ಬ್ಯಾಂಕುಗಳು ಸಾಲಕ್ಕಾಗಿ ನಿಮ್ಮನ್ನು ಕೈಬೀಸಿ ಕರೆಯುವಂತೆ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ? ಇಲ್ಲಿದೆ ಟಿಪ್ಸ್

Tips to increase credit score: ಸುಲಭವಾಗಿ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಹೆಚ್ಚಿನ ಮಟ್ಟದಲ್ಲಿರುವುದು ಉತ್ತಮ. 300ರಿಂದ 850 ಶ್ರೇಣಿಯಲ್ಲಿರುವ ಕ್ರೆಡಿಟ್ ಸ್ಕೋರ್ 650 ಅಂಕಗಳಿಗಿಂತ ಹೆಚ್ಚು ಇದ್ದರೆ ಉತ್ತಮ. ಯಾವುದೇ ಸಾಲ ಮಾಡದ ಮತ್ತು ಕ್ರೆಡಿಟ್ ಕಾರ್ಡ್ ಉಪಯೋಗಿಸದ ವ್ಯಕ್ತಿಗಳು ಕ್ರೆಡಿಟ್ ಸ್ಕೋರ್ ಸಂಪಾದಿಸುವುದು ಹೇಗೆ ಎನ್ನುವ ಟಿಪ್ಸ್ ಇಲ್ಲಿದೆ.

ಬ್ಯಾಂಕುಗಳು ಸಾಲಕ್ಕಾಗಿ ನಿಮ್ಮನ್ನು ಕೈಬೀಸಿ ಕರೆಯುವಂತೆ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ? ಇಲ್ಲಿದೆ ಟಿಪ್ಸ್
ಕ್ರೆಡಿಟ್ ಸ್ಕೋರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 18, 2024 | 6:51 PM

ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ. ಉತ್ತಮ ಸ್ಕೋರ್ ಇದ್ದರೆ ನಿಮಗೆ ಸುಲಭವಾಗಿ ಸಾಲ ಸಿಗುತ್ತದೆ. ಅದರಲ್ಲೂ ತುರ್ತಾಗಿ ನಿಮಗೆ ಪರ್ಸನಲ್ ಲೋನ್ ಬೇಕಾಗಿದ್ದರೆ ಕ್ರೆಡಿಟ್ ಸ್ಕೋರ್ ಬಹಳ ಸಹಾಯಕ್ಕೆ ಬರುತ್ತದೆ. ಕಡಿಮೆ ಬಡ್ಡಿದರಕ್ಕೆ ಹೆಚ್ಚು ಮೊತ್ತದ ಸಾಲ ಕೊಡಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಿದ್ಧ ಇರುತ್ತವೆ. ಈಗ ವೃತ್ತಿಜೀವನ ಆರಂಭಿಸುತ್ತಿರುವ ಯುವಕರು ಕ್ರೆಡಿಟ್ ಸ್ಕೋರ್​ನ ಮಹತ್ವ ಅರಿಯುವುದು ಮುಖ್ಯ. ಸಾಲದ ಅವಶ್ಯಕತೆ ಈಗ ಇಲ್ಲವಾದರೂ ಭವಿಷ್ಯದ ದೃಷ್ಟಿಯಿಂದ ಹಣಕಾಸು ಆರೋಗ್ಯದ ಸಂಕೇತವಾಗಿರುವ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುವುದು ಅವಶ್ಯಕ. ಈ ಹಿನ್ನೆಲೆಯಲ್ಲಿ ಕ್ರೆಡಿಟ್ ಸ್ಕೋರ್ ಹೆಚ್ಚಿಸುವ ಕೆಲ ಸರಳ ಉಪಾಯಗಳನ್ನು ಯಾರು ಬೇಕಾದರೂ ಅಳವಡಿಸಿಕೊಳ್ಳಬಹುದು.

ಕ್ರೆಡಿಟ್ ಸ್ಕೋರ್ ಎಂದರೇನು?

ನೀವು ಸಾಲ ಮರುಪಾವತಿ, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಇತ್ಯಾದಿಯನ್ನು ಹೇಗೆ ಮಾಡುತ್ತೀರಿ ಮತ್ತು ವಿಳಂಬರಹಿತವಾಗಿ ಮಾಡುತ್ತೀರಿ ಎಂಬುದರ ಮೇಲೆ ಕ್ರೆಡಿಟ್ ಸ್ಕೋರ್ ಅನ್ನು ಏಜೆನ್ಸಿಗಳು ನೀಡುತ್ತವೆ. 300 ರಿಂದ 850 ಅಂಕಗಳ ಶ್ರೇಣಿಯಲ್ಲಿ ಸ್ಕೋರ್ ಇರುತ್ತದೆ. 650ಕ್ಕಿಂತ ಮೇಲ್ಪಟ್ಟ ಸ್ಕೋರ್ ಅನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಹಣಕಾಸು ಸ್ವಾತಂತ್ರ್ಯ ಕಲ್ಪಿಸುವ FIRE ಪ್ಲಾನ್; ಜೀವನ ಆನಂದಿಸಲು ಇದು ಸೂಪರ್ ಸೂತ್ರವಾ?

ಯುವಕರಿಗೆ ಕ್ರೆಡಿಟ್ ಸ್ಕೋರ್ ಹೆಚ್ಚಿಸುವ ಟಿಪ್ಸ್

ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಳಸದೇ ಇದ್ದವರಿಗೆ ಕ್ರೆಡಿಟ್ ಸ್ಕೋರ್ ಇರುವುದಿಲ್ಲ. ಅವರ ಸಿಬಿಲ್ ಸ್ಕೋರ್ ಮೈನಸ್ 1 ಎಂದು ತೋರಿಸಬಹುದು. ಇಂಥವರು ಕ್ರೆಡಿಟ್ ಸ್ಕೋರ್ ಪಡೆಯುವುದು ಹೇಗೆ ಎನ್ನುವ ಟಿಪ್ಸ್ ಇಲ್ಲಿದೆ…

ಟಿಪ್ಸ್ 1: ಸಣ್ಣ ಸಾಲಗಳನ್ನು ಮಾಡಿ

ನೀವು ಕ್ರೆಡಿಟ್ ಸ್ಕೋರ್ ಪಡೆಯಲು ಸಾಲ ಮಾಡಿ ಅದನ್ನು ತೀರಿಸುವುದು ಅವಶ್ಯಕ. ಸಣ್ಣ ಮೊತ್ತದ ಸಾಲ ಮಾಡಿ ಅದನ್ನು ಸಕಾಲಕ್ಕೆ ತೀರಿಸಿರಿ. ಉದಾಹರಣೆಗೆ, ಐವತ್ತು ಸಾವಿರ ರೂ ಸಾಲ ಪಡೆದು, ಮಾಸಿಕ ಇಎಂಐ ಅನ್ನು ತಪ್ಪದೇ ಕಟ್ಟಿರಿ ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತಾ ಹೋಗುತ್ತದೆ. ಅದು ಮುಗಿದ ಬಳಿಕ ಮತ್ತೆ ಸಣ್ಣದಾದ ಹೊಸ ಸಾಲ ಮಾಡಬಹುದು. ಇವೆಲ್ಲವೂ ಕ್ರೆಡಿಟ್ ಸ್ಕೋರ್ ಹೆಚ್ಚಳಕ್ಕೆ ಸಹಾಯವಾಗುತ್ತದೆ.

ಇದನ್ನೂ ಓದಿ: ಒಂದೂವರೆ ಲಕ್ಷ ರೂನಲ್ಲಿ ಸ್ವಲ್ಪವೂ ಉಳಿಸಲು ಆಗಲ್ವ? ಮೂರು ಜನರ ಕುಟುಂಬಕ್ಕೆ ಎಲ್ಲಿ ಸಾಲುತ್ತೆ ಈ ಸಂಬಳ? ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಚರ್ಚೆ

ಟಿಪ್ಸ್ 2: ಕ್ರೆಡಿಟ್ ಕಾರ್ಡ್

ನೀವು ಕ್ರೆಡಿಟ್ ಕಾರ್ಡ್ ಪಡೆದು ಅದನ್ನು ಸ್ವಲ್ಪ ಸ್ವಲ್ಪವೇ ಬಳಸಿರಿ. ಅದರ ಬಿಲ್ ಅನ್ನು ಸಕಾಲಕ್ಕೆ ಪಾವತಿಸುವುದನ್ನು ಮರೆಯಬೇಡಿ. ನಿಮ್ಮ ಕಾರ್ಡ್​ನ ಕ್ರೆಡಿಟ್ ಮಿತಿಯ ಶೇ. 40ಕ್ಕಿಂತ ಕಡಿಮೆ ಮೊತ್ತವನ್ನು ಮಾತ್ರ ವ್ಯಯಿಸಿ. ನಿಮಗೆ ಹೆಚ್ಚು ಶಾಪಿಂಗ್ ಮಾಡಬೇಕೆಂದಿದ್ದರೆ ಇನ್ನೊಂದು ಕಾರ್ಡ್ ಪಡೆಯಿರಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ