Post Office Deposit Scheme: ಅಂಚೆ ಇಲಾಖೆಯ ಟೈಮ್ ಡಿಪಾಸಿಟ್ ಯೋಜನೆಯಲ್ಲಿ ಎಫ್ಡಿಗಿಂತಲೂ ಹೆಚ್ಚು ಬಡ್ಡಿ; ಇಲ್ಲಿದೆ ವಿವರ
ಪೋಸ್ಟ್ ಆಫೀಸ್ ಠೇವಣಿ ಯೋಜನೆ: ಸರ್ಕಾರದಿಂದ ಬೆಂಬಲಿತ ಯೋಜನೆಯಾಗಿರುವ ಕಾರಣ ಈ ಠೇವಣಿ ಹೆಚ್ಚು ಸುರಕ್ಷಿತವಾಗಿದೆ. ಠೇವಣಿ ಇಟ್ಟ ಮೊತ್ತಕ್ಕೆ ಮತ್ತು ಬಡ್ಡಿಗೆ ಸರ್ಕಾರ ಗ್ಯಾರಂಟಿ ನೀಡುತ್ತದೆ. ಒಂದು ಹಂತದ ವರೆಗಿನ ಬಡ್ಡಿಯ ಮೊತ್ತಕ್ಕೆ ತೆರಿಗೆ ವಿನಾಯಿತಿಯೂ ಇದೆ.
ಅಂಚೆ ಇಲಾಖೆಯ (Post Office) ಟೈಮ್ ಡಿಪಾಸಿಟ್ ಸ್ಕೀಮ್ (Time Deposit Scheme) ಒಂದು ಸ್ಥಿರ ಠೇವಣಿ ಯೋಜನೆಯಾಗಿದ್ದು, ಬ್ಯಾಂಕ್ ಎಫ್ಡಿಗಿಂತ ಹೆಚ್ಚಿನ ಬಡ್ಡಿ ನೀಡುತ್ತಿದೆ. ಜತೆಗೆ ತೆರಿಗೆ ವಿನಾಯಿತಿಯೂ ಪಡೆಯಬಹುದಾಗಿದೆ. ನಿರ್ದಿಷ್ಟ ಸಮಯಕ್ಕೆ ಪೂರ್ವನಿಗದಿತ ಬಡ್ಡಿ ದರಕ್ಕನುಗುಣವಾಗಿ ಠೇವಣಿ ಇಡಲು ಈ ಯೋಜನೆಯಡಿ ಅವಕಾಶವಿದೆ. ಉಳಿತಾಯ ಖಾತೆಯ ಬಡ್ಡಿ ದರಕ್ಕೆ ಹೋಲಿಸಿದರೆ ಅಂಚೆ ಇಲಾಖೆಯ ಈ ಯೋಜನೆ ಹೆಚ್ಚು ಬಡ್ಡಿ ತಂದುಕೊಡುವುದರ ಜತೆಗೆ ಸುರಕ್ಷಿತವೂ ಆಗಿದೆ. ಇದು ಭಾರತ ಸರ್ಕಾರ ಬೆಂಬಲಿತ ಹೂಡಿಕೆ ಯೋಜನೆಯಾಗಿದೆ.
ಟೈಮ್ ಡೆಪಾಸಿಟ್ ಸ್ಕೀಮ್ ವಿವರ
ಟೈಮ್ ಡಿಪಾಸಿಟ್ ಸ್ಕೀಮ್ ಅಡಿ ಕನಿಷ್ಠ 1 ವರ್ಷ ಹಾಗೂ ಗರಿಷ್ಠ 5 ವರ್ಷಗಳ ವರೆಗೆ ಠೇವಣಿ ಇಡಬಹುದು. 200 ರೂ. ಮತ್ತು ಇದರ ಮಲ್ಟಿಪಲ್ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಸಮೀಪದ ಅಂಚೆ ಕಚೇರಿಗೆ ತೆರಳಿ ಅಥವಾ ಆನ್ಲೈನ್ ಮೂಲಕ ಠೇವಣಿ ತೆರೆಯಬಹುದಾಗಿದೆ. ವೈಯಕ್ತಿಕವಾಗಿ ಮತ್ತು ಜಂಟಿ ಖಾತೆಗಳನ್ನು ತೆರೆಯಲೂ ಅವಕಾಶವಿದೆ. ಬಡ್ಡಿಯನ್ನು ತಿಂಗಳಿಗೊಮ್ಮೆ, ತ್ರೈಮಾಸಿಕ ಅವಧಿಗೊಮ್ಮೆ, ಅರ್ಧ ವಾರ್ಷಿಕ ಹಾಗೂ ಮೆಚ್ಯೂರಿಟಿಗೆ ಪಡೆಯಲು ಅವಕಾಶವಿದೆ. ಬ್ಯಾಂಕ್ ಎಫ್ಡಿಗಿಂತ ಹೆಚ್ಚು ಬಡ್ಡಿ ಈ ಯೋಜನೆಯಲ್ಲಿ ದೊರೆಯುತ್ತದೆ.
ನಿಗದಿತ ಮಿತಿಯ ಒಳಗಿನ ಬಡ್ಡಿಗೆ ತೆರಿಗೆ ಇಲ್ಲ
ಸರ್ಕಾರದಿಂದ ಬೆಂಬಲಿತ ಯೋಜನೆಯಾಗಿರುವ ಕಾರಣ ಈ ಠೇವಣಿ ಹೆಚ್ಚು ಸುರಕ್ಷಿತವಾಗಿದೆ. ಠೇವಣಿ ಇಟ್ಟ ಮೊತ್ತಕ್ಕೆ ಮತ್ತು ಬಡ್ಡಿಗೆ ಸರ್ಕಾರ ಗ್ಯಾರಂಟಿ ನೀಡುತ್ತದೆ. ಒಂದು ಹಂತದ ವರೆಗಿನ ಬಡ್ಡಿಯ ಮೊತ್ತಕ್ಕೆ ತೆರಿಗೆ ವಿನಾಯಿತಿಯೂ ಇದೆ. ಟೈಮ್ ಡಿಪಾಸಿಟ್ ಸ್ಕೀಮ್ ಅಡಿ ಠೇವಣಿ ಆರಂಭಿಸುವುದು ಬಹು ಸುಲಭವಾಗಿದೆ. ಸಮೀಪದ ಅಥವಾ ನಮಗೆ ಅನುಕೂಲ ಎನಿಸುವ ಯಾವುದೇ ಅಂಚೆ ಕಚೇರಿಗೆ ತೆರಳಿ ಠೇವಣಿ ಖಾತೆ ತೆರೆಯಬಹುದಾಗಿದೆ. ಮನೆಯಲ್ಲೇ ಇದ್ದುಕೊಂಡು ಆನ್ಲೈನ್ ಪೋರ್ಟಲ್ ಮೂಲಕ ಖಾತೆ ಆರಂಭಿಸಲೂ ಅವಕಾಶವಿದೆ.
ಇದನ್ನೂ ಓದಿ: India Post Payments Bank: ಅಂಚೆ ಇಲಾಖೆಯಿಂದ ಕೇವಲ 399 ರೂ.ಗೆ ಅಪಘಾತ ವಿಮೆ, 10 ಲಕ್ಷ ರೂ. ಕವರೇಜ್
ಬ್ಯಾಂಕ್ಗಳ ಎಫ್ಡಿ ದರ ಸರಾಸರಿ ಶೇಕಡಾ 5.5ರಿಂದ 6.5ರ ವರೆಗೆ ಇದ್ದರೆ ಅಂಚೆ ಇಲಾಖೆ ಟೈಮ್ ಡಿಪಾಸಿಟ್ ಸ್ಕೀಮ್ ಬಡ್ಡಿ ದರ ಸರಾಸರಿ ಶೇಕಡಾ 5.5ರಿಂದ 6.7ರ ವರಗೆ ಇದೆ. ಗಮನಿಸಬೇಕಾದ ಅಂಶವೆಂದರೆ, ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ಇರುವುದಿಲ್ಲ. 6 ತಿಂಗಳ ನಂತರ ಅವಧಿಪೂರ್ವ ಹಿಂಪಡೆಯುವಿಕೆಗೆ ಅವಕಾಶವಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:27 pm, Tue, 27 December 22