AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Diesel Price on December 04: ಬಿಹಾರದಲ್ಲಿ ಪೆಟ್ರೋಲ್ ಬೆಲೆ ಏರಿಕೆ, ಉತ್ತರ ಪ್ರದೇಶದಲ್ಲಿ ಇಳಿಕೆ

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್ 04, ಬುಧವಾರದ ಪೆಟ್ರೋಲ್, ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ. ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ 71 ಡಾಲರ್ ದಾಟಿದೆ. ಬ್ರೆಂಟ್ ಕಚ್ಚಾ ತೈಲವು ಇಂದು ಪ್ರತಿ ಬ್ಯಾರೆಲ್‌ಗೆ 71.83 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ, ಡಬ್ಲ್ಯೂಟಿಐ ಕಚ್ಚಾ ಪ್ರತಿ ಬ್ಯಾರೆಲ್‌ಗೆ 68.16 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ.

Petrol Diesel Price on December 04: ಬಿಹಾರದಲ್ಲಿ ಪೆಟ್ರೋಲ್ ಬೆಲೆ ಏರಿಕೆ, ಉತ್ತರ ಪ್ರದೇಶದಲ್ಲಿ ಇಳಿಕೆ
ಪೆಟ್ರೋಲ್Image Credit source: Zee News
ನಯನಾ ರಾಜೀವ್
|

Updated on: Dec 04, 2024 | 7:07 AM

Share

ದೇಶದಲ್ಲಿ ಕಚ್ಚಾತೈಲ ಬೆಲೆಯ ಆಧಾರದ ಮೇಲೆ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ನಿರ್ಧರಿಸಲಾಗುತ್ತದೆ. ಇಂದು ಬಿಹಾರದಲ್ಲಿ ಪೆಟ್ರೋಲ್ ದರ ಏರಿಕೆಯಾಗಿದ್ದರೆ, ಉತ್ತರ ಪ್ರದೇಶದಲ್ಲಿ ಕಡಿಮೆಯಾಗಿದೆ. ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ 71 ಡಾಲರ್ ದಾಟಿದೆ. ಬ್ರೆಂಟ್ ಕಚ್ಚಾ ತೈಲವು ಇಂದು ಪ್ರತಿ ಬ್ಯಾರೆಲ್‌ಗೆ 71.83 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ, ಡಬ್ಲ್ಯೂಟಿಐ ಕಚ್ಚಾ ಪ್ರತಿ ಬ್ಯಾರೆಲ್‌ಗೆ 68.16 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ.

ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.72 ರೂ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 104.21 ರೂ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 103.94 ರೂ. ಅದೇ ಸಮಯದಲ್ಲಿ, ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.75 ರೂ. ಇದೆ.

ಇಂದು ದೇಶದ ರಾಜಧಾನಿ ನವದೆಹಲಿಯಲ್ಲಿ ಡೀಸೆಲ್ ಬೆಲೆ 87.62 ರೂ. ಅದೇ ಸಮಯದಲ್ಲಿ ಮುಂಬೈನಲ್ಲಿ ಡೀಸೆಲ್ ಬೆಲೆ 92.15 ರೂ. ಕೋಲ್ಕತ್ತಾದಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 90.76 ರೂ ಮತ್ತು ಚೆನ್ನೈನಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 92.34 ರೂ. ಇದೆ. ಛತ್ತೀಸ್‌ಗಢದಲ್ಲಿ ಪ್ರತಿ ಲೀಟರ್‌ಗೆ 34 ಪೈಸೆ ಇಳಿಕೆಯ ನಂತರ ಪೆಟ್ರೋಲ್ ಲಭ್ಯವಿದ್ದು 101.07 ರೂ.ಗೆ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 33 ಪೈಸೆ ಇಳಿಕೆಯ ನಂತರ 94.00 ರೂ.ಗೆ ಲಭ್ಯವಿದೆ.

ಗೋವಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 11 ಪೈಸೆ ಇಳಿಕೆಯಾಗಿ 96.60 ರೂ.ಗೆ ಮತ್ತು ಡೀಸೆಲ್ ದರ 11 ಪೈಸೆ ಇಳಿಕೆಯಾಗಿ 88.36 ರೂ.ಗೆ ತಲುಪಿದೆ.

ಮತ್ತಷ್ಟು ಓದಿ: ಬಿಹಾರದಲ್ಲಿ ಪೆಟ್ರೋಲ್ ದುಬಾರಿ, ಮಹಾರಾಷ್ಟ್ರದಲ್ಲಿ ಇಳಿಕೆ

ಕೇರಳದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 22 ಪೈಸೆ ಇಳಿಕೆಯಾಗಿ 105.65 ರೂ.ಗೆ ಹಾಗೂ ಡೀಸೆಲ್ ದರ 21 ಪೈಸೆ ಇಳಿಕೆಯಾಗಿ 94.64 ರೂ.ಗೆ ತಲುಪಿದೆ.

ಮಹಾರಾಷ್ಟ್ರದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 44 ಪೈಸೆ ಇಳಿಕೆಯಾಗಿ 104.50 ರೂ.ಗೆ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 42 ಪೈಸೆ ಇಳಿಕೆಯಾಗಿ 91.03 ರೂ.ಗೆ ತಲುಪಿದೆ.

ರಾಜಸ್ಥಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 39 ಪೈಸೆ ಇಳಿಕೆಯಾಗಿ 104.32 ರೂ.ಗೆ ಮತ್ತು ಡೀಸೆಲ್ ದರ 34 ಪೈಸೆ ಇಳಿಕೆಯಾಗಿ 89.85 ರೂ.ಗೆ ತಲುಪಿದೆ.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಉತ್ತರ ಪ್ರದೇಶದಲ್ಲಿ ಪೆಟ್ರೋಲ್ 25 ಪೈಸೆ ಇಳಿಕೆಯ ನಂತರ ಲೀಟರ್‌ಗೆ 94.61 ರೂ.ಗೆ ಮತ್ತು ಡೀಸೆಲ್ 29 ಪೈಸೆ ಇಳಿಕೆಯ ನಂತರ ಲೀಟರ್‌ಗೆ 87.69 ರೂ.ಗೆ ಲಭ್ಯವಿದೆ.ಬೆಂಗಳೂರಿನಲ್ಲಿ ಪೆಟ್ರೋಲ್ 102.86 ರೂ., ಡೀಸೆಲ್ 88.94 ರೂ. ಇದೆ.

ರಾಜ್ಯ ಮಟ್ಟದಲ್ಲಿ ಪೆಟ್ರೋಲ್‌ಗೆ ವಿಧಿಸಲಾದ ತೆರಿಗೆಯಿಂದಾಗಿ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ವಿಭಿನ್ನವಾಗಿವೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More