ಷೇರು ಹೂಡಿಕೆ
ನವದೆಹಲಿ: ಷೇರುಪೇಟೆಯಲ್ಲಿ ಹಣ ಹಾಕುವುದಾದರೆ ಅದಕ್ಕೆ ಅನುಭವ ಇರಬೇಕು. ಇಲ್ಲದಿದ್ದರೆ ಅನುಭವಿಗಳ ಮಾರ್ಗವನ್ನಾದರೂ ಅನುಸರಿಸಬೇಕು ಎಂದು ಹೇಳಲಾಗುತ್ತದೆ. ಷೇರುಪೇಟೆಯಲ್ಲಿ ಕೋಟ್ಯಂತರ ಹಣ ಹಾಕಿ ಕಳೆದುಕೊಂಡವರು ಹಲವರಿದ್ದಾರೆ. ಷೇರುಪೇಟೆಯಲ್ಲಿ ಹಣ ಹೂಡಿಕೆಯಿಂದಲೇ ಕೋಟ್ಯಾಧೀಶ್ವರರಾದವರು ಅನೇಕರಿದ್ದಾರೆ. ಇಂಥ ಹೆಸರು ಮೊದಲು ನೆನಪಾಗುವುದು ಜುಂಜುನವಾಲ ಕುಟುಂಬದ್ದು. ಕಳೆದ ವರ್ಷ ನಿಧನರಾದ ರಾಕೇಶ್ ಜುಂಜುನವಾಲ (Rakesh Jhunjhunwala) ಷೇರುಗಳ ಮೇಲಿನ ಹೂಡಿಕೆಗಳಿಂದಲೇ ಸಾವಿರಾರು ಕೋಟಿಗಳ ಸರದಾರರಾಗಿದ್ದರು. ಈಗ ಅವರ ಷೇರುಪಾಲುಗಳೆಲ್ಲವೂ ಪತ್ನಿ ರೇಖಾ ಜುಂಜುನವಾಲ (Rekha Jhunjhunwala) ಪಾಲಾಗಿದೆ. ರೇಖ ಕೂಡ ಪತಿ ಹಾಕಿಕೊಟ್ಟ ಸಂಪ್ರದಾಯ ಮತ್ತು ಜ್ಞಾನದ ಮೂಲಕ ಷೇರು ವ್ಯವಹಾರ ಮುಂದುವರಿಸಿದ್ದಾರೆ. ನಷ್ಟ ಕಾಣದೇ ಹಣ ಹಿಗ್ಗಿಸಿಕೊಳ್ಳುತ್ತಾ ಹೋಗುತ್ತಿದ್ದಾರೆ. ಹಾಗೆಯೇ, ಸುನೀಲ್ ಸಿಂಘಾನಿಯಾ, ಮುಕುಲ್ ಅಗರ್ವಾಲ್, ವಿಜಯ್ ಕೇದಿಯಾ ಮೊದಲಾದವರು ಷೇರು ಹೂಡಿಕೆಯಲ್ಲಿ ದೊಡ್ಡ ಹೆಸರು ಮಾಡಿರುವ ಇತರರು. ಇವರು ಯಾವೆಲ್ಲಾ ಕಂಪನಿಗಳ ಷೇರಿನ ಮೇಲೆ ಹಣ ಹಾಕಿದ್ದಾರೆ, ಯಾವ ಷೇರು ಖರೀದಿಸುತ್ತಾರೆ, ಯಾವ ಷೇರು ಮಾರುತ್ತಾರೆ ಎಂಬುದೆಲ್ಲಾ ಹೊಸಬರಿಗೆ ದಾರಿದೀಪವಾಗಬಹುದು.
ರೇಖಾ ಜುಂಜುನವಾಲ ಅವರ ಷೇರು ಹೂಡಿಕೆ ವಿವರ
ರಾಕೇಶ್ ಜುಂಜುನವಾಲರ ಪತ್ನಿ ರೇಖಾ ಅವರ ಒಟ್ಟು ಷೇರು ಸಂಪತ್ತು ಅಂದಾಜು 29,046 ಕೋಟಿ ರೂನಷ್ಟಿದೆ. ಪತಿ ಬಳಿ ಇದ್ದ ಷೇರುಗಳಲ್ಲಿ 29 ಷೇರುಗಳು ರೇಖಾ ಜುಂಜುನವಾಲರಿಗೆ ವರ್ಗಾವಣೆ ಆಗಿದ್ದವು. ಅವರ ನಿಧನದ ಬಳಿ ಹೊಸ 2 ಕಂಪನಿಯ ಷೇರುಗಳ ಮೇಲೆ ರೇಖಾ ಹೂಡಿಕೆ ಮಾಡಿದ್ದಾರೆ. ಇದರಲ್ಲಿ ಸನ್ ಫಾರ್ಮಾ ಅಡ್ವಾನ್ಸ್ಡ್ ರಿಸರ್ಚ್ ಮತ್ತು ರಾಘವ್ ಪ್ರೊಡಕ್ಟಿವಿಟಿ ಎನ್ಹಾನ್ಸರ್ಸ್ ಕಂಪನಿಗಳದ್ದು ಸೇರಿವೆ.
ಇದನ್ನೂ ಓದಿ: Axis Bank: ಆ್ಯಕ್ಸಿಸ್ಗೆ ಮುಳುವಾದ ಸಿಟಿ ಡೀಲ್; ದಾಖಲೆ ಲಾಭ ಕಾಣಬೇಕಿದ್ದ ಬ್ಯಾಂಕ್ಗೆ ಬರೋಬ್ಬರಿ 5,728.4 ಕೋಟಿ ರೂ ನಷ್ಟ
ರೇಖಾ ಜುಂಜುನವಾಲರ ಪ್ರಮುಖ ಷೇರು ಮತ್ತು ಹೂಡಿಕೆ ಮೊತ್ತ:
- ಟೈಟಾನ್ ಕಂಪನಿ: 12,393.7 ಕೋಟಿ ರೂ
- ಮೆಟ್ರೋ ಬ್ರ್ಯಾಂಡ್ಸ್: 3,388.7 ಕೋಟಿ ರೂ
- ಟಾಟಾ ಮೋಟಾರ್ಸ್: 2,507.8 ಕೋಟಿ ರೂ
- ಕ್ರಿಸಿಲ್ ಲಿ: 1,420.4 ಕೋಟಿ ರೂ
- ಕೆನರಾ ಬ್ಯಾಂಕ್: 1,158.8 ಕೋಟಿ ರೂ
- ಆಪ್ಟೆಕ್ ಲಿ
- ಎನ್ಸಿಸಿ ಲಿ
- ನಜರಾ ಟೆಕ್ನಾಲಜೀಸ್ ಲಿ
- ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್
- ರಾಲ್ಲಿಸ್ ಇಂಡಿಯಾ ಲಿ
- ವಾ ಟೆಕ್ ವಬಾಗ್ ಲಿ
- ಆಗ್ರೋ ಟೆಕ್ ಫುಡ್ಸ್ ಲಿ
- ಸಿಂಗರ್ ಇಂಡಿಯಾ ಲಿ
- ಜುಬಿಲೆಂಡ್ ಫಾರ್ಮೋವಾ ಲಿ
- ರಾಘವ್ ಪ್ರೊಡಕ್ಟಿವಿಟಿ ಎನ್ಹಾನ್ಸರ್ಸ್
- ಫೋರ್ಟಿಸ್ ಹೆಲ್ತ್ಕೇರ್ ಲಿ
- ಆಟೊಲೈನ್ ಇಂಡಸ್ಟ್ರೀಸ್ ಲಿ
- ಜುಬಿಲೆಂಟ್ ಇನ್ಗ್ರೇವಿಯಾ ಲಿ.
- ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಸೂರೆನ್ಸ್ ಕಂ ಲಿ.
- ಫೆಡರಲ್ ಬ್ಯಾಂಕ್
- ಇಂಡಿಯನ್ ಹೋಟೆಲ್ಸ್ ಕಂಪನಿ
- ವಾಕ್ಹಾರ್ಟ್ ಲಿ
- ಕೆನರಾ ಬ್ಯಾಂಕ್
- ಪ್ರೋಝೋನ್ ಇಂಟು ಪ್ರಾಪರ್ಟೀಸ್ ಲಿ
- ಸನ್ ಫಾರ್ಮಾ ಅಡ್ವಾನ್ಸ್ಡ್ ರಿಸರ್ಚ್ ಕಂಪನಿ ಲಿ
- ಟಾಟಾ ಕಮ್ಯೂನಿಕೇಶನ್ಸ್ ಲಿ
- ಟಾಟಾ ಮೋಟಾರ್ಸ್
- ಡಿ.ಬಿ. ರಿಯಾಲ್ಟಿ ಲಿ
- ಎಸ್ಕಾರ್ಟ್ಸ್ ಕುಬೋಟಾ ಲಿ
- ಎಡೆಲ್ವೇಸ್ ಫೈನಾನ್ಷಿಯಲ್ ಸರ್ವಿಸಸ್
- ಬಿಲ್ಕೇರ್ ಲಿ
- ಡಿಶ್ಮ್ಯಾನ್ ಕಾರ್ಬೊಜೆನ್ ಆಮ್ಸಿಸ್ ಲಿ.
- ಕರೂರ್ ವೈಶ್ಯ ಬ್ಯಾಂಕ್ ಲಿ
ಇದನ್ನೂ ಓದಿ: SBI: ಎಸ್ಬಿಐನಿಂದ 6,000 ಕೋಟಿ ರೂ ಮೊತ್ತದ ಬಾಂಡ್ಗಳ ವಿತರಣೆ; ಯಾವಾಗ, ಎಲ್ಲಿ? ವಿವರ ನೋಡಿ
ಮುಕುಲ್ ಅಗರ್ವಾಲ್ ಬಳಿ ಇವೆ 80 ಕಂಪನಿಗಳ ಷೇರುಗಳು
ಷೇರು ಹೂಡಿಕೆದಾರ ಮುಕುಲ್ ಅಗರ್ವಾಲ್ ಬಳಿ ಕನಿಷ್ಠ 81 ಕಂಪನಿಗಳ ಷೇರುಗಳಿದ್ದು, ಅವುಗಳ ಒಟ್ಟು ಷೇರುಸಂಪತ್ತು ಸರಿಸುಮಾರು ಅಂದಾಜು 3,000 ಕೋಟಿ ರೂ ಇದೆ. ಅವರ ಅಗ್ರಮಾನ್ಯ 10 ಹೂಡಿಕೆಗಳ ಪಟ್ಟಿ ಇಲ್ಲಿದೆ:
- ರೇಮಂಡ್ ಲಿ: 190.8 ಕೋಟಿ ರೂ
- ರಾಡಿಕೋ ಖೇತಾನ್ ಲಿ: 157.8 ಕೋಟಿ ರೂ
- ಪಿಡಿಎಸ್ ಲಿ: 128.5 ಕೋಟಿ ರೂ
- ಇಂಟೆಲೆಕ್ಟ್ ಡಿಸೈನ್ ಅರೇನಾ ಲಿ: 111.5 ಕೋಟಿ ರೂ
- ಎತೋಸ್ ಲಿ: 103.8 ಕೋಟಿ ರೂ
- ಡಿಶ್ಮ್ಯಾನ್ ಕಾರ್ಬೋಜನ್ ಆಮ್ಸಿಸ್ ಲಿ: 92.7 ಕೋಟಿ ರೂ
- ಅಯಾನ್ ಎಕ್ಸ್ಚೇಂಜ್ ಲಿ: 91.9 ಕೋಟಿ ರೂ
- ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಲಿ: 90 ಕೋಟಿ ರೂ
- ಅಪೋಲೋ ಪೈಪ್ಸ್ ಲಿ: 88.7 ಕೋಟಿ ರೂ
- ಸೂರ್ಯ ರೋಷಿನಿ ಲಿ: 87.9 ಕೋಟಿ ರೂ
ಷೇರು ಹೂಡಿಕೆದಾರ ಸುನೀಲ್ ಸಿಂಘಾನಿಯಾ ಬಳಿ 39 ಷೇರುಗಳು; ಇವುಗಳ ಟಾಪ್ 10 ಪಟ್ಟಿ
- ಜಿಂದಾಲ್ ಸ್ಟೇನ್ಲೆಸ್ ಲಿ: 484.1 ಕೋಟಿ ರೂ
- ರೂಟ್ ಮೊಬೈಲ್ ಲಿ: 204.9 ಕೋಟಿ ರೂ
- ಮಾಸ್ಟೆಕ್ ಲಿ: 169.8 ಕೋಟಿ ರೂ
- ಅಯಾನ್ ಎಕ್ಸ್ಚೇಂಜ್ ಲಿ: 157.5 ಕೋಟಿ ರೂ
- ಹಿಂಡ್ವೇರ್ ಹೋಮ್ ಇನೋವೇಶನ್ ಲಿ: 136.6 ಕೋಟಿ ರೂ
- ಟೆಕ್ನೋಕ್ರಾಫ್ಟ್ ಇಂಡಸ್ಟ್ರೀಸ್ ಲಿ: 112.4 ಕೋಟಿ ರೂ
- ಕಾರಿಸಿಲ್ ಲಿ: 96.6 ಕೋಟಿ ರೂ
- ಎಚ್ಜಿ ಇನ್ಫ್ರಾ ಎಂಜಿನಿಯರಿಂಗ್ ಲಿ: 87.5 ಕೋಟಿ ರೂ
- ಸಾರ್ದಾ ಎನರ್ಜಿ ಅಂಡ್ ಮಿನರಲ್ಸ್ ಲಿ: 86.1 ಕೋಟಿ ರೂ
- ರೂಪಾ ಅಂಡ್ ಕಂಪನಿ ಲಿ: 79.8 ಕೋಟಿ ರೂ
ಇದನ್ನೂ ಓದಿ: AI Agents: ಮೆಟಾ ಆದಾಯ ಹೆಚ್ಚಳ, ಜನರ ಮೊಬೈಲ್ ಆವರಿಸಲಿವೆ ಎಐ ಏಜೆಂಟ್ಸ್; ಶ್ರೀಮಂತಿಕೆಯಲ್ಲಿ ಅಂಬಾನಿ ಮೀರಿಸಿದ ಮಾರ್ಕ್ ಜುಕರ್ಬರ್ಗ್
ಷೇರು ಹೂಡಿಕೆದಾರ ವಿಜಯ್ ಕೇದಿಯಾ ಬಳಿ ಇರುವ ಷೇರು ಸಂಪತ್ತು; ಟಾಪ್ 10 ಪಟ್ಟಿ
ಇನ್ವೆಸ್ಟರ್ ವಿಜಯ್ ಕೇದಿ ಅವರು 21 ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಅದರಲ್ಲಿ ಪಟೇಲ್ ಎಂಜಿನಿಯರಿಂಗ್ ಸಂಸ್ಥೆಯ 1 ಕೋಟಿ ಷೇರುಗಳ ಒಡೆಯರಾಗಿದ್ದಾರೆ. ಇವರ ಅಗ್ರಮಾನ್ಯ 10 ಹೂಡಿಕೆಗಳ ವಿವರ ಈ ಕೆಳಗಿದೆ:
- ತೇಜಸ್ ನೆಟ್ವರ್ಕ್ಸ್ ಲಿ: 224 ಕೋಟಿ ರೂ
- ವೈಭವ್ ಗ್ಲೋಬಲ್ ಲಿ: 101.5 ಕೋಟಿ ರೂ
- ಎಲೆಕಾನ್ ಎಂಜಿನಿಯರಿಂಗ್ ಕಂಪನಿ: 94.4 ಕೋಟಿ ರೂ
- ಅತುಲ್ ಆಟೊ ಲಿ: 76.7 ಕೋಟಿ ರೂ
- ಮಹೀಂದ್ರ ಹಾಲಿಡೇಸ್ ಅಂಡ್ ರಿಸಾರ್ಟ್ಸ್: 61.9 ಕೋಟಿ ರೂ
- ಅಫಾರ್ಡಬಲ್ ರೋಬೋಟಿಕ್ ಅಂಡ್ ಆಟೊಮೇಶನ್ ಲಿ: 48 ಕೋಟಿ ರೂ
- ಸುದರ್ಶನ್ ಕೆಮಿಕಲ್ ಇಂಡಸ್ಟ್ರೀಸ್: 41.3 ಕೋಟಿ ರೂ
- ರೆಪ್ರೋ ಇಂಡಿಯಾ ಲಿ: 35.1 ಕೋಟಿ ರೂ
- ನ್ಯೂಲ್ಯಾಂಡ್ ಲ್ಯಾಬೋರೇಟರೀಸ್ ಲಿ: 32.1 ಕೋಟಿ ರೂ
- ಸಿಯಾರಾಮ್ ಸಿಲ್ಕ್ ಮಿಲ್ಸ್ ಲಿ: 24.7 ಕೋಟಿ ರೂ
- ಪಟೇಲ್ ಎಂಜಿನಿಯರಿಂಗ್ ಲಿ: 20.5 ಕೋಟಿ ರೂ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ