India’s Military: ಮೇಕ್ ಇನ್ ಇಂಡಿಯಾ ಎಂಥದ್ದು ಎಂಬುದು ಆಪರೇಷನ್ ಸಿಂದೂರ್​​ನಿಂದ ಸಾಬೀತು: ರಾಜನಾಥ್ ಸಿಂಗ್

Operation Sindoor and Make-in-India initiative: ಆಪರೇಷನ್ ಸಿಂದೂರ್​ನಲ್ಲಿ ದೇಶೀಯ ನಿರ್ಮಿತ ಶಸ್ತ್ರಾಸ್ತ್ರಗಳ ಪಾತ್ರ ಬಹಳ ಮುಖ್ಯ. ಇದು ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ಸು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ. ಸಿಐಐ ಆ್ಯನುವಲ್ ಬ್ಯುಸಿನೆಸ್ ಸಮಿಟ್​ನಲ್ಲಿ ಮಾತನಾಡುತ್ತಿದ್ದ ರಾಜನಾಥ್ ಸಿಂಗ್, ಭಾರತದ ರಕ್ಷಣಾ ಕ್ಷೇತ್ರದ ಬೆಳವಣಿಗೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Indias Military: ಮೇಕ್ ಇನ್ ಇಂಡಿಯಾ ಎಂಥದ್ದು ಎಂಬುದು ಆಪರೇಷನ್ ಸಿಂದೂರ್​​ನಿಂದ ಸಾಬೀತು: ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

Updated on: May 29, 2025 | 5:17 PM

ನವದೆಹಲಿ, ಮೇ 29: ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮವು (Make in India initiative) ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಮಾತ್ರವಲ್ಲ, ರಾಷ್ಟ್ರೀಯ ಭದ್ರತೆಗೂ ಸಹಕಾರಿಯಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಭಾರತೀಯ ಉದ್ಯಮ ಮಹಾ ಒಕ್ಕೂಟದ ವಾರ್ಷಿಕ ಬ್ಯುಸಿನೆಸ್ ಸಭೆಯನ್ನು (CII annual business summit) ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಉದ್ಯಮ ವಲಯ ಹಾಗೂ ಸರ್ಕಾರದ ಮಧ್ಯೆ ಉತ್ತಮ ತಾಳಮೇಳವಾಗುತ್ತಿರುವುದು ಭಾರತವನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿ ಮಾಡಬಲ್ಲುದು ಎಂದಿದ್ದಾರೆ.

ಎಎಂಸಿಎ ಯೋಜನೆ ಜಾರಿಗೊಳಿಸುವ ಕ್ರಮವನ್ನು ಶ್ಲಾಘಿಸಿದ ರಾಜನಾಥ್ ಸಿಂಗ್

ಐದನೇ ತಲೆಮಾರಿನ ಏರ್​​ಕ್ರಾಫ್ಟ್ ನಿರ್ಮಿಸಲು ಯೋಜಿಸಲಾಗಿರುವ ಎಎಂಸಿಎ ಯೋಜನೆಯನ್ನು ಕಾರ್ಯಗತಗೊಳಿಸುವ ಮಾದರಿಗೆ ಸರ್ಕಾರ ಮೊನ್ನೆ ಅನುಮೋದನೆ ನೀಡಿತು. ಈ ಕ್ರಮವನ್ನು ರಾಜನಾಥ್ ಸಿಂಗ್ ಐತಿಹಾಸಿಕ ಎಂದು ಬಣ್ಣಿಸಿದರು. ಭಾರತದ ದೇಶೀಯ ಏರೋಸ್ಪೇಸ್ ಕ್ಷೇತ್ರವನ್ನು ಇದು ಉತ್ತುಂಗಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಅಭಿಪ್ರಾಯಪಟ್ಟರು.

‘ಎಎಂಸಿಎ ಪ್ರಾಜೆಕ್ಟ್ ಅಡಿಯಲ್ಲಿ ಐದು ರೀತಿಯ ಫೈಟರ್ ಜೆಟ್​​ಗಳ ಪ್ರೋಟೋಟೈಪ್ ಅಭಿವೃದ್ಧಿಪಡಿಸುವ ಗುರಿ ಇದೆ. ಅದಾದ ಬಳಿಕ ತಯಾರಿಕೆಯ ಕೆಲಸ ನಡೆಯಲಿದೆ. ಈ ಪ್ರಾಜೆಕ್ಟ್ ಮೇಕ್ ಇನ್ ಇಂಡಿಯಾ ಯೋಜನೆಯಲ್ಲೇ ಪ್ರಮುಖ ಮೈಲಿಗಲ್ಲಾಗುತ್ತದೆ’ ಎಂದು ಕೇಂದ್ರ ರಕ್ಷಣಾ ಸಚಿವರು ಹೇಳಿದರು. ಎಎಂಸಿಎ ಎಂದರೆ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್​​ಕ್ರಾಫ್ಟ್. ಐದನೆ ತಲೆಮಾರಿನ ಫೈಟರ್ ಜೆಟ್ ನಿರ್ಮಾಣದ ಯೋಜನೆ ಇದು.

ಇದನ್ನೂ ಓದಿ
ಐಫೋನ್ ರಫ್ತು; ಚೀನಾ ಹಿಂದಿಕ್ಕಿದ ಭಾರತ
ಈ ಚೀನೀ ವಸ್ತುಗಳನ್ನು ಖರೀದಿಸುವ ಮುನ್ನ ಯೋಚಿಸಿ...
ರಫ್ತಿಗೆ ಸಿದ್ಧವಾಗುತ್ತಿರುವ ಬುದ್ಧ ಅಕ್ಕಿ; ಏನಿದರ ವಿಶೇಷತೆ?
ಕಾವೇರಿ ಜೆಟ್ ಎಂಜಿನ್ ವೈಫಲ್ಯ, ಯಶಸ್ಸು ಮತ್ತು ಭವಿಷ್ಯದ ಕಥೆ

ಇದನ್ನೂ ಓದಿ: ಅಮೆರಿಕಕ್ಕೆ ಐಫೋನ್ ರಫ್ತು: ಭಾರತ ಹೊಸ ಇತಿಹಾಸ; ಇದೇ ಮೊದಲ ಬಾರಿಗೆ ಚೀನಾವನ್ನು ಹಿಂದಿಕ್ಕಿದ ಭಾರತ

ಆಪರೇಷನ್ ಸಿಂದೂರ್ ಯಶಸ್ಸಿನಲ್ಲಿ ಮೇಕ್ ಇನ್ ಇಂಡಿಯಾ ಪಾತ್ರ

ಮೇಕ್ ಇನ್ ಇಂಡಿಯಾ ಯೋಜನೆ ಯಶಸ್ವಿಯಾಗಿದೆ ಎನ್ನುವುದಕ್ಕೆ ಆಪರೇಷನ್ ಸಿಂದೂರ್ ಕನ್ನಡಿ ಹಿಡಿದಿದೆ ಎನ್ನುವುದು ರಾಜನಾಥ್ ಸಿಂಗ್ ಅನಿಸಿಕೆ. ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ದೇಶೀಯವಾಗಿ ನಿರ್ಮಿತವಾದ ಶಸ್ತ್ರಾಸ್ತ್ರಗಳು ಮುಖ್ಯ ಪಾತ್ರವಹಿಸಿದ್ದನ್ನು ರಾಜನಾಥ್ ಸಿಂಗ್ ಎತ್ತಿ ತೋರಿಸಿದರು.

ವಿಶ್ವದ ಮಹತ್ವದ ಡಿಫೆನ್ಸ್ ಶಕ್ತಿ ಎನಿಸಿದ ಭಾರತ

ರಾಜನಾಥ್ ಸಿಂಗ್ ಅವರು ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿರುವುದು ಮಾತ್ರವಲ್ಲ, ಇಡೀ ವಿಶ್ವ ಗೌರವಿಸುವ ಮಿಲಿಟರಿ ಶಕ್ತಿ ಎನಿಸಿರುವುದನ್ನು ತಿಳಿಸಿದರು.

ಇದನ್ನೂ ಓದಿ: ಭಾರತಕ್ಕೆ ಎಷ್ಟು ಮಹತ್ವದ್ದು ಕಾವೇರಿ ಜೆಟ್ ಎಂಜಿನ್? ಚೀನಾಗೂ ಕಷ್ಟವಾಗಿರುವ ಈ ಸಿದ್ಧಿ ಪಡೆಯಲು ಸಫಲವಾಗುತ್ತಾ ಭಾರತ?

ಹತ್ತು ವರ್ಷದ ಹಿಂದೆ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಆಗುತ್ತಿದ್ದ ಉತ್ಪಾದನೆ 43,000 ಕೋಟಿ ರೂ. ಇವತ್ತು ಅದು 1.46 ಲಕ್ಷ ಕೋಟಿ ರೂಗೆ ಏರಿದೆ. ಖಾಸಗಿ ವಲಯದಿಂದಲೇ 32,000 ಕೋಟಿ ರೂ ಕೊಡುಗೆ ಬಂದಿದೆ ಎನ್ನುವ ಮಾಹಿತಿಯನ್ನು ರಕ್ಷಣಾ ಸಚಿವರು ನೀಡಿದರು. ಹಾಗೆಯೇ, ಹತ್ತು ವರ್ಷದ ಹಿಂದಿನದಕ್ಕೆ ಹೋಲಿಸಿದರೆ ಈ ಕ್ಷೇತ್ರದಿಂದ ರಫ್ತು ಕೂಡ ಹಲವು ಪಟ್ಟು ಹೆಚ್ಚಾಗಿರುವ ಸಂಗತಿಯನ್ನು ತಿಳಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Thu, 29 May 25