ಪಿಪಿಎಫ್​ನಿಂದ ಟ್ರಿಪಲ್ ಲಾಭ; ಉಳಿತಾಯ, ದೀರ್ಘಾವಧಿ ಹೂಡಿಕೆ, ತೆರಿಗೆ ಲಾಭ

|

Updated on: May 30, 2024 | 6:42 PM

PPF triple benefits: ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮೂರು ರೀತಿಯ ಪ್ರಮುಖ ಪ್ರಯೋಜನಗನ್ನು ನೀಡುತ್ತದೆ. ಸಣ್ಣ ಪ್ರಮಾಣದ ಹಣ ಉಳಿತಾಯಕ್ಕೆ ಪ್ರೇರಣೆ ಆಗಬಲ್ಲುದು. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಮಾಡಲು ಅವಕಾಶ ಕೊಡುತ್ತದೆ. ಉತ್ತಮ ಬಡ್ಡಿ ಸಿಗುತ್ತದೆ. ತೆರಿಗೆ ಲಾಭವನ್ನೂ ಕೊಡುತ್ತದೆ. ವರ್ಷಕ್ಕೆ ಒಂದೂವರೆ ಸಾವಿರ ರೂನಿಂದ ಏಳೂವರೆ ಸಾವಿರ ರೂವರೆಗೆ ತೆರಿಗೆ ಉಳಿಸಬಹುದು. ದೀರ್ಘಾವಧಿ ಹೂಡಿಕೆಯ ಪರಿಣಾಮವಾಗಿ ಒಳ್ಳೆಯ ರಿಟರ್ನ್ ಸಿಗುತ್ತದೆ.

ಪಿಪಿಎಫ್​ನಿಂದ ಟ್ರಿಪಲ್ ಲಾಭ; ಉಳಿತಾಯ, ದೀರ್ಘಾವಧಿ ಹೂಡಿಕೆ, ತೆರಿಗೆ ಲಾಭ
ಪಿಪಿಎಫ್
Follow us on

ಸರ್ಕಾರದಿಂದ ನಿರ್ವಹಿಸಲಾಗುವ ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ (PPF- Public Provident Fund) ಜನಪ್ರಿಯವಾಗುತ್ತಿದೆ. 15 ವರ್ಷದ ಈ ಯೋಜನೆಯಲ್ಲಿ ಒಂದು ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆಗೆ ಅವಕಾಶ ಇದೆ. ಸರ್ಕಾರದಿಂದ ನಡೆಸಲಾಗುತ್ತಿರುವುದರಿಂದ ಈ ಸ್ಕೀಮ್ ಗ್ಯಾರಂಟಿ ರಿಟರ್ನ್ ಕೊಡುತ್ತದೆ. ಇದರ ಜೊತೆಗೆ ತೆರಿಗೆ ಲಾಭ ತರುತ್ತದೆ. ದೀರ್ಘಾವಧಿ ಹೂಡಿಕೆ ಮೂಲಕ ನಿಮ್ಮ ಹಣದ ಬೆಳವಣಿಗೆಗೆ ಕಾಂಪೌಂಡಿಂಗ್ ಎಫೆಕ್ಟ್ ಕೂಡ ವೇಗ ಕೊಡುತ್ತದೆ. ಪಿಪಿಎಫ್ ಖಾತೆಯನ್ನು ನೀವು ಪ್ರಮುಖ ವಾಣಿಜ್ಯ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಲ್ಲಿ ಪಡೆಯಬಹುದಾಗಿದೆ. ಒಂದು ವರ್ಷದಲ್ಲಿ ಒಂದೂವರೆ ಲಕ್ಷ ರೂವರೆಗೆ ನೀವು ಎಷ್ಟು ಬೇಕಾದರೂ ಹಣವನ್ನು ಪಿಪಿಎಫ್ ಖಾತೆಗೆ ತುಂಬಿಸಬಹುದು. ಒಂದೇ ಸಲಕ್ಕೆ ಸಾಧ್ಯವಾಗದೇ ಹೋದರೂ ಹಲವು ಬಾರಿ ಸಣ್ಣ ಸಣ್ಣ ಮೊತ್ತಗಳನ್ನು ಖಾತೆಗೆ ಜಮೆ ಮಾಡಬಹುದು. ಹೀಗಾಗಿ, ಪಿಪಿಎಫ್ ಸ್ಕೀಮ್ ಬಹಳ ಸರಳ ಮತ್ತು ಸುಲಭದ ಯೋಜನೆ ಎನಿಸಿದೆ. ಈ ಸ್ಕೀಮ್​ನ ಮೂರು ಪ್ರಮುಖ ಪ್ರಯೋಜನಗಳ ಮಾಹಿತಿ ಇಲ್ಲಿದೆ…

ಪಿಪಿಎಫ್​ನಿಂದ ಖಾತ್ರಿ ಲಾಭ

ಪಿಪಿಎಫ್​ನಲ್ಲಿ ಸದ್ಯ ವರ್ಷಕ್ಕೆ 7.1 ಪ್ರತಿಶತದಷ್ಟು ಬಡ್ಡಿ ಸಿಗುತ್ತದೆ. ಸರ್ಕಾರದ್ದಾದ್ದರಿಂದ ಹಣಕ್ಕೆ ಖಾತ್ರಿ ಇದೆ. 15 ವರ್ಷದಲ್ಲಿ ಗರಿಷ್ಠ 40 ಲಕ್ಷ ರೂ ಹಣ ಗಳಿಸಬಹುದು. ಇನ್ನೂ ಹತ್ತು ವರ್ಷ, ಅಂದರೆ 25 ವರ್ಷಗಳವರೆಗೆ ವರ್ಷಂಪ್ರತಿ ಒಂದೂವರೆ ಲಕ್ಷ ರೂ ಹೂಡಿಕೆ ಮುಂದುವರಿಸಿದಲ್ಲಿ ಒಂದು ಕೋಟಿ ರೂ ರಿಟರ್ನ್ ಪಡೆಯಬಹುದು.

ಇದನ್ನೂ ಓದಿ: ಹೂಡಿಕೆದಾರ ಮೀನಾಕ್ಷಿ ಶ್ರೀಕಾಂತ್ ಷೇರು ಒಲ್ಲೆ ಎನ್ನುವುದೇಕೆ? ಪಿರಾಮಿಡ್ ಸ್ಟ್ರಕ್ಚರ್ ರೀತಿಯಲ್ಲಿದೆ ಅವರ ಇನ್ವೆಸ್ಟ್​ಮೆಂಟ್ ಸ್ಟ್ರಾಟಿಜಿ

ಪಿಪಿಎಫ್​ನಿಂದ ತೆರಿಗೆ ಉಳಿತಾಯ

ಪಿಪಿಎಫ್​ನಲ್ಲಿರುವ ಹೂಡಿಕೆಯ ಹಣಕ್ಕೆ ಐಟಿ ಸೆಕ್ಷನ್ 80 ಸಿ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇದೆ. ಒಂದರೆ ನೀವು ಒಂದು ವರ್ಷದಲ್ಲಿ ಒಂದೂವರೆ ಲಕ್ಷ ರೂ ಹೂಡಿಕೆ ಮಾಡಿದರೆ ಅಷ್ಟು ಮೊತ್ತಕ್ಕೆ ಆದಾಯ ತೆರಿಗೆ ಕಟ್ಟಬೇಕಿಲ್ಲ. ನೀವು ಶೇ. 10ರಷ್ಟು ತೆರಿಗೆ ಬ್ರ್ಯಾಕೆಟ್​ನಲ್ಲಿದ್ದರೆ ಒಂದೂವರೆ ಲಕ್ಷಕ್ಕೆ 1,500 ರೂ ಟ್ಯಾಕ್ಸ್ ಉಳಿಸಬಹುದು. ಶೇ. 20ರ ಟ್ಯಾಕ್ಸ್ ಗುಂಪಿನಲ್ಲಿದ್ದರೆ 3,000 ರೂ ತೆರಿಗೆ ಉಳಿಸಬಹುದು.

ದೀರ್ಘಾವಧಿ ಹೂಡಿಕೆಯಿಂದ ಹೆಚ್ಚು ಲಾಭ

ಪಿಪಿಎಫ್​ನ ಲಾಕ್ ಇನ್ ಅವಧಿ 15 ವರ್ಷ ಇದೆ. ವಿಶೇಷ ಎಂದರೆ 15 ವರ್ಷದ ಬಳಿಕ ನೀವು ಸ್ಕೀಮ್ ಅನ್ನು ವಿಸ್ತರಿಸಬಹುದು. ಪ್ರತೀ 5 ವರ್ಷಕ್ಕೊಮ್ಮೆ ವಿಸ್ತರಣೆ ಮಾಡಬಹುದು. ಇದರೊಂದಿಗೆ ಪಿಪಿಎಫ್ ಉತ್ತಮ ರಿಟೈರ್ಮೆಂಟ್ ಪ್ಲಾನ್ ಕೂಡ ಆಗಬಲ್ಲುದು.

ಇದನ್ನೂ ಓದಿ: Post Office Accident Insurance: 520 ರೂಗೆ 10 ಲಕ್ಷ ರೂ; 12 ರೂಗೆ 2 ಲಕ್ಷ ರೂ ಆಕ್ಸಿಡೆಂಟ್ ಕವರೇಜ್ ಕೊಡುವ ಅಂಚೆ ಕಚೇರಿ ಸ್ಕೀಮ್​ಗಳು

ದೀರ್ಘಾವಧಿ ಹೂಡಿಕೆಯ ವೈಶಿಷ್ಟ್ಯತೆ ಇರುವುದೇ ಹಣದ ಕಾಂಪೌಂಡಿಂಗ್ ಎಫೆಕ್ಟ್. ಉದಾಹರಣೆಗೆ ನೀವು ವರ್ಷಕ್ಕೆ ಒಂದೂವರೆ ಲಕ್ಷ ರೂನಂತೆ 15 ವರ್ಷ ಹೂಡಿಕೆ ಮಾಡಿದರೆ ಹೆಚ್ಚುವರಿ ಹಣ 18 ಲಕ್ಷ ರೂ ಸಿಗುತ್ತದೆ. ಅದೇ ನೀವು ಐದು ವರ್ಷ ವಿಸ್ತರಿಸಿದರೆ 36 ಲಕ್ಷ ರೂ ಬಡ್ಡಿ ಸಿಗುತ್ತದೆ. ಇನ್ನೂ ಐದು ವರ್ಷ ಮುಂದುವರಿಸಿದರೆ ಬಡ್ಡಿ ಹಣ 65 ಸಾವಿರ ರೂ ಆಗುತ್ತದೆ. ಮತ್ತೂ ಐದು ವರ್ಷಕ್ಕೆ, ಅಂದರೆ ಒಟ್ಟಾರೆ 30 ವರ್ಷ ಇದೇ ರೀತಿ ಹೂಡಿಕೆ ಮುಂದುವರಿದರೆ ಬಡ್ಡಿ ಮೊತ್ತ 1.1 ಕೋಟಿ ರೂ ಆಗುತ್ತದೆ. ಅಂದರೆ ಪ್ರತೀ ಐದು ವರ್ಷಕ್ಕೊಮ್ಮೆ ಬಡ್ಡಿಹಣ ಬಹುತೇಕ ದ್ವಿಗುಣಗೊಳ್ಳುತ್ತಾ ಹೋಗುತ್ತದೆ. ಇದುವೇ ಹಣದ ಕಾಂಪೌಂಡಿಂಗ್ ಎಫೆಕ್ಟ್.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ