ಭಾರತೀಯ ಜೀವ ವಿಮಾ ನಿಗಮವು (LIC) ವೈಯಕ್ತಿಕ ವಾರ್ಷಿಕ ಯೋಜನೆ ‘ಸರಳ ಪಿಂಚಣಿ’ಯನ್ನು (Saral Pension Plan) ಇತ್ತೀಚೆಗೆ ಪರಿಚಯಿಸಿದೆ. ಇದೊಂದು ಸಿಂಗಲ್ ಪ್ರೀಮಿಯಂ ಯೋಜನೆಯಾಗಿದೆ. ಇದು ವಾರ್ಷಿಕ ಶೇಕಡಾ 5ರಷ್ಟು ಖಾತರಿಪಡಿಸಿದ ಬಡ್ಡಿ ಪ್ರಯೋಜನವನ್ನು ಆರಂಭದಿಂದಲೇ ನೀಡಲಿದೆ. ಈ ಯೋಜನೆಯಡಿ ಪಾಲಿಸಿದಾರರು ಪ್ರತಿ ತಿಂಗಳು, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಿಂಚಣಿ ಪಡೆಯಬಹುದಾಗಿದೆ.
ಅರ್ಹತೆಗೆ ಮಾನದಂಡಗಳು
ಎಲ್ಐಸಿ ಸರಳ ಪಿಂಚಣಿ ಯೋಜನೆ ವಿವರದ ಪ್ರಕಾರ, 40ರಿಂದ 80 ವರ್ಷ ವಯಸ್ಸಿನವರು ವಾರ್ಷಿಕ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.
ಪಿಂಚಣಿ ಲೆಕ್ಕಾಚಾರ ಹೀಗಿದೆ;
ಎಲ್ಐಸಿ ವೆಬ್ಸೈಟ್ನಲ್ಲಿ ವಿವರಿಸಿರುವ ಪ್ರಕಾರ, ಪಾಲಿಸಿದಾರರು ಕನಿಷ್ಠ 1,000 ರೂ. ತಿಂಗಳ ಪಿಂಚಣಿ ಅಥವಾ ವಾರ್ಷಿಕ 12,000 ಪಿಂಚಣಿ ಯೋಜನೆಯನ್ನು ಆಯ್ದುಕೊಳ್ಳಬಹುದಾಗಿದೆ. ಈ ಯೋಜನೆಗಾಗಿ ಪಾಲಿಸಿದಾರರು ಒಂದು ಬಾರಿಗೆ 2.50 ಲಕ್ಷ ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. 10 ಲಕ್ಷ ರೂ. ಮೊತ್ತದ ಪ್ರೀಮಿಯಂ ಪಾವತಿಸಿದರೆ ವಾರ್ಷಿಕ 50,250 ರೂ. ಪಿಂಚಣಿ ಪಡೆಯಬಹುದಾಗಿದೆ. ಇದೇ ರೀತಿ ವಾರ್ಷಿಕ 1 ಲಕ್ಷ ರೂ. ಪಿಂಚಣಿ ಪಡೆಯಲು ಪಾಲಿಸಿದಾರರು ಒಂದು ಬಾರಿಗೆ 20 ಲಕ್ಷ ರೂ. ಪ್ರೀಮಿಯಂ ಪಾವತಿಸಬೇಕು.
ಸರಳ ಪಿಂಚಣಿ ಯೋಜನೆಯ ಕುರಿತು ಇನ್ನಷ್ಟು…
ಸಾಲದ ಪ್ರಯೋಜನ: ಸರಳ ಪಿಂಚಣಿ ಯೋಜನೆಯಡಿ ಪ್ರೀಮಿಯಂ ಪಾವತಿಸಿದ 6 ತಿಂಗಳ ಬಳಿಕ ಸಾಲದ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಎಕ್ಸಿಟ್ ಪ್ಲಾನ್: ಪ್ರೀಮಿಯಂ ಪಾವತಿಸಿದ 6 ತಿಂಗಳ ಬಳಿಕ ಯೀಜನೆಯಿಂದ ಹಿಂದೆ ಸರಿಯಲು ಅವಕಾಶವಿದೆ.
ಬಡ್ಡಿ ದರ: ಸರಳ ಪಿಂಚಣಿ ಯೋಜನೆಯಲ್ಲಿ ವಾರ್ಷಿಕ ಶೇಕಡಾ 5ರ ಬಡ್ಡಿ ದರ ನಿಗದಿಪಡಿಸಲಾಗಿದೆ.
ಜೀವನಪೂರ್ತಿ ಪಿಂಚಣಿ ಪ್ರಯೋಜನ: ಜೀವನ ಪೂರ್ತಿ ಅನ್ವಯವಾಗುವ ಯೋಜನೆ ಇದಾಗಿದೆ. ಪಾಲಿಸಿದಾರರು ತಮ್ಮ ಜೀವಿತಾವಧಿಯ ಕೊನೆಯವರೆಗೂ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.
ನಾಮನಿರ್ದೇಶಿತರಿಗೆ ಡೆತ್ ಬೆನಿಫಿಟ್: ಎಲ್ಐಸಿ ಸರಳ ಪಿಂಚಣಿ ಯೋಜನೆಯ ಪಾಲಿಸಿದಾರರ ಮರಣದ ಬಳಿಕ, ನಾಮನಿರ್ದೇಶಿತರಿಗೆ ಮೂಲ ಪ್ರೀಮಿಯಂ ಅಥವಾ ಬೇಸ್ ಪ್ರೀಮಿಯಂ ಅನ್ನು ನೀಡಲಾಗುತ್ತದೆ.
ಮೆಚ್ಯೂರಿಟಿ ಪ್ರಯೋಜವಿಲ್ಲ: ಎಲ್ಐಸಿ ಸರಳ ಪಿಂಚಣಿ ಯೋಜನೆಯಲ್ಲಿ ಮೆಚ್ಯೂರಿಟಿ ಪ್ರಯೋಜನ ಇರುವುದಿಲ್ಲ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ಪಾಲಿಸಿದಾರರಿಗೆ ಜೀವನಪೂರ್ತಿ ಪಿಂಚಣಿ ನೀಡುವ ಕಾರಣ ಈ ಯೋಜನೆಯಲ್ಲಿ ಮೆಚ್ಯೂರಿಟಿ ಪ್ರಯೋಜನಗಳು ಇರುವುದಿಲ್ಲ.
ಇದನ್ನೂ ಓದಿ: ಎಲ್ಐಸಿ ‘ಧನ್ ವರ್ಷ 866’ರಲ್ಲಿ ಒಂದು ಬಾರಿ ಹೂಡಿಕೆಗೆ ದುಪ್ಪಟ್ಟು ಗಳಿಕೆ: ಇಲ್ಲಿದೆ ಮಾಹಿತಿ
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ