ನವದೆಹಲಿ, ಏಪ್ರಿಲ್ 16: ರಾಮನವಮಿ ಹಬ್ಬದ ಪ್ರಯುಕ್ತ ಬುಧವಾರ (ಏ. 17) ದೇಶದ ಹಲವೆಡೆ ಬ್ಯಾಂಕುಗಳಿಗೆ ರಜೆ ಇದೆ. ಮತ್ತೂ ಕೆಲವೆಡೆ ರಜೆ ಇರುವುದಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಮರುನಿರ್ಮಾಣವಾದ ಬಳಿಕ ನಡೆಯುತ್ತಿರುವ ಮೊದಲ ರಾಮನವಮಿಯಾದ್ದರಿಂದ (Ram Navami festival) ಸಾಕಷ್ಟು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆರ್ಬಿಐ ಕ್ಯಾಲಂಡರ್ ಪ್ರಕಾರ ಏಪ್ರಿಲ್ ತಿಂಗಳಲ್ಲಿ ಒಟ್ಟು 14 ರಜಾ ದಿನಗಳಿವೆ. ಇದರಲ್ಲಿ ರಾಮನವಮಿಯೂ ಸೇರಿದೆ. ಆದರೆ ಇದು ಸಾರ್ವತ್ರಿಕ ರಜೆ ಅಲ್ಲ. ಕೆಲ ಪ್ರದೇಶಗಳಲ್ಲಿ ರಜೆ ಇರುವುದಿಲ್ಲ. ಕರ್ನಾಟಕದಲ್ಲಿ ಏಪ್ರಿಲ್ 17ರಂದು ರಾಮನವಮಿಗೆ ರಜೆ ಇರುವುದಿಲ್ಲ.
ಏಪ್ರಿಲ್ 17, ಬುಧವಾರ: ಅಹ್ಮದಾಬಾದ್, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಡ್, ಡೆಹ್ರಾಡೂನ್, ಗ್ಯಾಂಗ್ಟಾಕ್, ಹೈದರಾಬಾದ್, ಜೈಪುರ್, ಕಾನಪುರ್, ಲಕ್ನೋ, ಪಾಟ್ನಾ, ರಾಂಚಿ, ಶಿಮ್ಲಾ, ಮುಂಬೈ ಮತ್ತು ನಾಗಪುರ್ ನಗರಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ.
ಇದನ್ನೂ ಓದಿ: ಏಪ್ರಿಲ್ ತಿಂಗಳಲ್ಲಿ ಯುಗಾದಿ, ಈದ್ ಸೇರಿ ಬ್ಯಾಂಕುಗಳಿಗೆ ಒಟ್ಟು 14 ದಿನ ರಜೆ; ಕರ್ನಾಟಕದಲ್ಲಿ ಯಾವತ್ತಿದೆ ರಜೆ
ಕರ್ನಾಟಕದಲ್ಲಿ ಏಪ್ರಿಲ್ 21, 27 ಮತ್ತು 28ರಂದು ಶನಿವಾರ ಮತ್ತು ಭಾನುವಾರ ರಜೆಗಳು ಮಾತ್ರವೇ ಇರುವುದು.
ಏಪ್ರಿಲ್ 17, ಬುಧವಾರದಂದು ಷೇರು ಮಾರುಕಟ್ಟೆ ಬಂದ್ ಆಗಿರುತ್ತದೆ. ಷೇರು ವಿನಿಮಯ ಕೇಂದ್ರಗಳಾದ ಬಿಎಸ್ಇ ಮತ್ತು ಎನ್ಎಸ್ಇನಲ್ಲಿ ಅಂದು ಯಾವ ಟ್ರೇಡಿಂಗ್ ನಡೆಯುವುದಿಲ್ಲ.
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ಅಥವಾ ಎಂಸಿಎಕ್ಸ್ ಬುಧವಾರ ಬೆಳಗಿನ ಸೆಷನ್ನಲ್ಲಿ, ಅಂದರೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮುಚ್ಚಿರುತ್ತದೆ. ಆದರೆ, ಸಂಜೆ 5ರಿಂದ ರಾತ್ರಿ 9ರವರೆಗಿನ ಎರಡನೇ ಸೆಷನ್ನಲ್ಲಿ ಟ್ರೇಡಿಂಗ್ ನಡೆಯುತ್ತದೆ.
ಆದರೆ, ನ್ಯಾಷನಲ್ ಕಮಾಡಿಟಿ ಮತ್ತು ಡಿರೈವೇಟಿವ್ಸ್ ಎಕ್ಸ್ಚೇಂಜ್ (ಎನ್ಸಿಡಿಇಎಕ್ಸ್) ಏಪ್ರಿಲ್ 17ರಂದು ಪೂರ್ಣ ಮುಚ್ಚಿರುತ್ತದೆ.
ಇದನ್ನೂ ಓದಿ: ಸ್ವಂತ ಕಂಪನಿಯಲ್ಲಿ ಕೆಲಸಕ್ಕಾಗಿ 2 ಗಂಟೆ ಸರತಿ ಸಾಲಿನಲ್ಲಿ ನಿಂತಿದ್ದ ಈ ಬಿಲಿಯನೇರ್, ಯಾಕೆ ಗೊತ್ತಾ?
ಮೇ 1, ಬುಧವಾರ ಅಂತಾರಾಷ್ಟ್ರೀಯ ಕಾರ್ಮಿಕರ ದಿನ. ಜೊತೆಗೆ ಮಹಾರಾಷ್ಟ್ರ ಏಕೀಕರಣ ದಿನವೂ ಹೌದು. ಷೇರು ವಿನಿಮಯ ಕೇಂದ್ರಗಳು ಮುಂಬೈನಲ್ಲೇ ಇವೆ. ಮೇ 1ರಂದು ಷೇರು ಮಾರುಕಟ್ಟೆ ಇಡೀ ದಿನ ಬಂದ್ ಆಗಿರುತ್ತದೆ. ಆದರೆ, ಎಂಸಿಎಕ್ಸ್ ವಿನಿಮಯ ಕೇಂದ್ರವು ಸಂಜೆಯ ಸೆಷನ್ನಲ್ಲಿ ಮಾತ್ರ ತೆರೆದಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ