Mutual Funds: 1 ಲಕ್ಷ ರೂ, 30 ವರ್ಷ ಹೂಡಿಕೆ, ಕೋಟಿ ರೂಗೂ ಅಧಿಕ ರಿಟರ್ನ್; ಇದು ಈ ಐದು ಫಂಡ್​ಗಳ ಮ್ಯಾಜಿಕ್

Mutual Funds that gave huge returns in 30 years: ಹೂಡಿಕೆಯು ದೀರ್ಘಾವಧಿ ಇದ್ದರೆ ಹಣದ ಕಾಂಪೌಂಡಿಂಗ್ ಪರಿಣಾಮ ಕೆಲಸ ಮಾಡುತ್ತದೆ. ಮೂವತ್ತಕ್ಕೂ ಹೆಚ್ಚು ವರ್ಷ ಕಾಲ ನೀವು ಹೂಡಿಕೆ ಮಾಡಿದರಂತೂ ಅದ್ಭುತ ರಿಟರ್ನ್ಸ್ ನಿಮ್ಮದಾಗುತ್ತದೆ. ದೀರ್ಘಾವಧಿ ಹೂಡಿಕೆ ನಿಮ್ಮ ನಿವೃತ್ತಿ ಕಾಲಕ್ಕೆ ಆಪದ್ಬಾಂಧವ ಎನಿಸುತ್ತದೆ. ಮೂವತ್ತು ವರ್ಷದ ಹಿಂದಿನಿಂದಲೂ ಇರುವ ಕೆಲ ಮ್ಯುಚುವಲ್ ಫಂಡ್​ಗಳು ತಂದಿರುವ ಲಾಭ ಎಷ್ಟು, ಇಲ್ಲಿದೆ ವಿವರ.

Mutual Funds: 1 ಲಕ್ಷ ರೂ, 30 ವರ್ಷ ಹೂಡಿಕೆ, ಕೋಟಿ ರೂಗೂ ಅಧಿಕ ರಿಟರ್ನ್; ಇದು ಈ ಐದು ಫಂಡ್​ಗಳ ಮ್ಯಾಜಿಕ್
ಮ್ಯೂಚುವಲ್ ಫಂಡ್

Updated on: Jul 29, 2025 | 1:32 PM

ನವದೆಹಲಿ, ಜುಲೈ 29: ಹಣದ ಕಾಂಪೌಂಡಿಂಗ್ ಗುಣದ ಬಗ್ಗೆ ಸಾಕಷ್ಟು ಕೇಳಿರುತ್ತೇವೆ. ಹೂಡಿಕೆಯ ಅವಧಿ ಹೆಚ್ಚಿದಂತೆಲ್ಲಾ (Long term investing) ಬೆಳವಣಿಗೆಯ ವೇಗವೂ ಹೆಚ್ಚುತ್ತಾ ಹೋಗುವುದು ಕಾಂಪೌಂಡಿಂಗ್ ಪರಿಣಾಮದಿಂದಾಗಿಯೇ. ಆದರೆ, ಹೆಚ್ಚಿನ ಹೂಡಿಕೆದಾರರು ಅಬ್ಬಬ್ಬಾ ಎಂದರೆ 10 ವರ್ಷಕ್ಕೆ ತಮ್ಮ ಹೂಡಿಕೆ ಅವಧಿಯನ್ನು ಸೀಮಿತಗೊಳಿಸುವುದುಂಟು. ಹೆಚ್ಚಿನ ಮಂದಿಗೆ 10 ವರ್ಷವೇ ದೀರ್ಘಾವಧಿ ಎನಿಸುತ್ತದೆ. ಹಣದ ನಿಜವಾದ ಕಾಂಪೌಂಡಿಂಗ್ ಗುಣವನ್ನು (compounding effect) ನೋಡಲು ಹೆಚ್ಚು ಸಂಯಮ ಬೇಕಾಗುತ್ತದೆ. ಕನಿಷ್ಠವೆಂದರೂ 20 ವರ್ಷ ಹೂಡಿಕೆ ಇರಬೇಕು.

ಮೂವತ್ತು ವರ್ಷದಲ್ಲಿ 1 ಲಕ್ಷ ರೂ ಹೂಡಿಕೆಯನ್ನು 1 ಕೋಟಿ ರೂಗೆ ಬೆಳೆಸಿದ ಕೆಲ ಮ್ಯುಚುವಲ್ ಫಂಡ್​ಗಳು ಈಗಲೂ ಇವೆ. ಮೂವತ್ತು ವರ್ಷ ಬಹಳ ದೊಡ್ಡ ಕಾಲವೇನಲ್ಲ. ಕೆಲಸಕ್ಕೆ ಸೇರಿದ ಹೊಸದರಲ್ಲೇ ಹೂಡಿಕೆ ಮಾಡಿದರೆ ನಿವೃತ್ತಿ ವಯಸ್ಸಿನೊಳಗೆ ನಿಮಗೆ ಹೇರಳ ರಿಟರ್ನ್ಸ್ ಸಿಕ್ಕಿಹೋಗುತ್ತದೆ.

ಇದನ್ನೂ ಓದಿ: ಷೇರು vs ಚಿನ್ನ vs ರಿಯಲ್ ಎಸ್ಟೇಟ್; ಕಳೆದ 20 ವರ್ಷದಲ್ಲಿ ಯಾವುದರಿಂದ ಸಿಕ್ಕಿದೆ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್

ಇದನ್ನೂ ಓದಿ
ಮ್ಯುಚುವಲ್ ಫಂಡ್​ಗಳಿಗೆ ಯಾವ್ಯಾವ ಟ್ಯಾಕ್ಸ್ ಅನ್ವಯ?
ಮ್ಯುಚುವಲ್ ಫಂಡ್ ಹೂಡಿಕೆ ಹೇಗಿರಬೇಕು?
ರಿಸ್ಕ್ ಇಲ್ಲದೇ ಹೂಡಿಕೆ ಮಾಡಲು ಇವು ಸೂಕ್ತ
ಜೂನ್ ತಿಂಗಳಲ್ಲಿ 62 ಲಕ್ಷ ಹೊಸ ಎಸ್​​ಐಪಿ ಶುರು

ಕಳೆದ ಮೂರು ದಶಕದಲ್ಲಿ 1 ಲಕ್ಷ ರೂ ಹೂಡಿಕೆಯನ್ನು 1-3 ಕೋಟಿ ರೂವರೆಗೆ ಹೆಚ್ಚಿಸಿದ ಕೆಲ ಮ್ಯೂಚುವಲ್ ಫಂಡ್​ಗಳ ವಿವರ ಇಲ್ಲಿದೆ…

  1. ಫ್ರಾಂಕ್ಲಿನ್ ಇಂಡಿಯಾ ಮಿಡ್​ಕ್ಯಾಪ್ ಫಂಡ್: 30 ವರ್ಷದ ಹಿಂದೆ ಇದರಲ್ಲಿ ಲಂಪ್ಸಮ್ ಆಗಿ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅದರ ಮೌಲ್ಯ 2.76 ಕೋಟಿ ರೂ ಆಗಿರುತ್ತಿತ್ತು.
  2. ಫ್ರಾಂಕ್ಲಿನ್ ಇಂಡಿಯಾ ಲಾರ್ಜ್ ಕ್ಯಾಪ್ ಫಂಡ್: ಇದರಲ್ಲಿ 1 ಲಕ್ಷ ರೂ ಹೂಡಿಕೆಯು 30 ವರ್ಷದಲ್ಲಿ 2.45 ಕೋಟಿ ರೂ ಆಗಿದೆ.
  3. ಎಚ್​ಡಿಎಫ್​ಸಿ ಫ್ಲೆಕ್ಸಿ ಕ್ಯಾಪ್ ಫಂಡ್: ಒಂದು ಲಕ್ಷ ರೂ ಹೂಡಿಕೆಯನ್ನು ಇದು 1.97 ಕೋಟಿ ರೂಗೆ ಹೆಚ್ಚಿಸಿದೆ.
  4. ಫ್ರಾಂಕ್ಲಿನ್ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್: 1995ರ ಜುಲೈನಲಿ ಇದರಲ್ಲಿ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ, ಈಗ ಅದು 1.63 ಕೋಟಿ ರೂ ಆಗಿರುತ್ತಿತ್ತು.
  5. ಆದಿತ್ಯ ಬಿರ್ಲಾ ಎಸ್​ಎಲ್ ಲಾರ್ಜ್ ಮತ್ತು ಮಿಡ್​ಕ್ಯಾಪ್ ಫಂಡ್: ಇದರಲ್ಲಿ ಒಂದು ಲಕ್ಷ ರೂ ಹೂಡಿಕೆಯು 30 ವರ್ಷದಲ್ಲಿ 1.08 ಕೋಟಿ ರೂ ರಿಟರ್ನ್ಸ್ ತಂದಿದೆ.

(ಗಮನಿಸಿ: ಇದು ಷೇರು ಅಥವಾ ಮ್ಯುಚುವಲ್ ಫಂಡ್ ಅಥವಾ ಯಾವುದನ್ನೇ ಆದರೂ ಹೂಡಿಕೆಗೆ ಶಿಫಾರಸು ಮಾಡುವ ಉದ್ದೇಶ ಈ ಲೇಖನದ್ದಲ್ಲ. ಹೂಡಿಕೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾತ್ರ.)

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ