ITR: ಬ್ಯಾಂಕ್ ಅಕೌಂಟ್ ತಪ್ಪಾಗಿ ಹಾಕಿ ಐಟಿಆರ್ ಸಲ್ಲಿಸಿಬಿಟ್ರಾ? ಇಲ್ಲಿದೆ ಸರಿಪಡಿಸುವ ಉಪಾಯ

How To Apply For Refund Reissue: ಐಟಿ ರಿಟರ್ನ್ ಫೈಲ್ ಮಾಡುವಾಗ ಬ್ಯಾಂಕ್ ಖಾತೆ ನಮೂದಿಸಬೇಕು. ಒಂದು ವೇಳೆ ಇದನ್ನು ತಪ್ಪಾಗಿ ಹಾಗಿ ಫಾರ್ಮ್ ಸಲ್ಲಿಸಿಬಿಟ್ಟಿದ್ದರೆ ಟ್ಯಾಕ್ಸ್ ರೀಫಂಡ್ ಆಗುವುದಿಲ್ಲ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ವಿವರ ಇಲ್ಲಿದೆ...

ITR: ಬ್ಯಾಂಕ್ ಅಕೌಂಟ್ ತಪ್ಪಾಗಿ ಹಾಕಿ ಐಟಿಆರ್ ಸಲ್ಲಿಸಿಬಿಟ್ರಾ? ಇಲ್ಲಿದೆ ಸರಿಪಡಿಸುವ ಉಪಾಯ
ಆದಾಯ ತೆರಿಗೆ

Updated on: Jul 17, 2023 | 12:27 PM

ಆದಾಯ ತೆರಿಗೆ ರಿಟರ್ನ್ ಪಾವತಿಸಲು ಜುಲೈ 31 ಕೊನೆಯ ದಿನವೆಂದು ನಿಗದಿಯಾಗಿದೆ. ಇದು ಕಳೆದ ಹಣಕಾಸು ವರ್ಷದ ನಮ್ಮ ಆದಾಯ ಮತ್ತು ತೆರಿಗೆ ಪಾವತಿಯ ವಿವರವನ್ನು ಐಟಿ ಇಲಾಖೆಗೆ ತೋರಿಸುವ ಕ್ರಮ. ಬಹಳ ಎಚ್ಚರಿಕೆಯಿಂದ ಐಟಿಆರ್ ಫೈಲ್ (IT Returns Filing) ಮಾಡಬೇಕಾಗುತ್ತದೆ. ತೆರಿಗೆ ವಿಚಾರದಲ್ಲಿ ರೀಫಂಡ್ ಇದ್ದರೆ ನಮಗೆ ಅದು ಸಿಗಬೇಕಾದರೆ ಐಟಿಆರ್ ಅರ್ಜಿಯಲ್ಲಿ ಬ್ಯಾಂಕ್ ಅಕೌಂಟ್ ನಂಬರ್ ಹಾಕುವುದು ಕಡ್ಡಾಯ. ಈ ವೇಳೆ, ಅಕೌಂಟ್ ನಂಬರ್ ತಪ್ಪಾಗಿ ಹಾಕಿದರೆ ರೀಫಂಡ್ ಸಿಗುವುದಿಲ್ಲ.

ನೀವು ಬ್ಯಾಂಕ್ ನಂಬರ್ ತಪ್ಪಾಗಿ ನಮೂದಿಸಿದ ಐಟಿಆರ್ ಅನ್ನು ಸಬ್ಮಿಟ್ ಮಾಡಿಬಿಟ್ಟ ಬಳಿಕವೂ ಅದನ್ನು ಸರಿಪಡಿಸುವ ಅವಕಾಶ ಇದೆ. ಅರ್ಜಿಯಲ್ಲಿರುವ ವಿವರವನ್ನು ತಿದ್ದಿ ಮರು ಸಲ್ಲಿಕೆ ಮಾಡಲು ಸಾಧ್ಯ. ಅದರ ಕ್ರಮಗಳು ಇಲ್ಲಿವೆ

ಇದನ್ನೂ ಓದಿFinancial Life Tips: ಖರ್ಚು, ಉಳಿತಾಯ, ಸಾಲಕ್ಕೆ ಹಣಕಾಸು ಸೂತ್ರ ತಿಳಿದಿರಿ; ಜೀವನಪೂರ್ತಿ ನಿಶ್ಚಿಂತೆಯಿಂದಿರಿ

ರೀಫಂಡ್ ರೀ ಇಷ್ಯೂ ಮಾಡುವ ಕ್ರಮಗಳು

  • ಇನ್ಕಮ್ ಟ್ಯಾಕ್ಸ್ ವೆಬ್​ಸೈಟ್​ಗೆ ಲಾಗಿನ್ ಆಗಿ
  • ಮುಖ್ಯಪುಟದ ಮೆನುನಲ್ಲಿ ಸರ್ವಿಸಸ್​ಗೆ ಹೋಗಿ ಅದರ ಅಡಿಯಲ್ಲಿ ರೀಫಂಡ್ ರೀ ಇಷ್ಯೂ ಅನ್ನು ಆಯ್ಕೆ ಮಾಡಿ
  • ಕ್ರಿಯೇಟ್ ರೀಫಂಡ್ ರೀ ಇಷ್ಯೂ ರಿಕ್ವೆಸ್ ಅನ್ನು ಆರಿಸಿ
  • ರೀ ಇಷ್ಯೂ ಮಾಡಬೇಕಿರುವ ರೆಕಾರ್ಡ್ ಅನ್ನು ಆಯ್ಕೆಮಾಡಿ
  • ಪ್ರೀವ್ಯಾಲಿಡೇಟ್ ಆಗಿರುವ ಎಲ್ಲಾ ಬ್ಯಾಂಕ್ ಖಾತೆಗಳ ಪಟ್ಟಿ ಕಾಣಬಹುದು. ಯಾವ ಖಾತೆಗೆ ರೀಫಂಡ್ ಆಗಬೇಕು ಎಂಬುದನ್ನು ಆರಿಸಿಕೊಳ್ಳಿ. ಬ್ಯಾಂಕ್ ಖಾತೆಗಳು ಪ್ರೀವ್ಯಾಲಿಡೇಟ್ ಅಗಿಲ್ಲದೇ ಇದ್ದರೆ ಅದನ್ನು ಮಾಡಲು ಪ್ರೀ ವ್ಯಾಲಿಡೇಟ್ ಬಟನ್ ಕ್ಲಿಕ್ ಮಾಡಿ
  • ನಿಮಗೆ ರೀಫಂಡ್ ಹಣ ಜಮೆಯಾಗಬೇಕಾದ ಬ್ಯಾಂಕ್ ಖಾತೆ ಪ್ರೀವ್ಯಾಲಿಡೇಟ್ ಆಗಿರಬೇಕು.

ಇದನ್ನೂ ಓದಿeRupee: ಇರುಪಾಯಿಗೆ ಮೊದಲ ಬಾರಿಗೆ ನೊಂದಾಯಿಸುವುದು ಹೇಗೆ? ಅದರ ಆ್ಯಪ್, ವಹಿವಾಟು ಇತ್ಯಾದಿ ವಿವರ

ಐಟಿಆರ್ ಸರಿಪಡಿಸಿ ಮರು ಸಲ್ಲಿಕೆಯಾದ ಬಳಿಕ ನಿಮ್ಮ ಟ್ಯಾಕ್ಸ್ ರೀಫಂಡ್ ಆಗಿದೆಯಾ, ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಬಹುದು. ಇದಕ್ಕೆ ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ವೆಬ್​ಸೈಟ್​ಗೆ ಹೋಗಿ ಅಲ್ಲಿ, ಸ್ಟೇಟಸ್ ಆಫ್ ಟ್ಯಾಕ್ಸ್ ರಿಫಂಡ್ಸ್ ಟ್ಯಾಬ್​ಗೆ ಹೋಗಬಹುದು. ಇಲ್ಲಿ ರೀಫಂಡ್ ವಿವರ ಕಾಣುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ