
ಮ್ಯುಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವಾಗ ನೀವು ಫಂಡ್ನ ಎನ್ಎವಿಯನ್ನು (Mutual Fund NAV) ಗಮನಿಸಿರಬಹುದು. ಈ ಎನ್ಎವಿ ಎಂಬುದು ಫಂಡ್ನ ಒಂದು ಯುನಿಟ್ನ ಬೆಲೆ. ಯುನಿಟ್ಗಳ ಪ್ರಮಾಣದಲ್ಲಿ ನೀವು ಫಂಡ್ಗಳಲ್ಲಿ ಹೂಡಿಕೆ ಮಾಡುತ್ತೀರಿ. ಬಹಳಷ್ಟು ಜನರು ಮ್ಯೂಚುವಲ್ ಫಂಡ್ನ ಎನ್ಎವಿಯನ್ನು ಷೇರುಬೆಲೆಗೆ ಹೋಲಿಸುವುದುಂಟು. ಆದರೆ, ಇದು ಅರ್ಧ ಸತ್ಯ ಮಾತ್ರ. ಹೆಚ್ಚು ಬೆಲೆಯ ಎನ್ಎವಿ ಇರುವ ಮ್ಯುಚುವಲ್ ಫಂಡ್ ಬಹಳ ದುಬಾರಿ ಎಂದು ಕೆಲವರು ತಪ್ಪಾಗಿ ಭಾವಿಸಬಹುದು.
ಎನ್ಎವಿ ಎಂದರೆ ನೆಟ್ ಅಸೆಟ್ ವ್ಯಾಲ್ಯೂ. ಮ್ಯುಚುವಲ್ ಫಂಡ್ನ ಒಂದು ಯುನಿಟ್ನ ಮೌಲ್ಯ ಅಥವಾ ಬೆಲೆ ಇದು. ಮ್ಯುಚುವಲ್ ಫಂಡ್ನ ಎನ್ಎವಿ ಆ ಫಂಡ್ನ ಕಾರ್ಯಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಎನ್ಎವಿ ಎಷ್ಟು ಎಂದು ನಿರ್ಧರಿಸಲು ಒಂದು ಸೂತ್ರ ಇದೆ.
ಮ್ಯುಚುವಲ್ ಫಂಡ್ನ ಒಟ್ಟು ಹೂಡಿಕೆ ಮೌಲ್ಯ, ಅದರ ಒಟ್ಟು ವೆಚ್ಚ ಹಾಗು ಹೂಡಿಕೆಯಾಗಿರುವ ಒಟ್ಟು ಯುನಿಟ್ಗಳು, ಇವನ್ನು ಇಟ್ಟುಕೊಂಡು ಎನ್ಎವಿಯನ್ನು ಲೆಕ್ಕ ಮಾಡಲಾಗುತ್ತದೆ. ಅದರ ಸೂತ್ರ ಈ ಕೆಳಕಂಡಂತೆ ಇದೆ:
ಎನ್ಎವಿ = ಒಟ್ಟು ಅಸೆಟ್ – ಒಟ್ಟು ಬಾಧ್ಯತೆ / ಒಟ್ಟು ಯುನಿಟ್ಗಳು
ಇಲ್ಲಿ ಒಟ್ಟು ಮೌಲ್ಯ ಎಂದರೆ ಫಂಡ್ ಮಾಡಿರುವ ವಿವಿಧ ಹೂಡಿಕೆಗಳ ಈಗಿನ ಮಾರುಕಟ್ಟೆ ಮೌಲ್ಯ ಹಾಗೂ ಹೂಡಿಕೆ ಆಗದೇ ಉಳಿದಿರುವ ಹಣ, ಜೊತೆಗೆ ಡಿವಿಡೆಂಡ್, ಬಡ್ಡಿ ಇತ್ಯಾದಿ ಆದಾಯ ಇವೆಲ್ಲವುಗಳ ಒಟ್ಟು ಮೊತ್ತವೇ ಒಟ್ಟಾರೆ ಅಸೆಟ್ಸ್ ಎನಿಸುತ್ತದೆ.
ಬಾಧ್ಯತೆಗಳಲ್ಲಿ, ಫಂಡ್ ನಿರ್ವಹಿಸಲು ಆಗುವ ವೆಚ್ಚ, ಶುಲ್ಕ ಮತ್ತಿತರ ಪಾವತಿಗಳು ಒಳಗೊಂಡಿರುತ್ತವೆ.
ಉದಾಹರಣೆ ನೋಡುವುದಾದರೆ, ಒಂದು ಮ್ಯುಚುವಲ್ ಫಂಡ್ 5 ಕೋಟಿ ಯುನಿಟ್ಗಳನ್ನು ಬಿಡುಗಡೆ ಮಾಡಿದೆ ಎಂದಿಟ್ಟುಕೊಳ್ಳಿ. ಈ ಫಂಡ್ ಒಟ್ಟಾರೆ 200 ಕೋಟಿ ರೂನಷ್ಟು ಷೇರು, ಬಾಂಡ್ ಇತ್ಯಾದಿ ಕಡೆ ಹೂಡಿಕೆ ಮಾಡಿದೆ ಎಂದು ಭಾವಿಸೋಣ. ಈ ಫಂಡ್ನ ವೆಚ್ಚ 10 ಕೋಟಿ ರೂ ಎಂದಿಟ್ಟುಕೊಂಡರೆ, ಫಂಡ್ನ ಎನ್ಎವಿ ಎಷ್ಟೆಂದು ತಿಳಿಯಲು ಮೇಲಿನ ಸೂತ್ರ ಅನ್ವಯಿಸಬಹುದು.
ಎನ್ಎವಿ = (200 ಕೋಟಿ ರು – 10 ಕೋಟಿ ರೂ) / 5 ಕೋಟಿ ರೂ
= 190/5 = 38
ಮೇಲಿನ ನಿದರ್ಶನದಲ್ಲಿ ಮ್ಯುಚುವಲ್ ಫಂಡ್ನ ಒಂದು ಎನ್ಎವಿ ಮೌಲ್ಯ 38 ರೂ ಆಗುತ್ತದೆ. ಟ್ರೇಡಿಂಗ್ ದಿನದ ಕೊನೆಯಲ್ಲಿ ಎನ್ಎವಿ ಅಪ್ಡೇಟ್ ಆಗುತ್ತದೆ.
ಇದನ್ನೂ ಓದಿ: Credit Score: ಸಂಬಳ ಹೆಚ್ಚಿದರೆ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ? ಅಂಕ ನಿರ್ಧಾರ ಆಗೋದು ಹೇಗೆ?
ಮೇಲಿನ ನಿದರ್ಶನ ನೋಡುವುದಾದರೆ, ಆ ಮ್ಯುಚುವಲ್ ಫಂಡ್ನ ಎನ್ಎವಿ 38 ರೂ ಇದೆ. ಅಂದರೆ, ಇದು ಒಂದು ಯುನಿಟ್ನ ಬೆಲೆಯಾಗಿದೆ. ನೀವು ಆ ಫಂಡ್ನಲ್ಲಿ 10,000 ರೂ ಹೂಡಿಕೆ ಮಾಡಿದಾಗ 10,000/38 = 263.1579 ಯುನಿಟ್ಗಳು ನಿಮಗೆ ಸಿಗುತ್ತದೆ. ನೀವು ಮಾರುವಾಗ ಆ ಎನ್ಎವಿ ಮೌಲ್ಯ ಎಷ್ಟು ವ್ಯತ್ಯಾಸ ಪಡೆಯುತ್ತದೆ ಎನ್ನುವುದರ ಮೇಲೆ ನಿಮಗೆ ರಿಟರ್ನ್ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ