ಪಿಪಿಎಫ್: ಎಲ್ಲಾ 15 ವರ್ಷಕ್ಕೂ ಒಂದೇ ಬಡ್ಡಿದರವಾ? ವರ್ಷದ ಕೊನೆಯಲ್ಲಿ ಮಾಡಿದ ಹೂಡಿಕೆಗೆ ಇಡೀ ವರ್ಷದ ಬಡ್ಡಿ ಸಿಗುತ್ತಾ? ಇಲ್ಲಿದೆ ಡೀಟೇಲ್ಸ್

|

Updated on: Apr 03, 2025 | 6:55 PM

PPF FAQs: ಸರ್ಕಾರದಿಂದ ನಡೆಸಲಾಗುತ್ತಿರುವ ಸ್ಮಾಲ್ ಫೈನಾನ್ಸ್ ಸ್ಕೀಮ್​​ಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಒಂದು. ಸದ್ಯ ಇದಕ್ಕೆ ವಾರ್ಷಿಕ ಶೇ. 7.1 ಬಡ್ಡಿ ಇದೆ. 15 ವರ್ಷದ ಈ ಸ್ಕೀಮ್​​ನಲ್ಲಿ ಇದೇ ಬಡ್ಡಿದರ ಫಿಕ್ಸ್ ಆಗಿರುವುದಿಲ್ಲ. ಪ್ರತೀ ತ್ರೈಮಾಸಿಕ ಅವಧಿಗೂ ಸರ್ಕಾರ ದರ ಪರಿಷ್ಕರಣೆ ಮಾಡುತ್ತದೆ. ಪಿಪಿಎಫ್ ಬಡ್ಡಿದರ ಆಗಾಗ್ಗೆ ಬದಲಾಗಬಹುದು.

ಪಿಪಿಎಫ್: ಎಲ್ಲಾ 15 ವರ್ಷಕ್ಕೂ ಒಂದೇ ಬಡ್ಡಿದರವಾ? ವರ್ಷದ ಕೊನೆಯಲ್ಲಿ ಮಾಡಿದ ಹೂಡಿಕೆಗೆ ಇಡೀ ವರ್ಷದ ಬಡ್ಡಿ ಸಿಗುತ್ತಾ? ಇಲ್ಲಿದೆ ಡೀಟೇಲ್ಸ್
ಪಿಪಿಎಫ್
Follow us on

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಎಂಬುದು ಸರ್ಕಾರದಿಂದ ನಡೆಸಲಾಗುವ ಉಳಿತಾಯ ಮತ್ತು ಹೂಡಿಕೆ ಯೋಜನೆಯಾಗಿದೆ. ಇದು ದೀರ್ಘಾವಧಿ ಹೂಡಿಕೆ ಉತ್ತೇಜಿಸಲು ಸರ್ಕಾರ ರೂಪಿಸಿರುವ ಸ್ಕೀಮ್. ಎಫ್​​ಡಿಯಷ್ಟು ಬಡ್ಡಿ ನೀಡುತ್ತದೆ ಇದು. ಪಿಪಿಎಫ್ (PPF- Public Provident Fund) 15 ವರ್ಷ ಅವಧಿಯ ಯೋಜನೆ. ಸದ್ಯ ಇದಕ್ಕೆ ಬಡ್ಡಿದರ ಶೇ. 7.1 ಇದೆ. ಆದರೆ, 15 ವರ್ಷದುದ್ದಕ್ಕೂ ಇದೇ ಬಡ್ಡಿ ದರ (PPF Interest Rates) ಇರುತ್ತದಾ ಎಂಬುದು ಹಲವರಿಗೆ ಇರುವ ಅನುಮಾನ. ಆದರೆ, ಬಡ್ಡಿದರ ನಿಶ್ಚಿತ ಇರುವುದಿಲ್ಲ. ಆಗಾಗ್ಗೆ ದರ ಬದಲಾವಣೆ ಆಗಬಹುದು. ಆ ಅವಕಾಶ ಇದೆ.

ಸರ್ಕಾರ ನಡೆಸುವ ಸ್ಮಾಲ್ ಸೇವಿಂಗ್ ಸ್ಕೀಮ್​​ಗಳಲ್ಲಿ ಪಿಪಿಎಫ್ ಒಂದು. ಸರ್ಕಾರ ಪ್ರತೀ ಕ್ವಾರ್ಟರ್​​​ಗೂ ಸ್ಮಾಲ್ ಸೇವಿಂಗ್ಸ್ ಸ್ಕೀಮ್​​ಗಳಿಗೆ ಬಡ್ಡಿದರವನ್ನು ಪ್ರಕಟಿಸುತ್ತದೆ. ಹೀಗಾಗಿ, ಪಿಪಿಎಫ್​​ಗೆ ಬಡ್ಡಿದರ ಕಾಲಕಾಲಕ್ಕೆ ಪರಿಷ್ಕರಣೆ ಆಗುತ್ತಿರುತ್ತದೆ. ಕಳೆದ ಒಂದು ದಶಕದಲ್ಲಿ ಪಿಪಿಎಫ್ ಮೇಲಿನ ಬಡ್ಡಿದರ ಶೇ. 8.7ರಿಂದ ಹಿಡಿದು ಶೇ. 7.1ರವರೆಗೆ ವ್ಯತ್ಯಯಗಳಾಗಿವೆ. ಆರ್​​ಬಿಐನಿಂದ ಗಣನೀಯವಾಗಿ ರಿಪೋ ದರ ಕಡಿತ ಆದಲ್ಲಿ ಪಿಪಿಎಫ್ ದರ ಶೇ. 7ಕ್ಕಿಂತಲೂ ಕಡಿಮೆಗೆ ಇಳಿಕೆ ಆಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಚೆಕ್ ಲೀಫ್ ಅಪ್​ಲೋಡ್ ಬೇಕಿಲ್ಲ; ಇಪಿಎಫ್​​ನಲ್ಲಿ ಈ ಎರಡು ಕ್ರಮಗಳ ಎಫೆಕ್ಟ್; ಸೆಟಲ್ಮೆಂಟ್ ಪ್ರಕ್ರಿಯೆ ಈಗ ಇನ್ನೂ ವೇಗ

ಇದನ್ನೂ ಓದಿ
ಈ ಎರಡು ಕ್ರಮಗಳಿಂದ ಇಪಿಎಫ್​ ಪ್ರಕ್ರಿಯೆ ಮತ್ತಷ್ಟು ಸಲೀಸು
ಸರ್ಕಾರದಿಂದ ಎಸ್​​ಜಿಬಿ ಬಾಕಿ 1.2 ಲಕ್ಷ ಕೋಟಿ ರೂ?
ಎಟಿಎಂ ಟ್ರಾನ್ಸಾಕ್ಷನ್, ಮೇ 1ರಿಂದ ಶುಲ್ಕ ಹೆಚ್ಚಳ
ಒಂದಕ್ಕಿಂತ ಹೆಚ್ಚು ಇನ್ಷೂರೆನ್ಸ್ ಪಾಲಿಸಿ ಬಳಸುವುದು ಹೇಗೆ?

ಪಿಪಿಎಫ್ ಖಾತೆಗೆ ವರ್ಷದ ಕೊನೆಯಲ್ಲಿ ಹಣ ಹಾಕಿದರೆ ಇಡೀ ವರ್ಷಕ್ಕೆ ಬಡ್ಡಿ ಸಿಗುತ್ತಾ?

ಪಿಪಿಎಫ್ ಯೋಜನೆಯಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಒಮ್ಮೆ ಬೇಕಾದರೂ ಹಣ ಹಾಕಬಹುದು, ಅಥವಾ ವರ್ಷಾದ್ಯಂತ ವಿವಿಧ ಮೊತ್ತಗಳನ್ನು ಡೆಪಾಸಿಟ್ ಮಾಡಬಹುದು. ಏಪ್ರಿಲ್ 1ರಿಂದ ಮುಂದಿನ ವರ್ಷದ ಮಾರ್ಚ್ 31ರವರೆಗೂ ಹಣಕಾಸು ವರ್ಷ ಇರುತ್ತದೆ. ಮಾರ್ಚ್ 31ಕ್ಕೆ ಡೆಪಾಸಿಟ್ ಮಾಡಿದರೆ ಆ ಹಣಕಾಸು ವರ್ಷದ ಪಾಲಿನ ಬಡ್ಡಿ ನೀಡಲಾಗುತ್ತದಾ? ಹಾಗಾಗುವುದಿಲ್ಲ. ಪಿಪಿಎಫ್​​ನಲ್ಲಿ ಠೇವಣಿ ಹೇಗೆ ಜಮೆ ಆಗುತ್ತದೆ, ಅದಕ್ಕೆ ಬಡ್ಡಿ ಹೇಗೆ ಗಣಿಸಲಾಗುತ್ತದೆ ಎಂಬುದು ಬೇರೆಯೇ ಲೆಕ್ಕಾಚಾರ.

ಯಾವುದೇ ತಿಂಗಳ 5ನೇ ತಾರೀಖಿನಿಂದ ಹಿಡಿದು ಆ ತಿಂಗಳ ಕೊನೆಯವರೆಗೆ, ಪಿಪಿಎಫ್ ಅಕೌಂಟ್​​ನಲ್ಲಿ ಅತೀ ಕಡಿಮೆ ಬ್ಯಾಲನ್ಸ್ ಇರುವುದನ್ನು ಬಡ್ಡಿಗೆ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಏಪ್ರಿಲ್-ಜೂನ್ ಕ್ವಾರ್ಟರ್​​ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪ್ರಕಟ

ಉದಾಹರಣೆಗೆ, ಏಪ್ರಿಲ್ 5ಕ್ಕೆ ನೀವು 20,000 ರೂ ಠೇವಣಿ ಇಡುತ್ತೀರಿ. ನಿಮ್ಮ ಪಿಪಿಎಫ್ ಅಕೌಂಟ್​​ನಲ್ಲಿರುವ ಮೊತ್ತ 1,70,000 ರೂ ಆಗುತ್ತದೆ. ಏಪ್ರಿಲ್ 30ಕ್ಕೆ ನೀವು ಮತ್ತಷ್ಟು 30,000 ರೂ ಹಾಕುತ್ತೀರಿ. ಆಗ ಒಟ್ಟು ಮೊತ್ತ 2,00,000 ರೂ ಆಗುತ್ತದೆ ಎಂದಿಟ್ಟುಕೊಳ್ಳಿ. ಆಗ ಏಪ್ರಿಲ್ 5ರಿಂದ 30ರ ಅವಧಿಯಲ್ಲಿ ನಿಮ್ಮ ಪಿಪಿಎಫ್ ಖಾತೆಯಲ್ಲಿ ಅತ್ಯಂತ ಕಡಿಮೆ ಬ್ಯಾಲನ್ಸ್ ಎಂದರೆ ಅದು 1,70,000 ರೂ ಆಗಿರುತ್ತದೆ. ಆ ಮೊತ್ತಕ್ಕೆ ಆ ತಿಂಗಳ ಬಡ್ಡಿ ನೀಡಲಾಗುತ್ತದೆ. ನೀವು ಏಪ್ರಿಲ್ 30ರಂದು ಹಾಕಿದ ಹಣಕ್ಕೆ ಮೇ ತಿಂಗಳಲ್ಲಿ ಬಡ್ಡಿ ಸಿಗುತ್ತದೆ.

ಈ ಕಾರಣಕ್ಕೆ ನೀವು ಮಾಸಿಕವಾಗಿ ಠೇವಣಿ ಇಡುವ ಅಭ್ಯಾಸ ಇಟ್ಟುಕೊಂಡಿದ್ದರೆ ತಿಂಗಳ 5ನೇ ತಾರೀಕಿನೊಳಗೆ ಹಾಕುವುದು ಉತ್ತಮ. ಹಾಗೆಯೇ, ವರ್ಷಕ್ಕೊಮ್ಮೆ ಠೇವಣಿ ಇಡುತ್ತಿದ್ದರೆ ವರ್ಷದ ಆರಂಭದಲ್ಲೇ ಇಡುವುದು ಉತ್ತಮ. ಇದರಿಂದ ಹೆಚ್ಚು ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ