AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshaya Tritiya: ಅಕ್ಷಯ ತೃತೀಯಕ್ಕೆ ಚಿನ್ನ, ಬೆಳ್ಳಿ ಹಬ್ಬ; ವಿವಿಧ ಅಂಗಡಿಗಳಲ್ಲಿ ಭರ್ಜರಿ ಡಿಸ್ಕೌಂಟ್, ಗೋಲ್ಡ್ ಕಾಯಿನ್ ಗಿಫ್ಟ್; ಇಲ್ಲಿದೆ ಡೀಟೇಲ್ಸ್

Big Offers For Gold, Silver, Diamond Purchase: ಏಪ್ರಿಲ್ 22ರಂದು ಇರುವ ಅಕ್ಷಯ ತೃತೀಯ ದಿನಕ್ಕೆ ವಿವಿಧ ಆಭರಣ ವ್ಯಾಪಾರಿಗಳು ತರಹೇವಾರಿ ಡಿಸ್ಕೌಂಟ್, ಗಿಫ್ಟ್ ವೋಚರ್, ಗೋಲ್ಡ್ ಕಾಯಿನ್ ಮೊದಲಾದ ಆಫರ್ ನೀಡಿವೆ. ಜಾಯಲುಕ್ಕಾಸ್​ನಿಂದ ಹಿಡಿದು ಮಲಬಾರ್ ಗೋಲ್ಡ್​ವರೆಗೂ ಒಡವೆ ಅಂಗಡಿಗಳಲ್ಲಿ ಏನೆಲ್ಲಾ ಆಫರ್ ಇದೆ ಎಂಬ ವಿವರ ಇಲ್ಲಿದೆ.

Akshaya Tritiya: ಅಕ್ಷಯ ತೃತೀಯಕ್ಕೆ ಚಿನ್ನ, ಬೆಳ್ಳಿ ಹಬ್ಬ; ವಿವಿಧ ಅಂಗಡಿಗಳಲ್ಲಿ ಭರ್ಜರಿ ಡಿಸ್ಕೌಂಟ್, ಗೋಲ್ಡ್ ಕಾಯಿನ್ ಗಿಫ್ಟ್; ಇಲ್ಲಿದೆ ಡೀಟೇಲ್ಸ್
ಆಭರಣ ಅಂಗಡಿ
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Oct 07, 2026 | 7:37 PM

Share

ಮುಖ್ಯಾಂಶಗಳು

  • 2023 ಏಪ್ರಿಲ್ 22ರಂದು ಅಕ್ಷಯ ತೃತೀಯ ಇದೆ. ಈ ದಿನದಂದು ಒಡವೆ ಖರೀದಿಸಿದರೆ ಸಂಪತ್ತು ವೃದ್ಧಿಸುತ್ತದೆಂಬ ನಂಬಿಕೆ ಇದೆ. ಇದೇ ದಿನಕ್ಕೆ ವಿವಿಧ ಆಭರಣ ವ್ಯಾಪಾರಿಗಳು ಭರ್ಜರಿ ಆಫರ್ ಕೊಟ್ಟಿದ್ದಾರೆ.
  • ಜಾಯಲುಕ್ಕಾಸ್ ಜ್ಯುವೆಲರ್ಸ್​ನವರು 50,000 ರೂ ಮೌಲ್ಯದ ಚಿನ್ನದ ಒಡವೆ ಖರೀದಿಸಿದರೆ 1,000 ರೂ ಮೌಲ್ಯದ ಗಿಫ್ಟ್ ವೋಚರ್ ನೀಡುತ್ತಿದೆ.
  • ಅಕ್ಷಯ ತೃತೀಯಕ್ಕೆ ಆಫರ್ ಅಗಿ ಮಲಬಾರ್ ಗೋಲ್ಡ್​ನಲ್ಲಿ ಒಡವೆ ಖರೀದಿಸಿದರೆ ಚಿನ್ನದ ನಾಣ್ಯವನ್ನು ಗಿಫ್ಟ್ ಆಗಿ ನೀಡಲಾಗುವುದು.

ನವದೆಹಲಿ: ಅಕ್ಷಯ ತೃತೀಯ ದಿನದಂದು (Akshaya Tritiya 2023) ಚಿನ್ನ ಅಥವಾ ಬೆಳ್ಳಿ ಖರೀದಿಸಿದರೆ ಮನೆಯಲ್ಲಿ ಸಂಪತ್ತು ಸಮೃದ್ಧಿಯಾಗಿರುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಈ ವರ್ಷ ಅಕ್ಷಯ ತೃತೀಯ ಏಪ್ರಿಲ್ 22, ಶನಿವಾರದಂದು ಇದೆ. ಈ ಹಿನ್ನೆಲೆಯಲ್ಲಿ ಜನರನ್ನು ಪೈಪೋಟಿಯ ಮೇಲೆ ಆಕರ್ಷಿಸಲು ವಿವಿಧ ಒಡವೆ ವ್ಯಾಪಾರಿಗಳು ಮುಗಿಬಿದ್ದಿದ್ದಾರೆ. ಹೀಗಾಗಿ, ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳ ಖರೀದಿ ಮೇಲೆ ವಿವಿಧ ಆಭರಣದಂಗಡಿಗಳು ತರಹಾವೇರಿ ಡಿಸ್ಕೌಂಟ್​ಗಳನ್ನು ಆಫರ್ ಮಾಡಿದ್ದಾರೆ. ಚಿನ್ನದ ಬೆಲೆ ಏರಿಕೆ ಮಧ್ಯೆ ಈ ಡಿಸ್ಕೌಂಟ್​ಗಳು ಜನರನ್ನು ಅಕ್ಷಯ ತೃತೀಯ ದಿನದಂದು ಒಡವೆ ಅಂಗಡಿಗಳಿಗೆ ಎಡತಾಕುವಂತೆ ಮಾಡಬಹುದು. ಕೆಲವರು ಗಿಫ್ಟ್ ವೋಚರ್ ಮೂಲಕ ರಿಯಾಯಿತಿ ಕೊಟ್ಟರೆ, ಇನ್ನೂ ಕೆಲವರು ನೇರವಾಗಿಯೇ ಡಿಸ್ಕೌಂಟ್ ಬೆಲೆಯಲ್ಲಿ ಆಭರಣ ಮಾರುತ್ತಿದ್ದಾರೆ. ಇಂತಹ ಕೆಲ ಆಭರಣ ವ್ಯಾಪಾರಿಗಳ ಅಕ್ಷಯ ತೃತೀಯ ನಿಮಿತ್ತದ ಡಿಸ್ಕೌಂಟ್​ನ ವಿವರ ಇಲ್ಲಿದೆ:

ಅಕ್ಷಯ ತೃತೀಯಕ್ಕೆ ಜಾಯಲುಕ್ಕಾಸ್ ಗಿಫ್ಟ್ ವೋಚರ್ ಆಫರ್:

ಬೆಂಗಳೂರು ಸೇರಿದಂತೆ ದೇಶಾದ್ಯಂತ ಮಳಿಗೆಗಳನ್ನು ಹೊಂದಿರುವ ಜಾಯ್ ಅಲೂಕ್ಕಾಸ್ ಸಂಸ್ಥೆ ಅಕ್ಷಯ ತೃತೀಯ ದಿನದಂದು ಗಿಫ್ಟ್ ವೋಚರ್​ಗಳ ಮೂಲಕ ಜನರನ್ನು ಆಕರ್ಷಿಸುತ್ತಿದೆ. 10,000 ರೂಗೂ ಹೆಚ್ಚು ಬೆಲೆಯ ಬೆಳ್ಳಿ ಆಭರಣಗಳನ್ನು ಖರೀದಿಸಿದರೆ 500 ರೂ ಗಿಫ್ಟ್ ವೋಚರ್ ಅನ್ನು ಉಚಿತವಾಗಿ ಒದಗಿಸುವುದಾಗಿ ಹೇಳಿದೆ. 50,000 ರೂಗೂ ಹೆಚ್ಚು ಮೌಲ್ಯದ ಚಿನ್ನದ ಒಡವೆಗಳನ್ನು ಖರೀದಿಸಿದರೆ 1,000 ರೂ ಮೌಲ್ಯದ ಗಿಫ್ಟ್ ವೋಚರ್ ಕೊಡಲಿದೆ. ಹಾಗೆಯೇ, 50,000 ರೂ ಮೌಲ್ಯದ ವಜ್ರದ ಒಡವೆಗಳನ್ನು ಖರೀದಿಸಿದರೆ 2,000 ರೂ ಮೌಲ್ಯದ ವೋಚರ್​ಗಳು ಸಿಗುತ್ತವೆ.

ಗಮನಿಸಬೇಕಾದ ಸಂಗತಿ ಎಂದರೆ, ಇಲ್ಲಿ ಒಡವೆಗಳನ್ನು ಖರೀದಿಸಿದರೆ ಮಾತ್ರ ಈ ಗಿಫ್ಟ್ ವೋಚರ್ ಭಾಗ್ಯ ಸಿಗುತ್ತದೆ. ಚಿನ್ನ ಮತ್ತು ಬೆಳ್ಳಿಯ ಗಟ್ಟಿ, ನಾಣ್ಯ, ಬಾರ್ ಇತ್ಯಾದಿ ಖರೀದಿಸಿದರೆ ಈ ಆಫರ್ ಸಿಗುವುದಿಲ್ಲ. ದೇಶಾದ್ಯಂತ ಇರುವ ಜಾಯಲುಕ್ಕಾಸ್ ಶೋರೂಮುಗಳಲ್ಲಿ ಚಿನ್ನ, ಬೆಳ್ಳಿ, ವಜ್ರದ ಆಭರಣಗಳನ್ನು ಖರೀದಿಸಿದರೆ ಈ ಗಿಫ್ಟ್ ವೋಚರ್ ಆಫರ್ ಪಡೆಯಬಹುದು. ಅದರ ವೆಬ್​ಸೈಟ್ ಮೂಲಕವೂ ನೀವು ಒಡವೆಗಳನ್ನು ಬುಕ್ ಮಾಡಿ ಈ ಆಫರ್ ಸ್ವೀಕರಿಸಬಹುದು. 2023, ಏಪ್ರಿಲ್ 23ರವರೆಗೂ ಈ ಆಫರ್ ಇದೆ.

ಕೆರಟ್​ಲೇನ್​ನಲ್ಲಿ ಅಕ್ಷಯ ತೃತೀಯಕ್ಕೆ ವಜ್ರದ ಮೇಲೆ ಶೇ. 20ರಷ್ಟು ಡಿಸ್ಕೌಂಟ್

ಟಾಟಾ ಪಾಲುದಾರಿಕೆ ಇರುವ ವಜ್ರದ ಅಂಗಡಿ ಕ್ಯಾರಟ್​ಲೇನ್​ನಲ್ಲಿ ಅಕ್ಷಯ ತೃತೀಯ ದಿನಕ್ಕೆ ಭರ್ಜರಿ ಶೇ. 20ರಷ್ಟು ರಿಯಾಯಿತಿಯ ಅಮೋಘ ಆಫರ್ ಮುಂದಿಟ್ಟಿದೆ. ಎಸ್​ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಾವತಿ ಮಾಡಿದರೆ ಇನ್ನಷ್ಟು ಶೇ. 5 ಡಿಸ್ಕೌಂಟ್ ಸಿಗುತ್ತದೆ. 2023 ಏಪ್ರಿಲ್ 22ರವರೆಗೂ ಈ ಆಫರ್ ಇದೆ.

ಮಿಥುನ್ ಸಾಚೇತಿ ಮತ್ತು ಶ್ರೀನಿವಾಸ ಗೋಪಾಲನ್ ಮಾಲಕತ್ವದ Caratlane ಸಂಸ್ಥೆ ವಜ್ರದ ಉತ್ಪನ್ನಗಳನ್ನು ಬಹಳ ಕಡಿಮೆ ಬೆಲೆಗೆ ಮಾರುತ್ತದೆ. 2016ರಲ್ಲಿ ಟಾಟಾ ಗ್ರೂಪ್​ಗೆ ಸೇರಿದ ಟೈಟಾನ್ ಸಂಸ್ಥೆ ಕೆರಟ್​ಲೇನ್ ಕಂಪನಿಯ ಶೇ. 62ರಷ್ಟು ಪಾಲನ್ನು ಖರೀದಿಸಿತು. ಈಗ ಟೈಟಾನ್ ಒಡೆತನದ ತಾನಿಷ್ಕ್ ಜ್ಯುವೆಲರೀಸ್ ಮತ್ತು ಕೆರಟ್​ಲೇನ್ ಎರಡೂ ಪಾರ್ಟ್ನರ್ ಕಂಪನಿಗಳೆನಿಸಿವೆ.

ಮೇಕಿಂಗ್ ಚಾರ್ಜಸ್​ನಲ್ಲಿ ಡಿಸ್ಕೌಂಟ್ ಕೊಡುತ್ತಿರುವ ತಾನಿಷ್ಕ್, ಪಿಪಿ ಜ್ಯುವೆಲರ್ಸ್, ಮೆಲೋರಾ

ಟಾಟಾ ಒಡೆತನದ ತಾನಿಷ್ಕ್ ಜ್ಯುವೆಲರೀಸ್ ಅಂಗಡಿಗಳಲ್ಲಿ ಅಕ್ಷಯ ತೃತೀಯ ದಿನದ ನಿಮಿತ್ತವಾಗಿ ಚಿನ್ನ ಮತ್ತು ವಜ್ರದ ಆಭರಣಗಳ ಮೇಕಿಂಗ್ ಚಾರ್ಜಸ್ ಮೇಲೆ ಶೇ. 20ರಷ್ಟು ರಿಯಾಯಿತಿ ಕೊಡುವುದಾಗಿ ಆಫರ್ ಇಟ್ಟಿದೆ.

ಇನ್ನು, ಪಿಪಿ ಜ್ಯುವೆಲರ್ಸ್ ಇನ್ನೂ ಒಂದು ಹೆಜ್ಜೆ ಉದಾರಿಯಾಗಿದ್ದು, ಅಕ್ಷಯ ತೃತೀಯ ದಿನದಂದು ಮೇಕಿಂಗ್ ಚಾರ್ಜಸ್ ಮೇಲೆ ಶೇ. 50ರಷ್ಟು ರಿಯಾಯಿತಿಯ ಆಫರ್ ಕೊಟ್ಟಿದೆ.

ಅಕ್ಷಯ ತೃತೀಯಕ್ಕೆ ಮಲಬಾರ್ ಗೋಲ್ಡ್​​ನಲ್ಲಿ ಗೋಲ್ಡ್ ಕಾಯಿನ್ ಗಿಫ್ಟ್

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆಗಳಲ್ಲಿ ಇನ್ನೂ ಭರ್ಜರಿ ಕೊಡುಗೆಗಳು ಅಕ್ಷಯ ತೃತೀಯಕ್ಕೆ ಜನರಿಗಾಗಿ ಕಾದಿವೆ. 30,000 ರೂ ಮೌಲ್ಯದ ಚಿನ್ನದ ಆಭರಣ ಖರೀದಿಸಿದರೆ 100 ಎಂಜಿ (ಮಿಲಿಗ್ರಾಮ್) ತೂಕದ ಗೋಲ್ಡ್ ಕಾಯಿನ್ ಗಿಫ್ಟ್ ಆಗಿ ಸಿಗುತ್ತದೆ. ವಜ್ರ, ಪೊಲ್ಕಿ ಡಿಸೈನ್, ಜೆಮ್​ಸ್ಟೋನ್​ಗಳನ್ನು 30,000 ರೂ ಮೊತ್ತದಷ್ಟು ಖರೀದಿಸಿದರೆ 250 ಎಂಜಿ ಗೋಲ್ಡ್ ಕಾಯಿನ್ ನೀಡಲಾಗುತ್ತದೆ. ಇಲ್ಲಿ ಎಂಜಿ ಎಂದರೆ ಮಿಲಿಗ್ರಾಮ್. 1,000 ಎಂಜಿ ಸೇರಿದರೆ 1 ಗ್ರಾಮ್ ಆಗುತ್ತದೆ.

ಮಲಬಾರ್ ಗೋಲ್ಡ್​ನಲ್ಲಿ ಈ ಗೋಲ್ಡ್ ಕಾಯಿನ್ ಗಿಫ್ಟ್ ಜೊತೆಗೆ ಎಚ್​ಡಿಎಫ್​ಸಿ ಬ್ಯಾಂಕ್ ಗ್ರಾಹಕರಿಗೆ ಡಬಲ್ ಧಮಾಕ ಸಿಗುತ್ತದೆ. ಎಚ್​​ಡಿಎಫ್​ಸಿ ಕಾರ್ಡ್ ಬಳಸಿ ಇಲ್ಲಿ ಒಡವೆಗಳನ್ನು ಖರೀದಿಸಿದರೆ ಶೇ. 5ರಷ್ಟು ಕ್ಯಾಷ್​ಬ್ಯಾಕ್ ಸಿಗುತ್ತದೆ. 2023 ಏಪ್ರಿಲ್ 23ರವರೆಗೂ ಈ ಆಫರ್ ಇದೆ.

ಬೆಂಗಳೂರು ಮೂಲದ ಮೆಲೋರಾ ಜ್ಯುವೆರ್ಲ್ಸ್​ನಿಂದ ಟ್ರಿಪಲ್ ಧಮಾಕ

ಬೆಂಗಳೂರು ಮೂಲದ ಮೆಲೋರಾ ಜ್ಯುವೆಲರ್ಸ್ ಸಂಸ್ಥೆ (Melorra Jewellers) ಅಕ್ಷಯ ತೃತೀಯ ದಿನಕ್ಕೆಂದು ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್ ಮೇಲೆ ಶೇ. 50ರಷ್ಟು ಡಿಸ್ಕೌಂಟ್ ಆಫರ್ ಮಾಡಿದೆ. ಇನ್ನು, ವಜ್ರಗಳ ಮೇಲೆ ನೇರವಾಗಿ ಶೇ. 25ರಷ್ಟು ರಿಯಾಯಿತಿ ಕೊಡುತ್ತಿದೆ. ಇದು ಸಾಲದು ಎಂಬಂತೆ ಐಸಿಐಸಿಐನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗಳನ್ನು ಸ್ವೈಪ್ ಮಾಡಿ ಒಡವೆ ಖರೀದಿಸಿದರೆ ನೇರವಾಗಿ ಶೇ. 10ರಷ್ಟು ಡಿಸ್ಕೌಂಟ್ ಕೊಡಲಾಗುತ್ತಿದೆ. ಪ್ರೀಪೇಯ್ಡ್ ಆರ್ಡರ್​ಗಳ ಮೇಲೆ ಹೆಚ್ಚುವರಿ ಶೇ. 2 ರಿಯಾಯಿತಿಯನ್ನೂ ಕೊಡಲಾಗುತ್ತಿದೆ.

Candereಯಲ್ಲಿ ಮೇಕಿಂಗ್ ಚಾರ್ಜಸ್ ಇಲ್ಲದೇ ಆಭರಣ ಆಫರ್

ಕಲ್ಯಾಣ್ ಜ್ಯುವೆಲರ್ಸ್ ಮಾಲಕತ್ವದ ಕ್ಯಾಂಡೆರೆ ಜ್ಯುವೆಲರ್ಸ್ ಕೂಡ ಅಕ್ಷಯ ತೃತೀಯಕ್ಕೆ ವಿಶೇಷ ಆಫರ್​ಗಳನ್ನು ಮುಂದಿಟ್ಟು ಗ್ರಾಹಕರನ್ನು ಸೆಳೆಯುತ್ತಿದೆ. ಇಲ್ಲಿ ಡೈಮಂಡ್ ಒಡವೆ ಮೇಲೆ ನೂರು ಪ್ರತಿಶತದಷ್ಟು ಲೈಫ್​ಟೈಮ್ ಎಕ್ಸ್​ಚೇಂಜ್ ವ್ಯಾಲ್ಯೂ ಆಫರ್ ಮಾಡಿದೆ. ಏಪ್ರಿಲ್ 23ರವರೆಗೂ ಈ ಆಫರ್ ಇರುತ್ತದೆ. ಇದರ ಜೊತೆಗೆ ಚಿನ್ನ ಮತ್ತು ವಜ್ರದ ಆಭರಣಗಳ ಮೇಲಿನ ಮೆಕಿಂಗ್ ಚಾರ್ಜಸ್ ಅನ್ನು ರದ್ದು ಮಾಡಿದೆ. ಎಲ್ಲಾ ಪ್ರಮುಖ ಬ್ಯಾಂಕುಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗಳನ್ನು ಬಳಸಿ ಇಲ್ಲಿ ಶಾಪಿಂಗ್ ಮಾಡಿದರೆ ಶೇ. 3ರಷ್ಟು ಡಿಸ್ಕೌಂಟ್ ಕೂಡ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Thu, 20 April 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ಯುವತಿ ದೂರಿನ ಮೇರೆಗೆ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ
ಯುವತಿ ದೂರಿನ ಮೇರೆಗೆ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ
ಎಟಿಎಂನಲ್ಲಿ ಹೆಡೆ ಎತ್ತಿ ನಿಂತ ನಾಗರಹಾವು
ಎಟಿಎಂನಲ್ಲಿ ಹೆಡೆ ಎತ್ತಿ ನಿಂತ ನಾಗರಹಾವು
‘ಅತ್ತಿಗೆ ಪಟ್ಟ ಸಿಕ್ಕಿದ್ದಕ್ಕೆ ಖುಷಿ ಇದೆ’; ಸಂಗೀತಾ ಭಟ್ ಫಸ್ಟ್ ರಿಯಾಕ್ಷನ್
‘ಅತ್ತಿಗೆ ಪಟ್ಟ ಸಿಕ್ಕಿದ್ದಕ್ಕೆ ಖುಷಿ ಇದೆ’; ಸಂಗೀತಾ ಭಟ್ ಫಸ್ಟ್ ರಿಯಾಕ್ಷನ್