
ಭಾರತದಲ್ಲಿ ಹೆಚ್ಚಿನ ಜನರು ಮತ್ತು ಸಂಸ್ಥೆಗಳು ಆದಾಯ ತೆರಿಗೆ ಪಾವತಿಸದೇ ಇದ್ದರೂ ಟ್ಯಾಕ್ಸ್ ರಿಟರ್ನ್ (Income tax return) ಸಲ್ಲಿಸುವ ಅವಶ್ಯತೆ ಇದೆ. ಆದರೆ, ಕೆಲ ವರ್ಗದ ಜನರು ಹಾಗೂ ಪ್ರದೇಶಗಳು ಇನ್ಕಮ್ ಟ್ಯಾಕ್ಸ್ ವ್ಯಾಪ್ತಿಯಿಂದ ಹೊರಗಿರುತ್ತಾರೆ. ಐಟಿಆರ್ ಸಲ್ಲಿಸುವ ಕಾರ್ಯದಿಂದ ವಿನಾಯಿತಿ ಯಾರಿಗೆಲ್ಲಾ ನೀಡಲಾಗಿದೆ ಎನ್ನುವ ವಿವರ ಇಲ್ಲಿದೆ…
ಸಿಕ್ಕಿಂ ರಾಜ್ಯದ ನಿವಾಸಿಗಳು ಆದಾಯ ತೆರಿಗೆ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಭಾರತದೊಂದಿಗೆ 1950ರಲ್ಲಿ ವಿಲೀನವಾಗುವಾಗ ಸಿಕ್ಕಿದ ವಿನಾಯಿತಿ ಇದು.
ಅರುಣಾಚಲಪ್ರದೇಶ, ಮಣಿಪುರ, ಮಿಝೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡಗಳ (ಎಸ್ಟಿ) ಜನರು ಇನ್ಕಮ್ ಟ್ಯಾಕ್ಸ್ ಕಟ್ಟುವ ಅಗತ್ಯ ಇಲ್ಲ.
ಅಸ್ಸಾಮ್, ಮೇಘಾಲಯ ಮತ್ತು ಜಾರ್ಖಂಡ್ ರಾಜ್ಯಗಳ ಕೆಲ ನಿಗದಿತ ಪ್ರದೇಶಗಳಲ್ಲಿರುವ ಬುಡಕಟ್ಟು ಜನರು ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆದಿರುತ್ತಾರೆ.
ಇದನ್ನೂ ಓದಿ: ಇಪಿಎಫ್ ಠೇವಣಿ ಮತ್ತು ಬಡ್ಡಿಗೆ ಟ್ಯಾಕ್ಸ್ ಇರುತ್ತಾ? ಎಷ್ಟು ಟಿಡಿಎಸ್ ಕಡಿತವಾಗುತ್ತೆ? ಇಲ್ಲಿದೆ ಡೀಟೇಲ್ಸ್
ಇನ್ಕಮ್ ಟ್ಯಾಕ್ಸ್ ಸಿಸ್ಟಂನಲ್ಲಿ ಮೂಲ ವಿನಾಯಿತಿ ಮಿತಿಯಾಗಿ 2.5-3 ಲಕ್ಷ ರೂ ಅನ್ನು ನಿಗದಿ ಮಾಡಾಗಿದೆ. 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿರಿಗೆ 5 ಲಕ್ಷ ರೂ ಎಕ್ಸೆಂಪ್ಷನ್ ಲಿಮಿಟ್ ಇದೆ. ಈ ಮಿತಿಯೊಳಗಿನ ಆದಾಯ ಹೊಂದಿರುವವರು ಐಟಿ ರಿಟರ್ನ್ ಫೈಲ್ ಮಾಡುವ ಅವಶ್ಯಕತೆ ಇರುವುದಿಲ್ಲ.
75 ವರ್ಷ ವಯಸ್ಸು ದಾಟಿದವರು ಕೇವಲ ಪಿಂಚಣಿ ಆದಾಯ ಮತ್ತು ಬ್ಯಾಂಕ್ ಬಡ್ಡಿ ಆದಾಯ ಮಾತ್ರ ಹೊಂದಿದ್ದರೆ ಐಟಿ ರಿಟರ್ನ್ ಸಲ್ಲಿಸುವ ಅಗತ್ಯ ಇರುವುದಿಲ್ಲ.
ಕೃಷಿಯಿಂದ ಮಾತ್ರ ಆದಾಯ ಹೊಂದಿರುವವರು ಐಟಿಆರ್ ಫೈಲ್ ಮಾಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಕೃಷಿಯೇತರ ಆದಾಯವು ವರ್ಷಕ್ಕೆ ಎರಡೂವರೆ ಲಕ್ಷ ರೂ ಮೀರಿದರೆ ಐಟಿ ರಿಟರ್ನ್ ಸಲ್ಲಿಸಬೇಕಾಗಬಹುದು.
ಇದನ್ನೂ ಓದಿ: ಐಟಿ ರಿಟರ್ನ್ಸ್ ವೇಳೆ ಸುಳ್ಳು ಮಾಹಿತಿ ಕೊಟ್ಟು ತೆರಿಗೆ ವಂಚಿಸುವವರನ್ನು ಜಾಲಾಡುತ್ತಿದೆ ಇನ್ಕಮ್ ಟ್ಯಾಕ್ಸ್ ಇಲಾಖೆ
ಅನಿವಾಸಿ ಭಾರತೀಯರು ಭಾರತದಲ್ಲಿ 2.5 ಲಕ್ಷ ರೂಗಿಂತ ಹೆಚ್ಚಿನ ಆದಾಯ ಹೊಂದಿದ್ದರೆ ಐಟಿಆರ್ ಫೈಲ್ ಮಾಡಬೇಕು. ಇಲ್ಲದಿದ್ದರೆ ಅದರ ಅವಶ್ಯಕತೆ ಇರುವುದಿಲ್ಲ.
ಟ್ಯಾಕ್ಸ್ ಎಕ್ಸೆಂಪ್ಷನ್ ಇರುವ ಹೂಡಿಕೆಗಳಿಂದ ಬರುವ ಆದಾಯ ಮಾತ್ರವನ್ನೇ ಹೊಂದಿರುವ ವ್ಯಕ್ತಿಗಳು ಐಟಿಆರ್ ಸಲ್ಲಿಸಬೇಕಿಲ್ಲ. ಉದಾಹರಣೆಗೆ, ಮ್ಯುಚುವಲ್ ಫಂಡ್ಗಳಿಂದ ಡಿವಿಡೆಂಡ್, ಪಿಪಿಎಫ್ ಬಡ್ಡಿ, ಸಂಬಂಧಿಕರಿಂದ ಗಿಫ್ಟ್ ಇತ್ಯಾದಿಗಳಿಂದ ಬರುವ ಆದಾಯಕ್ಕೆ ಟ್ಯಾಕ್ಸ್ ಎಕ್ಸೆಂಪ್ಷನ್ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Mon, 21 July 25