ಅಂಬಾನಿ ಸಾಮ್ರಾಜ್ಯಕ್ಕಿಂತಲೂ ಟಾಟಾ ಗ್ರೂಪ್​ನದ್ದು ಹೆಚ್ಚು ಮಾರುಕಟ್ಟೆ ಬಂಡವಾಳ; ರತನ್ ಟಾಟಾ ಚಮತ್ಕಾರ

|

Updated on: Oct 10, 2024 | 5:46 PM

Tata Group vs Reliance Group market cap: ಟಾಟಾ ಗ್ರೂಪ್​ನ ಅಡಿಯಲ್ಲಿ ಹೆಚ್ಚೂಕಡಿಮೆ 100 ಕಂಪನಿಗಳಿವೆ. ಈ ಪೈಕಿ 15ರಿಂದ 16 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿವೆ. ಈ ಲಿಸ್ಟೆಡ್ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ 31 ಲಕ್ಷ ಕೋಟಿ ರೂ ಆಗುತ್ತದೆ. ಭಾರತದ ಅತೀಶ್ರೀಮಂತ ಎನಿಸಿದ ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಗ್ರೂಪ್​ನ ಲಿಸ್ಟೆಡ್ ಕಂಪನಿಗಳ ಒಟ್ಟು ಮಾರ್ಕೆಟ್ ಕ್ಯಾಪ್ 22 ಲಕ್ಷ ಕೋಟಿ ರೂ ದಾಟುವುದಿಲ್ಲ.

ಅಂಬಾನಿ ಸಾಮ್ರಾಜ್ಯಕ್ಕಿಂತಲೂ ಟಾಟಾ ಗ್ರೂಪ್​ನದ್ದು ಹೆಚ್ಚು ಮಾರುಕಟ್ಟೆ ಬಂಡವಾಳ; ರತನ್ ಟಾಟಾ ಚಮತ್ಕಾರ
ಟಾಟಾ ಗ್ರೂಪ್
Follow us on

ಮುಂಬೈ, ಅಕ್ಟೋಬರ್ 10: ರತನ್ ಟಾಟಾ 1991ರಿಂದ ಆರಂಭಿಸಿ 2012ರವರೆಗೂ ಟಾಟಾ ಸನ್ಸ್ ಛೇರ್ಮನ್ ಆಗಿದ್ದರು. ಟಾಟಾ ಸನ್ಸ್ ಎಂಬುದು ಟಾಟಾ ಗ್ರೂಪ್​ನ ಮಾಲೀಕ ಸಂಸ್ಥೆ. ಈ ಟಾಟಾ ಗ್ರೂಪ್ ಅಡಿಯಲ್ಲಿ ಹಲವಾರು ಕಂಪನಿಗಳಿವೆ. ಉಪ್ಪು ತಯಾರಿಸುವುದರಿಂದ ಹಿಡಿದು ಏರ್​ಲೈನ್ಸ್​ವರೆಗೆ ಹಲವು ಉದ್ದಿಮೆಗಳಲ್ಲಿ ಟಾಟಾ ಗ್ರೂಪ್ ಹಿಡಿತ ಹೊಂದಿದೆ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳೇ 15-16 ಇವೆ. ಇವುಗಳ ಈಗಿನ ಮಾರುಕಟ್ಟೆ ಬಂಡವಾಳ ಒಟ್ಟುಗೂಡಿಸಿ ಎಣಿಸಿದರೆ 31 ಲಕ್ಷ ಕೋಟಿ ರೂ ದಾಟುತ್ತದೆ.

ಭಾರತದ ಮತ್ತೊಂದು ಬಿಸಿನೆಸ್ ಫ್ಯಾಮಿಲಿಯಾದ ಅಂಬಾನಿಯ ರಿಲಾಯನ್ಸ್ ಗ್ರೂಪ್​ನ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ 22 ಲಕ್ಷ ಕೋಟಿ ರೂ ದಾಟುವುದಿಲ್ಲ. ಅದಕ್ಕೆ ಹೋಲಿಸಿದರೆ ಟಾಟಾ ಗ್ರೂಪ್​ನ ಕಂಪನಿಗಳ ಮಾರ್ಕೆಟ್ ಕ್ಯಾಪ್ ಅಧಿಕವಾಗಿದೆ. ಅತಿಹೆಚ್ಚು ಉದ್ಯೋಗ ನೀಡುವ ಭಾರತೀಯ ಕಂಪನಿಗಳಲ್ಲಿ ಟಿಸಿಎಸ್ ಕೂಡ ಒಂದು.

ಇದನ್ನೂ ಓದಿ: ರತನ್ ಟಾಟಾ ನಿಧನಕ್ಕೆ ಷೇರುಪೇಟೆ ರಿಯಾಕ್ಷನ್ ಹೇಗಿತ್ತು? 15 ಷೇರುಗಳಲ್ಲಿ ಎದ್ದಿದ್ದೆಷ್ಟು, ಬಿದ್ದಿದ್ದೆಷ್ಟು?

ಟಾಟಾ ಗ್ರೂಪ್​ನ ಲಿಸ್ಟೆಡ್ ಕಂಪನಿಗಳು ಮತ್ತು ಮಾರುಕಟ್ಟೆ ಬಂಡವಾಳ

  1. ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್): 15.38 ಲಕ್ಷ ಕೋಟಿ ರೂ
  2. ಟಾಟಾ ಮೋಟಾರ್ಸ್: 3.46 ಲಕ್ಷ ಕೋಟಿ ರೂ
  3. ಟೈಟಾನ್ ಕಂಪನಿ: 3.10 ಲಕ್ಷ ಕೋಟಿ ರೂ
  4. ಟ್ರೆಂಟ್ ಲಿ: 2.92 ಲಕ್ಷ ಕೋಟಿ ರೂ
  5. ಟಾಟಾ ಸ್ಟೀಲ್: 1.98 ಲಕ್ಷ ಕೋಟಿ ರೂ
  6. ಟಾಟಾ ಪವರ್: 1.47 ಲಕ್ಷ ಕೋಟಿ ರೂ
  7. ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್: 1.10 ಲಕ್ಷ ಕೋಟಿ ರೂ
  8. ಇಂಡಿಯನ್ ಹೋಟೆಲ್ಸ್ ಕಂಪನಿ: 98,729 ಕೋಟಿ ರೂ
  9. ವೋಲ್ಟಾಸ್ ಲಿ: 59,089 ಕೋಟಿ ರೂ
  10. ಟಾಟಾ ಕಮ್ಯೂನಿಕೇಶನ್ಸ್: 55,579 ಕೋಟಿ ರೂ
  11. ಟಾಟಾ ಎಲ್​ಕ್ಸಿ: 47,402 ಕೋಟಿ ರೂ
  12. ಟಾಟಾ ಟೆಕ್ನಾಲಜೀಸ್ ಲಿ: 42,530 ಕೋಟಿ ರೂ
  13. ಟಾಟಾ ಇನ್ವೆಸ್ಟ್​ಮೆಂಟ್ ಕಾರ್ಪೊರೇಶನ್: 33,140 ಕೋಟಿ ರೂ
  14. ಟಾಟಾ ಕೆಮಿಕಲ್ಸ್: 28,167 ಕೋಟಿ ರೂ
  15. ನೆಲ್ಕೋ ಲಿಮಿಟೆಡ್: 2,276 ಕೋಟಿ ರೂ

ರಿಲಾಯನ್ಸ್ ಗ್ರೂಪ್​ನ 10 ಕಂಪನಿಗಳು ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆಗಿವೆ. ಈ ಪೈಕಿ ರಿಲಾಯನ್ಸ್ ಇಂಡಸ್ಟ್ರೀಸ್​ವೊಂದೇ 18 ಲಕ್ಷ ಕೋಟಿ ರೂನಷ್ಟು ಮಾರುಕಟ್ಟೆ ಬಂಡವಾಳ ಹೊಂದಿದೆ. ಅದು ಬಿಟ್ಟರೆ ಗಮನಾರ್ಹ ಮಾರ್ಕೆಟ್ ಕ್ಯಾಪ್ ಹೊಂದಿರುವುದು ಜಿಯೋ ಫೈನಾನ್ಷಿಯಲ್ ಸರ್ವಿಸಸ್. ಉಳಿದವು ಹೆಚ್ಚಿನ ಷೇರು ಸಂಪತ್ತು ಹೊಂದಿಲ್ಲ.

ಇದನ್ನೂ ಓದಿ: Ratan Tata Funeral: ಪಾರ್ಸಿಯಲ್ಲ ಹಿಂದೂ ಸಂಪ್ರದಾಯದಂತೆ ರತನ್ ಟಾಟಾ ಅಂತ್ಯಸಂಸ್ಕಾರ ಏಕೆ?

ಟಾಟಾ ಗ್ರೂಪ್​ನ ಕಂಪನಿಗಳು ಸುದೀರ್ಘ ಕಾಲದಿಂದ ಬಿಸಿನೆಸ್​ನಲ್ಲಿದ್ದು, ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿವೆ. ರತನ್ ಟಾಟಾ 1991ರಿಂದ 2012ರವರೆಗೂ ಗ್ರೂಪ್​ನ ನೇತೃತ್ವ ವಹಿಸಿದ್ದರು. ಈ ಅವಧಿಯಲ್ಲಿ ಟಾಟಾ ಗ್ರೂಪ್​ನ ಬಿಸಿನೆಸ್ ಗಣನೀಯವಾಗಿ ವಿಸ್ತರಣೆ ಆಗಿದೆ. ಮಾರುಕಟ್ಟೆ ಬಂಡವಾಳ 33 ಪಟ್ಟು ಹೆಚ್ಚಾಯಿತು. 30,000 ರೂ ಇದ್ದ ಮಾರ್ಕೆಟ್ ಕ್ಯಾಪಿ 5 ಲಕ್ಷ ಕೋಟಿ ರೂ ತಲುಪಿತು. ಗ್ರೂಪ್​ನ ಒಟ್ಟಾರೆ ಆದಾಯ 1991ರಲ್ಲಿ 18,000 ಕೋಟಿ ರೂ ಇದ್ದದ್ದು 2012ರಲ್ಲಿ 5.5 ಲಕ್ಷ ಕೋಟಿ ರೂ ತಲುಪಿತು.

ರತನ್ ಟಾಟಾ ಆಡಳಿತ ಚುಕ್ಕಾಣಿ ಹಿಡಿದಾಗ ಗ್ರೂಪ್​ನ ಅಡಿಯಲ್ಲಿ 95 ಕಂಪನಿಗಳಿದ್ದವು. ಬಹುತೇಕ ಎಲ್ಲವೂ ಪ್ರತ್ಯೇಕವಾಗಿ ನಿರ್ವಹಿತವಾಗುತ್ತಿದ್ದವು. ರತನ್ ಟಾಟಾ ಎಲ್ಲಾ ಕಂಪನಿಗಳನ್ನೂ ಹಿಡಿತಕ್ಕೆ ತೆಗೆದುಕೊಂಡು, ಒಂದು ಗೊತ್ತು ಗುರಿ ನೀಡಿದ್ದು ವಿಶೇಷ. ಇವರ ಸಮರ್ಪಕ ನಿರ್ವಹಣೆ ಮತ್ತು ದೃಷ್ಟಿಕೋನದ ಕಾರಣದಿಂದ ಗ್ರೂಪ್​ನ ಎಲ್ಲಾ ಕಂಪನಿಗಳು ಉತ್ತಮವಾಗಿ ಬೆಳೆದವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ