AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಇಂದು ಪೆಟ್ರೋಲ್, ಡೀಸೆಲ್​ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ!

Petrol Rate Today: ಕಳೆದ ಬುಧವಾರ ಇಂಧನ ದರ ಇಳಿಕೆಯತ್ತ ಸಾಗಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್​ಗೆ 15 ಪೈಸೆ ಇಳಿಕೆಯಾಗಿತ್ತು. ಬಳಿಕ ಯಾವುದೇ ಏರಿಳಿತ ಕಂಡು ಬಂದಿಲ್ಲ.

Petrol Price Today: ಇಂದು ಪೆಟ್ರೋಲ್, ಡೀಸೆಲ್​ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Sep 04, 2021 | 7:31 AM

Petrol Diesel Price Today | ದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಂದು (ಸೆಪ್ಟೆಂಬರ್ 4, ಶನಿವಾರ) ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಬುಧವಾರ ಇಂಧನ ದರ (Fuel Price) ಇಳಿಕೆಯತ್ತ ಸಾಗಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್​ಗೆ 15 ಪೈಸೆ ಇಳಿಕೆಯಾಗಿತ್ತು. ಬಳಿಕ ಯಾವುದೇ ಏರಿಳಿತ ಕಂಡು ಬಂದಿಲ್ಲ. ನಂತರದ ದಿನಗಳಲ್ಲಿ ಪೆಟ್ರೋಲ್ (Petrol Price), ಡೀಸೆಲ್ ದರ (Diesel Price) ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸ್ಥಿರವಾಗಿಯೇ ಉಳಿದಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟು? ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್​ಗೆ 101.34 ರೂ. ಅದೇ ಸಮಯದಲ್ಲಿ, ಡೀಸೆಲ್ ಪ್ರತಿ ಲೀಟರ್‌ಗೆ 88.77 ರೂಪಾಯಿಯಾಗಿದೆ. ಮುಂಬೈನಲ್ಲಿಯೂ ಪೆಟ್ರೋಲ್ ಪ್ರತಿ ಲೀಟರ್​ಗೆ 107.39 ರೂ. ಮತ್ತು ಡೀಸೆಲ್ ಪ್ರತಿ ಲೀಟರ್​ಗೆ  96.33 ರೂಪಾಯಿ ಆಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳ ಮತ್ತು ಭಾರೀ ತೆರಿಗೆಗಳಿಂದಾಗಿ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಾಖಲೆ ಮಟ್ಟದಲ್ಲಿವೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್​ಗೆ 104.84 ರೂ. ಅದೇ ಸಮಯದಲ್ಲಿ, ಡೀಸೆಲ್ ಪ್ರತಿ ಲೀಟರ್‌ಗೆ 94.19 ರೂಪಾಯಿಯಾಗಿದೆ. ಕೋಲ್ಕತಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್​ಗೆ 101.72 ರೂ. ಅದೇ ಸಮಯದಲ್ಲಿ, ಡೀಸೆಲ್ ಪ್ರತಿ ಲೀಟರ್‌ಗೆ 91.84 ರೂಪಾಯಿಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್​ಗೆ 99.08 ರೂ. ಅದೇ ಸಮಯದಲ್ಲಿ, ಡೀಸೆಲ್ ಪ್ರತಿ ಲೀಟರ್‌ಗೆ 93.38 ರೂಪಾಯಿಯಾಗಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ:

ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

(Petrol diesel prices unchanged today 2021 september 4 check fuel rate in bangalore mumbai delhi and major city)

ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ