EPFO: ಹಳೆಯ ಇಪಿಎಫ್ ಅಕೌಂಟ್​ಗಳನ್ನು ಹೊಸ ಅಕೌಂಟ್​​​ಗೆ ವಿಲೀನಗೊಳಿಸದಿದ್ದರೆ ಸಮಸ್ಯೆಗಳೇನು? ಇಲ್ಲಿದೆ ಡೀಟೇಲ್ಸ್

EPFO updates: ನೀವು ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳನ್ನು ಹೊಂದಿದ್ದು, ಅವನ್ನು ವಿಲೀನಗೊಳಿಸದಿದ್ದರೆ ಕೆಲ ಸಮಸ್ಯೆಗಳಾಗಬಹುದು. ಕೆಲಸ ಬದಲಿಸಿದಾಗ ಹಳೆಯ ಇಪಿಎಫ್ ಖಾತೆಯನ್ನು ಹೊಸ ಖಾತೆಯೊಂದಿಗೆ ವಿಲೀನಗೊಳಿಸಬೇಕು. ನೀವು ಒಂದಕ್ಕಿಂತ ಹೆಚ್ಚು ಯುಎಎನ್ ಪಡೆಯುವ ಸಂದರ್ಭವೂ ಬರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ...

EPFO: ಹಳೆಯ ಇಪಿಎಫ್ ಅಕೌಂಟ್​ಗಳನ್ನು ಹೊಸ ಅಕೌಂಟ್​​​ಗೆ ವಿಲೀನಗೊಳಿಸದಿದ್ದರೆ ಸಮಸ್ಯೆಗಳೇನು? ಇಲ್ಲಿದೆ ಡೀಟೇಲ್ಸ್
ಇಪಿಎಫ್

Updated on: May 19, 2025 | 4:31 PM

ನೀವು ಇಪಿಎಫ್ (EPF) ಸೌಲಭ್ಯ ಪಡೆಯುವ ಉದ್ಯೋಗಿಯಾಗಿದ್ದರೆ ಈ ಲೇಖನ ಬಹಳ ಉಪಯುಕ್ತ ಎನಿಸಬಹುದು. ನೀವು ಕೆಲಸಕ್ಕೆ ಸೇರಿದಾಗ ನಿಮ್ಮ ಹೆಸರಲ್ಲಿ ಇಪಿಎಫ್ ಅಕೌಂಟ್ ತೆರೆಯಲಾಗುತ್ತದೆ. ಅದರ ಜೊತೆಗೆ ಯುಎಎನ್ ನಂಬರ್ ಕೂಡ ಇರುತ್ತದೆ. ನೀವು ಕೆಲಸ ಬದಲಿಸಿದಾಗಲೂ ಹೊಸ ಇಪಿಎಫ್ ಅಕೌಂಟ್ ಸೃಷ್ಟಿಯಾಗುತ್ತದೆ. ಆದರೆ, ಯುಎಎನ್ ನಂಬರ್ ಅನ್ನು ಮುಂದುವರಿಸಿಕೊಂಡು ಹೋಗಬಹುದು. ಆದರೆ, ಹಳೆಯ ಇಪಿಎಫ್ ಖಾತೆಗಳನ್ನು ಹೊಸ ಖಾತೆಯೊಂದಿಗೆ ವಿಲೀನಗೊಳಿಸಬೇಕು. ಒಂದು ವೇಳೆ, ನಿಮ್ಮ ಹಳೆಯ ಇಪಿಎಫ್ ಖಾತೆಗಳು ಪ್ರತ್ಯೇಕವಾಗಿಯೇ ಉಳಿದುಹೋಗಿದ್ದರೆ ನಿಮಗೆ ಒಂದಷ್ಟು ತೊಡಕುಗಳಾಗಬಹುದು.

ಬಡ್ಡಿ ಆದಾಯಕ್ಕೆ ತೆರಿಗೆ

ಒಂದು ಇಪಿಎಫ್ ಖಾತೆಗೆ 36 ತಿಂಗಳು ಹಣ ಬೀಳದೇ ಇದ್ದಾಗ ಅದು ನಿಷ್ಕ್ರಿಯ ಅಕೌಂಟ್ ಎನಿಸುತ್ತದೆ. ಇದರಲ್ಲಿರುವ ಹಣಕ್ಕೆ ಸರ್ಕಾರದಿಂದ ವಾರ್ಷಿಕ ಬಡ್ಡಿ ಸಿಗುತ್ತಾ ಹೋಗುತ್ತದೆಯಾದರೂ ಆ ಬಡ್ಡಿ ಹಣಕ್ಕೆ ತೆರಿಗೆ ಅನ್ವಯ ಆಗುತ್ತದೆ.

ಇದನ್ನೂ ಓದಿ: ಇಪಿಎಫ್ ಟ್ರಾನ್ಸ್​​ಫರ್ ಈಗ ತ್ವರಿತ, ಸರಳ; ಫಾರ್ಮ್ 13ರಲ್ಲಿ ತುಸು ಬದಲಾವಣೆ

ಇದನ್ನೂ ಓದಿ
ಷೇರುಗಳ ಮೇಲೆ ಹೂಡಿಕೆ ಮಾಡುವವರೆ, ಈ ಪಂಚ ಪಾಠ ತಿಳಿದಿರಿ
ರೀಫಂಡ್​​ಗೋಸ್ಕರ ತಪ್ಪು ಐಟಿಆರ್ ಸಲ್ಲಿಸಿದರೆ ಏನಾಗುತ್ತೆ?
ಸಾಲ ಉಪಯೋಗಿಸಿ ಶ್ರೀಮಂತರಾಗೋದು ಹೇಗೆ?
ಹಳೆಯ ಬ್ಯಾಂಕ್ ಅಕೌಂಟ್ ಮುಚ್ಚಿದರೆ ಸಮಸ್ಯೆಯಾ?

ಒಂದಕ್ಕಿಂತ ಹೆಚ್ಚು ಯುಎಎನ್ ಸೃಷ್ಟಿಯಾಗುವ ಸಾಧ್ಯತೆ

ನೀವು ಕೆಲಸ ಬದಲಿಸಿದಾಗ ಹಿಂದಿನ ಉದ್ಯೋಗದಲ್ಲಿದ್ದ ಯುಎಎನ್ ನೀಡದೇ ಇದ್ದಾಗ ನಿಮ್ಮ ಹೆಸರಲ್ಲಿ ಹೊಸದಾಗಿ ಯುಎಎನ್ ಅನ್ನು ಸೃಷ್ಟಿಸುವ ಸಾಧ್ಯತೆ ಇರುತ್ತದೆ. ಒಂದಕ್ಕಿಂತ ಹೆಚ್ಚು ಯುಎಎನ್ ಇರಿಸಿಕೊಳ್ಳುವಂತಿಲ್ಲ. ನೀವು ಇಪಿಎಫ್ ಖಾತೆಗಳನ್ನು ವಿಲೀನಗೊಳಿಸಲು, ಕೆವೈಸಿ ವೆರಿಫಿಕೇಶನ್ ಮಾಡಲು, ಕ್ಲೇಮ್ ಪ್ರೋಸಸಿಂಗ್ ಮಾಡಲು ಇತ್ಯಾದಿ ಕೆಲಸಗಳಿಗೆ ತೊಂದರೆಯಾಗುತ್ತದೆ. ಒಂದೇ ಯುಎಎನ್ ನಂಬರ್ ಇದ್ದಲ್ಲಿ ಎಲ್ಲಾ ಇಪಿಎಫ್ ಅಕೌಂಟ್​​ಗಳನ್ನು ಒಂದೆಡೆ ವೀಕ್ಷಿಸಲು ಸಾಧ್ಯ.

ಫೈನಲ್ ಸೆಟಲ್ಮೆಂಟ್ ವೇಳೆ ತೊಂದರೆ…

ನೀವು ನಿವೃತ್ತರಾದಾಗ ಎಲ್ಲಾ ಇಪಿಎಫ್ ಹಣವನ್ನು ವಿತ್​​ಡ್ರಾ ಮಾಡಬಹುದು. ಆದರೆ, ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್ ಇದ್ದಾಗ, ನಿಮ್ಮ ಇತ್ತೀಚಿನ ಅಕೌಂಟ್ ಅನ್ನು ಮಾತ್ರವೇ ಹಣ ವಿತ್​​ಡ್ರಾಗೆ ಪರಿಗಣಿಸಲಾಗುತ್ತದೆ. ಹೀಗಾಗಿ, ಹಳೆಯ ಇಪಿಎಫ್ ಖಾತೆಗಳನ್ನು ಹೊಸ ಖಾತೆಯೊಂದಿಗೆ ವಿಲೀನಗೊಳಿಸುವುದು ಅವಶ್ಯಕ.

ಇದನ್ನೂ ಓದಿ: ಇಪಿಎಫ್​​ನ ಯುಎಎನ್ ನಂಬರ್ ಸಕ್ರಿಯಗೊಳಿಸಲು ಆಧಾರ್ ಫೇಸ್ ಅಥೆಂಟಿಕೇಶನ್ ಫೀಚರ್

ಇಪಿಎಫ್ ಹಣದಲ್ಲಿ ಅಡ್ವಾನ್ಸ್ ಪಡೆಯಲು ತೊಂದರೆ

ನಿಮಗೆ ತುರ್ತಾಗಿ ಹಣದ ಅವಶ್ಯಕತೆ ಇದ್ದಾಗ ಇಪಿಎಫ್ ಅಕೌಂಟ್​​ನಿಂದ ಭಾಗಶಃ ಹಣ ಹಿಂಪಡೆಯುವ ಅವಕಾಶ ಇರುತ್ತದೆ. ಈಗ ಸಕ್ರಿಯವಾಗಿರುವ ಅಕೌಂಟ್​​ನಿಂದ ಮಾತ್ರ ಅಡ್ವಾನ್ಸ್ ಹಣ ಪಡೆಯಬಹುದು. ನಿಮ್ಮ ಹಳೆಯ ಇಪಿಎಫ್ ಖಾತೆಗಳು ಪರಿಗಣಿತವಾಗುವುದಿಲ್ಲ. ಹೀಗಾಗಿ, ಎಲ್ಲ ಅಕೌಂಟ್​​ಗಳನ್ನು ವಿಲೀನಗೊಳಿಸುವುದು ಉತ್ತಮ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:31 pm, Mon, 19 May 25