PM Kisan 19th Instalment: ಇವತ್ತು ಪಿಎಂ ಕಿಸಾನ್ ಹೊಸ ಕಂತು ಬಿಡುಗಡೆ; ಇಕೆವೈಸಿ ಆಗದಿದ್ದರೆ ಹಣ ಸಿಗಲ್ಲ; ಇಲ್ಲಿದೆ ಡೀಟೇಲ್ಸ್

PM Kisan eKYC: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 19ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಇಂದು ಸೋಮವಾರ ಬಿಡುಗಡೆ ಮಾಡುತ್ತಿದ್ದಾರೆ. 2018-19ರಲ್ಲಿ ಆರಂಭವಾದ ಈ ಸ್ಕೀಮ್​ನಲ್ಲಿ ಇಲ್ಲಿಯವರೆಗೆ 2,000 ರೂಗಳ 18 ಕಂತುಗಳ ಹಣವನ್ನು ರೈತರಿಗೆ ಬಿಡುಗಡೆ ಮಾಡಲಾಗಿದೆ. ಕೃಷಿ ಜಮೀನು ಹೊಂದಿರುವ ರೈತರು ಈ ಸ್ಕೀಮ್​ಗೆ ಅರ್ಹರಾಗಿರುತ್ತಾರೆ. ನೊಂದಣಿ ಮಾಡಿಸಿದ್ದರೂ ಪ್ರತಿಯೊಬ್ಬರೂ ಇಕೆವೈಸಿ ಮಾಡಿಸಿರಬೇಕು.

PM Kisan 19th Instalment: ಇವತ್ತು ಪಿಎಂ ಕಿಸಾನ್ ಹೊಸ ಕಂತು ಬಿಡುಗಡೆ; ಇಕೆವೈಸಿ ಆಗದಿದ್ದರೆ ಹಣ ಸಿಗಲ್ಲ; ಇಲ್ಲಿದೆ ಡೀಟೇಲ್ಸ್
ರೈತ

Updated on: Feb 24, 2025 | 10:48 AM

ನವದೆಹಲಿ, ಫೆಬ್ರುವರಿ 24: ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣವನ್ನು ಇಂದು ಬಿಡುಗಡೆ ಮಾಡುತ್ತಿದ್ದಾರೆ. 10 ಕೋಟಿಯಷ್ಟು ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 2,000 ರೂ ಹಣ ಜಮೆ ಆಗಲಿದೆ. ವಿಶ್ವದಲ್ಲೇ ಅತಿದೊಡ್ಡ ಡಿಬಿಟಿ ಸ್ಕೀಮ್ ಆದ ಇದರಲ್ಲಿ ವರ್ಷಕ್ಕೆ 6,000 ರೂ ನೀಡಲಾಗುತ್ತದೆ. ಪ್ರತೀ ನಾಲ್ಕು ತಿಂಗಳಿಗೊಮ್ಮೆ 2,000 ರೂ ನೀಡಲಾಗುತ್ತದೆ. ಇಂದು ಅದರ ಒಂದು ಕಂತಿನ ಹಣ ಬಿಡುಗಡೆ ಆಗುತ್ತಿದೆ. 2018-19ರಿಂದ ಆರಂಭವಾಗಿ ಇಲ್ಲಿಯವರೆಗೆ 8-11 ಕೋಟಿ ರೈತರು 18 ಕಂತುಗಳ ಹಣ ಪಡೆದಿದ್ದಾರೆ.

ಏನಿದು ಪಿಎಂ ಕಿಸಾನ್ ಯೋಜನೆ? ಯಾರಿಗೆ ಸಿಗುತ್ತೆ ಹಣ?

ರೈತರಿಗೆ ವ್ಯವಸಾಯಕ್ಕೆ ಸಹಾಯವಾಗಿ ಸರ್ಕಾರ ಈ ಯೋಜನೆ ಮೂಲಕ ವರ್ಷಕ್ಕೆ 6,000 ರೂ ಸಹಾಯಧನ ನೀಡುತ್ತದೆ. ಈ ಆರು ಸಾವಿರ ರೂ ಅನ್ನು ತಲಾ 2,000 ರೂಗಳ ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ.

ಕೃಷಿ ಜಮೀನು ಹೊಂದಿರುವ ರೈತರು ಈ ಯೋಜನೆಗೆ ಅರ್ಹರು. ವೈದ್ಯ, ವಕೀಲ, ಎಂಜಿನಿಯರ್, ಸಿಎ ಇತ್ಯಾದಿ ವೃತ್ತಿಪರರು, ಸರ್ಕಾರಿ ಉದ್ಯೋಗಿಗಳು, ಜನಪ್ರತಿನಿಧಿಗಳು, ಆದಾಯ ತೆರಿಗೆ ಪಾವತಿದಾರರು ಕೃಷಿ ಜಮೀನು ಹೊಂದಿದ್ದರೂ ಕೂಡ ಯೋಜನೆಗೆ ಅರ್ಹರಾಗಿರುವುದಿಲ್ಲ. ಕೃಷಿಯನ್ನೇ ನಂಬಿ ವ್ಯವಸಾಯ ಮಾಡುತ್ತಿರುವ ರೈತರಿಗೆಂದು ಈ ಸ್ಕೀಮ್ ನಡೆಸಲಾಗುತ್ತಿದೆ.

ಇದನ್ನೂ ಓದಿ: ಚೀನಾದಲ್ಲಿ ಉಚಿತ ಊಟ ಪಡೆಯಲು ಕೋಡ್ ವರ್ಡ್; ಅವಶ್ಯಕತೆ ಇದ್ದವರ ಸಹಾಯಕ್ಕೆ ನಿಂತ ಸಮುದಾಯ

ಪಿಎಂ ಕಿಸಾನ್: ಇಕೆವೈಸಿ ಕಡ್ಡಾಯ…

ಈ ಹಿಂದೆ ಪಿಎಂ ಕಿಸಾನ್ ಯೋಜನೆಗೆ 11 ಕೋಟಿಗೂ ಅಧಿಕ ರೈತರು ನೊಂದಣಿ ಮಾಡಿಸಿದ್ದರು. ಆದರೆ, ಪ್ರತಿಯೊಬ್ಬ ಫಲಾನುಭವಿಯೂ ಇಕೆವೈಸಿ ಮಾಡಿಸುವುದು ಕಡ್ಡಾಯ ಇದೆ. ಇಕೆವೈಸಿ ಮಾಡಿಸದ ರೈತರಿಗೆ, ಅವರು ಯೋಜನೆಗೆ ನೊಂದಾವಣಿ ಆಗಿದ್ದರೂ ಹಣ ಸಿಗುವುದಿಲ್ಲ.

ಪಿಎಂ ಕಿಸಾನ್: ಇಕೆವೈಸಿ ಮಾಡಿಸುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ: pmkisan.gov.in/

ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರಾಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ನೋಡುತ್ತೀರಿ. ಇಲ್ಲಿ ಹಲವು ಟ್ಯಾಬ್​ಗಳಿದ್ದು, ಮೊದಲನೆಯ ಟ್ಯಾಬ್ ಆದ ಇ-ಕೆವೈಸಿ ಅನ್ನು ಕ್ಲಿಕ್ ಮಾಡಿ. ಅಲ್ಲಿ ಆಧಾರ್ ನಂಬರ್ ಅಥೆಂಟಿಕೇಶನ್ ಮೂಲಕ ಇಕೆವೈಸಿ ಮಾಡಬಹುದು.

ಇದನ್ನೂ ಓದಿ: ಒಂದು ಮೊಟ್ಟೆಯ ಕಥೆ… ಅಮೆರಿಕದಲ್ಲಿ ಕೋಳಿಗಳನ್ನು ಬಾಡಿಗೆಗೆ ಪಡೆದು ಸಾಕುತ್ತಿರುವ ಜನರು… ಕಾರಣ ಏನು ಗೊತ್ತಾ?

ಪಿಎಂ ಕಿಸಾನ್ ಯೋಜನೆ; ಫಲಾನುಭವಿಗಳ ಪಟ್ಟಿ

ನೀವು ಯೋಜನೆಗೆ ನೊಂದಾಯಿಸಿದ್ದು, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಎಂಬುದನ್ನು ತಿಳಿದುಕೊಳ್ಳಬಹುದು. ಯೋಜನೆಯ ವೆಬ್​ಸೈಟ್​ಗೆ ಹೋಗಿ ಫಾರ್ಮರ್ಸ್ ಕಾರ್ನರ್​ನಲ್ಲಿ ಬೆನಿಫಿಶಿಯರಿ ಲಿಸ್ಟ್ ಅನ್ನು ಕ್ಲಿಕ್ ಮಾಡಿ.

ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮದ ಹೆಸರನ್ನು ಆಯ್ಕೆ ಮಾಡಿಕೊಂಡು, ಗೆಟ್ ಡಾಟಾ ಕ್ಲಿಕ್ ಮಾಡಿ. ಆ ಊರಿನಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ