Axis Bank FD Interest Rate: ಮಾರ್ಚ್ 21ರಿಂದ ಅನ್ವಯಿಸುವಂತೆ ಆಕ್ಸಿಸ್ ಬ್ಯಾಂಕ್ ಎಫ್ಡಿ ಬಡ್ಡಿ ದರ ಪರಿಷ್ಕರಣೆ
ಖಾಸಗಿ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್‌ನಿಂದ ಫಿಕ್ಸೆಡ್ ಡೆಪಾಸಿಟ್ಗಳ ಮೇಲಿನ ಬಡ್ಡಿ ದರವನ್ನು ಮಾರ್ಚ್ 21, 2022ರಿಂದ ಅನ್ವಯ ಆಗುವಂತೆ ಪರಿಷ್ಕರಿಸಲಾಗಿದೆ.
ಖಾಸಗಿ ವಲಯದ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್‌ನಿಂದ ಮಾರ್ಚ್ 21ನೇ ತಾರೀಕಿನ ಸೋಮವಾರದಿಂದ ಅನ್ವಯ ಆಗುವಂತೆ, ಒಂದು ವರ್ಷದ ಫಿಕ್ಸೆಡ್ ಡೆಪಾಸಿಟ್ಗಳ (Fixed Deposits) ಮೇಲೆ 5 ಬೇಸಿಸ್ ಪಾಯಿಂಟ್ ಬಡ್ಡಿದರ ಏರಿಕೆಯನ್ನು ಪ್ರಕಟಿಸಿದೆ. 1 ವರ್ಷ 11 ದಿನಗಳಿಂದ 1 ವರ್ಷ 25 ದಿನಗಳವರೆಗೆ ಮುಕ್ತಾಯಗೊಳ್ಳುವ 2 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲೆ ಬ್ಯಾಂಕ್ ಶೇಕಡಾ 5.25 ಬಡ್ಡಿದರವನ್ನು ನೀಡುತ್ತಿತ್ತು. ಆದರೆ ಬಡ್ಡಿ ದರ ಮಾರ್ಪಾಟು ಆದ ಮೇಲೆ ಅಥವಾ 21/03/2022ರಿಂದ ಜಾರಿಯಲ್ಲಿರುವಂತೆ, ಬ್ಯಾಂಕ್ ಈಗ ಶೇ 5.30ರಷ್ಟು ಪಾವತಿಸುತ್ತದೆ. ಹಿರಿಯ ನಾಗರಿಕರಿಗೆ ಬ್ಯಾಂಕ್‌ನಿಂದ ಅದೇ ಅವಧಿಯಲ್ಲಿ ಶೇ 5.9ರಷ್ಟು ಬಡ್ಡಿದರವನ್ನು ಈ ಹಿಂದೆ ನೀಡಲಾಗುತ್ತಿತ್ತು, ಆದರೆ ಅವರು ಈಗ ಶೇ 5.95ರ ಬಡ್ಡಿದರವನ್ನು ಸ್ವೀಕರಿಸುತ್ತಾರೆ. ಆ ಅವಧಿಯನ್ನು ಹೊರತುಪಡಿಸಿದಂತೆ ಬ್ಯಾಂಕ್ನ ಬಡ್ಡಿದರಗಳು ಸ್ಥಿರವಾಗಿರುತ್ತವೆ.
ಮಾರ್ಚ್ 21, 2022ರಂತೆ 7 ದಿನಗಳಿಂದ 10 ವರ್ಷಗಳವರೆಗೆ ಮುಕ್ತಾಯಗೊಳ್ಳುವ 2 ಕೋಟಿ ರೂಪಾಯಿಗಿಂತ ಕಡಿಮೆ ಅವಧಿಯ ಫಿಕ್ಸೆಡ್ ಡೆಪಾಸಿಟ್ಗಳ ಬ್ಯಾಂಕ್ ಸಾಮಾನ್ಯ ಜನರಿಗೆ ಈ ಕೆಳಗಿನ ಬಡ್ಡಿ ದರಗಳನ್ನು ಒದಗಿಸುತ್ತದೆ. 5 ರಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ಅವಧಿಯ ಠೇವಣಿಗಳ ಮೇಲೆ ಜನ ಸಾಮಾನ್ಯರಿಗೆ ಶೇ 5.75ರಷ್ಟು ಗರಿಷ್ಠ ಬಡ್ಡಿ ದರವನ್ನು ಪಡೆಯುತ್ತಾರೆ.
* 7 ದಿನಗಳಿಂದ 14 ದಿನಗಳು- ಶೇ 2.5 * 15 ದಿನಗಳಿಂದ 29 ದಿನಗಳು- ಶೇ 2.5 * 30 ದಿನಗಳಿಂದ 45 ದಿನಗಳು- ಶೇ 3 * 46 ದಿನಗಳು 60 ದಿನಗಳು- ಶೇ 3 * 61 ದಿನಗಳು 3 ತಿಂಗಳಿಗಿಂತ ಕಡಿಮೆ- ಶೇ 3 * 3 ತಿಂಗಳು 4 ತಿಂಗಳಿಗಿಂತ ಕಡಿಮೆ- ಶೇ 3.5 * 4 ತಿಂಗಳು 5 ತಿಂಗಳಿಗಿಂತ ಕಡಿಮೆ- ಶೇ 3.5 * 5 ತಿಂಗಳು 6 ತಿಂಗಳಿಗಿಂತ ಕಡಿಮೆ- ಶೇ 3.5 * 6 ತಿಂಗಳಿಂದ 7 ತಿಂಗಳಿಗಿಂತ ಕಡಿಮೆ- ಶೇ 4.4 * 7 ತಿಂಗಳಿಂದ 8 ತಿಂಗಳಿಗಿಂತ ಕಡಿಮೆ- ಶೇ 4.4 * 8 ತಿಂಗಳಿಂದ 9 ತಿಂಗಳಿಗಿಂತ ಕಡಿಮೆ- ಶೇ 4.4 * 9 ತಿಂಗಳಿಂದ 10 ತಿಂಗಳಿಗಿಂತ ಕಡಿಮೆ- ಶೇ 4.4 * 10 ತಿಂಗಳಿಂದ 11 ತಿಂಗಳಿಗಿಂತ ಕಡಿಮೆ- ಶೇ 4.4 * 11 ತಿಂಗಳಿಂದ ಕಡಿಮೆ 11 ತಿಂಗಳು 25 ದಿನಗಳಿಗಿಂತ ಕಡಿಮೆ- ಶೇ 4.4 * 11 ತಿಂಗಳು 25 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ- ಶೇ 4.4 * 1 ವರ್ಷದಿಂದ 1 ವರ್ಷದ 5 ದಿನಕ್ಕಿಂತ ಕಡಿಮೆ- ಶೇ 5.1 * 1 ವರ್ಷ 5 ದಿನಗಳಿಂದ 1 ವರ್ಷ 11 ದಿನಗಳಿಗಿಂತ ಕಡಿಮೆ- ಶೇ 5.15 * 1 ವರ್ಷ 11 ದಿನಗಳಿಂದ 1 ವರ್ಷ 25 ದಿನಕ್ಕಿಂತ – ಶೇ 5.3 * 1 ವರ್ಷ 2 ದಿನಗಳಿಂದ 13 ತಿಂಗಳಿಗಿಂತ ಕಡಿಮೆ- ಶೇ 5.15 * 13 ತಿಂಗಳಿಂದ 14 ತಿಂಗಳಿಗಿಂತ ಕಡಿಮೆ- ಶೇ 5.15 * 14 ತಿಂಗಳಿಂದ 15 ತಿಂಗಳಿಗಿಂತ ಕಡಿಮೆ- ಶೇ 5.15 * 15 ತಿಂಗಳಿಂದ 16 ತಿಂಗಳಿಗಿಂತ ಕಡಿಮೆ- ಶೇ 5.2 * 16 ತಿಂಗಳಿಂದ 17 ತಿಂಗಳಿಗಿಂತ ಕಡಿಮೆ- ಶೇ 5.2 * 17 ತಿಂಗಳಿಂದ 18 ತಿಂಗಳಿಗಿಂತ ಕಡಿಮೆ- ಶೇ 5.2 * 18 ತಿಂಗಳಿಂದ 2 ವರ್ಷಕ್ಕಿಂತ ಕಡಿಮೆ- ಶೇ 5.25 * 2 ವರ್ಷದಿಂದ 30 ತಿಂಗಳಿಗಿಂತ ಕಡಿಮೆ- ಶೇ 5.4 * 30 ತಿಂಗಳಿಂದ 3 ವರ್ಷಕ್ಕಿಂತ ಕಡಿಮೆ- ಶೇ 5.4 * 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ- ಶೇ 5.4 * 5 ವರ್ಷದಿಂದ 10 ವರ್ಷಗಳು- ಶೇ 5.75 (ಮೂಲ: ಬ್ಯಾಂಕ್ ವೆಬ್‌ಸೈಟ್ 21/03/2022ರಿಂದ ಅನ್ವಯ)
ಮಾರ್ಚ್ 21, 2022ಕ್ಕೆ ಅನ್ವಯ ಆಗುವಂತೆ, ಆಕ್ಸಿಸ್ ಬ್ಯಾಂಕ್ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ರೂ. 2 ಕೋಟಿಗಿಂತ ಕಡಿಮೆಯ ಫಿಕ್ಸೆಡ್ ಠೇವಣಿಗಳ ಮೇಲೆ ಈ ಕೆಳಗಿನ ಬಡ್ಡಿ ದರಗಳನ್ನು ಹಿರಿಯರಿಗೆ ಒದಗಿಸುತ್ತದೆ. 5ರಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ಅವಧಿಯ ಠೇವಣಿಗಳ ಮೇಲೆ ಹಿರಿಯರು ಗರಿಷ್ಠ ಶೇ 6.50ರ ಬಡ್ಡಿದರವನ್ನು ಪಡೆಯುತ್ತಾರೆ. 6 ತಿಂಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ಠೇವಣಿಗಳ ಮೇಲೆ ಹಿರಿಯರು ಸಾಮಾನ್ಯ ದರಕ್ಕಿಂತ ಶೇ 0.50ರಷ್ಟು ಹೆಚ್ಚುವರಿಯಾಗಿ ಪಡೆಯುತ್ತಾರೆ.
* 7 ದಿನಗಳಿಂದ 14 ದಿನಗಳು- ಶೇ 2.5 * 15 ದಿನಗಳಿಂದ 29 ದಿನಗಳು- ಶೇ 2.5 * 30 ದಿನಗಳಿಂದ 45 ದಿನಗಳು- ಶೇ 3 * 46 ದಿನಗಳು 60 ದಿನಗಳು- ಶೇ 3 * 61 ದಿನಗಳು 3 ತಿಂಗಳಿಗಿಂತ ಕಡಿಮೆ- ಶೇ 3 * 3 ತಿಂಗಳು 4 ತಿಂಗಳಿಗಿಂತ ಕಡಿಮೆ- ಶೇ 3.5 * 4 ತಿಂಗಳು 5 ತಿಂಗಳಿಗಿಂತ ಕಡಿಮೆ- ಶೇ 3.5 * 5 ತಿಂಗಳು 6 ತಿಂಗಳಿಗಿಂತ ಕಡಿಮೆ- ಶೇ 3.5 * 6 ತಿಂಗಳಿಂದ 7 ತಿಂಗಳಿಗಿಂತ ಕಡಿಮೆ- ಶೇ 4.65 * 7 ತಿಂಗಳಿಂದ 8 ತಿಂಗಳಿಗಿಂತ ಕಡಿಮೆ- ಶೇ 4.65 * 8 ತಿಂಗಳಿಂದ 9 ತಿಂಗಳಿಗಿಂತ ಕಡಿಮೆ- ಶೇ 4.65 * 9 ತಿಂಗಳಿಂದ 10 ತಿಂಗಳಿಗಿಂತ ಕಡಿಮೆ- ಶೇ 4.65 * 10 ತಿಂಗಳಿಂದ 11 ತಿಂಗಳಿಗಿಂತ ಕಡಿಮೆ- ಶೇ 4.65 * 11 ತಿಂಗಳಿಂದ 11 ತಿಂಗಳು 25 ದಿನಗಳಿಗಿಂತ ಕಡಿಮೆ- ಶೇ 4.65 * 11 ತಿಂಗಳು 25 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ- ಶೇ 4.65 * 1 ವರ್ಷದಿಂದ 1 ವರ್ಷದ 5 ದಿನಕ್ಕಿಂತ ಕಡಿಮೆ- ಶೇ 5.75 * 1 ವರ್ಷ 5 ದಿನಗಳಿಂದ 1 ವರ್ಷ 11 ದಿನಗಳಿಗಿಂತ ಕಡಿಮೆ- ಶೇ 5.8 * 1 ವರ್ಷ 11 ದಿನಗಳಿಂದ 1 ವರ್ಷ 25 ದಿನಕ್ಕಿಂತ – ಶೇ 5.95 * 1 ವರ್ಷ 25 ದಿನಗಳಿಂದ 13 ತಿಂಗಳಿಗಿಂತ ಕಡಿಮೆ- ಶೇ 5.8 * 13 ತಿಂಗಳಿಂದ 14 ತಿಂಗಳಿಗಿಂತ ಕಡಿಮೆ- ಶೇ 5.8 * 14 ತಿಂಗಳಿಂದ 15 ತಿಂಗಳಿಗಿಂತ ಕಡಿಮೆ- ಶೇ 5.8 * 15 ತಿಂಗಳಿಂದ 16 ತಿಂಗಳಿಗಿಂತ ಕಡಿಮೆ- ಶೇ 5.85 * 16 ತಿಂಗಳಿಂದ 17 ತಿಂಗಳಿಗಿಂತ ಕಡಿಮೆ- ಶೇ 5.85 * 17 ತಿಂಗಳಿಂದ 18 ತಿಂಗಳಿಗಿಂತ ಕಡಿಮೆ- ಶೇ 5.85 * 18 ತಿಂಗಳಿಂದ 2 ವರ್ಷಕ್ಕಿಂತ ಕಡಿಮೆ- ಶೇ 5.9 * 2 ವರ್ಷದಿಂದ 30 ತಿಂಗಳಿಗಿಂತ ಕಡಿಮೆ- ಶೇ 6.05 * 30 ತಿಂಗಳಿಂದ 3 ವರ್ಷಕ್ಕಿಂತ ಕಡಿಮೆ- ಶೇ 6.05 * 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ- ಶೇ 6.05 * 5 ವರ್ಷದಿಂದ 10 ವರ್ಷಗಳು- ಶೇ 6.5 (ಮೂಲ: ಬ್ಯಾಂಕ್ ವೆಬ್‌ಸೈಟ್. 21/03/2022ರಿಂದ ಅನ್ವಯ)
ಇದನ್ನೂ ಓದಿ: FD Interest: ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಿಂದ ಮೂರು ವರ್ಷದ ಅವಧಿಯ ಎಫ್ಡಿಗೆ ಶೇ 7ರ ಬಡ್ಡಿ