
ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಅಥವಾ ಭಾರತೀಯ ಜೀವ ವಿಮಾ ನಿಗಮ (LIC) ಭಾರತದ ಅತಿದೊಡ್ಡ ಲಫ್ ಇನ್ಷೂರೆನ್ಸ್ ಕಂಪನಿ ಎನಿಸಿದೆ. ನಾನಾ ತರಹದ ಇನ್ಷೂರೆನ್ಸ್ ಪ್ಲಾನ್ಗಳನ್ನು ಇದು ಆಫರ್ ಮಾಡುತ್ತದೆ. ಎಲ್ಲಾ ರೀತಿಯ ಅಗತ್ಯಗಳಿಗೂ ಸೂಕ್ತವೆನಿಸುವ ಪ್ಲಾನ್ಗಳಿವೆ. ಅಪಘಾತ, ಅನಾರೋಗ್ಯ ಯಾವಾಗ ಬೇಕಾದರೂ ವಕ್ಕರಿಸಬಹುದು ಎನ್ನುವಂತಹ ಕಾಲಘಟ್ಟದಲ್ಲಿ ನಾವಿರುವ ಹಿನ್ನೆಲೆಯಲ್ಲಿ ನಮ್ಮನ್ನು ನಂಬಿಕೊಂಡಿರುವ ಕುಟುಂಬ ಸದಸ್ಯರಿಗೆ ಆಧಾರವಾಗಬಲ್ಲ ಇನ್ಷೂರೆನ್ಸ್ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಐಸಿಯ ಅಸಂಖ್ಯ ಇನ್ಷೂರೆನ್ಸ್ ಪ್ಲಾನ್ಗಳ ಪೈಕಿ ಸಂಬಳದಾರರಿಗೆ ಸೂಕ್ತವೆನಿಸುವ ಕೆಲ ಇನ್ಷೂರೆನ್ಸ್ ಪಾಲಿಸಿ ಬಗ್ಗೆ ಮಾಹಿತಿ ಇಲ್ಲಿದೆ.
ಹೆಚ್ಚು ರಿಸ್ಕ್ ತೆಗೆದುಕೊಂಡು ಹೆಚ್ಚು ರಿಟರ್ನ್ ಗಳಿಸಲು ಇಚ್ಛಿಸುವಂತಹವರಿಗೆ ಟೆಕ್ ಟರ್ಮ್ ಪ್ಲಾನ್ ಸೂಕ್ತವಾಗಿದೆ. ಇದನ್ನು ಆನ್ಲೈನ್ನಲ್ಲೇ ಖರೀದಿಸಬುದು. ಆಫ್ಲೈನ್ಗಿಂತ ಆನ್ಲೈನ್ನಲ್ಲೇ ಪ್ರೀಮಿಯಮ್ ಕಡಿಮೆ ಇರುತ್ತದೆ. ಹೆಚ್ಚು ಪ್ರೀಮಿಯಮ್ ಪಾವತಿಸಿ ಅಂತಿಮ ಮೊತ್ತವನ್ನು ದ್ವಿಗುಣಗೊಳಿಸಿಕೊಳ್ಳುವ ಆಯ್ಕೆಯೂ ಇದೆ.
ಇದನ್ನೂ ಓದಿ: ಕಾರು ಇನ್ಷೂರೆನ್ಸ್: ಅಪಘಾತವಾದ ಬಳಿಕ ನೀವು ಮೊದಲು ಮಾಡಬೇಕಾದ ಕೆಲಸ ಇದು…
ಸಾವು ಸಂಭವಿಸಿದಾಗ ನಾಮಿನಿಗಳಿಗೆ ಹೇಗೆ ಹಣ ವಿತರಣೆ ಆಗಬೇಕು ಎಂದು ಆಯ್ದುಕೊಳ್ಳಬಹುದು. ಲಂಪ್ಸಮ್ ಆಗಿ ಪಡೆಯಬಹುದು, ಅಥವಾ 5, 10 ಅಥವಾ 15 ವರ್ಷಗಳಿಗೆ ಕಂತು ಕಂತುಗಳಾಗಿ ಹಣ ಸಿಗುವಂತೆ ಮಾಡಬಹುದು. ಈ ಪಾಲಿಸಿಯಲ್ಲಿ ಆಕ್ಸಿಡೆಂಟ್ ರೈಡರ್ ಅನ್ನು ಹೆಚ್ಚುವರಿಯಾಗಿ ಪಡೆಯಬಹುದು.
ಈ ಪಾಲಿಸಿ ಮೆಚ್ಯೂರಿಟಿ ಆದಾಗ ಲಂಪ್ಸಮ್ ಹಣವು ಪಾಲಿಸಿದಾರರಿಗೆ ಸಿಗುತ್ತದೆ. ಒಂದು ವೇಳೆ ಮೆಚ್ಯೂರಿಟಿ ಆಗುವ ಮುನ್ನವೇ ಪಾಲಿಸಿದಾರ ಮೃತಪಟ್ಟರೆ ಅವರ ಕುಟುಂಬದವರಿಗೆ ಪರಿಹಾರ ನೀಡಲಾಗುತ್ತದೆ. ಈ ಪಾಲಿಸಿಯ ಇನ್ನೊಂದು ವಿಶೇಷತೆ ಎಂದರೆ, ಎಲ್ಐಸಿ ಸಂಸ್ಥೆ ಗಳಿಸುವ ಲಾಭದ ಆಧಾರದ ಮೇಲೆ ಬೋನಸ್ ಸಿಗುತ್ತದೆ. ಪ್ರೀಮಿಯಮ್ ಪಾವತಿ ಮೇಲೆ ಟ್ಯಾಕ್ಸ್ ರಿಬೇಟ್ ಕೂಡ ಸಿಗುತ್ತದೆ.
ಇದು 100 ವರ್ಷ ವಯಸ್ಸಿನವರೆಗೆ ಕವರೇಜ್ ನೀಡುವ ಅಪರೂಪದ ಇನ್ಷೂರೆನ್ಸ್ ಪ್ಲಾನ್. ಪ್ರೀಮಿಯಮ್ ಪಾವತಿ ಅವಧಿ ಮುಗಿದ ಬಳಿಕ ಈ ಪಾಲಿಸಿ ಮೆಚ್ಯೂರ್ ಆಗುವವರೆಗೂ ಪಾಲಿಸಿದಾರರಿಗೆ ವಾರ್ಷಿಕವಾಗಿ ಹಣ ಸಿಗುತ್ತಾ ಹೋಗುತ್ತದೆ. ಖಾತ್ರಿ ಮೊತ್ತದ ಶೇ. 8ರಷ್ಟು ಹಣವನ್ನು ಪ್ರತೀ ವರ್ಷ ನೀಡಲಾಗುತ್ತದೆ. ಜೊತೆಗೆ, ರಿವರ್ಶನರಿ ಬೋನಸ್ ಕೂಡ ಸಿಗುತ್ತಿರುತ್ತದೆ.
ಇದನ್ನೂ ಓದಿ: ಗೃಹಸಾಲ, ಬಹಳ ಕಡಿಮೆ ಆಗಿದೆ ಬಡ್ಡಿದರ; ಶೇ. 7.35ರಿಂದ ಇಂಟರೆಸ್ಟ್ ರೇಟ್ ಶುರು
ಇದರಲ್ಲಿ ಪಾಲಿಸಿ ಮೆಚ್ಯೂರ್ ಆದ ಬಳಿಕ ಪಾಲಿಸಿದಾರ ಸತ್ತರೆ ಕುಟುಂಬದವರಿಗೆ ಪರಿಹಾರ ಸಿಗುತ್ತದೆ. ಜೀವನ್ ಅಮರ್ ಸ್ಕೀಮ್ನಲ್ಲಿ ಮಹಿಳಾ ಸಂಬಳದಾರರಿಗೆ ಶೇ. 10ರಿಂದ 20ರಷ್ಟು ರಿಯಾಯಿತಿ ಸಿಗುತ್ತದೆ. ಖಾತ್ರಿ ಮೊತ್ತ ಹೆಚ್ಚಿದಂತೆ ಪ್ರೀಮಿಯಮ್ನಲ್ಲೂ ರಿಯಾಯಿತಿ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ