AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Diesel Price on March 14: ಅಸ್ಸಾಂ ಹಾಗೂ ಬಿಹಾರದಲ್ಲಿ ಪೆಟ್ರೋಲ್ ಬೆಲೆ ಇಳಿಕೆ

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಮಾರ್ಚ್ 14 ಗುರುವಾರದ ಪೆಟ್ರೋಲ್, ಡೀಸೆಲ್ ದರವನ್ನು ಬಿಡುಗಡೆ ಮಾಡಿವೆ. ಅಸ್ಸಾಂನಲ್ಲಿ ಪೆಟ್ರೋಲ್ 29 ಪೈಸೆ ಇಳಿಕೆಯಾಗಿ 98.33 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 28 ​​ಪೈಸೆ ಇಳಿಕೆಯಾಗಿ 90.63 ರೂ.ಗೆ ತಲುಪಿದೆ. ಬಿಹಾರದಲ್ಲಿ ಪೆಟ್ರೋಲ್ 19 ಪೈಸೆ ಇಳಿಕೆಯಾಗಿ 109.18 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 18 ಪೈಸೆ ಇಳಿಕೆಯಾಗಿ 95.83 ರೂ.ಗೆ ತಲುಪಿದೆ.

Petrol Diesel Price on March 14: ಅಸ್ಸಾಂ ಹಾಗೂ ಬಿಹಾರದಲ್ಲಿ ಪೆಟ್ರೋಲ್ ಬೆಲೆ ಇಳಿಕೆ
ಪೆಟ್ರೋಲ್Image Credit source: ReAgent Chemical Service
ನಯನಾ ರಾಜೀವ್
|

Updated on: Mar 14, 2024 | 7:11 AM

Share

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಮತ್ತು ಅನಿಲ ಬೆಲೆಗಳು ಮೃದುವಾಗುತ್ತಿರುವ ಪರಿಣಾಮವು ದೇಶೀಯ ಚಿಲ್ಲರೆ ಮಾರುಕಟ್ಟೆಯ ಮೇಲೂ ಗೋಚರಿಸುತ್ತದೆ. ಗುರುವಾರ ಬೆಳಗ್ಗೆ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಸಿಎನ್‌ಜಿ ಅಗ್ಗವಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಹ ಇಳಿಮುಖವಾಗಿವೆ. ಇಂದು ಯುಪಿ ಮತ್ತು ಬಿಹಾರದ ಹಲವು ನಗರಗಳಲ್ಲೂ ತೈಲ ಬೆಲೆ ಕುಸಿದಿದೆ. ಏತನ್ಮಧ್ಯೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಮತ್ತೆ 83 ಡಾಲರ್‌ಗಿಂತ ಕಡಿಮೆಯಾಗಿದೆ.

ಏತನ್ಮಧ್ಯೆ, ದೇಶದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಇತ್ತೀಚಿನ ದರಗಳನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜೂನ್ 2017 ರ ಮೊದಲು, ಪ್ರತಿ 15 ದಿನಗಳಿಗೊಮ್ಮೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿತ್ತು.

ಪೆಟ್ರೋಲ್ ಬೆಲೆಯಲ್ಲಿ ಬದಲಾವಣೆ ಅಸ್ಸಾಂನಲ್ಲಿ ಪೆಟ್ರೋಲ್ 29 ಪೈಸೆ ಇಳಿಕೆಯಾಗಿ 98.33 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 28 ​​ಪೈಸೆ ಇಳಿಕೆಯಾಗಿ 90.63 ರೂ.ಗೆ ತಲುಪಿದೆ. ಬಿಹಾರದಲ್ಲಿ ಪೆಟ್ರೋಲ್ 19 ಪೈಸೆ ಇಳಿಕೆಯಾಗಿ 109.18 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 18 ಪೈಸೆ ಇಳಿಕೆಯಾಗಿ 95.83 ರೂ.ಗೆ ತಲುಪಿದೆ.

ಛತ್ತೀಸ್‌ಗಢದಲ್ಲಿ ಪೆಟ್ರೋಲ್ 5 ಪೈಸೆ ಇಳಿಕೆಯಾಗಿ 103.58 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 4 ಪೈಸೆ ಇಳಿಕೆಯಾಗಿ 96.55 ರೂ.ಗೆ ತಲುಪಿದೆ. ಹಿಮಾಚಲದಲ್ಲಿ ಪೆಟ್ರೋಲ್ 8 ಪೈಸೆ ಇಳಿಕೆಯಾಗಿ 95.62 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 8 ಪೈಸೆ ಇಳಿಕೆಯಾಗಿ 87.84 ರೂ.ಗೆ ತಲುಪಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪೆಟ್ರೋಲ್ 87 ಪೈಸೆ ಇಳಿಕೆಯಾಗಿ 100.65 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 72 ಪೈಸೆ ಇಳಿಕೆಯಾಗಿ 85.88 ರೂ.ಗೆ ತಲುಪಿದೆ. ಜಾರ್ಖಂಡ್‌ನಲ್ಲಿ ಪೆಟ್ರೋಲ್ 2 ಪೈಸೆ ಇಳಿಕೆಯಾಗಿ 100.21 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 3 ಪೈಸೆ ಇಳಿಕೆಯಾಗಿ 95.00 ರೂ.ಗೆ ತಲುಪಿದೆ.

ಕರ್ನಾಟಕದಲ್ಲಿ ಪೆಟ್ರೋಲ್ 2 ಪೈಸೆ ಇಳಿಕೆಯಾಗಿ 102.60 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 2 ಪೈಸೆ ಇಳಿಕೆಯಾಗಿ 88.51 ರೂ.ಗೆ ತಲುಪಿದೆ. ತಮಿಳುನಾಡಿನಲ್ಲಿ ಪೆಟ್ರೋಲ್ 3 ಪೈಸೆ ಇಳಿಕೆಯಾಗಿ 103.88 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 2 ಪೈಸೆ ಇಳಿಕೆಯಾಗಿ 95.50 ರೂ.ಗೆ ತಲುಪಿದೆ. ಪಶ್ಚಿಮ ಬಂಗಾಳದಲ್ಲಿ ಪೆಟ್ರೋಲ್ 25 ಪೈಸೆ ಇಳಿಕೆಯಾಗಿ 107.26 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 24 ಪೈಸೆ ಇಳಿಕೆಯಾಗಿ 93.90 ರೂ.ಗೆ ತಲುಪಿದೆ.

ಅದೇ ಸಮಯದಲ್ಲಿ, ಇಂದು ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ನಾಗಾಲ್ಯಾಂಡ್, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗಿದೆ.

ಮತ್ತಷ್ಟು ಓದಿ: Petrol Diesel Price on March 13: ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ ಇಳಿಕೆ, ಉತ್ತರ ಪ್ರದೇಶದಲ್ಲಿ ಏರಿಕೆ

ದೆಹಲಿ ಪೆಟ್ರೋಲ್ ಬೆಲೆ

ಮಾರ್ಚ್ 14 ರ ಹೊತ್ತಿಗೆ, ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.72 ರೂ.

ದೆಹಲಿ ಡೀಸೆಲ್ ಬೆಲೆ ಮಾರ್ಚ್ 14 ರ ಹೊತ್ತಿಗೆ, ಡೀಸೆಲ್ ಬೆಲೆ ಲೀಟರ್‌ಗೆ 89.62 ರೂ.. ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ., ಡೀಸೆಲ್ 87.89 ರೂ. ಇದೆ. ತಿರುವನಂತಪುರಂನಲ್ಲಿ ಪೆಟ್ರೋಲ್ 109.73 ರೂ. ಡೀಸೆಲ್ 98.53 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ 102.63 ರೂ., ಡೀಸೆಲ್ 94.24 ರೂ. ಇದೆ.

ಮತ್ತಷ್ಟು ಓದಿ: Petrol Diesel Price on March 07: ಜಾರ್ಖಂಡ್, ಅಸ್ಸಾಂನಲ್ಲಿ ಪೆಟ್ರೋಲ್ ದುಬಾರಿ

ಕಚ್ಚಾ ತೈಲ ಬೆಲೆ: ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಗೆ ಪ್ರಾಥಮಿಕ ಕಚ್ಚಾ ವಸ್ತು ಕಚ್ಚಾ ತೈಲ, ಮತ್ತು ಅದರ ಬೆಲೆ ನೇರವಾಗಿ ಈ ಇಂಧನಗಳ ಅಂತಿಮ ವೆಚ್ಚದ ಮೇಲೆ ಪ್ರಭಾವ ಬೀರುತ್ತದೆ.

ತೆರಿಗೆ: ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿವಿಧ ತೆರಿಗೆಗಳನ್ನು ವಿಧಿಸುತ್ತವೆ. ಈ ತೆರಿಗೆಗಳು ರಾಜ್ಯಗಳಾದ್ಯಂತ ಭಿನ್ನವಾಗಿರಬಹುದು, ಪೆಟ್ರೋಲ್ ಮತ್ತು ಡೀಸೆಲ್‌ನ ಅಂತಿಮ ಬೆಲೆಗಳ ಮೇಲೆ ಗಮನಾರ್ಹ ಪ್ರಭಾವವನ್ನು ಬೀರುತ್ತವೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ
ಬಾದಾಮಿ ಐತಿಹಾಸಿಕ ದೇಗುಲದಲ್ಲಿ ಚಪ್ಪಲಿ ಧರಿಸಿ ಕೂತ ಮುಸ್ಲಿಂ ಯುವತಿ!
ಬಾದಾಮಿ ಐತಿಹಾಸಿಕ ದೇಗುಲದಲ್ಲಿ ಚಪ್ಪಲಿ ಧರಿಸಿ ಕೂತ ಮುಸ್ಲಿಂ ಯುವತಿ!