ಷೇರು ಮಾರುಕಟ್ಟೆಯಲ್ಲಿ ಬಹಳಷ್ಟು ಮಲ್ಟಿಬ್ಯಾಗರ್ ಸ್ಟಾಕ್ಗಳನ್ನು ನೋಡುತ್ತಿರುತ್ತೇವೆ. ಒಂದು ವರ್ಷದಲ್ಲಿ 10 ಪಟ್ಟು ಬೆಲೆ ಪಡೆದಿರುವುದು, ಎರಡು ವರ್ಷದಲ್ಲಿ 15 ಪಟ್ಟು ಬೆಲೆ ಪಡೆದಿರುವುದು ಹೀಗೆ ಬಹಳಷ್ಟು ಷೇರುಗಳು ಗಮನ ಸೆಳೆಯುತ್ತವೆ. ಇಷ್ಟು ಎತ್ತರಕ್ಕೆ ಬೆಳೆದ ಬಳಿಕ ಈ ಷೇರುಗಳತ್ತ ಬಹಳಷ್ಟು ಜನರ ಗಮನ ನೆಡುತ್ತದೆ. ಆದರೆ, ಬೆಳವಣಿಗೆ ಓಟದ ಆರಂಭದಲ್ಲೇ ಈ ಷೇರಿನ ಮೇಲೆ ಹೂಡಿಕೆ ಮಾಡಿದವರಿಗೆ ಎಲ್ಲರಿಗಿಂತ ಹೆಚ್ಚು ಲಾಭ ಸಿಗುತ್ತದೆ. ಹಾಗಿದ್ದರೆ, ಇಂಥ ಮಲ್ಟಿಬ್ಯಾಗರ್ ಷೇರುಗಳನ್ನು ಅದು ಏರಿಕೆಯ ಆರಂಭಿಕ ಹಂತದಲ್ಲೇ ಗುರುತಿಸುವುದು ಹೇಗೆ? ಆದರೆ, ಎಲ್ಲಕ್ಕಿಂತ ಮೊದಲು ನೀವು ರಿಸ್ಕ್ ಅಂಶ ತಿಳಿದಿರಬೇಕು. ಸಂಭಾವ್ಯ ಮಲ್ಟಿಬ್ಯಾಗರ್ ಷೇರುಗಳನ್ನು ನೀವು ಗುರುತಿಸಬಹುದಾದರೂ, ಅದರಲ್ಲಿ ಹೂಡಿಕೆ ಮಾಡಿದರೆ ನಿಶ್ಚಿತವಾಗಿ ರಿಟರ್ನ್ಸ್ ಸಿಗುತ್ತೆ ಎಂದು ಖಾತ್ರಿಯಾಗಿ ಹೇಳಲು ಸಾಧ್ಯವಿಲ್ಲ. ಅದು ಈಕ್ವಿಟಿ ಮಾರುಕಟ್ಟೆಯ ರಿಸ್ಕ್ ಫ್ಯಾಕ್ಟರ್. ನೀವು ಕನಿಷ್ಠ ರಿಸ್ಕ್ ತೆಗೆದುಕೊಂಡು, ಹೂಡಿಕೆಗೆ ಮುಂದಾಗಬಹುದು.
ಷೇರುಗಳ ತಾಂತ್ರಿಕ ಅಂಶಗಳನ್ನು ಅವಲೋಕಿಸುವುದನ್ನು ನೀವು ಕಲಿಯಬೇಕು. ಪಿಇ ರೇಶಿಯೋ (ಪ್ರೈಸ್ ಟು ಅರ್ನಿಂಗ್ಸ್), ಪಿಬಿ ರೇಶಿಯೋ (ಪ್ರೈಸ್ ಟು ಬುಕ್) ಈ ಮೆಟ್ರಿಕ್ಗಳನ್ನು ನೀವು ಗಮನಿಸಬೇಕು. ಷೇರಿನ ಬೆಲೆಗಿಂತ ಅದರ ಪಿಇ ರೇಶಿಯೋ ಹೆಚ್ಚು ವೇಗದಲ್ಲಿ ಏರುತ್ತಿದ್ದರೆ ಅಂಥ ಷೇರು ಅಂಡರ್ವ್ಯಾಲ್ಯೂಡ್ ಎನಿಸುತ್ತದೆ. ಮುಂದಿನ ದಿನಗಳಲ್ಲಿ ಷೇರಿನ ಬೆಲೆ ಏರಿಕೆಯ ಅವಕಾಶ ಹೆಚ್ಚಿರುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಶಾಲೆ ಫೀಸ್, ಆಸ್ಪತ್ರೆ ಬಿಲ್ ದುಬಾರಿ ಯಾಕೆ? ಜೋಹೋ ಸಿಇಒ ಬಿಚ್ಚಿಟ್ಟಿದ್ದಾರೆ ಪ್ರಮುಖ ಕಾರಣ
ದೇಶದಲ್ಲಿ ಯಾವ್ಯಾವ ಕ್ಷೇತ್ರಗಳಿಗೆ ಹೆಚ್ಚಿನ ಬೆಳವಣಿಗೆಗೆ ಅವಕಾಶ ಇದೆ ಎಂಬುದನ್ನು ಗಮನಿಸಿ. ಮ್ಯಾನುಫ್ಯಾಕ್ಚರಿಂಗ್, ಆಟೊಮೊಬೈಲ್, ಎಫ್ಎಂಸಿಜಿ, ಎಲೆಕ್ಟ್ರಾನಿಕ್ಸ್, ಇನ್ಫ್ರಾಸ್ಟ್ರಕ್ಚರ್, ರಿಯಲ್ ಎಸ್ಟೇಟ್ ಇತ್ಯಾದಿ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದಬಲ್ಲಂಥವನ್ನು ಶಾರ್ಟ್ ಲಿಸ್ಟ್ ಮಾಡಿಕೊಂಡು, ಅದರಲ್ಲಿರುವಂಥ ಕಂಪನಿಗಳನ್ನು ಅವಲೋಕಿಸಿ.
ಷೇರಿನ ಟೆಕ್ನಿಕಲ್ ಮೆಟ್ರಿಕ್ಸ್ನಂತೆ ಆ ಕಂಪನಿಯ ಹಣಕಾಸು ಮೆಟ್ರಿಕ್ಸ್ ಕೂಡ ಬಹಳ ಮುಖ್ಯ. ನೀವು ಕಂಪನಿಯ ಹಣಕಾಸು ಪೂರ್ವಾಪರ ಪರಿಶೀಲಿಸಿ. ಅಂದರೆ, ವಿವಿಧ ವರ್ಷಗಳಿಂದ ಆ ಕಂಪನಿಯ ಹಣಕಾಸು ಪರಿಸ್ಥಿತಿ ಮತ್ತು ಓಟ ಹೇಗಿದೆ ಎಂಬುದನ್ನು ಗಮನಿಸಿ. ಆದಾಯ ಎಷ್ಟು ಹೆಚ್ಚುತ್ತಾ ಬಂದಿದೆ, ಆ ಆದಾಯದಲ್ಲಿ ನಿವ್ವಳ ಲಾಭ ಎಷ್ಟು ಪ್ರಮಾಣ ಇದೆ, ಸಾಲ ಎಷ್ಟು ಮಾಡಿದೆ ಇತ್ಯಾದಿ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ.
ಇದನ್ನೂ ಓದಿ: ಬ್ಯಾಂಕುಗಳು ಸಾಲಕ್ಕಾಗಿ ನಿಮ್ಮನ್ನು ಕೈಬೀಸಿ ಕರೆಯುವಂತೆ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ? ಇಲ್ಲಿದೆ ಟಿಪ್ಸ್
ಕೊನೆಯಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ನೀವೆಷ್ಟೇ ಆಳವಾಗಿ ಒಂದು ಕಂಪನಿಯನ್ನು ಅಧ್ಯಯನ ಮಾಡಿದರೂ ಕಾರಣಾಂತರಗಳಿಂದ ಅದು ನಿರೀಕ್ಷಿತ ರೀತಿಯಲ್ಲಿ ಬೆಳವಣಿಗೆ ಹೊಂದದೇ ಹೋಗಬಹುದು. ಅನಿರೀಕ್ಷಿತವಾಗಿ ಕುಂದಿದ ಕಂಪನಿಗಳ ಉದಾಹರಣೆ ಹಲವುಂಟು. ಈ ರಿಸ್ಕ್ ಅಂಶವನ್ನು ಹೂಡಿಕೆದಾರರು ಸದಾ ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ