PM Kisan Yojana: ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಬಿಡುಗಡೆಗೆ ಮುನ್ನ ರೈತರು ಮಾಡಬೇಕಾದ ಕೆಲಸಗಳಿವು

|

Updated on: Apr 19, 2023 | 6:07 PM

Popular Scheme For Farmers: ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಏಪ್ರಿಲ್​ನಿಂದ ಜುಲೈವರೆಗೆ ಯಾವುದೇ ದಿನವಾದರೂ ಬಿಡುಗಡೆ ಆಗಬಹುದು. ನೀವು ಈ ಯೋಜನೆಯ ಫಲಾನುಭವಿಗಳಾಗಿದ್ದರೆ ಈ ಸಂಗತಿಗಳ ಕಡೆ ಗಮನ ಹರಿಸುವುದು ಉತ್ತಮ....

PM Kisan Yojana: ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಬಿಡುಗಡೆಗೆ ಮುನ್ನ ರೈತರು ಮಾಡಬೇಕಾದ ಕೆಲಸಗಳಿವು
ರೈತ
Follow us on

ರೈತರಲ್ಲಿ ಬಹಳ ಜನಪ್ರಿಯವಾಗಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi) ಕೇಂದ್ರ ಸರ್ಕಾರ ಈವರೆಗೂ 2,000 ರೂಗಳ 13 ಕಂತುಗಳನ್ನು ಬಿಡುಗಡೆ ಮಾಡಿದೆ. ಪ್ರತೀ 4 ತಿಂಗಳಿಗೊಮ್ಮೆ 2,000 ರೂ ಹಣವನ್ನು ಕೇಂದ್ರ ಸರ್ಕಾರ ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸುತ್ತದೆ. 2019ರಲ್ಲಿ ಆರಂಭವಾದ ಈ ಯೋಜನೆಗೆ ಈವರೆಗೂ 12 ಕೋಟಿಯಷ್ಟು ರೈತರು ನೊಂದಾವಣಿ ಮಾಡಿಕೊಂಡಿದ್ದಾರೆ. ಕಳೆದ ಬಾರಿ 8 ಕೋಟಿಗಿಂತಲೂ ಹೆಚ್ಚು ಮಂದಿಗೆ 13ನೇ ಕಂತಿನ ಹಣ ಸಿಕ್ಕಿದೆ. ಇದೀಗ ಈ ಯೋಜನೆಯ 14ನೇ ಕಂತಿನ ಹಣ ಬಿಡುಗಡೆ ಕುರಿತು ಚರ್ಚೆ ನಡೆಯುತ್ತಿದೆ. ಸರಿಯಾದ ದಾಖಲೆ ಅಪ್​ಡೇಟ್ ಮಾಡದಿರುವುದು ಸೇರಿದಂತೆ ಕೆಲವು ಕಾರಣಗಳಿಗೆ ಹಲವು ಮಂದಿಗೆ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಆಗದೇ ಇರಬಹುದು. ಈ ಹಿನ್ನೆಲೆಯಲ್ಲಿ ಪ್ರಯೋಜನಕ್ಕೆ ಬರುವ ಕೆಲವೊಂದಿಷ್ಟು ಮಾಹಿತಿ ಇಲ್ಲಿದೆ.

ಕೇಂದ್ರ ಸರ್ಕಾರ 14ನೇ ಕಂತಿನ ಹಣ ಬಿಡುಗಡೆಗೆ ಮುನ್ನ ರೈತರು ಮಾಡಬೇಕಾದ ಕೆಲಸಗಳಿವು

  • ನೀವು ಇಕೆವೈಸಿ ಮಾಡಿಸದಿದ್ದರೆ ಕೂಡಲೇ ಆ ಕೆಲಸ ಮಾಡಿ.
  • ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡಿ
  • ನಿಮ್ಮ ಕೃಷಿ ಭೂಮಿಯ ದಾಖಲೆಯನ್ನು ಕೃಷಿ ವಿಭಾಗದಿಂದ ವೆರಿಫಿಕೇಶನ್ ಮಾಡಿಸಿಕೊಳ್ಳಿ
  • ಪಿಎಂ ಕಿಸಾನ್ ಪೋರ್ಟಲ್​ನಲ್ಲಿ ಈ ಯೋಜನೆಯ ಬೆನಿಫಿಷಿಯರಿ ಲಿಸ್ಟ್​ನಲ್ಲಿ ನಿಮ್ಮ ಹೆಸರು ಇದೆಯಾ ಎಂಬುದನ್ನೂ ದೃಢಪಡಿಸಿಕೊಳ್ಳಿ.
  • ಬೆನಿಫಿಶಿಯರಿ ಲಿಸ್ಟ್​ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಮತ್ತೊಮ್ಮೆ ಈ ಯೋಜನೆಗೆ ಹೆಸರು ನೊಂದಾಯಿಸಬೇಕಾಗುತ್ತದೆ.

ಇದನ್ನೂ ಓದಿMukesh Ambani: ಅಂಬಾನಿ ಹುಟ್ಟಾ ಶ್ರೀಮಂತರಲ್ಲ; ಪೆಟ್ರೋಲ್ ಬಂಕ್ ಕಾರ್ಮಿಕನ ಮಗನಾಗಿ ಮುಕೇಶ್ ಅಂಬಾನಿ ಬೆಳೆದ ರೋಚಕ ಕಥೆ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇದೆಯಾ ಎಂದು ನೋಡುವುದು ಹೇಗೆ?

  • ಪಿಎಂ ಕಿಸಾನ್ ಪೋರ್ಟಲ್​ಗೆ (https://pmkisan.gov.in/) ಭೇಟಿ ನೀಡಿ
  • ಅಲ್ಲಿ ಬೆನಿಫಿಷಿಯರಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಅಥವಾ ನೊಂದಣಿ ಸಂಖ್ಯೆಯಲ್ಲಿ ಬಾಕ್ಸ್​ನಲ್ಲಿ ತುಂಬಿರಿ
  • ಕ್ಯಾಪ್ಚಾ ಕೋಡ್ ಹಾಕಿ, ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿ

ಹೀಗೆ ಮಾಡಿದ ಬಳಿಕ ಈ ಯೋಜನೆಯಲ್ಲಿನ ನಿಮ್ಮ ಎಲ್ಲಾ ವಿವರ ತೆರೆದುಕೊಳ್ಳುತ್ತದೆ. ನಿಮಗೆ ತಲುಪಿದ ಹಿಂದಿನ ಕಂತುಗಳ ಹಣ, ಕೆವೈಸಿ ವಿವರ, ಅಕೌಂಟ್ ಸ್ಟೇಟಸ್ ಇತ್ಯಾದಿ ಮಾಹಿತಿ ಇರುತ್ತದೆ. ಯಾವುದಾದರೂ ದಾಖಲೆಯ ಅಗತ್ಯತೆ ಇದ್ದರೆ ಅದೂ ಕೂಡ ನಮೂದಾಗುತ್ತದೆ.

ಪಿಎಂ ಕಿಸಾನ್ ಯೋಜನೆಯ ಹಣ ಯಾವ್ಯಾವಾಗ ಬಿಡುಗಡೆ ಆಗುತ್ತದೆ?

2018-19ರಲ್ಲಿ ಅರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಈವರೆಗೂ 13 ಕಂತುಗಳು ಬಿಡುಗಡೆ ಆಗಿವೆ. ಮೊದಲ ಕಂತು 2018 ಡಿಸೆಂಬರ್​ನಲ್ಲಿ ಬಿಡುಗಡೆ ಆಗಿತ್ತು. 3.16 ಕೋಟಿ ರೈತರ ಖಾತೆಗೆ ಹಣ ವರ್ಗಾವಣೆ ಆಗಿತ್ತು.

ಇದನ್ನೂ ಓದಿSmart Investments: ಶೇ. 18ರಿಂದ 33ರವರೆಗೂ ರಿಟರ್ನ್ ಕೊಡಬಲ್ಲ 5 ಷೇರುಗಳು; ಈಗಲೇ ಖರೀದಿಸಿ ಎಂದು ಅನಾಲಿಸ್ಟ್​ಗಳ ಶಿಫಾರಸು

ಏಪ್ರಿಲ್ 1ರಂದು ಆರಂಭವಾಗುವ ಹಣಕಾಸು ವರ್ಷದಲ್ಲಿ 3 ಬಾರಿ ಪಿಎಂ ಕಿಸಾನ್ ಯೋಜನೆಯ ಕಂತುಗಳು ಬಿಡುಗಡೆ ಆಗುತ್ತವೆ. ಏಪ್ರಿಲ್ 1ರಿಂದ ಜುಲೈ 31ರವರೆಗಿನ ಅವಧಿಯಲ್ಲಿ ಯಾವುದೇ ದಿನವಾದರೂ ಹಣ ಬಿಡುಗಡೆ ಆಗಬಹುದು. ಹಾಗೆಯೇ, ಆಗಸ್ಟ್ 1ರಿಂದ ನವೆಂಬರ್ 30ರವರೆಗೆ ಇನ್ನೊಂದು ಕಂತು; ಹಾಗೂ ಡಿಸೆಂಬರ್ 1ರಿಂದ ಮಾರ್ಚ್ 31ರ ಅವಧಿಯಲ್ಲಿ ಮಗದೊಂದು ಕಂತು ಬಿಡುಗಡೆ ಆಗುತ್ತದೆ.

ಕರ್ನಾಟಕದ ರೈತರಿಗೆ ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಹಣ ಸಿಗುತ್ತದೆ. ರಾಜ್ಯ ಸರ್ಕಾರ 2 ಹೆಚ್ಚುವರಿ ಕಂತುಗಳನ್ನು ರಾಜ್ಯದ ರೈತರಿಗೆ ನೀಡುತ್ತದೆ. ಅಲ್ಲಿಗೆ ಕರ್ನಾಟಕದ ರೈತರು ಒಂದು ವರ್ಷದಲ್ಲಿ ಒಟ್ಟು 10,000 ರೂ ಹಣ ಪಡೆಯುತ್ತಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:20 pm, Wed, 19 April 23