Sign In

By signing in or creating an account, you agree with Associated Broadcasting Company's Terms & Conditions and Privacy Policy.

Amrit Kalash: ಅಧಿಕ ಬಡ್ಡಿ ನೀಡುವ ಎಸ್​ಬಿಐ ಅಮೃತ್ ಕಳಶ್ ಸ್ಕೀಮ್ ಮಾರ್ಚ್ 31ಕ್ಕೆ ಕೊನೆ

March 31st Last Date: ಎಸ್​ಬಿಐನ ವಿಶೇಷ ಎಫ್​ಡಿ ಪ್ಲಾನ್ ಆದ ಅಮೃತ್ ಕಳಶ್ ಯೋಜನೆಯನ್ನು ಪಡೆಯಲು ಮಾರ್ಚ್ 31ರವರೆಗೆ ಮಾತ್ರ ಕಾಲಾವಕಾಶ ಇದೆ. 400 ದಿನಗಳ ನಿಶ್ಚಿತ ಠೇವಣಿಯಾದ ಇದಕ್ಕೆ ಸಾಮಾನ್ಯ ಗ್ರಾಹಕರಿಗೆ ಶೇ. 7.1ರಷ್ಟು ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.6ರಷ್ಟು ಬಡ್ಡಿ ಸಿಗುತ್ತದೆ. ಎಸ್​ಬಿಐನ ಇತರ ರೆಗ್ಯುಲರ್ ಎಫ್​ಡಿ ಪ್ಲಾನ್​ಗಳಲ್ಲಿ ಶೇ. 7ರವರೆಗೂ ಬಡ್ಡಿ ಸಿಗುತ್ತದೆ. ಎರಡು ವರ್ಷದ ರೆಗ್ಯುಲರ್ ಎಫ್​ಡಿಗೆ ಶೇ. 7ರಷ್ಟು ಬಡ್ಡಿ ಇದೆ.

Amrit Kalash: ಅಧಿಕ ಬಡ್ಡಿ ನೀಡುವ ಎಸ್​ಬಿಐ ಅಮೃತ್ ಕಳಶ್ ಸ್ಕೀಮ್ ಮಾರ್ಚ್ 31ಕ್ಕೆ ಕೊನೆ
ಎಸ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 29, 2024 | 9:00 AM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಫರ್ ಮಾಡಿರುವ ಹಲವು ಠೇವಣಿ ಯೋಜನೆಗಳಲ್ಲಿ ಅಮೃತ್ ಕಳಶ್ ಸ್ಪೆಷಲ್ ಎಫ್​ಡಿ (SBI Amrit Kalash Special FD) ಸ್ಕೀಮ್ ಪ್ರಮುಖವಾದುದು. ರೆಗ್ಯುಲರ್ ಡೆಪಾಸಿಟ್​ಗಳಿಗಿಂತ ಅಮೃತ್ ಕಳಶ್ ಪ್ಲಾನ್​ನಲ್ಲಿ ಹೆಚ್ಚು ಬಡ್ಡಿ ಕೊಡಲಾಗುತ್ತದೆ. ಈ ವಿಶೇಷ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ ಮಾರ್ಚ್ 31ರವರೆಗೆ ಲಭ್ಯ ಇರುತ್ತದೆ. 2023ರ ಏಪ್ರಿಲ್ 12ರಂದು ಆರಂಭಗೊಂಡ ಈ ಪ್ಲಾನ್​ನ ಡೆಡ್​ಲೈನ್ ಅನ್ನು ಹಲವು ಬಾರಿ ವಿಸ್ತರಿಸಲಾಗಿದೆ. ಇದೀಗ ಮಾರ್ಚ್ 31ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ನಿಶ್ಚಿತ ಠೇವಣಿ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ. 7.1, ಹಿರಿಯ ನಾಗರಿಕರಿಗೆ ಶೇ. 7.6ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ.

ಎಸ್​ಬಿಐ ಅಮೃತ್ ಕಳಶ್ ಯೋಜನೆಯಲ್ಲಿ ನಿಶ್ಚಿತ ಠೇವಣಿ 400 ದಿನದ ಅವಧಿಯದ್ದಾಗಿರುತ್ತದೆ. ಇದರ ಮೇಲಿನ ಬಡ್ಡಿ ಹಣವನ್ನು ಮಾಸಿಕವಾಗಿ ಅಥವಾ ತ್ರೈಮಾಸಿಕವಾಗಿ, ಅಥವಾ ಅರ್ಧವಾರ್ಷಿಕವಾಗಿ ಪಡೆಯಬಹುದು.

ಎಸ್​ಬಿಐನ ಬೇರೆ ಠೇವಣಿಗಳಿಗೆ ಶೇ. 3.5ರಿಂದ ಶೇ. 7ರವರೆಗೂ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಬರುತ್ತದೆ. ಒಂದು ವರ್ಷದ ಠೇವಣಿಗೆ ಶೇ. 6.8ರಷ್ಟು ಬಡ್ಡಿ ನಿಗದಿ ಮಾಡಲಾಗಿದೆ. ಎರಡು ವರ್ಷದಿಂದ ಮೂರು ವರ್ಷದವರೆಗಿನ ಠೇವಣಿಗೆ ಶೇ. 7ರಷ್ಟು ಬಡ್ಡಿ ಸಿಗುತ್ತದೆ. ಇದು ಎಸ್​ಬಿಐನ ರೆಗ್ಯುಲರ್ ಡೆಪಾಸಿಟ್ ಯೋಜನೆಗಳಲ್ಲೇ ಗರಿಷ್ಠವೆನಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಉಜ್ಜೀವನ್ ಬ್ಯಾಂಕ್​ನಲ್ಲಿ ಎಫ್​ಡಿಗೆ ಬಡ್ಡಿದರ ಬರೋಬ್ಬರಿ ಶೇ. 9; ಉಳಿತಾಯ ಹಣದ ಹೂಡಿಕೆಗೆ ಒಳ್ಳೆಯ ಪ್ಲಾನ್

ಹಿರಿಯ ನಾಗರಿಕರಿಗೆಂದು ರೂಪಿಸಲಾಗಿರುವ ವೀ ಕೇರ್ ಡೆಪಾಸಿಟ್ ಸ್ಕೀಮ್​ನಲ್ಲಿ ಶೇ. 7.5ರಷ್ಟು ಬಡ್ಡಿ ನೀಡಲಾಗುತ್ತದೆ. ಸರ್ವೋತ್ತಮ್ ಸ್ಕೀಮ್​ನಲ್ಲಿ ಎರಡು ವರ್ಷದ ಠೇವಣಿಗೆ ಶೇ. 7.4ರಷ್ಟು ಬಡ್ಡಿ ಆಫರ್ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ಶೇ. 7.9ರಷ್ಟು ಆದಾಯ ಬರುತ್ತದೆ.

ಎಸ್​ಬಿಐನ ರೆಗ್ಯುಲರ್ ಡೆಪಾಸಿಟ್​ಗಳಿಗೆ ಇರುವ ದರ (ಸಾಮಾನ್ಯ ಗ್ರಾಹಕರಿಗೆ)

  • 45 ದಿನಗಳವರೆಗಿನ ಠೇವಣಿ: ಶೇ. 3.5 ಬಡ್ಡಿ
  • 46 ದಿನದಿಂದ 179 ದಿನಗಳವರೆಗೆ: ಶೇ. 4.75
  • 180 ದಿನದಿಂದ 210 ದಿನದವರೆಗೆ: ಶೇ. 5.75
  • 211 ದಿನದಿಂದ ಒಂದು ವರ್ಷಕ್ಕಿಂತ ಕಡಿಮೆ: ಶೇ. 6
  • ಒಂದು ವರ್ಷದಿಂದ 2 ವರ್ಷಕ್ಕಿಂತ ಕಡಿಮೆ: ಶೇ. 6.8
  • ಎರಡು ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ: ಶೇ. 7
  • ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ: ಶೇ. 6.75
  • ಐದು ವರ್ಷದಿಂದ 10 ವರ್ಷದವರೆಗೆ: ಶೇ. 6.5 ಬಡ್ಡಿ

ಇದನ್ನೂ ಓದಿ: ಸರ್ಕಾರದಿಂದ ನಡೆಸಲಾಗುವ ಪಿಪಿಎಫ್​ನಿಂದ ಲಾಭಗಳೇನು?; 15 ವರ್ಷದಲ್ಲಿ ಸಿಗುವ ರಿಟರ್ನ್, ಇತ್ಯಾದಿ ವಿವರ ತಿಳಿಯಿರಿ

400 ದಿನಗಳ ಠೇವಣಿಯು ಅಮೃತ್ ಕಳಶ್ ಪ್ಲಾನ್ ಅಡಿಯಲ್ಲಿ ಬರುತ್ತದೆ. ಇದಕ್ಕೆ ಶೇ. 7.1ರಷ್ಟು ಬಡ್ಡಿ ಇದೆ. ಈ ಎಲ್ಲಾ ವಿಶೇಷ ಮತ್ತು ರೆಗ್ಯುಲರ್ ಡೆಪಾಸಿಟ್ ಪ್ಲಾನ್​ಗಳಲ್ಲಿ ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚಿಗೆ ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್
ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್
Daily Devotional: ಉದ್ಯೋಗ ಸಿಗುತ್ತಿಲ್ಲವಾ? ಇಲ್ಲಿದೆ ಪರಿಹಾರ ಮಂತ್ರ
Daily Devotional: ಉದ್ಯೋಗ ಸಿಗುತ್ತಿಲ್ಲವಾ? ಇಲ್ಲಿದೆ ಪರಿಹಾರ ಮಂತ್ರ