ಷೇರು ಮೇಲೆ ಹೂಡಿಕೆ ಮಾಡಿ ಒಂದು ವರ್ಷವಾದರೂ ನಿರೀಕ್ಷಿತ ಲಾಭ ಸಿಗುತ್ತಿಲ್ಲವಾ? ಈ ಅಂಶ ತಿಳಿದಿರಿ

Riskfree investment period: ರಿಸ್ಕ್ ಇಲ್ಲದೇ ಷೇರು ಮಾರುಕಟ್ಟೆಯಲ್ಲಿ ಹೇಗೆ ಹೂಡಿಕೆ ಮಾಡಬೇಕು ಎಂಬುದು ಹಲವರ ಸಂದೇಹ. ಆ ರೀತಿ ರಿಸ್ಕ್ ರಹಿತ ಹೂಡಿಕೆ ಯಾವುದೂ ಇಲ್ಲ. ರಿಸ್ಕ್ ಅಂಶ ಇದ್ದೇ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ತುಸು ಹೆಚ್ಚೇ ರಿಸ್ಕ್ ಇರಬಹುದು. ಆದರೆ, ದೀರ್ಘಾವಧಿ ಹೂಡಿಕೆ ಎಂಬ ತಂತ್ರ ಅನುಸರಿಸಿದರೆ ಷೇರು ಮಾರುಕಟ್ಟೆಯಲ್ಲಿ ರಿಸ್ಕ್ ಅಂಶ ತೀರಾ ಕಡಿಮೆ ಆಗುತ್ತದೆ.

ಷೇರು ಮೇಲೆ ಹೂಡಿಕೆ ಮಾಡಿ ಒಂದು ವರ್ಷವಾದರೂ ನಿರೀಕ್ಷಿತ ಲಾಭ ಸಿಗುತ್ತಿಲ್ಲವಾ? ಈ ಅಂಶ ತಿಳಿದಿರಿ
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 14, 2024 | 4:11 PM

ಮಾರುಕಟ್ಟೆ ಒಂದೇ ತೆರನಾಗಿ ಇರೋದಿಲ್ಲ ಇರಲ್ಲ. ಕಳೆದ ಮೂರು ವರ್ಷಗಳಿಂದ ಭಾರತೀಯ ಷೇರುಪೇಟೆ ಅದ್ವಿತೀಯ ಓಟದಲ್ಲಿದೆ. ಇಲ್ಲಿ ಹೂಡಿಕೆದಾರರು ಮುಟ್ಟಿದ್ದೆಲ್ಲವೂ ಚಿನ್ನ ಎಂದು ಭಾವಿಸುವ ಸಂದರ್ಭ. ಆದರೆ, ಪರಿಸ್ಥಿತಿ ಇದೇ ರೀತಿ ಮುಂದುವರಿಯಬಹುದು, ಅಥವಾ ರೇಖೆ ಹಿಮ್ಮುಖವಾಗಬಹುದು. ಕೋವಿಡ್​ನಂತಹ ಮಾರಕ ಹೊಸ ಕಾಯಿಲೆ ಎದುರಾಗಬಹುದು, ಷೇರು ಮಾರುಕಟ್ಟೆಯಲ್ಲಿ ದೊಡ್ಡ ಹಗರಣವೊಂದು ಸುಳಿದಾಡಬಹುದು, ಅಥವಾ ದೊಡ್ಡ ಯುದ್ಧವೇ ನಡೆಯಬಹುದು, ಹೀಗೆ ಯಾವುದಾದರೂ ದೊಡ್ಡ ಘಟನೆಯಾದರೆ ಮಾರುಕಟ್ಟೆ ಒಂದಷ್ಟು ಕಾಲ ಅಲುಗಾಡಿ ಹೋಗುತ್ತದೆ. ನೀವು ಮಾಡಿದ್ದ ಹೂಡಿಕೆ ನೀರಲ್ಲಿ ಹೋಮ ಮಾಡಿದಂತೆ ಆಯಿತಲ್ಲ ಎನಿಸಬಹುದು. ಹಾಗಿದ್ದರೆ ಅನಿಶ್ಚಿತ ಎನಿಸುವ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ಮಾಡುವುದೇ ತಪ್ಪಾ? ಖಂಡಿತ ಅಲ್ಲ.

ಷೇರು ಮಾರುಕಟ್ಟೆಯ ರಿಸ್ಕ್ ತಿಳಿದಿರಬೇಕು…

ಷೇರು ಮಾರುಕಟ್ಟೆ ಚಿನ್ನದ ಮೊಟ್ಟೆ ಇಡುವ ಕೋಳಿಯಲ್ಲ. ಮಲ್ಟಿಬ್ಯಾಗರ್ ಷೇರುಗಳು ಐದು ವರ್ಷದಲ್ಲಿ 10 ಪಟ್ಟು ಬೆಳೆದಿರುವುದನ್ನು ಕಂಡು ಎಲ್ಲಾ ಷೇರುಗಳೂ ಅದೇ ರೀತಿ ರಿಟರ್ನ್ ಕೊಡಬಲ್ಲುದು ಎಂದು ನಂಬಿಕೊಳ್ಳಲು ಆಗೊಲ್ಲ. ಐದು ವರ್ಷದಲ್ಲಿ ಮಲ್ಟಿಬ್ಯಾಗರ್ ಎನಿಸಿದ ಷೇರುಗಳು ನೋಡನೋಡುತ್ತಿದ್ದಂತೆಯೇ ಎರಡು ವರ್ಷದಲ್ಲಿ ಕುಸಿದುಹೋಗಬಹುದು. ಸಂಭಾವ್ಯತೆ ಹಲವಿರುತ್ತವೆ.

ಇದನ್ನೂ ಓದಿ: ಹಣದ ಮೌಲ್ಯ ಇವತ್ತೇ ಬೇರೆ ನಾಳೆಯೇ ಬೇರೆ; ಭವಿಷ್ಯಕ್ಕೆ ಎಷ್ಟು ಹಣ ಬೇಕಾಗಬಹುದು? ಇಲ್ಲಿದೆ ಸಿಂಪಲ್ ಸೂತ್ರ

ದೀರ್ಘಾವಧಿ ಹೂಡಿಕೆ ಅಗತ್ಯ; ಎಷ್ಟು ವರ್ಷ…?

ಕಳೆದ 25 ವರ್ಷಗಳ ಭಾರತೀಯ ಷೇರು ಮಾರುಕಟ್ಟೆಯ ಏರಿಳಿತದ ದತ್ತಾಂಶವನ್ನು ಪರಿಗಣಿಸಿ ನೋಡಿದರೆ ಒಂದು ಅಂಶ ಪ್ರಮುಖವಾಗಿ ಕಾಣುತ್ತದೆ. ಅದು ಕನಿಷ್ಠ 10 ವರ್ಷವಾದರೂ ಹೂಡಿಕೆ ಮಾಡಿದರೆ ನಷ್ಟದ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಲಾಭದ ಸಾಧ್ಯತೆ ಶೇ. 80ಕ್ಕಿಂತಲೂ ಹೆಚ್ಚಿರುತ್ತದೆ.

ಹೂಡಿಕೆ ಅವಧಿ ಮತ್ತು ನಷ್ಟದ ಸಾಧ್ಯತೆ

ಒಂದು ದಿನದ ಹೂಡಿಕೆ: ನಷ್ಟದ ಸಾಧ್ಯತೆ ಶೇ. 46

ಒಂದು ತಿಂಗಳು: ಶೇ. 38

6 ತಿಂಗಳು: ಶೇ. 35

1 ವರ್ಷ: ಶೇ. 24

3 ವರ್ಷ: ಶೇ. 7

5 ವರ್ಷ: ಶೇ. 0.1

10 ವರ್ಷ: 0

ಇದನ್ನೂ ಓದಿ: ತಾತ್ಕಾಲಿಕವಾಗಿ ಹಣದ ಅಗತ್ಯ ಇದೆಯಾ? ಷೇರು ಅಡ ಇಟ್ಟು ಸಾಲ ಪಡೆಯುವ ಅವಕಾಶ

ಈ ಮೇಲಿನ ಅಂಕಿ ಅಂಶವನ್ನು 1999ರ ಜೂನ್​ನಿಂದ ಈವರೆಗೆ ನಿಫ್ಟಿ50 ಸೂಚ್ಯಂಕವನ್ನು ಆಧರಿಸಿ ಪಡೆಯಲಾಗಿದೆ. ಇದರಲ್ಲಿ ಕನಿಷ್ಠ 5 ವರ್ಷವಾದರೂ ನಿಮ್ಮ ಹೂಡಿಕೆ ಇದ್ದರೆ ಅದು ಸುರಕ್ಷಿತವಾಗಿರುತ್ತದೆ. ಐದು ವರ್ಷದವರೆಗೆ ಆಗೊಲ್ಲವೆಂದರೆ ಕನಿಷ್ಠ ಮೂರು ವರ್ಷವಾದರೂ ನಿಮ್ಮ ಹೂಡಿಕೆ ಇರಬೇಕು.

ನಿಮ್ಮ ಹೂಡಿಕೆ ಅವಧಿ ಹೆಚ್ಚಾದಷ್ಟೂ ಲಾಭದ ಸಾಧ್ಯತೆ ಹೆಚ್ಚಾಗುತ್ತಾ ಹೋಗುತ್ತದೆ. ಐದು ವರ್ಷ ನಿಮ್ಮ ಹೂಡಿಕೆ ಅವಧಿ ಇದ್ದರೆ ಶೇ. 10ಕ್ಕಿಂತಲೂ ಹೆಚ್ಚು ಲಾಭ ಪಡೆಯುವ ಸಂಭವನೀಯತೆ 73 ಪ್ರತಿಶತ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ