ಪಿಎಂ ಕಿಸಾನ್: 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಮೇ ಅಥವಾ ಜೂನ್ ತಿಂಗಳಾ? ಇಲ್ಲಿದೆ ವಿವರ

PM Kisan Samman Nidhi Yojana 17th Installment date: ಐದು ವರ್ಷದ ಹಿಂದೆ ಆರಂಭವಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಈವರೆಗೆ 16 ಕಂತುಗಳ ಹಣ ಬಿಡುಗಡೆ ಆಗಿದೆ. 2024ರ ಫೆಬ್ರುವರಿ 28ರಂದು 16ನೇ ಕಂತಿನ ಹಣವನ್ನು 9 ಕೋಟಿಗೂ ಹೆಚ್ಚು ಫಲಾನುಭವಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಈಗ 17ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಬಹುದು ಎಂದು ರೈತರು ಕಾಯುತ್ತಿರಬಹುದು. ಪ್ರತೀ ನಾಲ್ಕು ತಿಂಗಳಲ್ಲಿ ಒಮ್ಮೆ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಯಾವಾಗ ಎಂದು ನಿರ್ದಿಷ್ಟ ದಿನವಾಗಲೀ, ತಿಂಗಳಾಗಲೀ ನಮೂದಿಸುವುದಿಲ್ಲ. ಟ್ರೆಂಡ್ ಪ್ರಕಾರ 17ನೇ ಕಂತಿನ ಹಣ ಜೂನ್ ತಿಂಗಳಲ್ಲಿ ಬಿಡುಗಡೆ ಆಗಬಹುದು.

ಪಿಎಂ ಕಿಸಾನ್: 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಮೇ ಅಥವಾ ಜೂನ್ ತಿಂಗಳಾ? ಇಲ್ಲಿದೆ ವಿವರ
ರೈತ

Updated on: Apr 24, 2024 | 11:41 AM

ನವದೆಹಲಿ, ಏಪ್ರಿಲ್ 24: ರೈತರಿಗೆ ಕೇಂದ್ರದಿಂದ ರೂಪಿಸಲಾಗಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಅಡಿ ಈವರೆಗೆ 16 ಕಂತುಗಳ ಹಣವನ್ನು ಬಿಡುಗಡೆ ಮಾಡಲಾಗಿದೆ. 17ನೇ ಕಂತಿನ ಹಣದ ಬಿಡುಗಡೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ. ಪ್ರತೀ ಕಂತಿನಲ್ಲಿ ಸರ್ಕಾರ 2,000 ರೂ ಹಣವನ್ನು ಪ್ರತೀ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ. 16ನೇ ಕಂತಿನ ಹಣವನ್ನು ಸರ್ಕಾರ 2024ರ ಫೆಬ್ರುವರಿ 28ರಂದು ಬಿಡುಗಡೆ ಮಾಡಿತ್ತು. 9 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಒಟ್ಟು 21,000 ಕೋಟಿ ರೂನಷ್ಟು ಹಣವನ್ನು ಸರ್ಕಾರ ನೀಡಿತ್ತು.

17ನೇ ಕಂತಿನ ಹಣ ಯಾವಾಗ ಬರಬಹುದು?

ಪಿಎಂ ಕಿಸಾನ್ ಯೋಜನೆಯಲ್ಲಿ ವರ್ಷಕ್ಕೆ ಮೂರು ಕಂತುಗಳಿಂದ ಒಟ್ಟು 6,000 ರೂ ಹಣವನ್ನು ಸರ್ಕಾರ ಫಲಾನುಭವಿಗಳಿಗೆ ನೀಡುತ್ತದೆ. ಅಂದರೆ ಪ್ರತೀ ನಾಲ್ಕು ತಿಂಗಳಿಗೊಮ್ಮೆ 2,000 ರೂ ನೀಡಲಾಗುತ್ತದೆ. ಫೆಬ್ರುವರಿ ತಿಂಗಳಲ್ಲಿ 16ನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು. ನಾಲ್ಕು ತಿಂಗಳ ಬಳಿಕ ಅಂದರೆ ಮೇ ಅಥವಾ ಜೂನ್ ತಿಂಗಳಲ್ಲಿ 17ನೇ ಕಂತಿನ ಹಣ ಬಿಡುಗಡೆ ಆಗಬಹುದು. ಏಪ್ರಿಲ್​ನಿಂದ ಜುಲೈ ಅವಧಿಯಲ್ಲಿನ ಕಂತಿದು.

ಏನಿದು ಪಿಎಂ ಕಿಸಾನ್ ಯೋಜನೆ?

ರೈತರಿಗೆ ವ್ಯವಸಾಯಕ್ಕೆ ಸಹಾಯವಾಗಲು ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2019ರಲ್ಲಿ ಆರಂಭಿಸಿತ್ತು. ಲೋಕಸಭಾ ಚುನಾವಣೆಗೂ ಮುನ್ನ ಚಾಲನೆಗೆ ನೀಡಲಾದ ಈ ಯೋಜನೆಯಲ್ಲಿ ಜಮೀನು ಮಾಲಕತ್ವ ಹೊಂದಿರುವ ರೈತರು ಫಲಾನುಭವಿಯಾಗಲು ಅರ್ಹರಿರುತ್ತಾರೆ. ಸರ್ಕಾರಿ ನೌಕರರು, ವೃತ್ತಿಪರರು ಕುಟುಂಬದಲ್ಲಿ ಇಲ್ಲದ ರೈತರು ಈ ಯೋಜನೆ ಪಡೆಯಬಹುದು.

ಇದನ್ನೂ ಓದಿ: ಸಾವರೀನ್ ಗೋಲ್ಡ್ ಬಾಂಡ್: ಅವಧಿಪೂರ್ವ ಬೆಲೆ ಘೋಷಿಸಿದ ಆರ್​ಬಿಐ; ಹೂಡಿಕೆದಾರರಿಗೆ ಸಿಗುವ ಲಾಭ ಎಷ್ಟು ನೋಡಿ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ಪಟ್ಟಿ

ನೀವು ಒಂದು ವೇಳೆ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದರೆ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯಾ ಎಂದು ಖಾತ್ರಿಪಡಿಸಿಕೊಳ್ಳಲು ಸಾಧ್ಯ. ಅದರ ಕ್ರಮ ಇಲ್ಲಿದೆ.

  • ಪಿಎಂ ಕಿಸಾನ್ ವೆಬ್​ಸೈಟ್ ಪ್ರವೇಶಿಸಿ: pmkisan.gov.in/
  • ಮುಖ್ಯಪುಟವನ್ನು ತುಸು ಕೆಳಗೆ ಸ್ಕ್ರಾಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣಬಹುದು.
  • ಅದರಲ್ಲಿ ಬೆನಿಫಿಶಿಯರಿ ಲಿಸ್ಟ್ ಅನ್ನು ಕ್ಲಿಕ್ ಮಾಡಿ
  • ಇಲ್ಲಿ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಅಂತಿಮವಾಗಿ ಗ್ರಾಮವನ್ನು ಆಯ್ದುಕೊಂಡು ‘ಗೆಟ್ ರಿಪೋರ್ಟ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ಈ ಗ್ರಾಮದಿಂದ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿರುವವರ ಪಟ್ಟಿ ಕಾಣುತ್ತದೆ.

ಇದನ್ನೂ ಓದಿ: ವ್ಯವಹಾರದಲ್ಲಿ ಚತುರೆ ಸನ್ನಿ ಲಿಯೋನೆ; 10 ಲಕ್ಷದಿಂದ ಆರಂಭವಾದ ಬಿಸಿನೆಸ್ ಇವತ್ತು ವರ್ಷಕ್ಕೆ 10 ಕೋಟಿ ಆದಾಯ

ಇಕೆವೈಸಿ ಅಪ್​ಡೇಟ್ ಮಾಡಿ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇಕೆವೈಸಿ ಅಪ್​ಡೇಟ್ ಮಾಡುವುದು ಕಡ್ಡಾಯ. ನೀವು ಕೆವೈಸಿ ಅಪ್​ಡೇಟ್ ಮಾಡಿರದಿದ್ದರೆ ಕಳೆದ ಮೂರ್ನಾಲ್ಕು ಕಂತುಗಳು ನಿಮಗೆ ಸಿಕ್ಕಿರುವುದಿಲ್ಲ. ಹಾಗೇನಾದರೂ ಹಣ ಬರದೇ ನಿಂತಿದ್ದಲ್ಲಿ ಬಹುತೇಕವಾಗಿ ಇ-ಕೆವೈಸಿ ಅಪ್​​ಡೇಟ್ ಮಾಡದಿರುವುದೇ ಕಾರಣವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ