AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎನ್​​ಬಿ, ಬಿಒಬಿ, ಇಂಡಿಯನ್ ಬ್ಯಾಂಕ್ ಇತ್ಯಾದಿ ಬ್ಯಾಂಕುಗಳಿಂದ ಬಡ್ಡಿದರ ಇಳಿಕೆ

Banks cut home loan rates: ಆರ್​​ಬಿಐ ರಿಪೋ ದರ ಕಡಿತದ ಬೆನ್ನಲ್ಲೇ ಬ್ಯಾಂಕುಗಳು ಬಡ್ಡಿದರ ಇಳಿಕೆ ಕ್ರಮ ಆರಂಭಿಸಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ತಮ್ಮ ರಿಪೋ ಆಧಾರಿತ ಬಡ್ಡಿದರಗಳಲ್ಲಿ 50 ಮೂಲಾಂಕಗಳಷ್ಟು ದರ ಇಳಿಕೆ ಮಾಡಿವೆ.

ಪಿಎನ್​​ಬಿ, ಬಿಒಬಿ, ಇಂಡಿಯನ್ ಬ್ಯಾಂಕ್ ಇತ್ಯಾದಿ ಬ್ಯಾಂಕುಗಳಿಂದ ಬಡ್ಡಿದರ ಇಳಿಕೆ
ಬ್ಯಾಂಕ್ ಆಫ್ ಬರೋಡಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 09, 2025 | 5:00 PM

Share

ನವದೆಹಲಿ, ಜೂನ್ 9: ಆರ್​​ಬಿಐ ಕಳೆದ ಶುಕ್ರವಾರ ಸತತ ಮೂರನೇ ಬಾರಿ ರಿಪೋ ದರ (Repo Rate) ಇಳಿಕೆ ಮಾಡಿತು. ಈ ವರ್ಷ ಬಡ್ಡಿದರ ಬರೋಬ್ಬರಿ 100 ಮೂಲಾಂಕಗಳಷ್ಟು ಕಡಿಮೆ ಆಗಿದೆ. ಜೂನ್​ನ ಎಂಪಿಸಿ ಸಭೆಯಲ್ಲಿ ಒಮ್ಮೆಗೇ 50 ಮೂಲಾಂಕಗಳಷ್ಟು ದರ ಕಡಿತ ಮಾಡಲಾಗಿತ್ತು. ವರ್ಷದ ಆರಂಭದಲ್ಲಿ ಶೇ. 6.50 ಇದ್ದ ಆರ್​​ಬಿಐ ರಿಪೋ ದರ ಈಗ ಶೇ 5.50ಕ್ಕೆ ಇಳಿದಿದೆ. ಆರ್​​ಬಿಐ ದರ ಇಳಿಕೆಯ ಬೆನ್ನಲ್ಲೇ ಕೆಲ ಬ್ಯಾಂಕುಗಳೂ ಕೂಡ ರೇಟ್ ಕಟ್ ಮಾಡಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಬ್ಯಾಂಕ್ ಆಫ್ ಇಂಡಿಯಾ ತಮ್ಮ ಗೃಹ ಸಾಲಗಳಿಗೆ ಬಡ್ಡಿದರ ಕಡಿಮೆಗೊಳಿಸಿವೆ.

ಬ್ಯಾಂಕುಗಳ ಆರ್​​ಎಲ್​​ಎಲ್​​ಆರ್ ಸಾಲಗಳ ಮೇಲೆ ರಿಪೋ ಪ್ರಭಾವ

ಆರ್​​ಬಿಐ ತನ್ನ ರಿಪೋ ದರ ಇಳಿಸಿದರೆ ಎಲ್ಲಾ ಬ್ಯಾಂಕುಗಳೂ ಕೂಡ ತಮ್ಮ ಬಡ್ಡಿದರಗಳನ್ನು ಇಳಿಸಬೇಕೆನ್ನುವ ಕಡ್ಡಾಯ ನಿಯಮ ಇಲ್ಲ. ಬ್ಯಾಂಕುಗಳು ಎರಡು ಮಾನದಂಡದ ಸಾಲ ನೀಡುತ್ತವೆ. ಮೊದಲನೆಯದು, ಫ್ಲೋಟಿಂಗ್ ರೆಟ್ ಇಂಟರೆಸ್ಟ್. ಮತ್ತೊಂದು ಫಿಕ್ಸೆಡ್ ರೇಟ್ ಇಂಟರೆಸ್ಟ್. ಈ ಎರಡನೆಯದನ್ನು ಸಾಮಾನ್ಯವಾಗಿ ಪರ್ಸನಲ್ ಲೋನ್​ಗಳಿಗೆ ನೀಡಲಾಗುತ್ತದೆ.

ಇದನ್ನೂ ಓದಿ: ಎಲ್​ಟಿವಿ ಏರಿಕೆಯಿಂದ ಹಿಡಿದು ಚಿನ್ನದ ಹರಾಜುವರೆಗೆ, ಆರ್​​ಬಿಐನ ಹೊಸ ಗೋಲ್ಡ್ ಲೋನ್ ನಿಯಮಗಳನ್ನು ತಿಳಿದಿರಿ

ಫ್ಲೋಟಿಂಗ್ ರೇಟ್ ಸಾಲದಲ್ಲಿ ಎರಡು ವಿಧ. ಒಂದು, ರಿಪೋ ಆಧಾರಿತ ಸಾಲ ದರ ಆರ್​​ಎಲ್​​​ಎಲ್​​ಆರ್. ಇದು ರಿಪೋ ದರಕ್ಕೆ ಅನುಗುಣವಾಗಿ ಬಡ್ಡಿದರ ಬದಲಿಸುವ ಸಾಧ್ಯತೆ ಹೆಚ್ಚು. ಇನ್ನೊಂದು, ಎಂಎಲ್​ಆರ್. ಇದು ಸ್ವಲ್ಪ ಮಟ್ಟಿಗೆ ರಿಪೋ ದರವನ್ನು ಅನ್ವಯ ಮಾಡುತ್ತದೆ. ಈ ಫ್ಲೋಟಿಂಗ್ ಇಂಟರೆಸ್ಟ್ ರೇಟ್ ಗೃಹ ಸಾಲಗಳಿಗೆ ಅನ್ವಯ ಆಗುತ್ತದೆ.

ಬಡ್ಡಿದರ ಇಳಿಸಿದ ಪಿಎನ್​​ಬಿ ಇತ್ಯಾದಿ ಬ್ಯಾಂಕುಗಳು

  • ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಆರ್​ಎಲ್​ಎಲ್​ಆರ್ ಅನ್ನು ಶೇ. 8.85ರಿಂದ ಶೇ. 8.35ಕ್ಕೆ ಇಳಿಸಿದೆ.
  • ಬ್ಯಾಂಕ್ ಆಫ್ ಬರೋಡಾ ತನ್ನ ರಿಪೋ ಆಧಾರಿತ ಸಾಲ ದರವನ್ನು ಶೇ. 8.65ರಿಂದ ಶೇ. 8.15ಕ್ಕೆ ಇಳಿಸಿದೆ.
  • ಬ್ಯಾಂಕ್ ಆಫ್ ಇಂಡಿಯಾ ಕೂಡ ಈ ದರವನ್ನು ಶೇ. 8.85ರಿಂದ ಶೇ. 8.35ಕ್ಕೆ ಇಳಿಸಿದೆ.
  • ಇಂಡಿಯನ್ ಬ್ಯಾಂಕ್​​ನ ಈ ರಿಪೋ ಆಧಾರಿತ ಬಡ್ಡಿದರವು ಶೇ. 8.70ರಿಂದ ಶೇ. 8.20ಕ್ಕೆ ಇಳಿದಿದೆ.

ಇದನ್ನೂ ಓದಿ: ಗಮನಿಸಿ, ಆಯುಷ್ಮಾನ್ ಕಾರ್ಡ್ ಜೊತೆಗೆ ABHA ಕೂಡ ಇದ್ದರೆ ಪ್ರಯೋಜನ ಹೆಚ್ಚು; ಅದು ಹೇಗೆ, ಇಲ್ಲಿದೆ ಮಾಹಿತಿ

ಈ ಮೇಲಿನ ನಾಲ್ಕು ಬ್ಯಾಂಕುಗಳು ದರ ಕಡಿತಗೊಳಿಸಿರುವುದನ್ನು ತಮ್ಮ ರೆಗ್ಯುಲೇಟರಿ ಫೈಲಿಂಗ್​​ನಲ್ಲಿ ಪ್ರಕಟಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ