AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವರೀನ್ ಗೋಲ್ಡ್ ಬಾಂಡ್: ಅವಧಿಪೂರ್ವ ಬೆಲೆ ಘೋಷಿಸಿದ ಆರ್​ಬಿಐ; ಹೂಡಿಕೆದಾರರಿಗೆ ಸಿಗುವ ಲಾಭ ಎಷ್ಟು ನೋಡಿ

Sovereign Gold Bond premature redemption: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನ 2017-18ರ ನಾಲ್ಕನೇ ಸತಣಿ ಮತ್ತು 2018-19ರ ಎರಡನೇ ಸರಣಿಯ ಪ್ರೀಮೆಚ್ಯೂರ್ ಬಿಡುಗಡೆಯನ್ನು ಆರ್​ಬಿಐ ಘೋಷಿಸಿದೆ. ಅದರ ಪ್ರಕಾರ ಗ್ರಾಮ್​ಗೆ 7,325 ರೂ ನಿಗದಿ ಮಾಡಿದೆ. ಎಂಟು ವರ್ಷದ ಈ ಸ್ಕೀಮ್ ಅನ್ನು ಐದು ವರ್ಷದ ಬಳಿಕ ಪ್ರೀಮೆಚ್ಯೂರ್ ಆಗಿ ರಿಟರ್ನ್ ಪಡೆಯಲು ಅವಕಾಶ ಇರುತ್ತದೆ.

ಸಾವರೀನ್ ಗೋಲ್ಡ್ ಬಾಂಡ್: ಅವಧಿಪೂರ್ವ ಬೆಲೆ ಘೋಷಿಸಿದ ಆರ್​ಬಿಐ; ಹೂಡಿಕೆದಾರರಿಗೆ ಸಿಗುವ ಲಾಭ ಎಷ್ಟು ನೋಡಿ
ಸಾವರಿನ್ ಗೋಲ್ಡ್ ಬಾಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 23, 2024 | 4:27 PM

Share

ನವದೆಹಲಿ, ಏಪ್ರಿಲ್ 23: ಉತ್ತಮ ಹೂಡಿಕೆ ಆಯ್ಕೆಗಳಲ್ಲಿ ಒಂದೆನಿಸಿರುವ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ (Sovereign Gold Bond scheme) 2017-18ರ ನಾಲ್ಕನೇ ಸರಣಿ ಹಾಗೂ 2018-19ರ ಎರಡನೇ ಸರಣಿಯನ್ನು ಪ್ರೀಮೆಚ್ಯೂರ್ ಆಗಿ ಬಿಡುಗಡೆ ಮಾಡಲಾಗುತ್ತಿದೆ. ಈ ಎರಡು ಸರಣಿಯ ಎಸ್​ಜಿಬಿ ಹೂಡಿಕೆಗಳು ಇಂದು ರಿಡಂಪ್ಷನ್​ಗೆ ಲಭ್ಯ ಇದೆ. ಆರ್​ಬಿಐ ಇವುಗಳ ರಿಡಂಪ್ಷನ್ ದರವನ್ನೂ ಪ್ರಕಟಿಸಿದೆ. ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆ ಎಂಟು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಐದು ವರ್ಷದ ಬಳಿಕ ಪ್ರೀಮೆಚ್ಯೂರ್ ಆಗಿ ಹೂಡಿಕೆಯನ್ನು ಹಿಂಪಡೆಯುವ ಅವಕಾಶ ಇದೆ.

2017-18ರ ನಾಲ್ಕನೇ ಸರಣಿ ಹಾಗೂ 2018-19ರ ಎರನೇ ಸರಣಿಯ ಎಸ್​ಜಿಬಿ ಹೂಡಿಕೆ ಪ್ರೀಮೆಚ್ಯೂರ್ ಆಗಿ ಲಭ್ಯ ಇರುವ ದಿನವನ್ನು ಏಪ್ರಿಲ್ 23ರಂದು ಆರ್​ಬಿಐ ಘೋಷಿಸಿದೆ. ಇದಕ್ಕೆ ಹಿಂದಿನ ಮೂರು ಕಾರ್ಯ ದಿನಗಳ ಸರಾಸರಿ ಚಿನ್ನದ ಬೆಲೆಯನ್ನು ರಿಡಂಪ್ಷನ್ ಪ್ರೈಸ್ ಆಗಿ ನಿಗದಿ ಮಾಡಲಾಗುತ್ತದೆ. ಅಂದರೆ ಏಪ್ರಿಲ್ 18, 19 ಮತ್ತು 22ರಲ್ಲಿನ ಸರಾಸರಿ ಚಿನ್ನದ ಬೆಲೆ ಪ್ರಕಾರ ಒಂದು ಗ್ರಾಮ್​ಗೆ 7,325 ರೂ ಆಗುತ್ತದೆ. ಅಂದರೆ ಇವೆರಡು ಸರಣಿಯಲ್ಲಿ ಹೂಡಿಕೆದಾರರಿಗೆ ಗ್ರಾಮ್​ಗೆ 7,325 ರೂನಂತೆ ರಿಟರ್ನ್ ಸಿಗುತ್ತದೆ.

2017-18ರ ಮೂರನೇ ಸರಣಿ ಎಸ್​ಜಿಬಿ ಸ್ಕೀಮ್ ಪ್ರೀಮೆಚ್ಯೂರ್ ಆಗಿ ಏಪ್ರಿಲ್ 16ರಂದು ಬಿಡುಗಡೆ ಆಗಿತ್ತು. ಗ್ರಾಮ್​ಗೆ 7,260 ರೂ ದರ ನಿಗದಿ ಮಾಡಲಾಗಿತ್ತು.

ಇದನ್ನೂ ಓದಿ: ಚಿನ್ನ, ನೀನೆಷ್ಟು ಚೆನ್ನ..! ಷೇರು ಮಾರುಕಟ್ಟೆಗಿಂತಲೂ ಭರ್ಜರಿ ರಿಟರ್ನ್ ಕೊಡುತ್ತಿದೆ ಸ್ವರ್ಣ

2017-18ರ ಸಾಲಿನಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 2,700 ರೂನಿಂದ 2,900 ರೂವರೆಗೂ ಇತ್ತು. ಐದು ವರ್ಷದಲ್ಲಿ ಎರಡೂವರೆ ಪಟ್ಟು ಬೆಲೆ ಹೆಚ್ಚಳವಾದಂತಾಗಿದೆ. ವರ್ಷಕ್ಕೆ ಶೇ. 50ರಷ್ಟು ಬೆಳೆದಂತಾಗುತ್ತದೆ ಹೂಡಿಕೆ.

ಏನಿದು ಸಾವರಿನ್ ಗೋಲ್ಡ್ ಬಾಂಡ್ ಯೋಜನೆ?

ಇದು ಚಿನ್ನದ ಬೆಲೆಯ ಮೇಲೆ ಮಾಡಲಾಗುವ ಹೂಡಿಕೆ ಆಗಿದೆ. ಇವತ್ತಿನ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಒಬ್ಬ ವ್ಯಕ್ತಿ 4 ಕಿಲೋ ಚಿನ್ನದವರೆಗೂ ಹೂಡಿಕೆ ಮಾಡಬಹುದು. ಉದಾಹರಣೆಗೆ, ಚಿನ್ನದ ಬೆಲೆ ಗ್ರಾಮ್​ಗೆ 7,000 ರೂ ಇದ್ದು, ನೀವು 100 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡುತ್ತೀರಿ. ಅಂದರೆ, ಏಳು ಲಕ್ಷ ರೂ ಹಣವನ್ನು ನೀವು ಎಸ್​ಜಿಬಿ ಮೇಲೆ ಹೂಡಿಕೆ ಮಾಡುತ್ತೀರಿ. ಎಂಟು ವರ್ಷದ ಬಳಿಕ (2032ರಲ್ಲಿ) ಯೋಜನೆ ಮೆಚ್ಯೂರಿಟಿಗೆ ಬಂದಾಗ ಚಿನ್ನದ ಮಾರುಕಟ್ಟೆ ಬೆಲೆ ಗ್ರಾಮ್​ಗೆ 18,000 ರೂ ಆಗುತ್ತದೆ ಎಂದು ಭಾವಿಸಿ. ಆಗ ನಿಮ್ಮ ಏಳು ಲಕ್ಷ ರೂ ಹೂಡಿಕೆಯು 18 ಲಕ್ಷ ರೂ ಆಗಿರುತ್ತದೆ.

ಇದನ್ನೂ ಓದಿ: ಚಿನ್ನ ವರ್ಸಸ್ ಷೇರು, 2023-24ರಲ್ಲಿ ಹೆಚ್ಚು ಲಾಭ ತಂದಿದ್ದು ಯಾವುದು? ಇಂಟ್ರೆಸ್ಟಿಂಗ್ ವಿಷಯ

ಇದರ ಜೊತೆಗೆ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ ಮತ್ತೊಂದು ವೈಶಿಷ್ಯವೆಂದರೆ ನಿಮ್ಮ ಹೂಡಿಕೆಗೆ ವರ್ಷಕ್ಕೆ ಶೇ. 2.5ರಂತೆ ಬಡ್ಡಿ ಆದಾಯವೂ ಸಿಗುತ್ತದೆ. ನೀವು ಏಳು ಲಕ್ಷ ರೂ ಹೂಡಿಕೆ ಮಾಡಿದ್ದರೆ ವರ್ಷಕ್ಕೆ 17,500 ರೂ ಬಡ್ಡಿ ಆದಾಯ ಸಿಗುತ್ತದೆ. ಮತ್ತೊಂದು ವಿಶೇಷತೆ ಎಂದರೆ, ಎಸ್​ಜಿಬಿ ಮೇಲಿನ ಹೂಡಿಕೆಗೆ ಯಾವುದೇ ತೆರಿಗೆ ಇರುವುದಿಲ್ಲ. ಇದರಿಂದ ಬರುವ ಬಡ್ಡಿಗಾಗಲೀ, ಮೆಚ್ಯೂರಿಟಿ ಹಣಕ್ಕಾಗಲೀ ಆದಾಯ ತೆರಿಗೆ ಅನ್ವಯ ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ