ಕೆಲಸ ಬದಲಿಸಿದರೆ ಹಳೆಯ ಪಿಎಫ್ ಖಾತೆ ಬಗ್ಗೆ ಚಿಂತೆ ಬೇಡ; ತನ್ನಂತಾನೇ ಆಗುತ್ತೆ ಹಣ ವರ್ಗಾವಣೆ

|

Updated on: Apr 01, 2024 | 3:35 PM

EPF accounts merger: ಇಪಿಎಫ್ ನಿಯಮವೊಂದನ್ನು ಏಪ್ರಿಲ್ 1ರಿಂದ ಜಾರಿ ಮಾಡಲಾಗಿದ್ದು, ಇದು ಇಪಿಎಫ್ ಖಾತೆದಾರರಿಗೆ ವರದಾನವಾಗಲಿದೆ. ಕೆಲಸ ಬದಲಿಸಿದಾಗ ಹಳೆಯ ಇಪಿಎಫ್ ಖಾತೆಯನ್ನು ಹೊಸ ಖಾತೆಗೆ ವಿಲೀನಗೊಳಿಸಲು ಮನವಿ ಸಲ್ಲಿಸಿ ಅನುಮತಿಗೆ ಕಾಯಬೇಕಾದ ಅಗತ್ಯ ಇನ್ಮುಂದೆ ಇರುವುದಿಲ್ಲ. ನಿಮ್ಮ ಹಳೆಯ ಖಾತೆಯಲ್ಲಿರುವ ಹಣ ಹೊಸ ಇಪಿಎಫ್ ಖಾತೆಗೆ ತನ್ನಂತಾನೆ ವರ್ಗಾವಣೆ ಆಗುತ್ತದೆ.

ಕೆಲಸ ಬದಲಿಸಿದರೆ ಹಳೆಯ ಪಿಎಫ್ ಖಾತೆ ಬಗ್ಗೆ ಚಿಂತೆ ಬೇಡ; ತನ್ನಂತಾನೇ ಆಗುತ್ತೆ ಹಣ ವರ್ಗಾವಣೆ
ಇಪಿಎಫ್
Follow us on

ಉದ್ಯೋಗಿಗಳಿಗೆ ಇಪಿಎಫ್ (EPF) ಬಹಳ ಮಹತ್ವದ್ದಾದ ರಿಟೈರ್ಮೆಂಟ್ ಸ್ಕೀಮ್. ಉದ್ಯೋಗಿಯ ಸಂಬಳ ಮತ್ತು ಅವರು ಕೆಲಸ ಮಾಡುವ ಸಂಸ್ಥೆಯ ಕೊಡುಗೆ, ಹಾಗೂ ಸರ್ಕಾರದಿಂದ ಸಿಗುವ ಬಡ್ಡಿ ಹಣ ಇವೆಲ್ಲವೂ ಸೇರಿ ಉಳಿತಾಯ ಹಣ ಉತ್ತಮ ಹೂಡಿಕೆಯಾಗಿ ಬದಲಾಗುತ್ತದೆ. ನಿವೃತ್ತಿ ಕಾಲಕ್ಕೆ ತಕ್ಕಮಟ್ಟಿಗೆ ಸಂಗ್ರವಾಗುತ್ತದೆ. ಈ ವೇಳೆ ಯುಎಎನ್ ನಂಬರ್ ಚಾಲನೆಗೆ ಬಂದ ಬಳಿಕ ಒಂದೇ ಪ್ಲಾಟ್​ಫಾರ್ಮ್​ನಲ್ಲಿ ಎಲ್ಲಾ ಪಿಎಫ್ ಖಾತೆಗಳನ್ನು ನೋಡಬಹುದು, ನಿರ್ವಹಿಸಬಹುದು. ಈಗ ಇಪಿಎಫ್​ಒ ಇನ್ನೂ ಒಂದು ಹಂತವನ್ನು ಸರಳಗೊಳಿಸಿದೆ. ನೀವು ಕೆಲಸ ಬದಲಿಸಿದಾಗ ಪಿಎಫ್ ಖಾತೆಗಳೂ ವರ್ಗಾವಣೆ ಆಗುತ್ತದೆ. 2024ರ ಏಪ್ರಿಲ್ 1ರಿಂದ ಈ ಹೊಸ ಇಪಿಎಫ್ ಸೌಲಭ್ಯ ಚಾಲನೆಗೆ ಬರುತ್ತದೆ.

ಈ ಹಿಂದೆ ಇದ್ದ ವ್ಯವಸ್ಥೆಯಲ್ಲಿ ನೀವು ಕೆಲಸ ಬದಲಿಸಿದಾಗ ಹೊಸ ಕಂಪನಿಯಲ್ಲಿ ಹೊಸ ಇಪಿಎಫ್ ಖಾತೆ ರಚಿಸಲಾಗುತ್ತದೆ. ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿದ್ದ ಇಪಿಎಫ್ ಅಕೌಂಟ್ ಹಾಗೆ ಉಳಿಯುತ್ತದೆ. ನೀವು ಕೆಲಸ ಬದಲಿಸಿದಾಗ ಹೊಸ ಇಪಿಎಫ್ ಖಾತೆಗೆ ಹಳೆಯ ಇಪಿಎಫ್ ಖಾತೆಯನ್ನು ವಿಲೀನಗೊಳಿಸಬೇಕು. ಅದಕ್ಕೆ ನೀವೇ ಮನವಿ ಸಲ್ಲಿಸಬೇಕು. ವಿಲೀನ ಆಗದೇ ಹೋದರೆ ನಿಮ್ಮ ಹಳೆಯ ಖಾತೆಗೆ ಸರ್ಕಾರದ ಬಡ್ಡಿ ಹಣ ಸಿಗುವುದಿಲ್ಲ. ಈ ಕಾರಣಕ್ಕೆ ನಿಮ್ಮ ಎಲ್ಲಾ ಹಿಂದಿನ ಇಪಿಎಫ್ ಖಾತೆಗಳನ್ನು ಹೊಸ ಖಾತೆಯೊಂದಿಗೆ ವಿಲೀನಗೊಳಿಸಬೇಕು.

ನೀವು ಕೆಲಸ ಬದಲಿಸಿದಾಗ ಹೊಸ ಇಪಿಎಫ್ ಖಾತೆ ಸೃಷ್ಟಿಯಾಗುತ್ತಲೇ ನಿಮ್ಮ ಹಿಂದಿನ ಇಪಿಎಫ್ ಖಾತೆ ತನ್ನಂತಾನೆ ವಿಲೀನಗೊಳ್ಳುತ್ತದೆ. ಹಳೆಯ ಕಂಪನಿ ಅಥವಾ ಹೊಸ ಕಂಪನಿಯಿಂದ ಅನುಮೋದನೆ ಸಿಗುವವರೆಗೂ ಕಾಯಬೇಕಿಲ್ಲ. ಉದ್ಯೋಗಿಗಳಿಗೆ ಒಂದು ತಲೆನೋವು ಕಡಿಮೆ ಆದಂತಾಗುತ್ತದೆ.

ಇದನ್ನೂ ಓದಿ: ಇಪಿಎಫ್​ನಿಂದ ಟ್ರಿಪಲ್ ತೆರಿಗೆ ಲಾಭಗಳು; ಉತ್ತಮ ಭವಿಷ್ಯಕ್ಕೆ ಆಧಾರವಾಗಬಲ್ಲುದು ಪಿಎಫ್

ಲೀವ್ ಎನ್​ಕ್ಯಾಷ್ಮೆಂಟ್​ಗೆ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ

ಸರ್ಕಾರೇತರ ಉದ್ಯೋಗಿಗಳಿಗೆ ಖುಷಿ ಸುದ್ದಿ ಇದೆ. ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲಾಗಿದೆ. 3 ಲಕ್ಷ ರೂ ಇರುವ ಮಿತಿಯನ್ನು 25 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಅಂದರೆ ನಿಮ್ಮ ಲೀವ್ ಎನ್​ಕ್ಯಾಷ್​ಮೆಂಟ್ ಮೊತ್ತ 25 ಲಕ್ಷ ರೂ ಒಳಗಿದ್ದಲ್ಲಿ ಅದಕ್ಕೆ ತೆರಿಗೆ ಇರುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ