Petrol Diesel Price on December 27: ಬಿಹಾರ, ಜಮ್ಮು-ಕಾಶ್ಮೀರದಲ್ಲಿ ಇಂಧನ ದರ ಇಳಿಕೆ

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್ 27, ಶುಕ್ರವಾರದ ಪೆಟ್ರೋಲ್, ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ. ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.77 ರೂ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 103.44 ರೂ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.95 ರೂ. ಅದೇ ಸಮಯದಲ್ಲಿ, ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.95 ರೂ., ಇಂದು ದೇಶದ ರಾಜಧಾನಿ ನವದೆಹಲಿಯಲ್ಲಿ ಡೀಸೆಲ್ ಬೆಲೆ 87.67 ರೂ. ಆದರೆ, ಮುಂಬೈನಲ್ಲಿ ಡೀಸೆಲ್ ಬೆಲೆ 89.97 ರೂ. ಕೋಲ್ಕತ್ತಾದಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 91.76 ರೂ ಮತ್ತು ಚೆನ್ನೈನಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 92.39 ರೂ. ಇದೆ.

Petrol Diesel Price on December 27: ಬಿಹಾರ, ಜಮ್ಮು-ಕಾಶ್ಮೀರದಲ್ಲಿ ಇಂಧನ ದರ ಇಳಿಕೆ
ಪೆಟ್ರೋಲ್ Image Credit source: Hum News English
Follow us
ನಯನಾ ರಾಜೀವ್
|

Updated on: Dec 27, 2024 | 7:50 AM

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾದ ತಕ್ಷಣ, ದೇಶದ ಅನೇಕ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾಗಿದೆ. ಕಾಶ್ಮೀರದಿಂದ ಯುಪಿ-ಬಿಹಾರದವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಆದಾಗ್ಯೂ, ದೆಹಲಿ-ಮುಂಬೈನಂತಹ ನಗರಗಳಲ್ಲಿ ಇಂದಿಗೂ ತೈಲ ಬೆಲೆ ಸ್ಥಿರವಾಗಿದೆ. ಬೆಂಗಳೂರು-ಪೆಟ್ರೋಲ್ 102.86 ರೂ., ಡೀಸೆಲ್ 88.94 ರೂ. ಇದೆ.

ಯುಪಿಯ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಪೆಟ್ರೋಲ್ ಅನ್ನು 34 ಪೈಸೆ ಅಗ್ಗವಾಗಿ ಲೀಟರ್‌ಗೆ 94.71 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಕೂಡ 38 ಪೈಸೆ ಕುಸಿದು ಲೀಟರ್‌ಗೆ 87.81 ರೂ.ಗೆ ತಲುಪಿದೆ. ಇಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಪೆಟ್ರೋಲ್ ಲೀಟರ್‌ಗೆ 58 ಪೈಸೆ ಇಳಿಕೆಯಾಗಿ 105.53 ರೂ ಮತ್ತು ಡೀಸೆಲ್ ಲೀಟರ್‌ಗೆ 55 ಪೈಸೆ ಇಳಿಕೆಯಾಗಿ 92.37 ರೂ. ಇದೆ.

ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 7 ಪೈಸೆ ಇಳಿದು 99.64 ರೂ.ಗೆ ತಲುಪಿದೆ, ಆದರೆ ಡೀಸೆಲ್ ಲೀಟರ್‌ಗೆ 6 ಪೈಸೆ ಇಳಿಕೆಯಾಗಿ 84.82 ರೂ.ಗೆ ತಲುಪಿದೆ.

ಮತ್ತಷ್ಟು ಓದಿ: Petrol Diesel Price on December 26: ಜಾರ್ಖಂಡ್​, ಹರ್ಯಾಣದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ದೆಹಲಿಯಲ್ಲಿ ಪೆಟ್ರೋಲ್ ರೂ 96.65 ಮತ್ತು ಡೀಸೆಲ್ ಲೀಟರ್‌ಗೆ ರೂ 89.82 – ಮುಂಬೈನಲ್ಲಿ ಪೆಟ್ರೋಲ್ ರೂ 106.31 ಮತ್ತು ಡೀಸೆಲ್ ರೂ 94.27 ರೂ. – ಚೆನ್ನೈನಲ್ಲಿ ಪೆಟ್ರೋಲ್ ರೂ 102.63 ಮತ್ತು ಡೀಸೆಲ್ ರೂ 94.24 ರೂ. ಕೋಲ್ಕತ್ತಾದಲ್ಲಿ ರೂ. 94.24 ರೂ. ಮತ್ತು ಡೀಸೆಲ್ ಲೀಟರ್‌ಗೆ 92.76 ರೂ. ಶ್ರೀನಗರದಲ್ಲಿ ಪೆಟ್ರೋಲ್ ರೂ 99.64 ಮತ್ತು ಡೀಸೆಲ್ ಲೀಟರ್‌ಗೆ ರೂ 84.82 ಆಗಿದೆ. – ನೋಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 94.71 ರೂ ಮತ್ತು ಡೀಸೆಲ್ 87.81 ರೂ ಆಗಿದೆ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 105.53 ರೂ ಮತ್ತು ಡೀಸೆಲ್ 92.37 ರೂ.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 73.15 ಡಾಲರ್​ನಂತೆ ಮಾರಾಟ ಮಾಡಲಾಗುತ್ತಿದೆ. ಆದರೆ ಡಬ್ಲ್ಯೂಟಿಐ ಕಚ್ಚಾ ಪ್ರತಿ ಬ್ಯಾರೆಲ್‌ಗೆ 69.51 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ