AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಇಂಟರ್ನ್​ಶಿಪ್ ಸ್ಕೀಮ್; ಕಂಪನಿಗಳಿಗೆ ನೊಂದಣಿ ಮುಕ್ತಾಯ; ಲಕ್ಷಕ್ಕೂ ಹೆಚ್ಚು ಯುವಕರಿಗೆ ತರಬೇತಿ ಅವಕಾಶ

PM Internship scheme updates: ಪ್ರಧಾನಮಂತ್ರಿ ಇಂಟರ್ನ್​ಶಿಪ್ ಸ್ಕೀಮ್​ನಲ್ಲಿ 280 ಕಂಪನಿಗಳು ಪಾಲ್ಗೊಂಡಿವೆ. ಇದೀಗ ಕಂಪನಿಗಳಿಗೆ ವಿಂಡೋ ಮುಕ್ತಾಯವಾಗಿದೆ. 1.27 ಲಕ್ಷ ಯುವಜನರು ಈ ಸ್ಕೀಮ್​ನಲ್ಲಿ ಇಂಟರ್ನ್​ಶಿಪ್​ಗೆ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಸೂಕ್ತವಾದವರನ್ನು 280 ಕಂಪನಿಗಳು ಇಂಟರ್ನ್​ಶಿಪ್​ಗೆ ಆಯ್ದುಕೊಳ್ಳಬಹುದು.

ಪಿಎಂ ಇಂಟರ್ನ್​ಶಿಪ್ ಸ್ಕೀಮ್; ಕಂಪನಿಗಳಿಗೆ ನೊಂದಣಿ ಮುಕ್ತಾಯ; ಲಕ್ಷಕ್ಕೂ ಹೆಚ್ಚು ಯುವಕರಿಗೆ ತರಬೇತಿ ಅವಕಾಶ
ಯುವಜನರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 23, 2024 | 12:39 PM

Share

ನವದೆಹಲಿ, ಅಕ್ಟೋಬರ್ 23: ಯುವಕರಿಗೆ ನೈಜ ಕೆಲಸದ ಕೌಶಲ್ಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿರುವ ಪಿಎಂ ಇಂಟರ್ನ್​ಶಿಪ್ ಯೋಜನೆಯಲ್ಲಿ ಈವರೆಗೆ 280 ಕಂಪನಿಗಳು ಪಾಲ್ಗೊಂಡಿವೆ. ಇದೀಗ ಸ್ಕೀಮ್​ನ ಪೋರ್ಟಲ್​ನಲ್ಲಿ ಕಂಪನಿಗಳ ನೊಂದಣಿ ನಿಲ್ಲಿಸಲಾಗಿದೆ. ಆದರೆ, ಯುವಜನರು ಇಂಟರ್ನ್​ಶಿಪ್​ಗೆ ಅರ್ಜಿ ಸಲ್ಲಿಸುವುದನ್ನು ಮುಂದುವರಿಸಬಹುದು. ಇದು ನವೆಂಬರ್ ಒಂದು ಅಥವಾ ಎರಡನೇ ವಾರದವರೆಗೂ ಮುಂದುವರಿಯಬಹುದು.

ಈವರೆಗೆ ಇಂಟರ್ನ್​ಶಿಪ್ ಬಯಸಿ ಅರ್ಜಿ ಸಲ್ಲಿಸಿದ ಯುವಕ, ಯುವತಿಯರ ಸಂಖ್ಯೆ 1,27,046 ಇದೆ. ಒಟ್ಟು 280 ಕಂಪನಿಗಳು ಈ ಪೋರ್ಟಲ್​ನಲ್ಲಿ ಇಂಟರ್ನ್​ಶಿಪ್ ಆಫರ್ ಮಾಡಿವೆ.

ಪಿಎಂ ಇಂಟರ್ನ್​ಶಿಪ್ ಸ್ಕೀಮ್​ಗೆಂದು ರೂಪಿತವಾಗಿರುವ ಪೋರ್ಟಲ್​ನಲ್ಲಿ ಅಕ್ಟೋಬರ್ 3ಕ್ಕೆ ಕಾರ್ಪೊರೇಟ್ ಕಂಪನಿಗಳನ್ನು ಆಹ್ವಾನಿಸಲಾಗಿತ್ತು. ಅಕ್ಟೋಬರ್ 22ಕ್ಕೆ ಈ ವಿಂಡೋ ಮುಕ್ತಾಯವಾಗಿದೆ. ಇಂಟರ್ನ್​ಶಿಪ್ ಬಯಸುವ ಸಂಭಾವ್ಯ ಅಭರ್ಥಿಗಳಿಗೆ ಅಕ್ಟೋಬರ್ 12ರಿಂದ ನೊಂದಣಿ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: 2024-26ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ. 7ರಿಂದ 8; ಡಲಾಯ್ಟ್, ಐಎಂಎಫ್, ಆರ್​ಬಿಐ ಅಂದಾಜು

ಏನಿದು ಪಿಎಂ ಇಂಟರ್ನ್​ಶಿಪ್ ಸ್ಕೀಮ್?

ಕೆಲಸ ಹೊಂದಿಲ್ಲದ ದೇಶದ ಯುವಕರಿಗೆ ನೈಜ ಉದ್ಯೋಗದ ಕೌಶಲ್ಯ ಮತ್ತು ತರಬೇತಿ ನೀಡಿ, ಉದ್ಯೋಗಾವಕಾಶ ಹೆಚ್ಚಿಸಲು ಕೇಂದ್ರ ಸರ್ಕಾರ ಪಿಎಂ ಇಂಟರ್ನ್​ಶಿಪ್ ಯೋಜನೆ ಆರಂಭಿಸಿದೆ. ಅಗ್ರ ಕಾರ್ಪೊರೇಟ್ ಕಂಪನಿಗಳು ತಮ್ಮಲ್ಲಿ ಯುವಕರಿಗೆ ತರಬೇತಿ ಕಂ ಇಂಟರ್ನ್​ಶಿಪ್ ಅವಕಾಶ ನೀಡಬಹುದು. 21ರಿಂದ 24 ವರ್ಷದೊಳಗಿನ ವಯಸ್ಸಿನ ಯುವಕ ಮತ್ತು ಯುವತಿಯರು ಇಂಟರ್ನ್​ಶಿಪ್ ಪಡೆಯಬಹುದು.

ಒಂದು ವರ್ಷದ ಇಂಟರ್ನ್​ಶಿಪ್ ಅವಕಾಶ ಕೊಡುವ ಈ ಸ್ಕೀಮ್​ನಲ್ಲಿ ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಗೂ ವರ್ಷಕ್ಕೆ 66,000 ರೂವರೆಗೆ ಧನಸಹಾಯ ಸಿಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ ಮಾಸಿಕವಾಗಿ 4,500 ರೂ ಹಣವನ್ನು ಸ್ಟೈಪೆಂಡ್ ಆಗಿ ನೀಡುತ್ತದೆ. ಕಂಪನಿಯೂ ಕೂಡ ತಿಂಗಳಿಗೆ 500 ರೂ ಹಣ ನೀಡುತ್ತದೆ. ಜೊತೆಗೆ ತರಬೇತಿ ವೆಚ್ಚ ಎಲ್ಲವನ್ನೂ ಕಂಪನಿಯೇ ಭರಿಸುತ್ತದೆ.

ಇದನ್ನೂ ಓದಿ: ಎಂಟು ವರ್ಷದಲ್ಲಿ ಆರು ಲಕ್ಷಕ್ಕೂ ಹೆಚ್ಚು ಗ್ರಾಮಗಳ ಭೂದಾಖಲೆಗಳ ಡಿಜಿಟೀಕರಣವಾಗಿದೆ: ಗ್ರಾಮೀಣಾಭಿವೃದ್ಧಿ ಸಚಿವ

ರಿಲಾಯನ್ಸ್ ಇಂಡಸ್ಟ್ರೀಸ್, ಮಹೀಂದ್ರ, ಟಿಸಿಎಸ್, ಎಲ್ ಅಂಡ್ ಟಿ, ಮಾರುತಿ ಸುಜುಕಿ, ಒಎನ್​ಜಿಸಿ, ಬಜಾಜ್ ಫೈನಾನ್ಸ್ ಮೊದಲಾದ ಕಂಪನಿಗಳು ಈ ಸ್ಕೀಮ್​ನಲ್ಲಿ ಪಾಲ್ಗೊಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!