Petrol Price Today: ಮೂರು ವಾರಗಳ ನಂತರ ಪೆಟ್ರೋಲ್ ಬೆಲೆಯಲ್ಲಿ ಏರಿಕೆ; ಇಂದು ಸಹ ಏರಿಕೆ ಕಂಡ ಡೀಸೆಲ್ ದರ!

Petrol Rate Today: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದು ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20 ರಿಂದ 25 ಪೈಸೆ ಹೆಚ್ಚಳ ಮಾಡಿವೆ. ಕಳೆದ ಐದು ದಿನಗಳಲ್ಲಿ ನಾಲ್ಕನೇ ದಿನ ಏರಿಕೆ ಕಾಣುತ್ತಿರುವ ಲೀಟರ್ ಡೀಸೆಲ್ ದರ 75 ಪೈಸೆ ಹೆಚ್ಚಳವಾಗಿದೆ.

Petrol Price Today: ಮೂರು ವಾರಗಳ ನಂತರ ಪೆಟ್ರೋಲ್ ಬೆಲೆಯಲ್ಲಿ ಏರಿಕೆ; ಇಂದು ಸಹ ಏರಿಕೆ ಕಂಡ ಡೀಸೆಲ್ ದರ!
ಸಾಂದರ್ಭಿಕ ಚಿತ್ರ
TV9kannada Web Team

| Edited By: shruti hegde

Sep 28, 2021 | 7:24 AM

Petrol Diesel Price Today | ದೆಹಲಿ: ಸತತ ಮೂರು ವಾರಗಳಿಂದ ಸ್ಥಿರತೆಯಲ್ಲಿದ್ದ ಪೆಟ್ರೋಲ್ ದರವನ್ನು (Petrol Price) ಇಂದು ( ಸೆಪ್ಟೆಂಬರ್ 28, ಮಂಗಳವಾರ) ಏರಿಕೆ ಮಾಡಲಾಗಿದೆ. ಇಂದು ಡೀಸೆಲ್ ದರ (Diesel Price) ಕೂಡ ಏರಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದು ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20 ರಿಂದ 25 ಪೈಸೆ ಹೆಚ್ಚಳ ಮಾಡಿವೆ. ಕಳೆದ ಐದು ದಿನಗಳಲ್ಲಿ ನಾಲ್ಕನೇ ದಿನ ಏರಿಕೆ ಕಾಣುತ್ತಿರುವ ಲೀಟರ್ ಡೀಸೆಲ್ ದರ 75 ಪೈಸೆ ಹೆಚ್ಚಳವಾಗಿದೆ.

ಇಂದು ಇಂಧನ ದರ (Fuel Price) ಏರಿಕೆಯ ಬಳಿಕ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 101.39 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.57 ರೂಪಾಯಿಗೆ ಏರಿಕೆ ಆಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 107.47 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 97.21 ರೂಪಾಯಿಗೆ ಏರಿಕೆ ಆಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 101.87 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 92.62 ರೂಪಾಯಿ ಇದೆ.

ಚೆನ್ನೈನಲ್ಲಿ ಲೀಟರ್ ಪೆಟ್ರೋಲ್​ಗೆ 99.15 ರೂಪಾಯಿ ನಿಗದಿ ಆಗಿದೆ. ಲೀಟರ್ ಡೀಸೆಲ್ ದರ 94.17 ರೂಪಾಯಿಗೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 104.92 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.06 ರೂಪಾಯಿ ಇದೆ. ಭೋಪಾಲ್​ನಲ್ಲಿ ಲೀಟರ್ ಪೆಟ್ರೋಲ್ ದರ 109.85 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 98.45 ರೂಪಾಯಿ ಇದೆ.

ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ದರ 98.51 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.98 ರೂಪಾಯಿಗೆ ಏರಿಕೆ ಆಗಿದೆ. ಛಂಡೀಗಢದಲ್ಲಿ ಲೀಟರ್ ಪೆಟ್ರೋಲ್​ಗೆ 97.61 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.31 ರೂಪಾಯಿ ನಿಗದಿ ಆಗಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ:

ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

(Petrol Price increased today on 2021 September 28 and check diesel price in Bangalore Delhi Mumbai and Major city)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada