ಒಂದಕ್ಕಿಂತ ಹೆಚ್ಚು ಯುಎಎನ್ ಮತ್ತು ಇಪಿಎಫ್ ಖಾತೆಗಳು ಇದ್ದರೆ ಏನು ಮಾಡಬೇಕು? ಇಲ್ಲಿವೆ ಕ್ರಮಗಳು

Steps to merge multiple EPF accounts: ನೀವು ಕೆಲಸ ಬದಲಿಸಿದಾಗ ಹಳೆಯ ಯುಎಎನ್ ಅನ್ನೇ ಮುಂದುವರಿಸಬೇಕು. ಇಲ್ಲದಿದ್ದರೆ ಹೊಸ ಯುಎಎನ್ ಸೃಷ್ಟಿಯಾಗುತ್ತದೆ. ಒಬ್ಬ ವ್ಯಕ್ತಿ ಎರಡು ಯುಎಎನ್ ಹೊಂದುವಂತಿಲ್ಲ. ಇದರಿಂದ ಇಪಿಎಫ್ ಖಾತೆಗಳನ್ನು ವಿಲೀನಗೊಳಿಸಲು ಆಗುವುದಿಲ್ಲ. ಈ ಲೇಖನದಲ್ಲಿ ಹಳೆಯ ಯುಎಎನ್ ನಿಷ್ಕ್ರಿಯಗೊಳಿಸುವುದು, ಮತ್ತು ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆನ್ನುವ ವಿವರ ಇದೆ.

ಒಂದಕ್ಕಿಂತ ಹೆಚ್ಚು ಯುಎಎನ್ ಮತ್ತು ಇಪಿಎಫ್ ಖಾತೆಗಳು ಇದ್ದರೆ ಏನು ಮಾಡಬೇಕು? ಇಲ್ಲಿವೆ ಕ್ರಮಗಳು
ಇಪಿಎಫ್​ಒ

Updated on: Nov 10, 2025 | 5:01 PM

ನೀವು ಪ್ರತೀ ಬಾರಿ ಕೆಲಸ ಬದಲಿಸಿದಾಗ ಒಂದೇ ಯುಎಎನ್ ನಂಬರ್ ಮುಂದುವರಿಸಿದರೂ ಹೊಸ ಇಪಿಎಫ್ ಖಾತೆ (EPF account) ಸೃಷ್ಟಿಸಲಾಗುತ್ತದೆ. ಈ ರೀತಿ ಒಬ್ಬ ಉದ್ಯೋಗಿಯ ಬಳಿ ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳು ಇರುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವೊಮ್ಮೆ ಎರಡು ಯುಎಎನ್ ಕೂಡ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಯುಎಎನ್ ಎಂಬುದು ಯೂನಿವರ್ಸಲ್ ಅಕೌಂಟ್ ನಂಬರ್. ಇದು ಪ್ಯಾನ್ ರೀತಿ ಅನನ್ಯವಾಗಿರುವ 12 ಅಂಕಿಗಳ ವಿಶೇಷ ಸಂಖ್ಯೆಯಾಗಿದೆ. ಎರಡು ಯುಎಎನ್ (UAN- Universal Account Number) ಇರುವುದು ತಪ್ಪು.

ವಿವಿಧ ಯುಎಎನ್ ಇದ್ದರೆ ಏನಾಗುತ್ತದೆ?

ಒಬ್ಬ ಉದ್ಯೋಗಿ ಕೆಲಸ ಬದಲಿಸಿದಾಗ ಹಿಂದೆ ಇದ್ದ ಇಪಿಎಫ್ ಅಕೌಂಟ್ ಅಥವಾ ಯುಎಎನ್ ನಂಬರ್ ಅನ್ನು ಹೊಸ ಕಂಪನಿಗೆ ನೀಡಬೇಕು. ಆಗ ಹಳೆಯ ಯುಎಎನ್ ಅಡಿಯಲ್ಲಿ ಹೊಸ ಇಪಿಎಫ್ ಅಕೌಂಟ್ ತೆರೆಯಲಾಗುತ್ತದೆ. ಇಲ್ಲದಿದ್ದರೆ ಹೊಸ ಯುಎಎನ್ ನಂಬರ್ ರಚಿಸಿ ಅದರಲ್ಲಿ ಇಪಿಎಫ್ ಅಕೌಂಟ್ ತೆರೆಯಲಾಗುತ್ತದೆ. ಈ ರೀತಿ ಒಂದಕ್ಕಿಂತ ಹೆಚ್ಚು ಯುಎಎನ್ ನಂಬರ್ ಸೃಷ್ಟಿಯಾಗಿಬಿಡಬಹುದು.

ಇದನ್ನೂ ಓದಿ: ಪಿಎಫ್​ನ ಪೆನ್ಷನ್ ಸ್ಕೀಮ್​ಗೆ ಅರ್ಹರಾಗಲು 10 ವರ್ಷ ಸರ್ವಿಸ್ ಬೇಕು; ಇಲ್ಲದಿದ್ದರೆ ಹಣ ಏನಾಗುತ್ತೆ?

ಈ ರೀತಿ ಎರಡು ಅಥವಾ ಹೆಚ್ಚು ಯುಎಎನ್ ಇದ್ದರೆ ಭವಿಷ್ಯದಲ್ಲಿ ಸಮಸ್ಯೆಯಾಗಬಹುದು. ನಿಮ್ಮ ಹಣ ವಿತ್​ಡ್ರಾ ಮಾಡಿಕೊಳ್ಳಲು ಕಷ್ಟವಾಗಬಹುದು. ಆದ್ದರಿಂದ ಅಕಸ್ಮಾತ್ ಆಗಿ ಒಂದಕ್ಕಿಂತ ಹೆಚ್ಚು ಯುಎಎನ್ ಇದ್ದರೆ ಅದನ್ನು ಒಂದಕ್ಕೆ ವಿಲೀನಗೊಳಿಸಬೇಕು. ಅದನ್ನು ಹೇಗೆ ಮಾಡಬೇಕು ಎನ್ನೋ ಕ್ರಮ ಇಲ್ಲಿದೆ:

  • ನೀವು ಹಾಲಿ ಕೆಲಸ ಮಾಡುತ್ತಿರುವ ಕಂಪನಿಯ ಹೆಚ್​ಆರ್ ಗಮನಕ್ಕೆ ಇದನ್ನು ತರಬೇಕು.
  • ಅಥವಾ uanepf@epfindia.gov.in ವಿಳಾಸಕ್ಕೆ ಇಮೇಲ್ ಕಳುಹಿಸಿ, ನಿಮ್ಮ ವಿವಿಧ ಯುಎಎನ್ ಅನ್ನು ನಮೂದಿಸಬೇಕು.
  • ಇಪಿಎಫ್​ಒ ಪರಿಶೀಲನೆ ನಡೆಸಿ, ಹಳೆಯ ಯುಎಎನ್ ಅನ್ನು ನಿಷ್ಕ್ರಿಯಗೊಳಿಸುತ್ತದೆ.
  • ಈಗ ಹಳೆಯ ಯುಎಎನ್ ಅಡಿಯಲ್ಲಿ ಇರುವ ಇಪಿಎಫ್ ಬ್ಯಾಲನ್ಸ್ ಅನ್ನು ಹೊಸ ಯುಎಎನ್​ಗೆ ವರ್ಗಾಯಿಸಲು ಕ್ಲೇಮ್ ಸಲ್ಲಿಸಬಹುದು.

ಇದನ್ನೂ ಓದಿ: ಪಿಎಫ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರಿಗೂ ಇನ್ಷೂರೆನ್ಸ್ ಕವರೇಜ್ ಇರುತ್ತಾ? ಇವು ತಿಳಿದಿರಿ

ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್ ವಿಲೀನಗೊಳಿಸುವ ಕ್ರಮಗಳು

  • ಪಿಎಫ್ ಸಬ್​ಸ್ಕ್ರೈಬರ್​ಗಳು ಇಪಿಎಫ್​ಒ ಮೆಂಬರ್ ಪೋರ್ಟಲ್​ಗೆ ಯುಎಎನ್ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಆಗಬೇಕು.
  • ಇಲ್ಲಿ ನೀವು ನಿಮ್ಮ ಹಾಲಿ ಹಾಗೂ ಹಿಂದಿನ ಕಂಪನಿಗಳಲ್ಲಿನ ಇಪಿಎಫ್ ಖಾತೆಗಳ ಪಟ್ಟಿ ಕಾಣಬಹುದು.
  • ಈಗಿನ ಕಂಪನಿಯ ಇಪಿಎಫ್ ಅಕೌಂಟ್ ಜೊತೆ ಹಿಂದಿನ ಕಂಪನಿಯ ಇಪಿಎಫ್ ಅಕೌಂಟ್ ಅನ್ನು ವಿಲೀನಗೊಳಿಸುವಂತೆ ಟ್ರಾನ್ಸ್​ಫರ್ ರಿಕ್ವೆಸ್ ಸಬ್ಮಿಟ್ ಮಾಡಿ.

ಸಾಮಾನ್ಯವಾಗಿ 10-15 ಕಾರ್ಯದಿನಗಳಲ್ಲಿ ಹಳೆಯ ಇಪಿಎಫ್ ಖಾತೆಯಿಂದ ಹಣವು ಹೊಸ ಖಾತೆಗೆ ವರ್ಗಾವಣೆ ಆಗುತ್ತದೆ.

ಇದನ್ನೂ ಓದಿ: ಆಸ್ತಿ ಇದ್ದೂ ಪರದಾಡುತ್ತಿದ್ದೀರಾ? ಮನೆ ಮಾರದೆಯೇ ಮಾಸಿಕ ಆದಾಯ ಸೃಷ್ಟಿಸಿ… ಇದು ರಿವರ್ಸ್ ಮಾರ್ಟ್​ಗೇಜ್ ಸ್ಕೀಮ್

ಇಪಿಎಫ್ ಅಕೌಂಟ್​ಗಳನ್ನು ವಿಲೀನಗೊಳಿಸುವುದರಿಂದ ಏನು ಪ್ರಯೋಜನ?

ಸಾಮಾನ್ಯವಾಗಿ ಹಾಲಿ ಇರುವ ಇಪಿಎಫ್ ಖಾತೆ ಮಾತ್ರವೇ ಸಕ್ರಿಯವಾಗಿರುತ್ತದೆ. ಕಂಪನಿ ಮತ್ತು ನಿಮ್ಮ ವತಿಯಿಂದ ಯಾವುದೇ ಕೊಡುಗೆ ಸಂದಾಯವಾಗದೇ ಇರುವ ಇಪಿಎಫ್ ಖಾತೆ ನಿಷ್ಕ್ರಿಯವಾಗಿರುತ್ತದೆ. ಈ ನಿಷ್ಕ್ರಿಯ ಖಾತೆಗೆ ಸರ್ಕಾರದಿಂದ ವರ್ಷಕ್ಕೊಮ್ಮೆ ಸಿಗುವ ಬಡ್ಡಿ ಸಂದಾಯವಾಗುವುದಿಲ್ಲ. ಸಕ್ರಿಯ ಖಾತೆಗೆ ಮಾತ್ರವೇ ಬಡ್ಡಿ ಕ್ರೆಡಿಟ್ ಆಗುವುದು. ಹೀಗಾಗಿ, ಹಳೆಯ ಇಪಿಎಫ್ ಖಾತೆಗಳನ್ನು ಹೊಸ ಖಾತೆಗೆ ವಿಲೀನಗೊಳಿಸುವುದು ಮುಖ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ