PF Withdrawal: 5 ವರ್ಷಕ್ಕಿಂತ ಮುಂಚೆ ಪಿಎಫ್​ ವಿಥ್​ ಡ್ರಾ ಮಾಡುತ್ತಿದ್ದೀರಾ? ಯಾವಾಗ ತೆರಿಗೆ ಬೀಳಲ್ಲ ಎಂಬ ಮಾಹಿತಿ ಇಲ್ಲಿದೆ

| Updated By: Srinivas Mata

Updated on: Jul 20, 2021 | 11:36 AM

ಒಂದು ಕಡೆಯಲ್ಲಿ ನಿರಂತರವಾಗಿ 5 ವರ್ಷದ ಸೇವೆ ಪೂರ್ತಿ ಆಗಿಲ್ಲ. ಈಗ ಪಿಎಫ್ ಹಣ ವಿಥ್​ ಡ್ರಾ ಮಾಡಬಹುದಾ? ಈ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಲೇ ಇರುತ್ತವೆ. ಅದಕ್ಕೆ ಉತ್ತರವಾಗಿ ಈ ಲೇಖನ ಇದೆ.

PF Withdrawal: 5 ವರ್ಷಕ್ಕಿಂತ ಮುಂಚೆ ಪಿಎಫ್​ ವಿಥ್​ ಡ್ರಾ ಮಾಡುತ್ತಿದ್ದೀರಾ? ಯಾವಾಗ ತೆರಿಗೆ ಬೀಳಲ್ಲ ಎಂಬ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಪಿಎಫ್ (Employees Provident Fund) ಹಣದ ವಿಥ್​ ಡ್ರಾ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಲೇ ಇರುತ್ತವೆ. ಈ ಪೈಕಿ ಪ್ರಾಥಮಿಕ ಪ್ರಶ್ನೆ ಏನೆಂದರೆ, 5 ವರ್ಷದ ಸೇವೆ ಪೂರ್ತಿ ಆಗಿಲ್ಲ. ಈಗ ಹಣ ವಿಥ್​ ಡ್ರಾ ಮಾಡಬಹುದಾ? ಅದಕ್ಕೆ ಎಷ್ಟು ತೆರಿಗೆ ಬೀಳುತ್ತದೆ? ಹೀಗೆ. ಆದಾಯ ತೆರಿಗೆ ನಿಯಮಾವಳಿ ಪ್ರಕಾರವಾಗಿ, ಒಂದು ಕಡೆ ಐದು ವರ್ಷ ಪೂರ್ತಿ ಕೆಲಸ ಮಾಡದೆ ಪಿಎಫ್ ಹಣವನ್ನು ವಿಥ್ ಡ್ರಾ ಮಾಡಿದರೆ ಆ ಮೊತ್ತಕ್ಕೆ ತೆರಿಗೆ ಬೀಳುತ್ತದೆ. ಆದರೆ ಇಪಿಎಫ್ ನಿಯಮಾವಳಿಯಂತೆ, ಉದ್ಯೋಗಿಯು ಒಂದು ತಿಂಗಳು ನಿರುದ್ಯೋಗಿಯಾದಲ್ಲಿ ಪಿಎಫ್​ನ ಒಟ್ಟು ಮೊತ್ತದ ಶೇ 75ರಷ್ಟು ವಿಥ್​ಡ್ರಾ ಮಾಡಬಹುದು. ಈ ಹಿಂದೆ ಒಂದು ತಿಂಗಳ ನಂತರ ವಿಥ್​ ಡ್ರಾ ಮಾಡುವುದಕ್ಕೆ ಅವಕಾಶ ಇರಲಿಲ್ಲ. ಉದ್ಯೋಗಿಯು 2 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯಕ್ಕೆ ನಿರುದ್ಯೋಗಿಯಾಗಿದ್ದಲ್ಲಿ ಬಾಕಿ ಶೇ 25ರಷ್ಟು ವಿಥ್​ ಡ್ರಾ ಮಾಡಲು ಅವಕಾಶ ಮಾಡಲಾಗುತ್ತದೆ ಮತ್ತು ಪಿಎಫ್​ ಮೊತ್ತವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲಾಗುತ್ತದೆ. ಇದರರ್ಥ ಏನೆಂದರೆ. ಒಬ್ಬ ಉದ್ಯೋಗಿ ಉದ್ಯೋಗ ಕಳೆದುಕೊಂಡ ನಂತರ ಎರಡು ತಿಂಗಳ ತನಕ ನಿರುದ್ಯೋಗಿಯಾಗಿ ಉಳಿದಲ್ಲಿ ಶೇ 100ರಷ್ಟು ಮೊತ್ತವನ್ನು ವಿಥ್​ ಡ್ರಾ ಮಾಡಬಹುದು.

ಆದರೆ, ಈ ನಿಯಮಾವಳಿಯಲ್ಲಿ ಮಹಿಳೆಯರಿಗೆ ವಿನಾಯಿತಿ ಇದೆ. ಮಹಿಳೆಯು ಕೆಲಸಕ್ಕೆ ರಾಜೀನಾಮೆ ನೀಡಿ, ಮದುವೆ ಆಗುತ್ತಿದ್ದಾರೆ ಎಂದಾದಲ್ಲಿ 2 ತಿಂಗಳು ಕಾಯಬೇಕು ಅಂತೇನೂ ಇಲ್ಲ. ಇನ್ನು 54 ವರ್ಷ ದಾಟಿದ ಮೇಲೆ ಯಾವುದೇ ಸಂದರ್ಭದಲ್ಲಾದರೂ ಪಿಎಫ್ ಮೊತ್ತದ ಶೇ 90ರಷ್ಟು ಮೊತ್ತ ವಿಥ್​ ಡ್ರಾ ಮಾಡಬಹುದು. 54 ವರ್ಷದ ನಂತರ, ಆದರೆ ನಿವೃತ್ತಿಗೆ ಒಂದು ವರ್ಷದೊಳಗೆ ಈ ಎರಡರಲ್ಲಿ ಯಾವುದು ನಿಧಾನವೋ ಅದರ ಆಧಾರವಾಗಿ ಇರುತ್ತದೆ. ಬಹಳ ಜನಕ್ಕೆ ಗೊತ್ತಿಲ್ಲದ ಸಂಗತಿ ಏನೆಂದರೆ, ನಿರಂತರವಾಗಿ 5 ವರ್ಷಗಳ ಕಾಲ ಒಂದು ಕಡೆ ಉದ್ಯೋಗ ಮಾಡದಿದ್ದಲ್ಲಿ ಆಗ ಇಪಿಎಫ್ ವಿಥ್ ಡ್ರಾ ಮಾಡಿದರೆ ಅದಕ್ಕೆ ತೆರಿಗೆ ಆಗುತ್ತದೆ. ಆದರೆ 5 ವರ್ಷದ ನಿರಂತರವಾದ ಸೇವೆ ನಂತರ ಮೊತ್ತವನ್ನು ವಿಥ್​ ಡ್ರಾ (ಅಸಲು ಹಾಗೂ ಅದರ ಮೇಲಿನ ಬಡ್ಡಿ) ತೆರಿಗೆಯಿಂದ ವಿನಾಯಿತಿ ಸಿಗುತ್ತದೆ.

5 ವರ್ಷದೊಳಗೇ ಪಿಎಫ್ ವಿಥ್​ ಡ್ರಾಗೆ ಕೆಲವು ಸನ್ನಿವೇಶಗಳಲ್ಲಿ ಅವಕಾಶ ಇದ್ದು, ಅವು ಹೀಗಿವೆ:
* ಉದ್ಯೋಗಿಯ ಅನಾರೋಗ್ಯ ಕಾರಣಗಳಿಗೆ ಅಥವಾ ಉದ್ಯೋಗದಾತರೇ ಉದ್ಯಮವನ್ನು ನಿಲ್ಲಿಸಿದ ಸಂದರ್ಭದಲ್ಲಿ ವಿಥ್​ ಡ್ರಾ ಮಾಡಬಹುದು.
* ಉದ್ಯೋಗದಾತರ ಹತೋಟಿಯನ್ನೂ ಮೀರಿ ಏನಾದರೂ ಕಾರಣಗಳಿದ್ದು, ವಿಥ್​ ಡ್ರಾ ಮಾಡಿದಲ್ಲಿ ಅದಕ್ಕೂ ತೆರಿಗೆ ವಿನಾಯಿತಿ ಇದೆ.
* ಇಪಿಎಫ್ ಯೋಜನೆ ಅಡಿಯಲ್ಲಿ ಯಾವುದೇ ಮುಂಗಡವನ್ನು ಪಡೆದುಕೊಂಡರೆ ಅದಕ್ಕೆ ಆದಾಯ ತೆರಿಗೆ ಅನ್ವಯ ಆಗಲ್ಲ.
* ಒಂದು ವೇಳೆ ವಿಥ್​ ಡ್ರಾ ಮೊತ್ತ 50,000 ರೂಪಾಯಿಗಿಂತ ಕಡಿಮೆ ಇದ್ದಾಗ ಅಥವಾ ಉದ್ಯೋಗದಾತರು ಉದ್ಯಮವನ್ನೇ ಪೂರ್ತಿಯಾಗಿ ಮುಚ್ಚಿದಾಗ ಟಿಡಿಎಸ್ ಅನ್ವಯ ಆಗಲ್ಲ.
* ವಿಥ್ ಡ್ರಾ ಮೊತ್ತವು 50,000 ರೂಪಾಯಿಗಿಂತ ಹೆಚ್ಚಿದ್ದು, ಸೇವೆ ಸಲ್ಲಿಸಿದ್ದು 5 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ ಚಂದಾದಾರರು 15G/15H ಫಾರ್ಮ್​ ಸಲ್ಲಿಸಬಹುದು, ಆ ವರ್ಷದ ಆದಾಯವು ತೆರಿಗೆ ಮಿತಿಯೊಳಗೆ ಇದ್ದರೆ ಟಿಡಿಎಸ್​ನಿಂದ ವಿನಾಯಿತಿ ಸಿಗುತ್ತದೆ.

ಇನ್ನು ಕೊವಿಡ್- 19 ಕಾರಣಕ್ಕೆ ಉದ್ಭವಿಸಿರುವ ಹಣಕಾಸು ತುರ್ತಿಗೆ ಪಿಎಫ್​ನಿಂದ ಅಡ್ವಾನ್ಸ್ ಪಡೆದುಕೊಳ್ಳಬಹುದು. ಅದನ್ನು ಮರುಪಾವತಿಸುವ ಅಗತ್ಯವಿಲ್ಲ. ಸದಸ್ಯರು ಮೂರು ತಿಂಗಳಿಗೆ ಸಮವಾಗಿ ಬೇಸಿಕ್ ಪೇ (ಮೂಲವೇತನ) ಹಾಗೂ ಡಿಯರ್​ನೆಸ್ ಅಲೋವೆನ್ಸ್ (ಡಿಎ) ಅಥವಾ ತಮ್ಮ ಪಿಎಫ್​ ಖಾತೆಯಲ್ಲಿ ಇರುವ ಒಟ್ಟು ಮೊತ್ತದ ಶೇ 75ರಷ್ಟು ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ವಿಥ್​ ಡ್ರಾ ಮಾಡಬಹುದು. ಪಿಎಫ್​ ಅಡ್ವಾನ್ಸ್ ಕ್ಲೇಮ್ ಮಾಡುವಾಗ Purpose ಎಂದಿರುವಲ್ಲಿ “Outbreak Of Pandemic (Covid- 19)” ಎಂಬುದನ್ನು ಆಯ್ಕೆ ಮಾಡಬೇಕು.

ಇದನ್ನೂ ಓದಿ: Taxation on small savings: ಪಿಪಿಎಫ್​, ಸುಕನ್ಯಾ ಸಮೃದ್ಧಿ ಮತ್ತಿತರ ಸಣ್ಣ ಉಳಿತಾಯ ಯೋಜನೆಗೆ ತೆರಿಗೆ ಲೆಕ್ಕಾಚಾರ ಹೇಗೆ?

(If PF money withdraw before the completion of continuous service of 5 years. How to calculate tax on it? Here is an explainer)

Published On - 11:35 am, Tue, 20 July 21