಿಯಮ್​ಗೆ ಜಿಎಸ್​ಟಿ ತಪ್ಪಿಸಿಕೊಳ್ಳಲು ಸೆಪ್ಟೆಂಬರ್ 22ರವರೆಗೂ ಕಾಯಬೇಕಾ?

ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟಲು ಒಂದು ಗಡುವು ನಿಗದಿ ಮಾಡಲಾಗಿರುತ್ತದೆ. ಅದಾದ ಬಳಿಕ ಕೆಲ ದಿನಗಳಷ್ಟು ಗ್ರೇಸ್ ಪೀರಿಯಡ್ ಇರುತ್ತದೆ. ವಾಹನ ಇನ್ಷೂರೆನ್ಸ್ ಪಾಲಿಸಿಗಳಿಗೆ ಗ್ರೇಸ್ ಪೀರಿಯಡ್ ಇರೋದಿಲ್ಲ. ಅವು ತತ್​ಕ್ಷಣವೇ ಲ್ಯಾಪ್ಸ್ ಆಗುತ್ತದೆ ಎಂಬುದೂ ಗಮನದಲ್ಲಿರಲಿ.

ಇದನ್ನೂ ಓದಿ: Insurance Hack: ಈ ಟೆಕ್ನಿಕ್ ಉಪಯೋಗಿಸಿ, ಇನ್ಷೂರೆನ್ಸ್ ಪ್ರೀಮಿಯಮ್ ಉಚಿತಗೊಳಿಸಿ

ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳಿಗೆ ಗ್ರೇಸ್ ಪೀರಿಯಡ್ ಸಾಮಾನ್ಯವಾಗಿ 15 ದಿನ ಮಾತ್ರವೇ ಇರುತ್ತದೆ. ಲೈಫ್ ಇನ್ಷೂರೆನ್ಸ್ ಆದರೆ 15ರಿಂದ 30 ದಿನಗಳವರೆಗೂ ಇರಬಹುದು. ನಿಮ್ಮ ಇನ್ಷೂರೆನ್ಸ್ ಪಾಲಿಸಿಯ ಡಾಕ್ಯುಮೆಂಟ್​ನಲ್ಲಿ ಗ್ರೇಸ್ ಪೀರಿಯಡ್ ಎಷ್ಟಿದೆ ಎಂಬುದನ್ನು ಗಮನಿಸಿ.

ಗ್ರೇಸ್ ಪೀರಿಯಡ್ ಮೀರಿದರೆ ಪಾಲಿಸಿ ಲ್ಯಾಪ್ಸ್ ಆಗುತ್ತೆ ಹುಷಾರ್

ನಿಮ್ಮ ಹೆಲ್ತ್ ಮತ್ತು ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್​ಗೆ ಡ್ಯೂ ಡೇಟ್ ಮೀರಿ ಗ್ರೇಸ್ ಪೀರಿಯಡ್ ಕೂಡ ಗತಿಸಿ ಹೋದಾಗ, ಪಾಲಿಸಿ ನಿಷ್ಕ್ರಿಯಗೊಳ್ಳುತ್ತದೆ. ಲೈಫ್ ಇನ್ಷೂರೆನ್ಸ್ ಆದರೆ ರಿವೈವಲ್ ಫೀ, ಬಡ್ಡಿ ತೆರಬೇಕಾಗುತ್ತದೆ. ಹೊಸದಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕಾಗಬಹುದು.

ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಲ್ಯಾಪ್ಸ್ ಆದಾಗ ಅದನ್ನು ಮತ್ತೆ ರಿವೈವಲ್ ಮಾಡಲು ಆಗುವುದಿಲ್ಲ. ಹೊಸ ಪಾಲಿಸಿಯನ್ನೇ ಪಡೆಯಬೇಕಾಗಬಹುದು. ಹಿಂದಿನ ಹೆಲ್ತ್ ಪಾಲಿಸಿಯಲ್ಲಿ ನೀವು ಉಳಿಸಿಟ್ಟಿರುವ ನೋ ಕ್ಲೇಮ್ ಬೋನಸ್, ವೇಟಿಂಗ್ ಪೀರಿಯಡ್ ಇತ್ಯಾದಿಗಳು ಹೊಸ ಪಾಲಿಸಿಗೆ ವರ್ಗವಾಗುವುದಿಲ್ಲ.

ಇದನ್ನೂ ಓದಿ: LIC campaign: ಎಲ್​ಐಸಿ ಪಾಲಿಸಿ ಲ್ಯಾಪ್ಸ್ ಆಗಿದೆಯಾ? ರಿವೈವಲ್​ಗೆ ಅ. 17ರವರೆಗೂ ಅವಕಾಶ

ಶೇ. 18 ಜಿಎಸ್​ಟಿ ಉಳಿಸಲು ಹೋದರೆ ಬೇರೆ ಕೆಲ ರಿಸ್ಕ್ ಅಂಶಗಳು ಇರುವುದು ನಿಮ್ಮ ಗಮನದಲ್ಲಿರಲಿ. ಸೆಪ್ಟೆಂಬರ್ 22ರವರೆಗೆ ನಿಮ್ಮ ಪಾಲಿಸಿಗೆ ಗ್ರೇಸ್ ಪೀರಿಯಡ್ ಇದ್ದರೆ ಪ್ರೀಮಿಯಮ್ ಕಟ್ಟುವುದನ್ನು ವಿಳಂಬ ಮಾಡಬಹುದು. ಇಲ್ಲದಿದ್ದರೆ ರಿವೈವಲ್ ಫೀ ಇತ್ಯಾದಿ ಕಟ್ಟುವ ತಲೆನೋವಿನ ಬದಲು ಶೇ. 18 ಜಿಎಸ್​ಟಿಯೊಂದಿಗೆ ಈಗಲೇ ಪ್ರೀಮಿಯಮ್ ಕಟ್ಟುವುದು ಸಂದರ್ಭೋಚಿತ ಎನಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ