ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಅದ್ಭುತ ಗಳಿಕೆ ತಂದುಕೊಡುವ ಮೂಲಕ ಎಸ್ಇಎಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯ (SEL Manufacturing Company) ಷೇರುಗಳು ಹೆಚ್ಚು ಸದ್ದು ಮಾಡುತ್ತಿವೆ. 2022ರ ಏಪ್ರಿಲ್ನಲ್ಲಿ ಎನ್ಎಸ್ಇಯಲ್ಲಿ (NSE) ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1975.80 ರೂ.ನಂತೆ ವಹಿವಾಟು ನಡೆಸಿದ್ದ ಕಂಪನಿಯ ಷೇರು ನಂತರ ಇಳಿಮುಖವಾಗಿ ಸಾಗಿತ್ತು. ಆದರೆ, ಆರಂಭದಲ್ಲೇ ಹೂಡಿಕೆ ಮಾಡಿದ್ದವರಿಗೆ ಉತ್ತಮ ಗಳಿಕೆ ತಂದುಕೊಡುವ ಮೂಲಕ ಇಂದಿಗೂ ಮುಂಚೂಣಿಯಲ್ಲಿದೆ. ಕಳೆದ ಆರು ತಿಂಗಳುಗಳಲ್ಲಿ ಎನ್ಎಸ್ಇಯಲ್ಲಿ ಶೇಕಡಾ 40ರಷ್ಟು ಮೌಲ್ಯ ಕುಸಿದಿದೆ. ಆದರೆ ಕಳೆದ ಒಂದು ವರ್ಷದಲ್ಲಿ ಭಾರೀ ರಿಟರ್ನ್ಸ್ ತಂದುಕೊಟ್ಟ ಮಲ್ಟಿಬ್ಯಾಗರ್ ಸ್ಟಾಕ್ಗಳ (Multibagger Stock) ಸಾಲಿನಲ್ಲಿ ಗುರುತಿಸಿಕೊಂಡಿದೆ. 2.25 ರೂ. ಮುಖಬೆಲೆಯೊಂದಿಗೆ ಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸಿದ್ದ ಷೇರಿನ ಮುಖಬೆಲೆ ಈಗ 554.10 ರೂ. ಆಗಿದೆ.
ಎಸ್ಇಎಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯ ಷೇರು ಕಳೆದ ಒಂದು ತಿಂಗಳ ಅವಧಿಯಲ್ಲಿ ಶೇ 15ರಷ್ಟು ಕುಸಿತ ಕಂಡಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಷೇರು ಮೌಲ್ಯ 925 ರೂ.ನಿಂದ 554 ರೂ.ಗೆ ಇಳಿಕೆಯಾಗಿದೆ. ಕಳೆದ ಆರು ತಿಂಗಳಲ್ಲಿ ಶೇಕಡಾ 40ರಷ್ಟು ಕುಸಿತ ದಾಖಲಿಸಿದ ಹೊರತಾಗಿಯೂ ಈ ಷೇರು ಹೂಡಿಕೆದಾರರಿಗೆ ಕಳೆದ ಒಂದು ವರ್ಷದಲ್ಲಿ ಶೇಕಡಾ 750ರಷ್ಟು ಗಳಿಕೆ ತಂದುಕೊಟ್ಟಿದೆ.
ಇದನ್ನೂ ಓದಿ: Multibagger Penny Stock: ಒಂದೇ ತಿಂಗಳಲ್ಲಿ ಶೇ 200ರ ರಿಟರ್ನ್ಸ್ ಒದಗಿಸಿಕೊಟ್ಟಿದೆ 2 ರೂ.ಗಿಂತ ಕಡಿಮೆ ಬೆಲೆಯ ಈ ಷೇರು
2021ರ ಜನವರಿ 15ರಂದು 2.25 ರೂ. ಮುಖಬೆಲೆಯೊಂದಿಗೆ ಕಂಪನಿಯ ಷೇರುಗಳು ಎನ್ಎಸ್ಇಯಲ್ಲಿ ವಹಿವಾಟು ಆರಂಭಿಸಿತ್ತು. ಇಂದು ಷೇರಿನ ಮುಖಬೆಲೆ 554 ರೂ. ಆಗಿದೆ. ಅಂದರೆ, ಕಳೆದ ಎರಡು ವರ್ಷಗಳಲ್ಲಿ ಷೇರು ಶೇಕಡಾ 24,500 ಗಳಿಕೆ ತಂದುಕೊಟ್ಟಂತಾಗಿದೆ.
ಎಸ್ಇಎಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯ ಷೇರು ಇತಿಹಾಸವನ್ನು ನೋಡಿದರೆ ಮತ್ತು ಲೆಕ್ಕ ಹಾಕಿದರೆ, ಈ ಷೇರಿನಲ್ಲಿ ಒಂದು ತಿಂಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದವರ ಸಂಪತ್ತು ಇಂದು 85,000 ರೂ. ಆಗಿರಲಿದೆ. ಆರು ತಿಂಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಹೂಡಿಕೆ ಮಾಡಿದ್ದರೆ ಅದೀಗ 60,000 ರೂ. ಆಗಿದೆ. ಒಂದು ವರ್ಷ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಅದೀಗ 8.50 ಲಕ್ಷ ರೂ. ಆಗಿದೆ. ಅದೇ ರೀತಿ 2 ವರ್ಷಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದ್ದಲ್ಲಿ ಅದೀಗ 2.46 ಕೋಟಿ ರೂ. ಆಗಿರಲಿದೆ.
ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಬಿಎಸ್ಇ ಮತ್ತು ಎನ್ಎಸ್ ಎರಡರಲ್ಲೂ ಲಭ್ಯವಿವೆ. ಇದು ಹೈ ರಿಸ್ಕ್ ಕೆಟಗರಿಯಲ್ಲಿ ಗುರುತಿಸಲಾಗಿರುವ ಷೇರು ಆಗಿದ್ದು, ಹೆಚ್ಚೆಚ್ಚು ಮಾರುಕಟ್ಟೆ ಏರಿಳಿತಗಳನ್ನು ಕಾಣುವ ಸಾಧ್ಯತೆ ಇದೆ.