ಭಾರತದಲ್ಲಿ ಷೇರು ಮಾರುಕಟ್ಟೆ ಯಾವತ್ತೂ ಕೂಡ ಹೂಡಿಕೆದಾರರ ನಿರೀಕ್ಷೆ ಹುಸಿಗೊಳಿಸಿದ್ದಿಲ್ಲ. ಹಲವು ಬಾರಿ ನಿರೀಕ್ಷೆ ಮೀರಿ ಫಲ ತಂದುಕೊಟ್ಟಿದೆ. ಜಾಗತೀಕರಣದ ಬಳಿಕ ಮಾರುಕಟ್ಟೆ ಅದ್ವಿತೀಯ ರೀತಿಯಲ್ಲಿ, ಸ್ಥಿರ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಮಾರುಕಟ್ಟೆ ದ್ವಿಗುಣಗೊಳ್ಳುತ್ತಿರುವ ಅವಧಿ ಕಡಿಮೆ ಆಗುತ್ತಲೇ ಹೋಗುತ್ತಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ವಿನಿಯೋಗಿಸುವ ಮ್ಯೂಚುವಲ್ ಫಂಡ್ಗಳೂ ಕೂಡ ಹೂಡಿಕೆದಾರರ ಕೈಹಿಡಿದಿವೆ. ನಿಯಮಿತವಾಗಿ ಮಾಸಿಕವಾಗಿ ಹಣ ಹೂಡಿಕೆ ಮಾಡಲು ಎಸ್ಐಪಿ ಸ್ಕೀಮ್ಗಳಿವೆ. ಹಣ ಬೆಳವಣಿಗೆಯ ಚಕ್ರ ಮೌಲ್ಯ ಅಥವಾ ಕಾಂಪೌಂಡಿಂಗ್ ಎಫೆಕ್ಟ್ನಿಂದ ಹೂಡಿಕೆಯು ಅಚ್ಚರಿ ಎನಿಸುವ ರೀತಿಯಲ್ಲಿ ಬೆಳೆಯುತ್ತದೆ.
ಭಾರತದಲ್ಲಿ ಮ್ಯೂಚುವಲ್ ಫಂಡ್ ಉದ್ಯಮ ಈಗ 65 ಲಕ್ಷ ಕೋಟಿ ರೂ ಮೊತ್ತದಷ್ಟಾಗಿದೆ. ಈಕ್ವಿಟಿಗೆ ಹೆಚ್ಚು ಜೋಡಿತವಾದ 14 ಮ್ಯುಚುವಲ್ ಫಂಡ್ಗಳು 30 ವರ್ಷ ಪೂರ್ಣಗೊಳಿಸಿವೆ. 30 ವರ್ಷದ ಹಿಂದೆ ಆರಂಭವಾದ ಫ್ರಾಂಕ್ಲಿನ್ ಇಂಡಿಯಾ ಪ್ರೈಮಾ ಫಂಡ್ನಲ್ಲಿ ಒಂದು ಸಾವಿರ ರೂ ಎಸ್ಐಪಿ ಮಾಡಿದವರು ಇವತ್ತಿನವರೆಗೂ ಮುಂದುವರಿಸಿಕೊಂಡು ಬಂದಿದ್ದರೆ ಅವರ ಸಂಪತ್ತು ಎರಡು ಕೋಟಿ ರೂಗೂ ಹೆಚ್ಚಾಗಿರುತ್ತದೆ. ಇದು ನಿಜಕ್ಕೂ ಫಂಡ್ ತಂದ ರಿಟರ್ನ್ ಮತ್ತು ಹಣದ ಕಾಂಪೌಂಡಿಂಗ್ ಎಫೆಕ್ಟ್.
ಇದನ್ನೂ ಓದಿ: ಐದು ವರ್ಷಕ್ಕೆ ಮಾತ್ರ ಹೂಡಿಕೆ ಮಾಡಬೇಕಾ? ಇಲ್ಲಿವೆ ಕೆಲ ಉತ್ತಮ ಆಯ್ಕೆಗಳು
ಇದನ್ನೂ ಓದಿ: ಸಿಕ್ಕಾಪಟ್ಟೆ ಇರುವ ಮ್ಯೂಚುವಲ್ ಫಂಡ್ಗಳಲ್ಲಿ ಯಾವುದನ್ನು ಆರಿಸುವುದು? ರಾಧಿಕಾ ಗುಪ್ತಾ ಸಲಹೆ ಇದು
ಈ ಮೇಲಿನ ಪಟ್ಟಿಯಲ್ಲಿರುವುದು ಕಳೆದ 30 ವರ್ಷಗಳಿಂದ ತಿಂಗಳಿಗೆ 1,000 ರೂ ಎಸ್ಐಪಿಗೆ ತಂದಿರುವ ಲಾಭದ ವಿವರವಾಗಿದೆ. ಈ ಮೂವತ್ತು ವರ್ಷದಲ್ಲಿ ಎಸ್ಐಪಿ ಮೂಲಕ ಕಟ್ಟಲಾಗುವ ಹಣವೆಲ್ಲವೂ ಸೇರಿಸಿದರೆ 3.6 ಲಕ್ಷ ರೂ ಆಗುತ್ತದೆ. ಫ್ರಾಂಕ್ಲಿನ್ ಇಂಡಿಯಾ ಪ್ರಿಮಾ ಫಂಡ್ ಈ 3.6 ಲಕ್ಷ ರೂ ಹೂಡಿಕೆಗೆ 2.1 ಕೋಟಿ ರೂ ಲಾಭ ತಂದುಕೊಟ್ಟಿರುವುದು ಸಾಮಾನ್ಯ ಸಂಗತಿಯಲ್ಲ. ಅದೂ 30 ವರ್ಷ ಸುದೀರ್ಘ ಅವಧಿಯಲ್ಲಿ ಸ್ಥಿರ ಲಾಭ ತಂದಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಹೂಡಿಕೆ ಡಬಲ್ ಆಗುತ್ತಾ ಹೋಗಿರುವುದು ಸೋಜಿಗವೇ ಸರಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ