AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಿಮೆ ಬೆಲೆಗೆ ಒಳ್ಳೆಯ ಲಾಭ ತರಬಲ್ಲ ಮಲ್ಟಿಬ್ಯಾಗರ್ ಷೇರು ಪತ್ತೆ ಮಾಡುವುದು ಹೇಗೆ?

Finding multibagger stocks: ಕಡಿಮೆ ಅವಧಿಯಲ್ಲಿ ಹಲವು ಪಟ್ಟು ಬೆಲೆ ಹೆಚ್ಚಳ ಕಾಣುವ ಷೇರುಗಳು ಮಲ್ಟಿಬ್ಯಾಗರ್ ಎನಿಸುತ್ತವೆ. ಆದರೆ, ಈ ಷೇರು ಈ ಪರಿ ಬೆಳವಣಿಗೆ ಹೊಂದುವ ಮುನ್ನ ಅದನ್ನು ಗುರುತಿಸುವವರ ಸಂಖ್ಯೆ ಬಹಳ ಕಡಿಮೆ. ಸಂಭಾವ್ಯ ಮಲ್ಟಿಬ್ಯಾಗರ್ ಷೇರುಗಳನ್ನು ಗುರುತಿಸಲು ಒಂದಷ್ಟು ಟಿಪ್ಸ್ ಇಲ್ಲಿದೆ.

ಕಡಿಮೆ ಬೆಲೆಗೆ ಒಳ್ಳೆಯ ಲಾಭ ತರಬಲ್ಲ ಮಲ್ಟಿಬ್ಯಾಗರ್ ಷೇರು ಪತ್ತೆ ಮಾಡುವುದು ಹೇಗೆ?
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 19, 2024 | 2:34 PM

Share

ಷೇರು ಮಾರುಕಟ್ಟೆಯಲ್ಲಿ ಬಹಳಷ್ಟು ಮಲ್ಟಿಬ್ಯಾಗರ್ ಸ್ಟಾಕ್​ಗಳನ್ನು ನೋಡುತ್ತಿರುತ್ತೇವೆ. ಒಂದು ವರ್ಷದಲ್ಲಿ 10 ಪಟ್ಟು ಬೆಲೆ ಪಡೆದಿರುವುದು, ಎರಡು ವರ್ಷದಲ್ಲಿ 15 ಪಟ್ಟು ಬೆಲೆ ಪಡೆದಿರುವುದು ಹೀಗೆ ಬಹಳಷ್ಟು ಷೇರುಗಳು ಗಮನ ಸೆಳೆಯುತ್ತವೆ. ಇಷ್ಟು ಎತ್ತರಕ್ಕೆ ಬೆಳೆದ ಬಳಿಕ ಈ ಷೇರುಗಳತ್ತ ಬಹಳಷ್ಟು ಜನರ ಗಮನ ನೆಡುತ್ತದೆ. ಆದರೆ, ಬೆಳವಣಿಗೆ ಓಟದ ಆರಂಭದಲ್ಲೇ ಈ ಷೇರಿನ ಮೇಲೆ ಹೂಡಿಕೆ ಮಾಡಿದವರಿಗೆ ಎಲ್ಲರಿಗಿಂತ ಹೆಚ್ಚು ಲಾಭ ಸಿಗುತ್ತದೆ. ಹಾಗಿದ್ದರೆ, ಇಂಥ ಮಲ್ಟಿಬ್ಯಾಗರ್ ಷೇರುಗಳನ್ನು ಅದು ಏರಿಕೆಯ ಆರಂಭಿಕ ಹಂತದಲ್ಲೇ ಗುರುತಿಸುವುದು ಹೇಗೆ? ಆದರೆ, ಎಲ್ಲಕ್ಕಿಂತ ಮೊದಲು ನೀವು ರಿಸ್ಕ್ ಅಂಶ ತಿಳಿದಿರಬೇಕು. ಸಂಭಾವ್ಯ ಮಲ್ಟಿಬ್ಯಾಗರ್ ಷೇರುಗಳನ್ನು ನೀವು ಗುರುತಿಸಬಹುದಾದರೂ, ಅದರಲ್ಲಿ ಹೂಡಿಕೆ ಮಾಡಿದರೆ ನಿಶ್ಚಿತವಾಗಿ ರಿಟರ್ನ್ಸ್ ಸಿಗುತ್ತೆ ಎಂದು ಖಾತ್ರಿಯಾಗಿ ಹೇಳಲು ಸಾಧ್ಯವಿಲ್ಲ. ಅದು ಈಕ್ವಿಟಿ ಮಾರುಕಟ್ಟೆಯ ರಿಸ್ಕ್ ಫ್ಯಾಕ್ಟರ್. ನೀವು ಕನಿಷ್ಠ ರಿಸ್ಕ್ ತೆಗೆದುಕೊಂಡು, ಹೂಡಿಕೆಗೆ ಮುಂದಾಗಬಹುದು.

ಸಂಭಾವ್ಯ ಮಲ್ಟಿಬ್ಯಾಗರ್ ಸ್ಟಾಕ್​ಗಳನ್ನು ಗುರುತಿಸುವುದು ಹೀಗೆ…

ಷೇರುಗಳ ತಾಂತ್ರಿಕ ಅಂಶಗಳನ್ನು ಅವಲೋಕಿಸುವುದನ್ನು ನೀವು ಕಲಿಯಬೇಕು. ಪಿಇ ರೇಶಿಯೋ (ಪ್ರೈಸ್ ಟು ಅರ್ನಿಂಗ್ಸ್), ಪಿಬಿ ರೇಶಿಯೋ (ಪ್ರೈಸ್ ಟು ಬುಕ್) ಈ ಮೆಟ್ರಿಕ್​ಗಳನ್ನು ನೀವು ಗಮನಿಸಬೇಕು. ಷೇರಿನ ಬೆಲೆಗಿಂತ ಅದರ ಪಿಇ ರೇಶಿಯೋ ಹೆಚ್ಚು ವೇಗದಲ್ಲಿ ಏರುತ್ತಿದ್ದರೆ ಅಂಥ ಷೇರು ಅಂಡರ್​ವ್ಯಾಲ್ಯೂಡ್ ಎನಿಸುತ್ತದೆ. ಮುಂದಿನ ದಿನಗಳಲ್ಲಿ ಷೇರಿನ ಬೆಲೆ ಏರಿಕೆಯ ಅವಕಾಶ ಹೆಚ್ಚಿರುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಶಾಲೆ ಫೀಸ್, ಆಸ್ಪತ್ರೆ ಬಿಲ್ ದುಬಾರಿ ಯಾಕೆ? ಜೋಹೋ ಸಿಇಒ ಬಿಚ್ಚಿಟ್ಟಿದ್ದಾರೆ ಪ್ರಮುಖ ಕಾರಣ

ಭವಿಷ್ಯದಲ್ಲಿ ಉತ್ತಮ ಆದ್ಯತೆ ಹೊಂದಿರುವ ಕ್ಷೇತ್ರಗಳನ್ನು ಅವಲೋಕಿಸಿ…

ದೇಶದಲ್ಲಿ ಯಾವ್ಯಾವ ಕ್ಷೇತ್ರಗಳಿಗೆ ಹೆಚ್ಚಿನ ಬೆಳವಣಿಗೆಗೆ ಅವಕಾಶ ಇದೆ ಎಂಬುದನ್ನು ಗಮನಿಸಿ. ಮ್ಯಾನುಫ್ಯಾಕ್ಚರಿಂಗ್, ಆಟೊಮೊಬೈಲ್, ಎಫ್​ಎಂಸಿಜಿ, ಎಲೆಕ್ಟ್ರಾನಿಕ್ಸ್, ಇನ್​ಫ್ರಾಸ್ಟ್ರಕ್ಚರ್, ರಿಯಲ್ ಎಸ್ಟೇಟ್ ಇತ್ಯಾದಿ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದಬಲ್ಲಂಥವನ್ನು ಶಾರ್ಟ್ ಲಿಸ್ಟ್ ಮಾಡಿಕೊಂಡು, ಅದರಲ್ಲಿರುವಂಥ ಕಂಪನಿಗಳನ್ನು ಅವಲೋಕಿಸಿ.

ಕಂಪನಿಯ ಹಣಕಾಸು ಸ್ಥಿತಿ ಹೇಗಿದೆ ನೋಡಿ…

ಷೇರಿನ ಟೆಕ್ನಿಕಲ್ ಮೆಟ್ರಿಕ್ಸ್​ನಂತೆ ಆ ಕಂಪನಿಯ ಹಣಕಾಸು ಮೆಟ್ರಿಕ್ಸ್ ಕೂಡ ಬಹಳ ಮುಖ್ಯ. ನೀವು ಕಂಪನಿಯ ಹಣಕಾಸು ಪೂರ್ವಾಪರ ಪರಿಶೀಲಿಸಿ. ಅಂದರೆ, ವಿವಿಧ ವರ್ಷಗಳಿಂದ ಆ ಕಂಪನಿಯ ಹಣಕಾಸು ಪರಿಸ್ಥಿತಿ ಮತ್ತು ಓಟ ಹೇಗಿದೆ ಎಂಬುದನ್ನು ಗಮನಿಸಿ. ಆದಾಯ ಎಷ್ಟು ಹೆಚ್ಚುತ್ತಾ ಬಂದಿದೆ, ಆ ಆದಾಯದಲ್ಲಿ ನಿವ್ವಳ ಲಾಭ ಎಷ್ಟು ಪ್ರಮಾಣ ಇದೆ, ಸಾಲ ಎಷ್ಟು ಮಾಡಿದೆ ಇತ್ಯಾದಿ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ.

ಇದನ್ನೂ ಓದಿ: ಬ್ಯಾಂಕುಗಳು ಸಾಲಕ್ಕಾಗಿ ನಿಮ್ಮನ್ನು ಕೈಬೀಸಿ ಕರೆಯುವಂತೆ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ? ಇಲ್ಲಿದೆ ಟಿಪ್ಸ್

ಕೊನೆಯಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ನೀವೆಷ್ಟೇ ಆಳವಾಗಿ ಒಂದು ಕಂಪನಿಯನ್ನು ಅಧ್ಯಯನ ಮಾಡಿದರೂ ಕಾರಣಾಂತರಗಳಿಂದ ಅದು ನಿರೀಕ್ಷಿತ ರೀತಿಯಲ್ಲಿ ಬೆಳವಣಿಗೆ ಹೊಂದದೇ ಹೋಗಬಹುದು. ಅನಿರೀಕ್ಷಿತವಾಗಿ ಕುಂದಿದ ಕಂಪನಿಗಳ ಉದಾಹರಣೆ ಹಲವುಂಟು. ಈ ರಿಸ್ಕ್ ಅಂಶವನ್ನು ಹೂಡಿಕೆದಾರರು ಸದಾ ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ